ಕ್ಯಾಂಪಸ್‌

ಎಸ್ಸೆಸೆಲ್ಸಿ ಪೂರಕ ಪರೀಕ್ಷೆ ಅರ್ಜಿ, ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಪಡೆಯಲು ದಿನಾಂಕ ವಿಸ್ತರಣೆ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನೋಂದಣಿ ಮಾಡಿಕೊಳ್ಳಲು ಮತ್ತು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಅವಧಿಯನ್ನು ಮೇ 18 ರವರೆಗೆ ವಿಸ್ತರಿಸಿದೆ. ಈ ಹಿಂದೆ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 14, 2023 ಕೊನೆಯ ದಿನಾಂಕವಾಗಿತ್ತು. ಹಾಗೂ ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಮೇ 15, 2023 ಕೊನೆಯ ದಿನವಾಗಿದ್ದು, ಈಗ ಈ ದಿನಾಂಕವನ್ನು ಮೇ 18 […]

ಎಸ್ಸೆಸೆಲ್ಸಿ ಪೂರಕ ಪರೀಕ್ಷೆ ಅರ್ಜಿ, ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಪಡೆಯಲು ದಿನಾಂಕ ವಿಸ್ತರಣೆ Read More »

7ನೇ ರಾಜ್ಯ ವೇತನ ಆಯೋಗದ ಅವಧಿ ವಿಸ್ತರಣೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ಮತ್ತು ನೂತನ ವೇತನ ಶ್ರೇಣಿ ರಚಿಸುವ ಉದ್ದೇಶದಿಂದ ನಿವೃತ್ತ ಸಿ.ಎಸ್.ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ 7ನೇ ರಾಜ್ಯ ವೇತನ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿದೆ. ರಾಜ್ಯಪಾಲರ ಆದೇಶದಂತೆ ಮೇ 19ರಿಂದ 6 ತಿಂಗಳ ಕಾಲ ಆಯೋಗದ ಅವಧಿ ವಿಸ್ತರಣೆ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ. 2022ರ ನ. 19ರಂದು ವೇತನ ಆಯೋಗ ರಚನೆಯಾಗಿತ್ತು. ಆಯೋಗದ ಶಿಫಾರಸ್ಸು ಆಧರಿಸಲು ಮುಂದಿನ ಕ್ರಮ ಕೈಗೊಳ್ಳಲು 2023-24ನೇ ಸಾಲಿನಲ್ಲಿ ಹಣವನ್ನೂ

7ನೇ ರಾಜ್ಯ ವೇತನ ಆಯೋಗದ ಅವಧಿ ವಿಸ್ತರಣೆ Read More »

ಪಿಯು ಫಲಿತಾಂಶ: ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

ಸುಳ್ಯ: ಪಿಯು ಪರೀಕ್ಷೆಯಲ್ಲಿ ಇಲ್ಲಿನ ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ ದಾಖಲಿಸಿದೆ. ಈ ಮೂಲಕ ಜಿಲ್ಲೆಯಲ್ಲೇ ಶೇ. 100 ಫಲಿತಾಂಶ ದಾಖಲಿಸಿದ ಏಕೈಕ ಸರಕಾರಿ ಪದವಿ ಪೂರ್ವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 43 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕಲಾ ಹಾಗೂ ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಇದರಲ್ಲಿ 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ದಿವ್ಯ ಕೆ.ಎಲ್.

ಪಿಯು ಫಲಿತಾಂಶ: ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ Read More »

ವಿವೇಕಾನಂದ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಪುತ್ತೂರು: ವಿದ್ಯಾರ್ಥಿಗಳು ಶೈಕ್ಷಣಿಕ ಕಲಿಕೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಬಹುಮುಖ್ಯ. ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲು ಕ್ರೀಡಾ ಚಟುವಟಿಕೆ ಉತ್ತಮ. ಕ್ರೀಡೆಯಲ್ಲಿ ಸೋಲು- ಗೆಲುವು ಎನ್ನುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಗೆಲುವನ್ನು ನಿರೀಕ್ಷಿಸದೆ ತಮ್ಮ ದೈಹಿಕ ಆರೋಗ್ಯದ ದೃಷ್ಟಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಮಾತನಾಡಿದರು. ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ

ವಿವೇಕಾನಂದ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ Read More »

ಸಿಬಿಎಸ್‌ಸಿ 10ನೇ ತರಗತಿಯ ಫಲಿತಾಂಶ ಪ್ರಕಟ: ತಿರುವನಂತಪುರಂ ಪ್ರಥಮ, ಬೆಂಗಳೂರು ದ್ವಿತೀಯ

ಬೆಂಗಳೂರು: ಸಿಬಿಎಸ್‌ಇ‌ 10ನೇ ತರಗತಿಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಶೇಕಡಾ 87.33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೇರಳದ ತಿರುವನಂತಪುರದ ಶೇಕಡ 99.91ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅತ್ಯುತ್ತಮ ಉತ್ತೀರ್ಣ ದಾಖಲಿಸಿದೆ. ಶೇ. 98.64 ಅಂಕಗಳನ್ನು ಪಡೆದಿರುವ ಬೆಂಗಳೂರು 2ನೇ ಸ್ಥಾನದಲ್ಲಿದೆ. ಅಧಿಕೃತ ವೆಬ್‌ ಸೈಟ್‌ ಗಳಾದ http://cbse.nic.in  ಮತ್ತು http://cbse.gov.in ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು. ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆಯು ಫೆಬ್ರವರಿ 15ರಿಂದ ಮಾರ್ಚ್ 21ರವರೆಗೆ ನಡೆದಿತ್ತು. 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15ರಿಂದ

ಸಿಬಿಎಸ್‌ಸಿ 10ನೇ ತರಗತಿಯ ಫಲಿತಾಂಶ ಪ್ರಕಟ: ತಿರುವನಂತಪುರಂ ಪ್ರಥಮ, ಬೆಂಗಳೂರು ದ್ವಿತೀಯ Read More »

ದ್ವಿತೀಯ ಪಿಯುಸಿ : ಕುಂಬ್ರ ಸ.ಪ.ಪೂ. ಕಾಲೇಜಿಗೆ ಶೇ. 80 ಫಲಿತಾಂಶ

ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು ಶೇ. 80 ಫಲಿತಾಂಶ ದಾಖಲಿಸಿದೆ. ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ 105 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 84 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 81.8 ಫಲಿತಾಂಶ ಬಂದಿರುತ್ತದೆ. ಸ್ವಾತಿ ಪಿ. 530 ಮತ್ತು ಅಕ್ಷಿತಾ 529 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 43

ದ್ವಿತೀಯ ಪಿಯುಸಿ : ಕುಂಬ್ರ ಸ.ಪ.ಪೂ. ಕಾಲೇಜಿಗೆ ಶೇ. 80 ಫಲಿತಾಂಶ Read More »

ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸದವರಿಗೆ ಅಂತಿಮ ಅವಕಾಶ : ಮೇ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಪುತ್ತೂರು: 2023ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳ ಸರಕಾರಿ ಸೀಟುಗಳ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ಅವಕಾಶ. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಆದಾಗ್ಯೂ ಕೆಲವು ಪೋಷಕರು ಹಾಗು ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಸಿಇಟಿ-2023ಕ್ಕೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಕೊನೆಯ ಹಾಗು ಅಂತಿಮ ಅವಕಾಶವನ್ನು ನೀಡಿದ್ದು, ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಫಾರ್ಮಸಿ, ಬಿಎಸ್‌ಸಿ (ನರ್ಸಿಂಗ್‌) ಮುಂತಾದ ಕೋರ್ಸುಗಳ ಪ್ರವೇಶಕ್ಕೆ ಇಲ್ಲಿಯವರೆಗೆ ಸಿಇಟಿ-2023ಕ್ಕೆ

ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸದವರಿಗೆ ಅಂತಿಮ ಅವಕಾಶ : ಮೇ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Read More »

ಪಿಯು ಪರೀಕ್ಷೆ: ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ

ಪುತ್ತೂರು: ಇತ್ತೀಚೆಗೆ ನಡೆದ ಪದವಿ ಪೂರ್ವ ಪರೀಕ್ಷೆಯಲ್ಲಿ ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಕಾಲೇಜಿನಲ್ಲಿ ವಿಜ್ಞಾನಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳಿದ್ದು, ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಾಣಿಜ್ಯಶಾಸ್ತ್ರ ವಿಭಾಗದ ರಿಫಾಷ್ ಶೇಖ್ ಐ.ಎಫ್. ಅವರು 584 (ಶೇ. 97.33) ಅಂಕ ಗಳಿಸಿ, ಕಾಲೇಜಿಗೆ ಪ್ರಥಮ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್ 100, ಬ್ಯುಸಿನೆಸ್ ಸ್ಟಡೀಸ್  100, ಅರ್ಥ ಶಾಸ್ತ್ರ 98, ಲೆಕ್ಕ

ಪಿಯು ಪರೀಕ್ಷೆ: ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ Read More »

ವಿದ್ಯಾರಶ್ಮಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ

ಪುತ್ತೂರು: ಮಾರ್ಚ್ ನಲ್ಲಿ ಜರಗಿದ 10ನೆ ತರಗತಿಯ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ 32 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಈ ಬಾರಿಯ ಫಲಿತಾಂಶ ಸೇರಿದಂತೆ ಒಟ್ಟು 16 ಬಾರಿ ವಿದ್ಯಾರಶ್ಮಿ ವಿದ್ಯಾಲಯ ಶೇ. 100 ಫಲಿತಾಂಶ ದಾಖಲಿಸಿದೆ. ಒಟ್ಟು ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೃಷಾ ಡಿ. ಸಾಲಿಯಾನ್ – 607 (ದಿನೇಶ್ ಕುಮಾರ್ ಡಿ. ಮತ್ತು ಮಮತಾ ಡಿ., ಬೆಳ್ಳಾರೆ ಇವರ ಪುತ್ರಿ), ಸನಾ

ವಿದ್ಯಾರಶ್ಮಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ Read More »

ಎಸ್‍ ಎಸ್‍ ಎಲ್‍ಸಿ ಫಲಿತಾಂಶ : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರಾವ್ಯ ಕೆ. ಯವರಿಗೆ ಶೇ.97 ಅಂಕ

ಪುತ್ತೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರಾವ್ಯ ಕೆ.ಎಚ್. 608 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜಿತಾ ದಂಪತಿ ಸುಪುತ್ರಿಯಾಗಿದ್ದಾರೆ. ರಾಷ್ಟ್ರಮಟ್ಟದ ಯೋಗಪಟುವಾಗಿದ್ದು, ರಾಷ್ಟ್ರಮಟ್ಟದ ವಕ್ರಾಸನದಲ್ಲಿ ಒಂದು ಗಂಟೆ 10 ನಿಮಿಷ 39 ಸಕೆಂಡ್  ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾರೆ.

ಎಸ್‍ ಎಸ್‍ ಎಲ್‍ಸಿ ಫಲಿತಾಂಶ : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರಾವ್ಯ ಕೆ. ಯವರಿಗೆ ಶೇ.97 ಅಂಕ Read More »

error: Content is protected !!
Scroll to Top