ವಿದ್ಯುತ್ ತಂತಿ ರಸ್ತೆಗೆ: ಕೌಡಿಚಾರು – ಸುಳ್ಯಪದವು ರಸ್ತೆ ಸಂಚಾರ ಬಂದ್
ಪುತ್ತೂರು: ಭಾರೀ ಮಳೆಗೆ ಟಿವಿ, ವಿದ್ಯುತ್ ತಂತಿಗಳಿಗೆ ಹಾನಿಯಾಗಿದ್ದು, ಕೌಡಿಚ್ಚಾರು – ಸುಳ್ಯಪದವು ರಸ್ತೆ ಸಂಚಾರಕ್ಕೆ ತೊಡಕಾಗಿದೆ. ರಸ್ತೆಗಡ್ಡವಾಗಿ ಮರ ಬಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಟ್ರಾನ್ಸ್ ಫಾರ್ಮರ್ ಹಾನಿಯಾಗಿರುವುದರಿಂದ ವಿದ್ಯುತ್ ಕಡಿತ ಉಂಟಾಗಿದೆ. ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ಇದರಿಂದ ಜನರ ಓಡಾಟಕ್ಕೂ ತೊಂದರೆಯಾಗಿದೆ. ರಸ್ತೆಗೆ ಬಿದ್ದಿರುವ ಮರವನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಮೆಸ್ಕಾಂ ಇಲಾಖೆಯೂ ವಿದ್ಯುತ್ ತಂತಿಗಳ ಸರಿಪಡಿಸುವ ಕಾರ್ಯದಲ್ಲಿ ಮಗ್ನವಾಗಿದೆ.
ವಿದ್ಯುತ್ ತಂತಿ ರಸ್ತೆಗೆ: ಕೌಡಿಚಾರು – ಸುಳ್ಯಪದವು ರಸ್ತೆ ಸಂಚಾರ ಬಂದ್ Read More »