ಲೇಖನ

ಶೋಕವು ಶ್ಲೋಕವಾದ ಕತೆ ರಾಮಾಯಣ

ಆದಿ ಕವಿ ವಾಲ್ಮೀಕಿ, ಆದಿ ಕಾವ್ಯ ರಾಮಾಯಣ ಕೂಜನ್ತಂ ರಾಮ ರಾಮೇತಿಮಧುರ ಮಧುರಾಕ್ಷರಮ್|ಆರುಹ್ಯ ಕವಿತಾ ಶಾಖಾಂವಂದೇ ವಾಲ್ಮೀಕಿ ಕೋಕಿಲಂ|| ಈ ಒಂದು ಶ್ಲೋಕ ಸಾಕು ಆದಿಕವಿ ವಾಲ್ಮೀಕಿಯ ಮಹತ್ವವನ್ನು ಅಳೆಯಲು. ರಾಮ,ರಾಮ ಎಂಬ ಸುಮಧುರ ಅಕ್ಷರವನ್ನು ಕೂಗುತ್ತ ಕವಿತೆಯೆಂಬ ರೆಂಬೆಯನ್ನು ಆರೋಹಣ ಮಾಡಿರುವ ವಾಲ್ಮೀಕಿ ಎಂಬ ಕವಿ ಕೋಗಿಲೆಗೆ ನನ್ನ ನಮಸ್ಕಾರಗಳು ಎಂಬುದು ಆ ಶ್ಲೋಕದ ಅರ್ಥ. ಜಗತ್ತಿನ ಮೊದಲ ಕವಿ ವಾಲ್ಮೀಕಿ ಮತ್ತು ಮೊದಲ ಕಾವ್ಯ ರಾಮಾಯಣ. ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನೆಯೇ […]

ಶೋಕವು ಶ್ಲೋಕವಾದ ಕತೆ ರಾಮಾಯಣ Read More »

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ

ಒಂದೇ ಒಂದು ಕಳಂಕ, ಕಪ್ಪುಚುಕ್ಕೆ ಇಲ್ಲದೆ ಎಂಟು ದಶಕ ಬದುಕಿದ್ದು ಅದ್ಭುತ! ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು ನಮ್ಮನ್ನಗಲಿ ಹೋಗಿರುವುದರಿಂದ ದಸರಾ ಸಂಭ್ರಮದ ನಡುವೆ ದೇಶದಲ್ಲಿ ಸೂತಕದ ಛಾಯೆ ಹರಡಿದಂತಾಗಿದೆ. ರತನ್‌ ಟಾಟಾ ಭಾರತದ ಕೈಗಾರಿಕೋದ್ಯಮ ಕ್ಷೇತ್ರದ ಯುಗ ಪುರುಷ ಎಂದರೆ ಅತಿಶಯೋಕ್ತಿ ಆಗಲಾರದು. ಶತಮಾನಗಳ ಕಾಲ ವಿದೇಶಿಗರ ಆಳ್ವಿಕೆಗೆ ಒಳಗಾಗಿ ದೇಶ ತನ್ನ ಅಂತಃಸ್ಸತ್ವವನ್ನೇ ಕಳೆದುಕೊಂಡು ನಿಸ್ತೇಜವಾಗಿದ್ದ ಕಾಲದಲ್ಲಿ ಹುಟ್ಟಿಕೊಂಡದ್ದು ಟಾಟಾ ಕಂಪನಿ. ಆ ಟಾಟಾ ಪರಿವಾರದ ಕುಡಿಯಾಗಿರುವ ರತನ್‌

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ Read More »

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ!

ಭಾರತದ ಉದ್ಯಮ ಕ್ಷೇತ್ರದ ಯುಗ ಪ್ರವರ್ತಕನ ಬದುಕಿನಲ್ಲಿದೆ ಸಾವಿರಾರು ಸ್ಫೂರ್ತಿದಾಯಕ ಕಥೆ ಹೊಸದಿಲ್ಲಿ : ನಿನ್ನೆ ರಾತ್ರಿ ನಮ್ಮನ್ನಗಲಿರುವ ರತನ್‌ ಟಾಟಾ ಅವರಿಗಾಗಿ ದೇಶ ಕಂಬನಿ ಮಿಡಿಯುತ್ತಿದೆ. ಜನರು ತಮ್ಮ ಕುಟುಂಬದ ಹಿರಿಯನನ್ನು ಕಳೆದುಕೊಂಡಂಥ ದುಃಖದ ಭಾವವನ್ನು ಅನುಭವಿಸುತ್ತಿದ್ದಾರೆ. ಟಾಟಾ ಕಂಪನಿ ಜನರ ಬದುಕಿನಲ್ಲಿ ಬೀರಿದ ಪರಿಣಾಮವಿದು. ಇಂದು ಇಡೀ ದೇಶದಲ್ಲಿ ಟಾಟಾ ಕಂಪನಿಯ ಯಾವುದಾದರೊಂದು ಉತ್ಪನ್ನವನ್ನು ಬಳಸದೆ ಇರುವ ಜನರನ್ನು ಹುಡುಕಿದರೂ ಸಿಗುವುದಿಲ್ಲ. ಉಪ್ಪಿನಿಂದ ಹಿಡಿದು ವಿಮಾನದ ತನಕ ಟಾಟಾ ಸಮೂಹ ಕೈಯಾಡಿಸದ ಕ್ಷೇತ್ರವಿಲ್ಲ. ಇದರ

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ! Read More »

ಮಾ ದುರ್ಗಾ ದುರ್ಗತಿ ಪರಿಹಾರಿಣಿ

ನವರಾತ್ರಿ – ಒಂದು ಹಬ್ಬ, ನೂರಾರು ಆಯಾಮ ಒಂದು ಹಬ್ಬದ ಹಿಂದೆ ನೂರಾರು ಪುರಾಣದ ಕಥೆಗಳು, ನೂರಾರು ಇತಿಹಾಸದ ಘಟನೆಗಳು ಬೆಸೆದುಕೊಂಡ ಒಂದು ಹಬ್ಬ ಇದ್ದರೆ ಅದು ನವರಾತ್ರಿ. ನವರಾತ್ರಿ ಕೇವಲ ಒಂದು ಹಬ್ಬ ಅಲ್ಲ, ಅದೊಂದು ಅದ್ಭುತವಾದ ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಸಮಾರಾಧನೆ, ಸ್ತ್ರೀ ಶಕ್ತಿಯ ಆರಾಧನೆ, ಒಂದು ಕೌಟುಂಬಿಕ ನಿವೇದನೆ ಮತ್ತು ನಮ್ಮೊಳಗಿನ ಶಕ್ತಿಯ ಆವಾಹನೆ. ಇಷ್ಟೆಲ್ಲವನ್ನೂ ಒಳಗೊಂಡ ಈ ಹಬ್ಬವು ಕರ್ನಾಟಕದ ನಾಡಹಬ್ಬ ಆದದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ದುರ್ಗಾಷ್ಟಮಿ – ದುರ್ಗತಿ

ಮಾ ದುರ್ಗಾ ದುರ್ಗತಿ ಪರಿಹಾರಿಣಿ Read More »

ನವರಾತ್ರಿ – ನವಧಾತ್ರಿ – ನವ ನವೊನ್ಮೇಷಶಾಲಿನಿ

ನವರಾತ್ರಿ ಎಂದರೆ ನಮ್ಮೊಳಗಿನ ಶಕ್ತಿಯ ಆವಾಹನೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಭಾರತದಲ್ಲಿ ಇಡೀ ವರ್ಷವೂ ಹಬ್ಬಗಳೇ ಹಬ್ಬಗಳು. ನಾವು ಆಚರಿಸುವಷ್ಟು ಹಬ್ಬಗಳನ್ನು ಜಗತ್ತಿನ ಬೇರೆ ಯಾವ ರಾಷ್ಟ್ರ ಕಲ್ಪನೆ ಮಾಡಲೂ ಸಾಧ್ಯ ಇಲ್ಲ. ಹಬ್ಬಗಳು ನಮ್ಮ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ನಂಬಿಕೆಗಳ ಒಟ್ಟು ಮೊತ್ತವೇ ಆಗಿವೆ. ನವರಾತ್ರಿ – ಜಗತ್ತಿನ ಅತಿ ದೀರ್ಘ ಅವಧಿಯ ಹಬ್ಬ ಈ ಹಬ್ಬಕ್ಕೆ ನವರಾತ್ರಿ ಎಂಬ ಹೆಸರಿದ್ದರೂ ಇದು ಹತ್ತು ದಿನಗಳ ಹಬ್ಬ. ಆದ್ದರಿಂದ ಇದನ್ನು ದಸರಾ (ದಶಹರಾ ಅಂದರೆ ಹತ್ತು

ನವರಾತ್ರಿ – ನವಧಾತ್ರಿ – ನವ ನವೊನ್ಮೇಷಶಾಲಿನಿ Read More »

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ

ಜೈಲಿನ ಅನ್ನದಲ್ಲಿ ಹುದುಗಿದ್ದ ಮಾಂಸದಲ್ಲಿದ್ದ ಎಲುಬಿನ ತುಂಡುಗಳೆ ಅವರ ಲೇಖನಿಯಾಗಿತ್ತು ಅಕಿನ್ ವಾಂಡೆ ಒಲುವಿಲೇ ಸೊಯೀಂಕ ಯಾರು ಎಂದು ಗೂಗಲ್ ಸರ್ಚ್ ಮಾಡಿ. ನಿಮಗೆ ಥಟ್ಟನೆ ದೊರೆಯುವ ಉತ್ತರ ನೊಬೆಲ್ ಬಹುಮಾನ ಪಡೆದ ಮೊಟ್ಟಮೊದಲನೇ ಕಪ್ಪು ವರ್ಣದ ಸಾಹಿತಿ ಎಂದು. ಆತನ ಬದುಕು ಆತನ ಬರವಣಿಗೆಯಷ್ಟೇಪ್ರಖರವಾಗಿದೆ ಮತ್ತು ಹೋರಾಟಗಳಿಂದ ಕೂಡಿದೆ. ಆತ ನೈಜೀರಿಯ ಸೆರೆಮನೆಯಲ್ಲಿ ಉಸಿರುಗಟ್ಟುತ್ತಿದ್ದ ಕಪ್ಪು ಚರ್ಮದವರು ಹೋರಾಟ ಮಾಡುವುದು, ಹೋರಾಟಕ್ಕೆ ಪ್ರಚೋದನೆ ಕೊಡುವುದು ಇದನ್ನು ಯಾವುದೇ ಸರ್ವಾಧಿಕಾರಿ ಆಫ್ರಿಕನ್ ಸರಕಾರ ಸಹಿಸಿಕೊಂಡ ಉದಾಹರಣೆ ಇದೆಯಾ?

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ Read More »

ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ್ದ ಗುಂಡಪ್ಪ ವಿಶ್ವನಾಥ್

ಅವರ ಆ ನಿರ್ಧಾರದಿಂದ ಕ್ರಿಕೆಟ್ ಗೆದ್ದಿತ್ತು, ಆದರೆ ಭಾರತ ಸೋತಿತ್ತು ಫೆಬ್ರುವರಿ 19, 1980. ಮುಂಬಯಿಯ ವಿಶಾಲವಾದ ವಾಂಖೇಡೆ ಸ್ಟೇಡಿಯಂ. ಹಲವಾರು ಐತಿಹಾಸಿಕ ಕ್ರಿಕೆಟ್ ದಾಖಲೆಗಳಿಗೆ ಸಾಕ್ಷಿಯಾದ ಹುಲ್ಲುಹಾಸಿನ ಸ್ಟೇಡಿಯಂ ಅದು. ಅದು ಬಿಸಿಸಿಐ ಸುವರ್ಣ ಮಹೋತ್ಸವದ ನೆನಪಿನ ಟೆಸ್ಟ್ ಆಗಿತ್ತು ಅಂದು ಅಲ್ಲಿ ಆತಿಥೇಯ ಭಾರತ ಮತ್ತು ಇಂಗ್ಲೆಂಡ್‌ಗಳ ನಡುವೆ ಒಂದು ಐತಿಹಾಸಿಕವಾದ ಕ್ರಿಕೆಟ್ ಟೆಸ್ಟ್ ಪಂದ್ಯ ಏರ್ಪಟ್ಟಿತ್ತು. ಅದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸುವರ್ಣ ಮಹೋತ್ಸವ ವರ್ಷದ ನೆಪದಲ್ಲಿ ಆಡಲಾದ ವಿಶೇಷವಾದ

ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ್ದ ಗುಂಡಪ್ಪ ವಿಶ್ವನಾಥ್ Read More »

ಕನ್ನಡ ಚಿತ್ರರಂಗ ಮರೆಯಬಾರದ ಹೆಸರು ವಿಜಯ ಭಾಸ್ಕರ್

2024 ಆ ಸಂಗೀತ ನಿರ್ದೇಶಕನ ಜನ್ಮ ಶತಮಾನದ ವರ್ಷ ಅವರು ಬದುಕಿದ್ದರೆ ಈ ವರ್ಷ ಅವರಿಗೆ ನೂರು ತುಂಬುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಮಾಧುರ್ಯಪೂರ್ಣ ಹಾಡುಗಳನ್ನು ಕೊಟ್ಟ ಕೀರ್ತಿ ಅವರದ್ದು. ಹಾಡುಗಳ ಮೂಲಕ ಅವರು ಇಂದಿಗೂ ನಮ್ಮ ನಡುವೆ ಜೀವಂತರಾಗಿದ್ದಾರೆ ಎನ್ನಬಹುದು. ಗಟ್ಟಿಯಾದ ಶಾಸ್ತ್ರೀಯ ಚೌಕಟ್ಟು 1924ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವರು. ಆದರೆ ಬಾಲ್ಯದಿಂದಲೂ ಅವರ ಆಸಕ್ತಿ ಸಂಗೀತದ ಕಡೆಗೆ ಇತ್ತು. ಗೋವಿಂದ್ ಭಾವೆ ಎಂಬ ಗುರುವಿನಿಂದ ಅವರು ಹಿಂದೂಸ್ತಾನಿ ಸಂಗೀತದ ಶಿಕ್ಷಣ

ಕನ್ನಡ ಚಿತ್ರರಂಗ ಮರೆಯಬಾರದ ಹೆಸರು ವಿಜಯ ಭಾಸ್ಕರ್ Read More »

ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ

ಮಾರ್ಕೆಟ್‌ಗೆ ದಾಂಗುಡಿ ಇಡ್ತಾ ಇವೆ ಮೆಟಾ-ರೆಬಾನ್ ಕನ್ನಡಕಗಳು ಇವತ್ತು ಯಾವುದಾದರೂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಆಗ್ತಾ ಇದೆ ಎಂದರೆ ಅದು ಐಟಿ ಕ್ಷೇತ್ರದಲ್ಲಿ. ಅದರಲ್ಲಿಯೂ ಯಾವಾಗ ಕೃತಕ ಬುದ್ಧಿಮತ್ತೆಯು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಜೊತೆಗೆ ಸೇರಿತೋ ಆಗ ಇನ್ನೂ ವೇಗವಾಗಿ ತಾಂತ್ರಿಕತೆ ಬೆಳೆಯುತ್ತ ಇದೆ. 2030ಕ್ಕೆ ತಲುಪುವಾಗ ಮನುಷ್ಯನ ಬುದ್ಧಿಮತ್ತೆಗೆ ಸಮನಾದ ಸಾಮರ್ಥ್ಯ ಇರುವ ಸಾಫ್ಟ್‌ವೇರ್ ಕಂಡುಹಿಡಿಯುತ್ತೇವೆ ಎಂದು ಐಟಿ ಕಂಪನಿಗಳು ಸವಾಲು ಸ್ವೀಕರಿಸಿವೆ ಮತ್ತು ಈಗಲೇ ಸಂಶೋಧನೆ ಆರಂಭವಾಗಿವೆ. ಇದು ಎಲ್ಲಿಯವರೆಗೆ ತಲುಪಬಹುದು ಎನ್ನುವುದು ನಮ್ಮ ಊಹೆಗೆ

ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ Read More »

ಮಹಾತ್ಮರೆಲ್ಲ ಬದುಕಿರುವಾಗಲೇ ಮತ್ತೊಮ್ಮೆ ಹುಟ್ಟಿ ಬಂದಿದ್ದರು!

ಬದುಕಿನಲ್ಲಿ ಬಂದ ಆ ಟರ್ನಿಂಗ್ ಪಾಯಿಂಟ್‌ ಅವರ ಯಶಸ್ಸಿನ ಲಾಂಚಿಂಗ್ ಪ್ಯಾಡ್ ರಾಷ್ಟ್ರಪಿತ ಮಹಾತ್ಮ ಗಾಂಧಿ ಅಕ್ಟೋಬರ್ 2, 1869ರಂದು ಹುಟ್ಟಿರಬಹುದು. ಅದು ಅವರ ಜೀವಶಾಸ್ತ್ರೀಯವಾದ ಹುಟ್ಟು. ಆದರೆ ನಿಜವಾಗಿ ಗಾಂಧೀಜಿ ಹುಟ್ಟಿದ್ದು 1893ರ ಜೂನ್ 7ರಂದು! ನಿಮಗೆ ಆಶ್ಚರ್ಯ ಆಯ್ತಾ? ಹೀಗೆ ಸ್ವಲ್ಪ ಯೋಚಿಸಿ. ನಿಜವಾದ ಗಾಂಧಿ ಹುಟ್ಟಿದ್ದು ಅದೇ ದಿನ. ಅಂದು ದಕ್ಷಿಣ ಆಫ್ರಿಕದ ಪ್ರಿಟೋರಿಯಾ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ಪಡೆದು ಪ್ರಥಮ ದರ್ಜೆ ಟ್ರೈನ್ ಬೋಗಿಯಲ್ಲಿ ಕುಳಿತಿದ್ದ ಗಾಂಧಿಯನ್ನು ಒಬ್ಬ ರೈಲ್ವೆ ಟಿಕೆಟ್

ಮಹಾತ್ಮರೆಲ್ಲ ಬದುಕಿರುವಾಗಲೇ ಮತ್ತೊಮ್ಮೆ ಹುಟ್ಟಿ ಬಂದಿದ್ದರು! Read More »

error: Content is protected !!
Scroll to Top