ಕೆದಂಬಾಡಿಯಲ್ಲಿ ಬೈಕ್’ಗಳೆರಡು ಮುಖಾಮುಖಿ ಢಿಕ್ಕಿ | ಬೈಕ್ ಸಹಸವಾರನಿಗೆ ಗಾಯ
ಪುತ್ತೂರು: ಬೈಕ್’ಗಳೆರಡು ಮುಖಾಮುಖಿ ಢಿಕ್ಕಿಯಾಗಿ ಸಹಸವಾರ ಗಾಯಗೊಂಡ ಘಟನೆ ಕೆದಂಬಾಡಿಯಲ್ಲಿ ನಡೆದಿದೆ. ಬೈಕ್ ಸಹಸವಾರ ರಮೇಶ್ ಗಾಯಾಳು. ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದೆ ಘಟನೆಗೆ ಕಾರಣವಾಗಿದೆ. ಕೆದಂಬಾಡಿ ಗ್ರಾಮದ ಸಾರೆಪುಣಿ ಎಂಬಲ್ಲಿ ಬಾಬು ಎಂಬವರು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್’ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸಹಸವಾರ ರಮೇಶ್ ಅವರು ರಸ್ತೆಗೆ ಎಸೆಯಲ್ಪಟ್ಟು, ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆದಂಬಾಡಿಯಲ್ಲಿ ಬೈಕ್’ಗಳೆರಡು ಮುಖಾಮುಖಿ ಢಿಕ್ಕಿ | ಬೈಕ್ ಸಹಸವಾರನಿಗೆ ಗಾಯ Read More »