ಕಗ್ಗದ ಸಂದೇಶ – ಮೌನವಾಗಿ ಕರ್ತವ್ಯವನ್ನು ಮಾಡು ಮಾನವ…
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ|ಫಲ ಮಾಗುವಂದು ತುತ್ತೂರಿ ದನಿಯಿಲ್ಲ||ಸೂರ್ಯಚಂದ್ರರದೊಂದು ಸದ್ದಿಲ್ಲ|ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ||ಭೂಮಿಯಲ್ಲಿ ಹಾಕಿದ ಬೀಜ ಮೊಳಕೆಯೊಡೆದು ಹೊರಬರುವಾಗ ತಮಟೆಯನ್ನು ಬಾರಿಸಿ ಶಬ್ದ ಮಾಡುವುದಿಲ್ಲ. ಗಿಡದಲ್ಲಿರುವ ಕಾಯಿ ಹಣ್ಣಾಗುವಾಗ ವಾದ್ಯ ಘೋಷ ಮಾಡುವುದಿಲ್ಲ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯಚಂದ್ರರು ಯಾವುದೇ ರೀತಿಯಲ್ಲಿ ಹೇಳಿಕೊಳ್ಳುವುದಿಲ್ಲ. ಸದ್ದುಗದ್ದಲವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವುದನ್ನು ನೋಡಿ ಮಾನವನು ಕೂಡ ತುಟಿ ತೆರೆಯದೆ ಮೌನವಾಗಿ ಕಾರ್ಯನಿರ್ವಹಿಸುವುದನ್ನು ಕಲಿಯಬೇಕೆಂದು ಮಾನ್ಯ ಡಿವಿಜಿಯವರು ಈಮುಕ್ತಕದಲ್ಲಿ ಹೇಳಿದ್ದಾರೆ.ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆಯದೆ ಇದ್ದರೆ ಜೀವಿಗಳಿಗೆ ಜೀವನವಿಲ್ಲ. ಆದರೆ […]
ಕಗ್ಗದ ಸಂದೇಶ – ಮೌನವಾಗಿ ಕರ್ತವ್ಯವನ್ನು ಮಾಡು ಮಾನವ… Read More »