ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ತನ್ನ ಹುಟ್ಟುಹಬ್ಬ ನಿರಾಕರಿಸಿದ ವಿದ್ಯಾರ್ಥಿನಿ | ದೇಶಪ್ರೇಮ ಮೆರೆದು ಮಾದರಿಯಾದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ತನ್ವಿ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿನಿ ತನ್ವಿ ವಿ. ತನ್ನ ದಿಟ್ಟ ನಿರ್ಧಾರದಿಂದಾಗಿ ಮಾದರಿ ಎನಿಸಿದ್ದಾಳೆ. ಫೆ. 14 ಆಕೆಯ ಜನ್ಮದಿನ. ಆದರೆ ನಾಲ್ಕು ವರ್ಷದ ಹಿಂದೆ ಅದೇ ದಿನದಂದು ಪುಲ್ವಾಮಾ ದಾಳಿಯಲ್ಲಿ ದೇಶದ ವೀರಯೋಧರು ಮರಣಿಸಿದ್ದು ಈಕೆಯ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಭಾವನೆ ಆಕೆ ದೊಡ್ಡವಳಾದಂತೆ ಮತ್ತಷ್ಟು ಗಾಢವಾಗಿದೆ. ಹಾಗಾಗಿ ಫೆ. 14 ರಂದು ತನಗೆ ಯಾವುದೇ ಸಂಭ್ರಮ ಇಲ್ಲ ಎಂದು ಆಕೆ […]