ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳೆಯರ ಕ್ರಿಕೆಟ್ ಪಂದ್ಯಾಟ | ಎಸ್‌ಎಂಎಸ್ ಬ್ರಹ್ಮಾವರ್ ಚಾಂಪಿಯನ್, ಆಳ್ವಾಸ್ ಮೂಡಬಿದ್ರೆ ರನ್ನರ್ಸ್
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಹಾಗೂ ಪುತ್ತೂರು ಸಂತ ಫಿಲೋಮಿನಾ ಕಾಲೇಜು ಜಂಟಿ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳೆಯರ ಕ್ರಿಕೆಟ್ (ಲೆದರ್ ಬಾಲ್) ಓವರ್ ಆರ್ಮ್ ಪಂದ್ಯಾಟದಲ್ಲಿ ಬ್ರಹ್ಮಾವರ್ ಎಸ್‌ಎಂಎಸ್ ಕಾಲೇಜು ಚಾಂಪಿಯನ್ ಆಗಿದ್ದು, ಆಳ್ವಾಸ್ ಮೂಡಬಿದ್ರೆ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಪಂದ್ಯಾಟದ ಉತ್ತಮ ಬೌಲರ್ ಆಗಿ ಬ್ರಹ್ಮಾವರ ಎಸ್ ಎಂಸ್ ಕಾಲೇಜಿನ ಸ್ವರ್ಣ ಗೌರಿ, ಉತ್ತಮ ಬ್ಯಾಟರ್ ಆಗಿ ಆಳ್ವಾಸ್ ಕಾಲೇಜಿನ ಧನುಶ್ರೀ, ಉತ್ತಮ ಸರ್ವಾಂಗೀಣ ಆಟಗಾರಳಾಗಿ ಬ್ರಹ್ಮಾವರ […]










