ಶೈಕ್ಷಣಿಕ

ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಫಲಿತಾಂಶ

ಪುತ್ತೂರು: ಪುತ್ತೂರಿನ ಜಿಡೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ 5ನೆ ಸೆಮಿಸ್ಟರ್ ನ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ಕಾಲೇಜಿಗೆ ಬಿ.ಕಾಂ. ಮತ್ತು ಬಿ.ಎ. ವಿಭಾಗಗಳ ಪ್ರಕಟಿತ 26 ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಆರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (Distinction ) ಪಡೆಯುವುದರೊಂದಿಗೆ ಉತ್ತಮ ಫಲಿತಾಂಶ ಲಭಿಸಿದೆ. ಅಂತಿಮ ಬಿ.ಕಾಂ.ನ 5ನೆ ಸೆಮಿಸ್ಟರ್ ಪರೀಕ್ಷೆಗಳಲ್ಲಿ  ಸಂದೇಶ್ ಮಾರುತಿ ಕದಂ ಇವರು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್, ಇನ್ಕಮ್ ಟ್ಯಾಕ್ಸ್ ಮತ್ತು ಜಿ. ಎಸ್. […]

ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಫಲಿತಾಂಶ Read More »

ಮೇ.29 ರಿಂದ ರಾಜ್ಯದ ಎಲ್ಲಾ ಶಾಲೆಗಳು  ಪುನರಾರಂಭ

ಬೆಂಗಳೂರು : ಮೇ. 29 ರಿಂದ ಶಾಲೆಗಳು ಪುನರಾರಂಭವಾಗಲಿವೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 18 ದಿನ ದಸರಾ ರಜೆ, 48 ದಿನ ಬೇಸಿಗೆ ರಜೆ, 244 ದಿನ ಶಾಲಾ ಕರ್ತವ್ಯದ ದಿನಗಳು ಎಂದು ನಿಗದಿ ಪಡಿಸಲಾಗಿದೆ. ಮಕ್ಕಳು ಮತ್ತು ಶಿಕ್ಷಕರಿಗೆ 121 ದಿನಗಳ ಒಟ್ಟಾರೆ ರಜೆ ಸಿಗಲಿದೆ. ಪ್ರಸಕ್ತ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ

ಮೇ.29 ರಿಂದ ರಾಜ್ಯದ ಎಲ್ಲಾ ಶಾಲೆಗಳು  ಪುನರಾರಂಭ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿಗಳ ಪ್ರತಿಭಾ ದಿನ

ಪುತ್ತೂರು: ಜೀವನದಲ್ಲಿ ಎಡರುತೊಡರುಗಳು, ಜಯ-ಅಪಜಯಗಳು, ಸನ್ಮಾನ-ಅಪಮಾನಗಳು ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವುಗಳನ್ನು ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆಗಳನ್ನು ಆರಿಸುವ ಸ್ವಾತಂತ್ರ್ಯ ಮಾತ್ರ ನಮಗಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ದೇವಿಚರಣ್ ರೈ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಪ್ರತಿಭಾ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು. ಏಕಾಂತದಲ್ಲಿ ಕಣ್ಮುಚ್ಚಿ ನಮ್ಮ ಬಗ್ಗೆ ನಾವು ಯೋಚಿಸಿದಾಗ ನಮ್ಮ ಅಂತರಂಗವು ತೆರೆದುಕೊಳ್ಳುತ್ತದೆ ಮತ್ತು ಸಮಾಜದಲ್ಲಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿಗಳ ಪ್ರತಿಭಾ ದಿನ Read More »

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 93.5 % ಫಲಿತಾಂಶ

ಸವಣೂರು: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯಕ್ಕೆ ಶೇ.93.5 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , 19  ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯ ಸಾಧಕರು : ಸುಪ್ರೀತಾ ಆರ್.- 607 (ರಮೇಶ್ ಮತ್ತು ಶ್ರಿದೇವಿ, ಬೀದರ್ ದಂಪತಿ ಪುತ್ರಿ), ಕನ್ನಡ-125/125, ಇಂಗ್ಲೀಷ್-97/100, ಹಿಂದಿ-97/100, ಗಣಿತ-98/100, ವಿಜ್ಞಾನ-98/100 ಮತ್ತು ಸಮಾಜ ವಿಜ್ಞಾನ-94/100,

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 93.5 % ಫಲಿತಾಂಶ Read More »

ಮೇ 9: ಎಸ್‌ ಎಸ್‌ ಎಲ್ ಸಿ ಫಲಿತಾಂಶ ಪ್ರಕಟ

ಬೆಂಗಳೂರು : 2023-24 ನೇ ಶೈಕ್ಷಣಿಕ ವರ್ಷದ  ಎಸ್‌ ಎಸ್‌ ಎಲ್ ಸಿ ಫಲಿತಾಂಶದ ದಿನಾಂಕ ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಿಸಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ 2023-24ನೇ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವು ಮೇ 9ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಎನ್.ಮಂಜುಶ್ರೀ ತಿಳಿಸಿದ್ದಾರೆ. ಮೇ.9ರಂದು ಬೆಳಿಗ್ಗೆ 10.30 ಕ್ಕೆ ಆನ್ ಲೈನ್ ನಲ್ಲಿ ಫಲಿತಾಂಶ ಘೋಷಣೆಯಾಗಲಿದೆ ಎಂದು ಇಲಾಖೆ ಘೋಷಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳು ಈ

ಮೇ 9: ಎಸ್‌ ಎಸ್‌ ಎಲ್ ಸಿ ಫಲಿತಾಂಶ ಪ್ರಕಟ Read More »

ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಪ್ರಕಟ | ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ಮಾರ್ಗದರ್ಶನ ಪಡೆದ 12 ಅಭ್ಯರ್ಥಿಗಳು ಆಯ್ಕೆ

ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿದ 2024 ರ ಫಲಿತಾಂಶ ಇಂದು ಪ್ರಕಟವಾಗಿದ್ದು, ಕರ್ನಾಟಕದಿಂದ 25 ಮಂದಿ ರ್ಯಾಂಕ್ ಗಳಿಸಿದ್ದಾರೆ. ಈ ಪೈಕಿ 12 ಮಂದಿ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ವ್ಯಕ್ತಿತ್ವ ಪರೀಕ್ಷೆ ಹಾಗೂ ವಿವಿಧ ಹಂತಗಳಲ್ಲಿ ಮಾರ್ಗದರ್ಶನ ಪಡೆದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಪುತ್ತೂರಿನ ಅರುಣಾ ಕಲಾ ಮಂದಿರದ ಎದುರು ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಯು ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ ಜತೆಗೂಡಿ ಪುತ್ತೂರು ಪರಿಸರದ ವಿದ್ಯಾರ್ಥಿಗಳಿಗೆ ಕೆಪಿಎಸ್‍ಸಿ ಮತ್ತು ಯುಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಬಗ್ಗೆ

ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಪ್ರಕಟ | ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ಮಾರ್ಗದರ್ಶನ ಪಡೆದ 12 ಅಭ್ಯರ್ಥಿಗಳು ಆಯ್ಕೆ Read More »

ಡಾ.ಕೃತಿಕಾ ಆರ್. ಐತಾಳ್ ಗೆ ಪ್ರಥಮ ವರ್ಷದ ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಪುತ್ತೂರು : ಮೈಸೂರಿನ ಜೆ.ಎಸ್.ಎಸ್. ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಕೃತಿಕಾ ಆರ್. ಐತಾಳ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ ಪ್ರಥಮ ವರ್ಷದ ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ವಾಸ್ಥ್ಯ ಆಯುಷ್ ಎಕ್ಸ್ ಪೋನಲ್ಲಿ ಬೆಸ್ಟ್ ಓರಲ್ ಪೇಪರ್ ಪ್ರೆಸೆಂಟೇಟರ್ ಆಗಿ ತೆಲಂಗಾಣದ ಮಾಜಿ ರಾಜ್ಯಪಾಲರಾದ ಡಾ. ತಮಿಳಾಸೈ ಸೌಂದರಾಜನ್ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿರುವ ಕೃತಿಕಾ ಆರ್. ಐತಾಳ್

ಡಾ.ಕೃತಿಕಾ ಆರ್. ಐತಾಳ್ ಗೆ ಪ್ರಥಮ ವರ್ಷದ ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ Read More »

ದ್ವಿತೀಯ ಪಿಯುಸಿ : ಪ್ರಗತಿ ಸ್ಟಡಿ ಸೆಂಟರ್‌ಗೆ ವಾಣಿಜ್ಯ ವಿಭಾಗದಲ್ಲಿ ಶೇ.99, ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ

ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ 2023-24ನೇ ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.99 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು 10 ವಿದ್ಯಾರ್ಥಿಗಳಲ್ಲಿ 7 ಮಂದಿ ಪ್ರಥಮ, 2 ಮಂದಿ ದ್ವಿತೀಯ ಹಾಗೂ ಓರ್ವ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಒಟ್ಟು 56 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ-1, ಪ್ರಥಮ ಶ್ರೇಣಿಯಲ್ಲಿ

ದ್ವಿತೀಯ ಪಿಯುಸಿ : ಪ್ರಗತಿ ಸ್ಟಡಿ ಸೆಂಟರ್‌ಗೆ ವಾಣಿಜ್ಯ ವಿಭಾಗದಲ್ಲಿ ಶೇ.99, ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ Read More »

ದ್ವಿತೀಯ ಪಿಯುಸಿ : ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ನ ಸಾಧಕ ರತ್ನರು

ಪುತ್ತೂರು: ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 99 ಫಲಿತಾಂಶ ದಾಖಲಾಗಿದೆ. ಮಡಿಕೇರಿ ಕಾಟಕೇರಿ ನಿವಾಸಿ, ಆಟೋ ರಿಕ್ಷಾ ಚಾಲಕ ಸಿ.ಎ. ಈಶ್ವರಪ್ಪ ಹಾಗೂ ರುಕ್ಮಣಿ ದಂಪತಿ ಪುತ್ರಿ ದಿಶಾ ಸಿ.ಎಚ್. ಆರೋಗ್ಯ ಸಮಸ್ಯೆಯ ನಡುವೆಯಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದು 517 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಆರ್ಯಾಪು ನಿವಾಸಿ ಕೆ.ಪಿ. ಇಬ್ರಾಹಿಂ ಹಾಗೂ ಜುಬೈದ ದಂಪತಿ ಪುತ್ರಿ ಆಯಿಷತ್ತುಲ್

ದ್ವಿತೀಯ ಪಿಯುಸಿ : ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ನ ಸಾಧಕ ರತ್ನರು Read More »

ದ್ವಿತೀಯ ಪಿಯುಸಿ ಫಲಿತಾಂಶ : ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಗೆ ಶೇ.99 ಫಲಿತಾಂಶ

ಪುತ್ತೂರು: ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 99 ಫಲಿತಾಂಶ ದಾಖಲಾಗಿದೆ. ಮಡಿಕೇರಿ ಕಾಟಕೇರಿ ನಿವಾಸಿ, ಆಟೋ ರಿಕ್ಷಾ ಚಾಲಕ ಸಿ.ಎ. ಈಶ್ವರಪ್ಪ ಹಾಗೂ ರುಕ್ಮಣಿ ದಂಪತಿ ಪುತ್ರಿ ದಿಶಾ ಸಿ.ಎಚ್. ಆರೋಗ್ಯ ಸಮಸ್ಯೆಯ ನಡುವೆಯಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದು 517 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಆರ್ಯಾಪು ನಿವಾಸಿ ಕೆ.ಪಿ. ಇಬ್ರಾಹಿಂ ಹಾಗೂ ಜುಬೈದ ದಂಪತಿ ಪುತ್ರಿ ಆಯಿಷತ್ತುಲ್

ದ್ವಿತೀಯ ಪಿಯುಸಿ ಫಲಿತಾಂಶ : ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಗೆ ಶೇ.99 ಫಲಿತಾಂಶ Read More »

error: Content is protected !!
Scroll to Top