ಲೇಖನ

ಧಗಧಗಿಸಿದ ಕ್ರಾಂತಿಯ ಕಿಡಿ ಬೋಸ್‌

ಇಂದವರ ಹುಟ್ಟುಹಬ್ಬ-ರಾಷ್ಟ್ರೀಯ ಪರಾಕ್ರಮ ದಿನ ನೇತಾಜಿ ಸುಭಾಶ್‌ಚಂದ್ರ ಬೋಸರ ಇನ್ನೊಂದು ಜನ್ಮ ಜಯಂತಿಗೆ ಇಡೀ ದೇಶ ಸಜ್ಜುಗೊಂಡಿದೆ. ಕಳೆದ ಎರಡು ವರ್ಷಗಳಿಂದ ನೇತಾಜಿ ಅವರ ಜನ್ಮ ದಿನವನ್ನು (ಜನವರಿ 23) ‘ಪರಾಕ್ರಮ ದಿನ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿತ್ತು.ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು. ನೇತಾಜಿ ಸುಭಾಸರನ್ನು ಇಂದಿನ ತಲೆಮಾರಿನ ಜನರು ನಿರಂತರವಾಗಿ ನೆನಪಿಸಿಕೊಳ್ಳಬೇಕು.2004ರಲ್ಲಿ ಶಾಮ್ ಬೆನೆಗಲ್ ನಿರ್ದೇಶನ ಮಾಡಿದ ಶ್ರೇಷ್ಠ ಸಿನೆಮಾ ‘ನೇತಾಜಿ ಸುಭಾಶ್‌ಚಂದ್ರ ಬೋಸ್ – ದ ಫಾರ್ಗೊಟನ್ ಹೀರೊ’ ನೋಡಿ ನಾನು […]

ಧಗಧಗಿಸಿದ ಕ್ರಾಂತಿಯ ಕಿಡಿ ಬೋಸ್‌ Read More »

ಕಗ್ಗದ ಸಂದೇಶ- ನಡೆ ನುಡಿ ಎಂದೆಂದೂ ಸತ್ಯವಾಗಿರಲಿ…

ಸತ್ಯವಂತನನರಸಲೆನುತ ಪೇಟೆಗಳೊಳಗೆ|ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು||ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಾಸಿಸಿದನು|ತಾತ್ವಿಕ ಡಯೋಜೆನಿಸ್ – ಮಂಕುತಿಮ್ಮ|| ಸುಮಾರು ಎರಡೂವರೆ ಸಾವಿರ ವರ್ಷುಗಳ ಹಿಂದೆ ಗ್ರೀಕ್ ದೇಶದಲ್ಲಿ ಜನಸಿದ ಡಯೋಜನಿಸ್ ಎಂಬ ತತ್ತ್ವಜ್ಞಾನಿ ಸತ್ಯವಂತರು ಯಾರಾದರೂ ಇದ್ದಾರೆಯೆ ಎಂದು ನೋಡಲು ಪೇಟೆಯಲ್ಲಿ ನಡುಹಗಲಿನಲ್ಲಿಯೇ ದೀಪವನ್ನು ಹಿಡಿದುಕೊಂಡು ನಡೆದು ನೋಡಿ ಕೊನೆಗೆ ಯಾರೂ ಸಿಗದಿದ್ದಾಗ ಈ ಜಗತ್ತು ಕೆಟ್ಟು ಹೋಗಿದೆ ಎಂದು ಮನೆಯಲ್ಲಿಯೆ ಒಂದು ತೊಟ್ಟಿಯನ್ನು ನಿರ್ಮಿಸಿಕೊಂಡು ವಾಸಿಸಿದನು ಎಂದು ಮಾನ್ಯ ಡಿವಿಜಿಯವರು ಜಗತ್ತಿನ ವಾಸ್ತವ ಸಂಗತಿಯನ್ನು ವಿಡಂಬನಾತ್ಮಕವಾಗಿ ಈ ಮುಕ್ತಕದಲ್ಲಿ

ಕಗ್ಗದ ಸಂದೇಶ- ನಡೆ ನುಡಿ ಎಂದೆಂದೂ ಸತ್ಯವಾಗಿರಲಿ… Read More »

ಭಾರತೀಯ ಬ್ರಾಂಡ್ ಆಯ್ಕೆ ಮಾಡಿ, ದುಡ್ಡನ್ನು ಭಾರತದಲ್ಲಿಯೇ ಉಳಿಸಿ

ಪೆಪ್ಸಿ, ಕೋಕ್ ಬೇಡ ಎಳನೀರು, ಮಜ್ಜಿಗೆ ಕುಡಿಯಿರಿ! ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರು ಆರಂಭ ಮಾಡಿದ ಬಹಳ ದೊಡ್ಡ ಅಭಿಯಾನ ಅಂದರೆ ಸ್ವದೇಶಿ ಅಭಿಯಾನ. ಭಾರತದ್ದೇ ಉತ್ಪನ್ನಗಳನ್ನು ಭಾರತದಲ್ಲಿ ಬಳಕೆ ಮಾಡಿದರೆ ಭಾರತದ ದುಡ್ಡನ್ನು ಭಾರತದಲ್ಲಿ ಉಳಿಸಬಹುದು ಎನ್ನುವುದು ಅವರ ದೊಡ್ಡ ಆಶಯವಾಗಿತ್ತು.ಅದಕ್ಕೆ ಪೂರಕವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಟ್ಟೆಗಳನ್ನು ಅವರು ಬೀದಿಗೆ ತಂದು ಕಾರ್ಯಕರ್ತರ ಜತೆಯಲ್ಲಿ ಸುಡುವ ಕೆಲಸ ಮಾಡಿದರು. ಅದಕ್ಕೆ ಪರ್ಯಾಯವಾಗಿ ಭಾರತದ್ದೇ ಆದ ಖಾದಿಯನ್ನು ಅವರು ಜನಪ್ರಿಯ ಮಾಡಿದರು. ತಾವೇ ತಕಲಿಯಿಂದ

ಭಾರತೀಯ ಬ್ರಾಂಡ್ ಆಯ್ಕೆ ಮಾಡಿ, ದುಡ್ಡನ್ನು ಭಾರತದಲ್ಲಿಯೇ ಉಳಿಸಿ Read More »

ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ

ಪರೀಕ್ಷೆ ಒಂದು ಸಮಸ್ಯೆ ಅಲ್ಲ, ಅದೊಂದು ಅವಕಾಶ ನನಗೆ ಒಂದು ಬಹು ದೊಡ್ಡ ಕನಸಿದೆ. ಮಕ್ಕಳು ಪರೀಕ್ಷೆಗೆ ಹೋಗುವಾಗ ಜಾತ್ರೆಗೆ, ಸಾಂತ್‌ಮಾರಿಗೆ, ಉತ್ಸವಕ್ಕೆ ಹೋಗುವಷ್ಟೆ ಖುಷಿಯಿಂದ ಹೋಗಬೇಕು ಎಂದು. ಆದರೆ ಇಂದು ಹಾಗಾಗುತ್ತಿಲ್ಲ. ಪರೀಕ್ಷೆ ಒಂದು ಯುದ್ಧ ಎಂದು ನಾವೆಲ್ಲರೂ ಅವರ ತಲೆಗೆ ತುರುಕುತ್ತಿದ್ದೇವೆ. ಪರಿಣಾಮವಾಗಿ ಪರೀಕ್ಷೆ ಮುಗಿಯುವತನಕ ಮನೆಗಳಲ್ಲಿ ಅಘೋಷಿತವಾದ ಕರ್ಫ್ಯೂ ಘೋಷಣೆ ಆಗಿರುತ್ತದೆ. ಈ ಹೊತ್ತಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೂ ಕಣ್ಣು ಕೆಂಪು ಮಾಡಿ ಸ್ವಾಗತ ಮಾಡುವ ಪರಿಸ್ಥಿತಿ ಇಂದು ಇದೆ. ಮಕ್ಕಳ

ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ Read More »

ಕಥಕ್ ನೃತ್ಯದ ಮಹಾಗುರು ಪಂಡಿತ್ ಬಿರ್ಜು ಮಹಾರಾಜ್

ಆ ನೃತ್ಯ ಪ್ರಕಾರಕ್ಕೆ ತಾರಾ ಮೌಲ್ಯ ತಂದುಕೊಟ್ಟವರು ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜರು ಕಳೆದ ವರ್ಷ ನಮ್ಮನ್ನು ಅಗಲಿದಾಗ ಅವರ ವಯಸ್ಸು 83 ಆಗಿತ್ತು. ಆ ವಯಸ್ಸಿನಲ್ಲಿಯೂ ಅವರು ನೃತ್ಯ ಪ್ರದರ್ಶನ ಮತ್ತು ನೃತ್ಯ ಸಂಯೋಜನೆ ಮಾಡುತ್ತಾ ಬ್ಯುಸಿ ಆಗಿದ್ದರು. ಓಡಿಸ್ಸಿ ನೃತ್ಯಕ್ಕೆ ಕೇಳು ಚರಣ ಮಹಾಪಾತ್ರ ಹೇಗೋ, ಕಥಕ್ ನೃತ್ಯಕ್ಕೆ ಪಂಡಿತ್ ಬಿರ್ಜು ಮಹಾರಾಜರು ಹಾಗೆ ಅನ್ನುವುದು ಜನಜನಿತ. ಅವರಿಬ್ಬರೂ ಭಾರತೀಯ ಸಂಸ್ಕೃತಿಯ ನಿಜಪಥ ದರ್ಶಕರು ಅನ್ನುವುದರಲ್ಲಿ ಅನುಮಾನವಿಲ್ಲ. ನಾಲ್ಕನೇ ವಯಸ್ಸಿಗೇ ಸ್ಟೇಜ್ ಶೋ ಕೊಟ್ಟ

ಕಥಕ್ ನೃತ್ಯದ ಮಹಾಗುರು ಪಂಡಿತ್ ಬಿರ್ಜು ಮಹಾರಾಜ್ Read More »

ದಾರಿ ದೀಪ : ಪದವಿ ಮೆಟ್ಟಿಲು ಹತ್ತದೆ ಸಿ.ಎ. ಮುಗಿಸಿದ ಚತುರ

ಯಶಸ್ಸಿನ ಹಿಂದಿನ ಗುಟ್ಟು ತೆರೆದಿಟ್ಟ ರಘುರಾಮ್ ಪ್ರಭು ಕನಸುಗಳು ಯಾರಿಗಿಲ್ಲ ಹೇಳಿ. ಎಲ್ಲರೂ ಕನಸು ಕಾಣುತ್ತಾರೆ. ಅದು ಹಗಲೋ, ಇರುಳೋ? ಅಂತು ಕನಸು ಕನಸೇ! ಆದರೆ ನನಸು? ಕಠಿಣ ದುಡಿಮೆ, ತಾಳ್ಮೆ, ಅಧಮ್ಯ ಉತ್ಸಾಹ ಜೊತೆಗೊಂದಿಷ್ಟು ಪ್ರೋತ್ಸಾಹ ಸಿಕ್ಕರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಮ್ಮ ಕನಸುಗಳು ನನಸಾಗಲೂ ಪರಿಶ್ರಮವೆಂಬ ಅಸ್ತ್ರದಿಂದ ಮಾತ್ರ ಸಾದ್ಯ. ಸದಾ ಅದರಲ್ಲೆ ನಮ್ಮ ಮನಸು ಹೊರಳಿದರೆ ಕನಸು ನನಸಾಗಲು ಸಾಧ್ಯ. ನಮ್ಮ ಸುತ್ತಮುತ್ತಲು ಪುಷ್ಪವರಳಿ ಪರಿಮಳ ಹರಡಿದಂತೆ ಸಾಧನೆಯ ಸುದ್ದಿ ಎಲ್ಲೆಲ್ಲೋ ಹರಡಿ

ದಾರಿ ದೀಪ : ಪದವಿ ಮೆಟ್ಟಿಲು ಹತ್ತದೆ ಸಿ.ಎ. ಮುಗಿಸಿದ ಚತುರ Read More »

ಅವರ ಸಿನೆಮಾ, ಬದುಕು, ರಾಜಕೀಯ ಎಲ್ಲವೂ ವರ್ಣರಂಜಿತ

ತಮಿಳುನಾಡಿನ ಚಹರೆಯನ್ನೇ ಬದಲಾಯಿಸಿದ ಮಹಾನಾಯಕ! ತಮಿಳುನಾಡಿನ ಸಿನಿಮಾ ರಂಗ, ರಾಜಕೀಯ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಚಹರೆಯನ್ನು ಬದಲಾಯಿಸಿದ ಓರ್ವ ವ್ಯಕ್ತಿ ಇದ್ದರೆ ಅದು ಎಂ.ಜಿ. ರಾಮಚಂದ್ರನ್. ಅವರ ಬದುಕಿನ ಪ್ರತಿ ಪುಟವೂ ಅವರ ಸಿನೆಮಾಗಳ ಹಾಗೆ ವರ್ಣರಂಜಿತ ಮತ್ತು ಸ್ಫೂರ್ತಿದಾಯಕ ಸಂಗತಿ. ಅನಾಥ ಬಾಲ್ಯದ ಅಸಹಾಯಕತೆ ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಎಂ.ಜಿ.ಆರ್. ಹುಟ್ಟಿದ್ದು ತುಳುನಾಡಿನಲ್ಲಿ ಅಲ್ಲ. ಅವರು ಹುಟ್ಟಿದ್ದು ಶ್ರೀಲಂಕಾದಕ್ಯಾಂಡಿಯಲ್ಲಿ. ಅದೂ ಮಲಯಾಳಿ ಕುಟುಂಬದಲ್ಲಿ. ಎರಡೂವರೆ ವರ್ಷ ಪ್ರಾಯದಲ್ಲಿ ಅಪ್ಪನನ್ನು ಕಳೆದುಕೊಂಡಾಗ ತನ್ನ ಇಬ್ಬರು ಗಂಡು

ಅವರ ಸಿನೆಮಾ, ಬದುಕು, ರಾಜಕೀಯ ಎಲ್ಲವೂ ವರ್ಣರಂಜಿತ Read More »

ದೊಡ್ಡ ಪ್ರಶಸ್ತಿ ನಿರಾಕರಿಸಿ ದೊಡ್ಡವರಾದವರು

ಪ್ರಶಸ್ತಿಗಿಂತಲೂ ಅವರ ವ್ಯಕ್ತಿತ್ವ ಹಿರಿದು ಕ್ರಿಕೆಟ್‌ನ ಲೆಜೆಂಡ್ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಕಳೆದ ವರ್ಷ ಬೆಂಗಳೂರು ವಿವಿಯು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಆದರೆ ಎಲ್ಲರೂ ಆಶ್ಚರ್ಯ ಪಡುವಂತೆ ದ್ರಾವಿಡ್ ಈ ಗೌರವವನ್ನು ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಕೂಡ ಸರಿಯಾಗಿಯೇ ಇತ್ತು.ನನ್ನ ಹೆಂಡತಿ ಡಾಕ್ಟರ್. ಆ ಉನ್ನತ ಪದವಿಯನ್ನು ಪಡೆಯಲು ಅವರು ವರ್ಷಾನುಗಟ್ಟಲೆ ಹಗಲು ರಾತ್ರಿ ಅಭ್ಯಾಸ ಮಾಡಿದ್ದಾರೆ. ನನ್ನ ಅಮ್ಮ ಓರ್ವ ಕಲಾ ಶಿಕ್ಷಕಿ ಆಗಿದ್ದರು. ಅವರು ಡಾಕ್ಟರೇಟ್ ಪಡೆಯಲು

ದೊಡ್ಡ ಪ್ರಶಸ್ತಿ ನಿರಾಕರಿಸಿ ದೊಡ್ಡವರಾದವರು Read More »

ಕಗ್ಗದ ಸಂದೇಶ – ಹಳತರಿಂದ ಹೊಸದುದಿಸಿದಾಗ ಬದುಕಿಗೆ ಸಾರ…

ರಾಮನಡಿಯಿಟ್ಟ ನೆಲ, ಭೀಮನುಸುರಿದ ಗಾಳಿ|ವ್ಯೋಮದೆ ಭಗೀರಥಂ ತಂದ ಸುರತಟನಿ||ಸೋಮನಂ ಪೆತ್ತ ಕಡಲೀ ಪುರತಾನಗಳಿರೆ|ನಾವೆಂತು ಹೊಸಬರೆಲೊ-ಮಂಕುತಿಮ್ಮ||ಈ ಭೂಮಿ ಎನ್ನುವುದು ಶ್ರೀರಾಮನು ಪಾದವಿಟ್ಟಂತಹ ಪವಿತ್ರವಾದ ಭೂಮಿಯಿದು. ಇಲ್ಲಿ ಬೀಸುವ ಗಾಳಿ ಭೀಮನು ಉಸಿರಾಡಿದ್ದು. ಇಂದು ಇಲ್ಲಿ ಹರಿಯುತ್ತಿರುವ ಪುಣ್ಯ ನದಿ ಗಂಗೆಯನ್ನು ಅಂದು ಭಗೀರಥ ದೇವಲೋಕದಿಂದ ತಂದಿರುವುದು. ಆಕಾಶದಲ್ಲಿ ಬೆಳಗುವ ಚಂದ್ರ ಬಹಳ ಹಿಂದೆ ಕಡಲಿನಿಂದ ಜನಿಸಿರುವುದು. ಈ ಎಲ್ಲಾ ಹಳತುಗಳು ಇರುವುದರಿಂದ ನಾವು ಹೇಗೆ ಹೊಸಬರಾಗಲು ಸಾಧ್ಯ? ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಪ್ರಶ್ನಿಸಿದ್ದಾರೆ.ಇಂದು ತಂತ್ರಜ್ಞಾನದ ಯುಗದಲ್ಲಿರುವವರಿಗೆ

ಕಗ್ಗದ ಸಂದೇಶ – ಹಳತರಿಂದ ಹೊಸದುದಿಸಿದಾಗ ಬದುಕಿಗೆ ಸಾರ… Read More »

ಲೆಜೆಂಡ್‌ಗಳು ಮತ್ತು ಅವರ ಪ್ರಭಾವಳಿ

ಎಲ್ಲರಿಗೂ ಇದೆ ಒಂದು ಇಮೇಜ್‌ ಪ್ರತಿಯೊಬ್ಬ ಲೆಜೆಂಡ್ ಒಂದು ಪ್ರಭಾವಳಿ ಹೊಂದಿರುತ್ತಾನೆ ಮತ್ತು ಆ ಇಮೇಜ್‌ ಆತನನ್ನು ಗೆಲ್ಲಿಸುತ್ತವೆ. ಮತ್ತೆ ಕೆಲವು ಉದಾಹರಣೆಗಳಿಂದ ಆರಂಭ ಮಾಡುತ್ತೇನೆ.1) ಭಾರತದ ಮಹೋನ್ನತ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರನ್ನೊಮ್ಮೆ ಕಣ್ಣು ಮುಚ್ಚಿ ನೆನಪಿಸಿಕೊಳ್ಳಿ. ತಕ್ಷಣ ನಮಗೆ ನೆನಪಿಗೆ ಬರುವುದು ಅವರು ತುಂಬಾ ತಾಳ್ಮೆಯಿಂದ ಇಡೀ ದಿನ ನಿಂತು ಆಡಿದ ಟೆಸ್ಟ್ ಇನ್ನಿಂಗ್ಸ್‌ಗಳು. ಅದಕ್ಕೆ ಅನುರೂಪವಾಗಿ ಅವರನ್ನು ವಾಲ್ ಆಫ್ ಕ್ರಿಕೆಟ್ (ಭಾರತೀಯ ಕ್ರಿಕೆಟ್ಟಿನ ಗೋಡೆ) ಎಂದು ಕರೆದಿರುವುದು.ಆದರೆ ಅವರ ಏಕದಿನದ ಪಂದ್ಯಗಳ

ಲೆಜೆಂಡ್‌ಗಳು ಮತ್ತು ಅವರ ಪ್ರಭಾವಳಿ Read More »

error: Content is protected !!
Scroll to Top