SSLC ಫಲಿತಾಂಶ ಪ್ರಕಟ | ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ ಯಾದಗಿರಿ ಕೊನೆಯ ಸ್ಥಾನ | ಮೇ 21ರ ಮೊದಲು ಮರುಮೌಲ್ಯಪನಕ್ಕೆ ಅರ್ಜಿ ಸಲ್ಲಿಸಬಹುದು
ಪುತ್ತೂರು: SSLC ಫಲಿತಾಂಶ ಸೋಮವಾರ ಬೆಳಿಗ್ಗೆ ಪ್ರಕಟಗೊಂಡಿದೆ. ಫಲಿತಾಂಶದಲ್ಲಿ ಚಿತ್ರದುರ್ಗ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಮಂಡ್ಯ ದ್ವಿತೀಯ, ಹಾಸನ ತೃತೀಯ ಸ್ಥಾನ ಪಡೆದುಕೊಂಡಿದೆ. ಒಟ್ಟು ನಾಲ್ಕು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದುಕೊಂಡಿದ್ದಾರೆ. ಬೆಂಗಳೂರು ಯು ಮೆಕಾಲೆ ವಿದ್ಯಾಸಂಸ್ಥೆಯ ಭೂಮಿಕಾ ಪೈ, ಚಿಕ್ಕಬಳ್ಳಾಪುರ ಬಜಿಎಸ್ ವಿದ್ಯಾಸಂಸ್ಥೆ ಯಶಸ್ ಗೌಡ, ಸವದತ್ತಿಯ ಶ್ರೀ ಕುಮಾರೇಶ್ವರ್ ಪ್ರೌಢಶಾಲೆಯ ಅನುಪಮಾ ಶ್ರೀಶೈಲ್ ಹಿರೇಹೋಳಿ, ನಾಗರಬೆಟ್ಟದ ಭೀಮನಗೌಡ ಹನುಮಂತಗೌಡ ಬಿರಾದಾರ್ ಪಾಟೀಲ್ ಶೇ. 100 ಅಂಕ ಪಡೆದುಕೊಂಡಿದ್ದಾರೆ. ಫಲಿತಾಂಶದಲ್ಲಿ […]