ಶೈಕ್ಷಣಿಕ

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯದ, ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ.ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಐಕ್ಯೂಸಿ ವಿಭಾಗದ ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏ.29 ಮಂಗಳವಾರ ಸಂಜೆ 3 ಗಂಟೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಎನ್‍. ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಖ್ಯಾತ […]

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ Read More »

ಕೆ.ಎಸ್.ಎಸ್ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ

ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಎನ್.ಎಸ್.ಎಸ್ ಘಟಕ ಮತ್ತು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ  ಕಛೇರಿ ಜಂಟಿಯಾಗಿ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಏ.25 ಶುಕ್ರವಾರದಂದು  ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಯಾದ ಡಾ. ತ್ರಿಮೂರ್ತಿ ಅವರು ಉಪಸ್ಥಿತರಿದ್ದರು. ತಾಲೂಕು ಆರೋಗ್ಯ  ಶಿಕ್ಷಣ ಅಧಿಕಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಲೇರಿಯಾ ರೋಗವನ್ನು ತಡೆಗಟ್ಟುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್‍ಪೆಕ್ಟರ್ ಉಮರ್ ಖಾನ್ ಮತ್ತು

ಕೆ.ಎಸ್.ಎಸ್ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ  ಪೂರ್ವ ವಿದ್ಯಾರ್ಥಿ  ಸಂಘ ಬೆಂಗಳೂರು ಚಾಪ್ಟರ್ ವತಿಯಿಂದ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮವನ್ನು ಏ.21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ .ಟಿ ವಹಿಸಿದರು. ಕಾರ್ಯಕ್ರಮದಲ್ಲಿ, ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಘಟಕವನ್ನು ಹುಟ್ಟು ಹಾಕಿದ ಕೆ ಎಸ್ ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ ಕೆ ರಂಗಯ್ಯ ಶೆಟ್ಟಿಗಾರ್ ಅವರು ಈ ಘಟಕವು ಸಂಸ್ಥೆಯ ಹಲವಾರು ವಿದ್ಯಾರ್ಥಿಗಳಿಗೆ  ಉದ್ಯೋಗವನ್ನು,

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ Read More »

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ

ವೀರಮಂಗಲ : ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ ನಡೆಯಿತು. ದೇಶದ್ಯಾಂತ ಇಂದು ವಿಶ್ವ ಭೂದಿನವನ್ನಾಗಿ ಆಚರಿಸುತ್ತಿದ್ದು ಪರಿಸರ ಪ್ರೇಮದೊಂದಿಗೆ ಗಿಡಗಳ ಪರಿಚಯ, ಸ್ವಚ್ಛತೆ, ಕಸವಿಲೇವಾರಿ, ನೀರು ಇಂಗಿಸುವಿಕೆ ಇತ್ಯಾದಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಪ್ರತಿ ಶಾಲೆಯಲ್ಲೂ ಇಕೋ ಕ್ಲಬ್ ಸ್ಥಾಪಿಸಲಾಗಿದ್ದು ಆ ಪ್ರಯುಕ್ತ ವಿಶ್ವ ಭೂದಿನವಾದ ಏ 22 ರಂದು  ಗಿಡಗಳ ಪರಿಚಯ ಮಾಡಲು ಗಿಡಗಳಿಗೆ QR CODE ಕಟ್ಟುವುದರ ಮೂಲಕ ವೀರಮಂಗಲ ಪಿಎಂಶ್ರೀ ಶಾಲೆಯ

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ Read More »

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ

ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದವರಿಗೆ ಶುಲ್ಕ ಹೆಚ್ಚಳದ ಜೊತೆ ಇನ್ನೊಂದು ಬರೆ ಬೆಂಗಳೂರು : ಶಾಲಾ ಶುಲ್ಕದ ಬೆನ್ನಿಗೆ ಪೋಷಕರಿಗೆ ಪಠ್ಯಪುಸ್ತಕದ ಬೆಲೆಯೇರಿಕೆಯ ಬರೆ ಬಿದ್ದಿದೆ. ಪಠ್ಯಪುಸ್ತಕಗಳ ಬೆಲೆ ಸರಾಸರಿಯಾಗಿ ಶೇ. 10ರಷ್ಟು ಏರಿಕೆಯಾಗಿದೆ. ಈ ಏರಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಪಠ್ಯಪುಸ್ತಕ ಸಂಘ 2025-2026ನೇ ಸಾಲಿನ ಪಠ್ಯಪುಸ್ತಕ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಿದೆ. ಈಗಾಗಲೇ ಕೆಲವು ಪಠ್ಯಪುಸ್ತಕಗಳ ಬೆಲೆ ಶೇ.100ರಷ್ಟು ಹೆಚ್ಚಾಗಿದ್ದು, ಈ ವರ್ಷವೂ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯಪುಸ್ತಕಗಳ

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ Read More »

ಒಂದನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆಯಿಂದ ಖಾಸಗಿ ಶಾಲೆಗಳಿಗೆ ಸಮಸ್ಯೆ

ಎಲ್‌ಕೆಜಿ ತರಗತಿಗೆ ಹಿಂದಿನ ನಿಯಮದಂತೆ ಸೇರಿರುವ ಮಕ್ಕಳಿಗೆ ಮುಂದಿನ ವರ್ಷ ಶಾಲೆಗೆ ಸೇರಲಾಗುವುದಿಲ್ಲ ಬೆಂಗಳೂರು : ಒಂದನೇ ತರಗತಿ ಸೇರ್ಪಡೆಗೆ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಈ ವರ್ಷದ ಮಟ್ಟಿಗೆ ಸಡಿಲಿಸಿ ಐದೂವರೆ ವರ್ಷ ಪ್ರಾಯದ ಮಕ್ಕಳನ್ನು ಶಾಲೆಗೆ ಸೇರಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಆದೇಶ ಮಕ್ಕಳ ಪೋಷಕರಿಗೆ ಖುಷಿ ಕೊಟ್ಟಿದ್ದರೂ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಈ ಸಡಿಲಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ. ಈ ವರ್ಷ 1ನೇ ತರಗತಿ ಸೇರ್ಪಡೆಗೆ

ಒಂದನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆಯಿಂದ ಖಾಸಗಿ ಶಾಲೆಗಳಿಗೆ ಸಮಸ್ಯೆ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಹಬ್ಬ ಆಚರಣೆ ಘಟಕದ ವತಿಯಿಂದ ಏ.17 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಅತಿಥಿಗಳು ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಗೈದರು.  ವಿದ್ಯಾರ್ಥಿಗಳು ಅಂಬೇಡ್ಕರ ಹಾಡುಗಳನ್ನು ಗೀತ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಅತಿಥಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸ್ವಾತಿ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಮೇ ಮೊದಲ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿರೀಕ್ಷೆ

ಬೆಂಗಳೂರು: ಪಿಯುಸಿ ಆಯಿತು ಇನ್ನು ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ನಿರೀಕ್ಷೆಯಲ್ಲಿ ಮಕ್ಕಳಿದ್ದಾರೆ. ಮುಂದಿನ ತಿಂಗಳು ಮೊದಲ ವಾರದಲ್ಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಪ್ರಾರಂಭವಾಗಿ ಏಪ್ರಿಲ್ 4ರವರೆಗೆ ನಡೆದಿವೆ. ಏಪ್ರಿಲ್ 15ರಿಂದ ರಾಜ್ಯಾದ್ಯಂತ 240ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭವಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ

ಮೇ ಮೊದಲ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿರೀಕ್ಷೆ Read More »

ಖಾಸಗಿ ಶಾಲೆಗಳ ಬೇಕಾಬಿಟ್ಟಿ ಶುಲ್ಕ ವಸೂಲಿಗೆ ತಡೆ

ಶಾಲೆ ದಾಖಲಾತಿಗಾಗಿ ಹೊಸ ನಿಯಮ ರಚಿಸಿದ ಶಿಕ್ಷಣ ಇಲಾಖೆ ಬೆಂಗಳೂರು: ಈಗ ಶಾಲೆ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶಾತಿ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲೇ ಖಾಸಗಿ ಶಾಲೆಗಳ ದಾಖಲಾತಿಗಾಗಿ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿ ಮೊದಲಿದ್ದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದೆ. ದಾಖಲಾತಿ ಹೆಸರಲ್ಲಿ ಮಕ್ಕಳು, ಪೋಷಕರಿಗೆ ಕಿರುಕುಳ ಕೊಡುವುದು, ಮಕ್ಕಳ ದಾಖಲಾತಿಗೆ ಪೋಷಕರಿಗೆ ಪರೀಕ್ಷೆ ಇಡುವುದು ಹಾಗೂ ದುಬಾರಿ ಶುಲ್ಕ ವಸೂಲು ಮಾಡುವುದು ಇತ್ಯಾದಿಗಳಿಗೆ ಕಡಿವಾಣ ಹಾಕಲಾಗಿದೆ. ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ

ಖಾಸಗಿ ಶಾಲೆಗಳ ಬೇಕಾಬಿಟ್ಟಿ ಶುಲ್ಕ ವಸೂಲಿಗೆ ತಡೆ Read More »

ಅಕ್ಷಯ  ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಮಾರೋಪ

ಪುತ್ತೂರು: ಅಕ್ಷಯ    ಕಾಲೇಜಿನಲ್ಲಿ   ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು  ಒಳಗೊಂಡ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ರ ಸಮಾರೋಪ ಸಮಾರಂಭದ  ಉದ್ಘಾಟನೆ ಯನ್ನು  ಶ್ರೀ  ಅರುಣ್ ನಾಗೇ ಗೌಡ  ಡಿ.ವೈ.ಎಸ್. ಪಿ  ಪುತ್ತೂರು  ವಿಭಾಗ  ಇವರು  ನಿರ್ವಹಿಸಿ  ವಿದ್ಯಾರ್ಥಿ ಜೀವನದ ಕರ್ತವ್ಯ ವನ್ನು ಸಮರ್ಪಕವಾಗಿ  ನಿಭಾಯಿಸಿ ತಮ್ಮ  ಪೋಷಕರಿಗೆ, ತಮಗೆ  ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿಯನ್ನು ತರಬೇಕು. ಕಲಿಕೆ ಮತ್ತು ಕ್ರಮ ಬದ್ಧವಾದ  ಜೀವನ ಉತ್ತಮ ಸಂಸ್ಕಾರವನ್ನು ಕಲಿಸುತ್ತದೆ  ಮಾತ್ರವಲ್ಲ  ಸಮಾಜದಲ್ಲಿ

ಅಕ್ಷಯ  ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಮಾರೋಪ Read More »

error: Content is protected !!
Scroll to Top