ಶೈಕ್ಷಣಿಕ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವ 5267 ಶಿಕ್ಷಕರ ಹುದ್ದೆ ಭರ್ತಿಗೆ ‌ಕ್ರಮ ಕೈಗೊಳ್ಳುವುದಾಗಿ ಸಿ ಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಭಾಗದಲ್ಲಿ SSLC ಫಲಿತಾಂಶ ಕುಸಿತ ಕಂಡ ಹಿನ್ನೆಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ನೂತನವಾಗಿ ವಸತಿ […]

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ Read More »

ನೂತನ ಎವಿಜಿ ಸೊಸೈಟಿಯ ಆಡಳಿತ ಮಂಡಳಿಯ ಪ್ರಥಮ ಸಭೆ

ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆಯ ಖಾಸಗಿ ಬಸ್ ನಿಲ್ದಾಣದ ಎದುರು ನೂತನವಾಗಿ ಸ್ಥಾಪಿತವಾಗಿರುವ ಎವಿಜಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಆಡಳಿತ ಮಂಡಳಿಯ ಪ್ರಥಮ ಸಭೆಯು ಸೊಸೈಟಿಯ ಅಧ್ಯಕ್ಷರಾದ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ದಿನಾಂಕ 29 ಸೆಪ್ಟೆಂಬರ್ 2025ನೆ ಸೋಮವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ ವೇದಿಕೆ’ಯಲ್ಲಿ ಎವಿಜಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಲೋಕಾರ್ಪಣ ಸಮಾರಂಭ ನಡೆಯಲಿದ್ದು ಅದರ ಕುರಿತು ವಿಸ್ತೃತ ಚರ್ಚೆ ನಡೆಸಿ ಕಾರ್ಯಕ್ರಮದ ರೂಪುರೇಷೆಯನ್ನು ಅಂತಿಮಗೊಳಿಸಲಾಯಿತು. ಲೋಕಾರ್ಪಣ

ನೂತನ ಎವಿಜಿ ಸೊಸೈಟಿಯ ಆಡಳಿತ ಮಂಡಳಿಯ ಪ್ರಥಮ ಸಭೆ Read More »

ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಪುತ್ತೂರು: ದರ್ಬೆಯ ಪಾಂಗ್ಲಾಯ್‌ನಲ್ಲಿರುವ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ಕಬಡ್ಡಿ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಪಿ.ಎಂ. ಶ್ರೀ. ಪ್ರೌಢಶಾಲೆ ಬಂಟ್ವಾಳ ನೇತೃತ್ವದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇಲ್ಲಿನ ಬಾಲಕಿಯರ ತಂಡವು ಪ್ರಥಮ ಸ್ಥಾನದೊಂದಿಗೆ ಸತತ 5 ನೇ ಬಾರಿಗೆ ಮೈಸೂರು ವಿಭಾಗ

ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ Read More »

ಎಂ.ಡಿ.ಎಸ್.ಗೆ ಆಯ್ಕೆಯಾದ ಡಾ. ರಾಶಿ ಆರ್. ಎಸ್.

ಪುತ್ತೂರು: ಡಾ. ರಾಶಿ ಆರ್.ಎಸ್. ಅವರು ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನಲ್ಲಿ ಬಿ.ಡಿ.ಎಸ್. ಪದವಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯೊಂದಿಗೆ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಪ್ರಿಕ್ಲಿನಿಕಲ್ ಪ್ರಾಸ್ತೋ ಡಾನ್ಸ್ಟಿಕ್‌ನಲ್ಲಿ 6ನೇ ರ್‍ಯಾಂಕ ಗಳಿಸಿದ್ದಾರೆ. ಇದೀಗ ಪ್ರತಿಷ್ಠಿತ ಎ.ಜೆ. ಶಿಕ್ಷಣ ಸಂಸ್ಥೆಯಲ್ಲಿ ಎಂ.ಡಿ. ಎಸ್‌. ಗೆ ಆಯ್ಕೆಯಾಗಿದ್ದಾರೆ. ಅವರು ಅರೆ ಸೇನಾಪಡೆ ಉದ್ಯೋಗಿ ರಾಧಾಕೃಷ್ಣ ಐಪಳ ಮತ್ತು ಕೆ. ಎಸ್. ಎಸ್. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಲತಾ ಕಮಿಲ ಅವರ ಪುತ್ರಿ.

ಎಂ.ಡಿ.ಎಸ್.ಗೆ ಆಯ್ಕೆಯಾದ ಡಾ. ರಾಶಿ ಆರ್. ಎಸ್. Read More »

ಅಕ್ಷಯ  ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರು ಪುರಸ್ಕಾರ

ಪುತ್ತೂರು:  ಅಕ್ಷಯ ಎಜುಕೇಶನಲ್  ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಯಲ್ಲಿ    ಶಿಕ್ಷಕರ      ದಿನಾಚರಣೆ ಯನ್ನು  ಬಹಳ  ಸಂಭ್ರಮದಿಂದ  ಆಚರಿಸಲಾಯಿತು.     ಕಾರ್ಯಕ್ರಮವನ್ನು ಹಿರಿಯ  ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಿವೃತ್ತ  ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಹರಿಣಾಕ್ಷ  . ಕೆ      ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಶಿಕ್ಷಕರಿಗೆ ಶುಭ ಹಾರೈಸಿದರು.  “ಅಕ್ಷಯ  ಗುರು  ಪುರಸ್ಕಾರ“ ವನ್ನು   ಸ್ವೀಕರಿಸಿದ    ಡಾ.  ನರೇಂದ್ರ ರೈ ದೇರ್ಲ ,ನಿವೃತ್ತ  ಪ್ರಾಧ್ಯಾಪಕರು   ಸರಕಾರಿ ಪ್ರಥಮ

ಅಕ್ಷಯ  ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರು ಪುರಸ್ಕಾರ Read More »

ಪ್ರೇಮಲತಾ ರೈ ಅವರಿಗೆ ಎವಿಜಿ ಸ್ಕೂಲ್’ನಲ್ಲಿ ಗುರುವಂದನೆ

ಪುತ್ತೂರು: ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆಯವರಾದ ಶ್ರೀಮತಿ ಪ್ರೇಮಲತಾ ರೈ ಅವರನ್ನು ಮನೋಜ್ಞವಾಗಿ ಸನ್ಮಾನಿಸಲಾಯಿತು. ಎ ವಿ ನಾರಾಯಣ ಅವರು ಗುರು ವಂದನೆ ಸ್ವೀಕರಿಸಿದ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಪ್ರೇಮಲತಾ ರೈ ಅವರನ್ನು ಪರಿಚಯಿಸಿ ಗುರುಗಳ ಮಹತ್ತ್ವವನ್ನು ವಿಶದಪಡಿಸಿದರು. ಬಳಿಕ ತಮ್ಮ ಧರ್ಮಪತ್ನಿ ಪ್ರತಿಭಾದೇವಿ ಮತ್ತು ಮಗಳು ಜ್ಯೋತ್ಸ್ನಾರೊಂದಿಗೆ ಗುರುವಂದನೆ ಸಲ್ಲಿಸಿದರು. ಒಂದಕ್ಷರ ಕಲಿಸಿದವರು ಸಹ ಗುರುಗಳುಕಾರ್ಯಕ್ರಮವನ್ನು ಉದ್ಘಾಟನೆಗೈದು

ಪ್ರೇಮಲತಾ ರೈ ಅವರಿಗೆ ಎವಿಜಿ ಸ್ಕೂಲ್’ನಲ್ಲಿ ಗುರುವಂದನೆ Read More »

ಗಮಕ ವಾಚನ ಸ್ಪರ್ಧೆಯಲ್ಲಿ ಜಿಡೆಕಲ್ಲಿನ ಪ್ರಥಮ ದರ್ಜೆ ಕಾಲೇಜು ಜಿಲ್ಲಾಮಟ್ಟಕ್ಕೆ

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹಯೋಗದಲ್ಲಿ ಜಿಲ್ಲಾ ಗಮಕ ಕಲಾ ಸಮ್ಮೇಳನದ ಅಂಗವಾಗಿ ‘ಗಮಕ ವಾಚನ’ ಸ್ಪರ್ಧೆಯನ್ನು ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ಮತ್ತು ದ.ಕ ಜಿಲ್ಲೆಯ ಪುತ್ತೂರು ಘಟಕ ಆಯೋಜಿಸಿದ್ದವು. ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಥಮ ವಾಣಿಜ್ಯ ಪದವಿಯ ಮೇಘನಾ ಎನ್.ಎಸ್. ಮತ್ತು ರಶ್ಮಿ ವೈ. ಎಸ್. ಜಯಶಾಲಿಗಳಾಗಿದ್ದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತರನ್ನು ಕಾಲೇಜಿನ ಪ್ರಾಂಶುಪಾಲರಾದ Rtn. ಸುಬ್ಬಪ್ಪ ಕೈಕಂಬ ಮತ್ತು ಸಾಂಸ್ಕೃತಿಕ ಸಂಘ ಮತ್ತು ಕಾಲೇಜಿನ

ಗಮಕ ವಾಚನ ಸ್ಪರ್ಧೆಯಲ್ಲಿ ಜಿಡೆಕಲ್ಲಿನ ಪ್ರಥಮ ದರ್ಜೆ ಕಾಲೇಜು ಜಿಲ್ಲಾಮಟ್ಟಕ್ಕೆ Read More »

9ನೇ ತರಗತಿ ಮಕ್ಕಳಿಗೆ ಓಪನ್‌ ಬುಕ್‌ ಎಕ್ಸಾಮ್‌ ಪದ್ಧತಿ ಅಳವಡಿಸಲು ನಿರ್ಧಾರ

ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯಬಹುದು ನವದೆಹಲಿ: ಮಕ್ಕಳ ಪರೀಕ್ಷೆ ಒತ್ತಡ ನಿವಾರಿಸಲು ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರೀಯ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ (ಓಪನ್ ಬುಕ್) ಪರೀಕ್ಷೆ ಜಾರಿಗೊಳಿಸಲು ನಿರ್ಧಾರ ಕೈಗೊಂಡಿದೆ. ಈ ಹೊಸ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗುತ್ತಿದೆ. ಹಳೆಯ ಪರೀಕ್ಷಾ ಪದ್ಧತಿ ಕಂಠಪಾಠಕ್ಕೆ ಆದ್ಯತೆ

9ನೇ ತರಗತಿ ಮಕ್ಕಳಿಗೆ ಓಪನ್‌ ಬುಕ್‌ ಎಕ್ಸಾಮ್‌ ಪದ್ಧತಿ ಅಳವಡಿಸಲು ನಿರ್ಧಾರ Read More »

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕರ ದಿನಾಚರಣೆ | “ಶೀಂಟೂರು ಸ್ಮೃತಿ-2025

ಪುತ್ತೂರು: ಐಎಎಸ್ ಐಪಿಎಸ್ ನಂತಹ ಹುದ್ದೆಗಳಲ್ಲಿ ಜಿಲ್ಲೆಯ ಅತೀ ಕಡಿಮೆ ಜನರಿದ್ದಾರೆ. ಇಂತಹ ಹುದ್ದೆಗಳನ್ನು ಪಡೆಯಬೇಕಾದರೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಮಕ್ಕಳಲ್ಲಿ ಕನಸು ಬಿತ್ತುವ ಕೆಲಸದ ಜತೆಗೆ ಮೌಲ್ಯಗಳನ್ನು ತುಂಬುವ ಚಿಂತನೆ ಹೆಚ್ಚಾಗಬೇಕಾಗಿದೆ. ಬಡತನ ಎಂಬುವುದು ಯಾವ ವಿಶ್ವವಿದ್ಯಾಲಯದಲ್ಲೂ ಕಲಿಸದ ಪಾಠಗಳನ್ನು ಕಲಿಸುತ್ತದೆ ಎಂದು ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್ ಅಭಿಪ್ರಾಯಪಟ್ಟರು. ಗುರುವಾರ ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಸಭಾಂಗಣದಲ್ಲಿ ನಡೆದ ೧೪ನೇ ವರ್ಷದ ಸ್ಥಾಪಕರ ದಿನಾಚರಣೆ

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕರ ದಿನಾಚರಣೆ | “ಶೀಂಟೂರು ಸ್ಮೃತಿ-2025 Read More »

ಅಕ್ಷಯ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ಅಕ್ಷಯ ಕಾಲೇಜು, ಪುತ್ತೂರಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕ (ಐಕ್ಯೂಎಸಿ) ಸಹಯೋಗದೊಂದಿಗೆ ಆಯೋಜಿಸಲಾದ ಎನ್‌ ಎಸ್‌ ಎಸ್‌ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಗಸ್ಟ್ 12, 2025ರಂದು ಕಾಲೇಜು ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು, ಜಿಡೆಕಲ್ಲಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು “ಎನ್‌ ಎಸ್‌ ಎಸ್ ಕೇವಲ ಒಂದು ಘಟಕವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಪಾಠಶಾಲೆ. ಇಲ್ಲಿ

ಅಕ್ಷಯ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ Read More »

error: Content is protected !!
Scroll to Top