ಚಾರ್ವಾಕ ಕುಕ್ಕೇನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಂದಲೇ ಭತ್ತ ಬೇಸಾಯ | 20 ವರ್ಷಗಳಿಂದ ಭತ್ತ ಬೇಸಾಯದ ಮೂಲಕ ಪರಂಪರೆ ಉಳಿಸುವ ಕೆಲಸ
ಕಾಣಿಯೂರು: ಪ್ರಸ್ತುತ ಎಲ್ಲೆಡೆ ಅಡಿಕೆ, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳತ್ತ ಜನತೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಪರಿಣಾಮ ಮುಂದೊಂದು ದಿನ ಉಣ್ಣಲು ಅಕ್ಕಿಗೆ ಹಾಹಾಕಾರ ಪಡೆಯುವ ಕಾಲ ಬರಲೂಬಹುದು. ಈ ನಡುವೆ ಕಾಣಿಯೂರಿನ ಚಾರ್ವಾಕ ಗ್ರಾಮದ ಕುಕ್ಕೇನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ಭಕ್ತರೇ ಭತ್ತದ ಬೇಸಾಯ ಮಾಡುವ ಮೂಲಕ ಪರಂಪರೆ ಉಳಿಸಿಕೊಂಡು ಬರುತ್ತಿದ್ದಾರೆ. ಪ್ರತೀ ವರ್ಷ ಅಂದರೆ ಕಳೆದ 20 ವರ್ಷಗಳಿಂದ ಭಕ್ತರು ಶ್ರಮದಾನದ ಮೂಲಕ ವ್ಯವಸ್ಥಿತವಾಗಿ ಗದ್ದೆ ಬೇಸಾಯ […]