ಶೈಕ್ಷಣಿಕ

ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ ಸಂಬಂಧಿಸಿ ಪೋಷಕರಿಗೆ ಕಾರ್ಯಾಗಾರ ಗುರುವಾರ ನಡೆಯಿತು. ವಿದ್ಯಾಭಾರತಿ ಕ್ಷೇತ್ರೀಯ ಶಿಶುಶಿಕ್ಷಣ ಸಹಪ್ರಮುಖರಾದ ತಾರಾ ಕಾಳಿಚರಣ್ ಬೆಂಗಳೂರು ಶಾಲಾ ಪೂರ್ವ ಪ್ರಾಥಮಿಕ, ಒಂದನೇ ಹಾಗೂ 2ನೇ ತರಗತಿ ಪೋಷಕರೊಂದಿಗೆ ಮಾತನಾಡಿ, ಸೊನ್ನೆಯಿಂದ 9 ವರ್ಷದ ವರೆಗಿನ ಮಗುವಿನ ಬೆಳವಣಿಗೆಯಲ್ಲಿ ಮನೆ, ಶಾಲೆ, ಸಮಾಜ ಪ್ರಮುಖ ಪಾತ್ರ ವಹಿಸುತ್ತಿದ್ದು ಮನೆ ಮತ್ತು ಶಾಲೆ ಒಂದೇ ನಾಣ್ಯದ ಮುಖಗಳಂತೆ ಕಾರ್ಯನಿರ್ವಹಿಸಬೇಕು. ಈ ಸಂದರ್ಭ ಮಗು ನೋಡಿ ಕಲಿಯುವ ಸಂಗತಿಗಳೇ ಅತೀ ಹೆಚ್ಚಾಗಿರುವುದರಿಂದ […]

ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ Read More »

ಮಾ.8 : ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ವಿವೇಕ ಚೇತನ್-2025’ ಅಂತರ್ ಕಾಲೇಜು ಪ್ರತಿಭಾ ಸ್ಪರ್ಧೆ

ಪುತ್ತೂರು: ಮಾರ್ಚ್ 8 ಶನಿವಾರ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಯುವ ಪ್ರತಿಭಾ ಸಂಗಮವಾಗಲಿದ್ದು, ಅಂದು ‘ವಿವೇಕ ಚೇತನ್- 2025’ ಶಿರೋನಾಮೆಯಲ್ಲಿ ಅಂತರ್ ಕಾಲೇಜು ಮಟ್ಟದ ವಿವಿಧ ಹನ್ನೆರಡು ಸ್ಪರ್ಧೆಗಳು ನಡೆಯಲಿವೆ. ಛಾಯಾಗ್ರಹಣ, ಕಿರುಚಿತ್ರ ತಯಾರಿ, ಚರ್ಚೆ, ಪೋಸ್ಟರ್ ವಿನ್ಯಾಸಗಳು ಸೇರಿದಂತೆ ವಿವಿಧ ಆಕರ್ಷಕ ಚಿಂತನಾಶೀಲ ಸ್ಪರ್ಧೆಗಳು ನಡೆಯಲಿದ್ದು, ನೂರಾರು ಪ್ರತಿಭೆಗಳು ಅನಾವರಣಗೊಳ್ಳಲಿವೆ. ಹೆಚ್ಚಿನ ಮಾಹಿತಿಗಾಗಿ ಅಸಿಸ್ಟೆಂಟ್ ಪ್ರೊಫೆಸರ್’ಗಳಾದ ಹವ್ಯಶ್ರೀ ಪಿ. ಕೆ. (9482306026) ಮತ್ತು ಸುತನ್ ಕೇವಳ (9141142201) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ

ಮಾ.8 : ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ವಿವೇಕ ಚೇತನ್-2025’ ಅಂತರ್ ಕಾಲೇಜು ಪ್ರತಿಭಾ ಸ್ಪರ್ಧೆ Read More »

ಬಂದ್‌ ದಿನ ಪರೀಕ್ಷೆ ಮುಂದೂಡಿಕೆ ಇಲ್ಲ : ಮಧು ಬಂಗಾರಪ್ಪ

ಮಾ.22ರಂದು 7,8,9ನೇ ತರಗತಿ ಪರೀಕ್ಷೆ ನಿಗದಿಯಾಗಿರುವಂತೆ ನಡೆಯಲಿದೆ ಬೆಂಗಳೂರು: ಮಾರ್ಚ್‌ 22ರಂದು ಕರ್ನಾಟಕ ಬಂದ್‌ ಇದ್ದರೂ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಮಾ.22 ರಂದು 7,8,9ನೇ ತರಗತಿ ಪರೀಕ್ಷೆಗಳ ನಿಗದಿಯಾಗಿದೆ. ಬಂದ್ ಎಂದು ಈಗ ಮುಂದೂಡಿಕೆ ಸಾಧ್ಯವಿಲ್ಲ. ಬಂದ್ ಇದ್ದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡುವುದಿಲ್ಲ. ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ ಎಂದು ಹೇಳಿದರು.ಮಕ್ಕಳಿಗೆ ತೊಂದರೆ ಆಗದ ರೀತಿ ಸಹಕಾರ ನೀಡಬೇಕೆಂದು ಹೋರಾಟಗಾರರಿಗೆ ಮನವಿ ಮಾಡುತ್ತೇನೆ. ಹೋರಾಟ

ಬಂದ್‌ ದಿನ ಪರೀಕ್ಷೆ ಮುಂದೂಡಿಕೆ ಇಲ್ಲ : ಮಧು ಬಂಗಾರಪ್ಪ Read More »

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ವೆಬ್‌ ಕಾಸ್ಟಿಂಗ್‌, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 20ರ ವರೆಗೆ ನಡೆಯಲಿದೆ. ಇಂದು ಕನ್ನಡ/ಅರೇಬಿಕ್‌ ಪರೀಕ್ಷೆ ನಡೆಯಲಿದೆ. ಈಗಾಗಲೇ ಶಿಕ್ಷಣ ಇಲಾಖೆ ಮತ್ತು ಪರೀಕ್ಷಾ ಮಂಡಳಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷೆ ಅಕ್ರಮ ತಡೆಗೆ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆಗೂ ವೆಬ್ ಕಾಸ್ಟಿಂಗ್ ಕಣ್ಗಾವಲು ಇರಲಿದೆ. ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪೈಕಿ 3,35,468 ಗಂಡು ಮಕ್ಕಳು, 3,78,389 ಹೆಣ್ಣು ಮಕ್ಕಳು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ Read More »

ವಿದ್ಯಾಮಾತಾ ಅಕಾಡೆಮಿಯಲ್ಲಿ DCC ಬ್ಯಾಂಕ್ ಪರೀಕ್ಷಾ ತರಬೇತಿ ಇಂದು ಪ್ರಾರಂಭ

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಮಾರ್ಚ್ 9 ರಂದು ನಡೆಯಲಿರುವ SCDCC ಬ್ಯಾಂಕ್ ಲಿಖಿತ ಪರೀಕ್ಷೆಗೆ ತರಬೇತಿಯು ಫೆ, 27ರಂದು ಆನ್ಲೈನ್ ಮೂಲಕ ಪ್ರಾರಂಭವಾಗಿದೆ.  ತರಬೇತಿಯು ರಾತ್ರಿ 7 ರಿಂದ 9 ರವರೆಗೆ ದಿನನಿತ್ಯ ಎರಡು ಗಂಟೆಯಂತೆ ವಿಷಯಧಾರಿತವಾಗಿ ನುರಿತ ತರಬೇತುದಾರರಿಂದ ನಡೆಯಲಿದ್ದು ಪರೀಕ್ಷೆಗೆ ಸಂಬಂಧಪಟ್ಟ ಅಧ್ಯಯನ ಸಾಮಗ್ರಿಗಳು ಕೂಡ ದೊರೆಯಲಿದೆ. ಆಸಕ್ತರು ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ,ಸುಳ್ಯ ಕಚೇರಿಗೆ ಭೇಟಿ ನೀಡಬಹುದು, ಇಲ್ಲವೇ ಕಚೇರಿಯ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ

ವಿದ್ಯಾಮಾತಾ ಅಕಾಡೆಮಿಯಲ್ಲಿ DCC ಬ್ಯಾಂಕ್ ಪರೀಕ್ಷಾ ತರಬೇತಿ ಇಂದು ಪ್ರಾರಂಭ Read More »

ಅಕ್ಷಯ ಕಾಲೇಜು ಎನ್‌ಎಸ್‌ಎಸ್ ಶಿಬಿರ ಸಂಪನ್ನ

ಪುತ್ತೂರು : ಅಕ್ಷಯ ಕಾಲೇಜಿನ ರಾ.ಸೇ.ಯೋ.ಘಟಕಗಳ ವಾರ್ಷಿಕ ವಿಷೇಶ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮೇಗಿನಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳು ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಧ್ಯಕ್ಷರು ಜಯಂತ ನಡುಬೈಲು ಮಾತನಾಡಿ ನಮ್ಮ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವರು ಜವಾಬ್ದಾರಿಯುತ ನಾಗರಿಕರಾಗಲು ಸಿದ್ಧಗೊಳ್ಳುತ್ತಾರೆ. ಶಿಬಿರದಲ್ಲಿ ಕಲಿತ ಪಾಠಗಳು ಮುಂದಿನ ಜೀವನದಲ್ಲಿಯೂ ಪ್ರೇರಣೆಯಾಗಿ ಉಳಿಯಬೇಕು, ಎಲ್ಲಾ

ಅಕ್ಷಯ ಕಾಲೇಜು ಎನ್‌ಎಸ್‌ಎಸ್ ಶಿಬಿರ ಸಂಪನ್ನ Read More »

ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಪ್ರಯಾಣದ ಕೊಡುಗೆ

ವಾರ್ಷಿಕ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಉಚಿತವಾಗಿ ಒದಗಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಘೋಷಿಸಿದೆ. ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (ನಗರ, ಉಪನಗರ, ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್) ತಮ್ಮ ನಿವಾಸದಿಂದ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ನಿರ್ಧರಿಸಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಪ್ರಯಾಣದ ಕೊಡುಗೆ Read More »

ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲಾ ವಿಸ್ತೃತ ಕಟ್ಟಡದ ಉದ್ಘಾಟನೆ |ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಉದ್ಘಾಟನೆ

ಸುಳ್ಯ: ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಗೆ ಎಂ.ಆರ್.ಪಿ.ಎಲ್.ವತಿಯಿಂದ 40ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ವಿಸ್ತ್ರತ ಕಟ್ಟಡ ದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ನೂತನ ವಿಸ್ತ್ರತ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನೆರವೇರಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ರಾದ ಡಾ.ಕೆ.ವಿ.ಚಿದಾನಂದ ಎಂ.ಆರ್.ಪಿ.ಎಲ್ ಜನರಲ್ ಮನೇಜರ್ ಸತೀಶ್ ಅಲೆಟ್ಟಿ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ದೇವಿಡ್ ದೀದಾ ಗ್ರಾಸಾ ಉಪಸ್ಥಿತರಿದ್ದರು. ದ.ಕ.ಗೌಡ

ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲಾ ವಿಸ್ತೃತ ಕಟ್ಟಡದ ಉದ್ಘಾಟನೆ |ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಉದ್ಘಾಟನೆ Read More »

ಎಸ್‌ಎಸ್‌ಎಲ್‌ಸಿ ತೇರ್ಗಡೆ ಕನಿಷ್ಠ ಅಂಕ ಶೇ.33ಕ್ಕಿಳಿಸಲು ಖಾಸಗಿ ಶಾಲೆಗಳ ಒತ್ತಾಯ

ಸಿಬಿಎಸ್‌ಎ, ಐಸಿಎಸ್‌ಯ ಬೋರ್ಡ್‌ ಮಾದರಿಯಲ್ಲಿ ಅಂಕ ನಿಗದಿಗೆ ಆಗ್ರಹ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಉತ್ತೀರ್ಣಕ್ಕೆ ಕನಿಷ್ಠ 35 ಅಂಕದ ಬದಲು 33ಕ್ಕೆ ಇಳಿಸಿ ಎಂದು ಸರ್ಕಾರಕ್ಕೆ ಖಾಸಗಿ ಶಾಲೆಗಳು ಒತ್ತಾಯ ಮಾಡಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಕುರಿತು ಪತ್ರ ಬರೆದಿರುವ ಖಾಸಗಿ ಶಾಲೆಗಳ ಒಕ್ಕೂಟ ಕನಿಷ್ಠ 35 ಅಂಕಗಳ ಬದಲಾಗಿ ಈ ವರ್ಷದಿಂದಲೇ ಪಾಸ್‌ ಮಾನದಂಡವನ್ನು 33 ಅಂಕಗಳಿಗೆ ಬದಲಾವಣೆ ಮಾಡುವಂತೆ ಒತ್ತಾಯಿಸಿದೆ. ಸರಕಾರ ಸರಕಾರಿ ಮತ್ತು ಅನುದಾನಿತ ಶಾಲೆಗಳ ಎಸ್‌ಎಸ್‌ಎಲ್‌ಸಿ ಮಕ್ಕಳ ತೇರ್ಗಡೆಗೆ ಕನಿಷ್ಠ ಶೇ.35 ಅಂಕ ಗಳಿಕೆ

ಎಸ್‌ಎಸ್‌ಎಲ್‌ಸಿ ತೇರ್ಗಡೆ ಕನಿಷ್ಠ ಅಂಕ ಶೇ.33ಕ್ಕಿಳಿಸಲು ಖಾಸಗಿ ಶಾಲೆಗಳ ಒತ್ತಾಯ Read More »

ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ ಶೇ.35 ಅಂಕ ಕಡ್ಡಾಯ

ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಕೃಪಾಂಕ ಸಿಗಲಿದೆ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಂದಿದ್ದ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ವರ್ಷದಿಂದ ರದ್ದಾಗಿದ್ದು, 2024ಕ್ಕೂ ಹಿಂದೆ ಇದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ.35ಕ್ಕೆ ನಿಗದಿ ಮಾಡಲಾಗಿದೆ.ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಗೆ ಅಡ್ಡಿಯಾಗಿದೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವಿವಿಧ ವಲಯಗಳಿಂದ ತೀವ್ರ ಟೀಕೆಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಸ್ ಅಂಕಗಳನ್ನು

ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ ಶೇ.35 ಅಂಕ ಕಡ್ಡಾಯ Read More »

error: Content is protected !!
Scroll to Top