ಬೆಳೆವಿಮೆ ಸಾಫ್ಟ್’ವೇರ್ ದೋಷಕ್ಕೆ ಶಾಸಕರಿಂದ ಪರಿಹಾರ | ಸಂಜೀವ ಮಠಂದೂರಿಗೆ ಅಭಿನಂದನೆ ಸಲ್ಲಿಸಿದ ಬನ್ನೂರು ರೈತರ ಸೇವಾ ಸಹಕಾರಿ ಸಂಘ
ಪುತ್ತೂರು: ಬೆಳೆವಿಮೆ ಸಾಫ್ಟ್’ವೇರ್ ನಲ್ಲಿ ರೈತರ ದಾಖಲೆ ಎಂಟ್ರಿ ಸಂದರ್ಭ ಎದುರಾಗುತ್ತಿದ್ದ ತಾಂತ್ರಿಕ ದೋಷವನ್ನು ಪರಿಹರಿಸುವಲ್ಲಿ ಶಾಸಕ ಸಂಜೀವ ಮಠಂದೂರು ಅವರ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಬೆಳೆವಿಮೆ ಸಾಫ್ಟ್’ವೇರ್ ಗೆ ದಾಖಲೆಗಳ ನೋಂದಣಿ ಮಾಡುವಾಗ, 3-4 ಸರ್ವೆ ನಂಬರ್ ಬದಲಿಗೆ ಒಂದು ಸರ್ವೆ ನಂಬರನ್ನು ಮಾತ್ರ ಆಯ್ಕೆ ಮಾಡಲು ಆಗುತ್ತಿತ್ತು. ಅಂದರೆ ರೈತರ ಒಂದು ಸರ್ವೆ ನಂಬರ್ ಬಿಟ್ಟು, ಉಳಿದ ಸರ್ವೆ ನಂಬರ್‍ಗಳು ದಾಖಲಾಗುತ್ತಿರಲಿಲ್ಲ. […]