ಶೈಕ್ಷಣಿಕ

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಅನ್ನು ಆರಂಭಿಸಲಾಗುತ್ತಿದೆ. ಸುಲಲಿತವಾಗಿ ಇಂಗ್ಲೀಷ್ ಬಲ್ಲವರಾಗಿದ್ದರೆ, ಪ್ರಪಂಚದ ಯಾವುದೇ ಮೂಲೆಗಾದರೂ ಹೋಗಿ ವ್ಯವಹರಿಸಬಹುದು. ಆದರೆ ಗ್ರಾಮೀಣ ಭಾಗದವರಿಗೆ ಇಂಗ್ಲೀಷ್ ಎಂದರೆ ತುಸು ಕಷ್ಟವೇ. ಇಂತಹ ಮನಸ್ಥಿತಿಯನ್ನು ದೂರಮಾಡಿ, ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ. ಆಧುನಿಕ ಜಗತ್ತಿನ ಸ್ಪರ್ಧೆಗೆ ಸರಿಯಾಗಿ […]

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆ

ಪುತ್ತೂರು: ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ಶೈಕ್ಷಣಿಕ ಸಾಧನೆಗಳ ವಿಶ್ಲೇಷಣೆಗೆ ಪೂರಕವಾದ, ವಿದ್ಯಾರ್ಥಿಗಳ ವರ್ತನೆ, ನೈತಿಕತೆ, ಕಲಿಕಾ ಪ್ರಗತಿಗೆ ಪೂರಕವಾದ ವಿಚಾರಗಳ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು.ಇದು ದೇಶದ ಸುಂದರ ಭವಿಷ್ಯ ನಿರ್ಮಾಣದ ಹೆಜ್ಜೆಗಳಾಗಲಿ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್‍ಯದರ್ಶಿ ರೂಪಲೇಖ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳ ತರಗತಿ ಪ್ರವೇಶೋತ್ಸವ

ಪುತ್ತೂರು: ಇಲ್ಲಿನ ಕೃಷ್ಣನಗರ ಅಲಂಬುಡದಲ್ಲಿ ನೂತನವಾಗಿ ಆರಂಭಗೊಂಡಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂನ್ 5ರಂದು ನಡೆಯಿತು. ತಾಳ್ಮೆಯಿಂದ ಮಕ್ಕಳನ್ನು ಬೆಳೆಸಬೇಕು: ಡಾ. ಸುಕುಮಾರ್ ಗೌಡ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಸುಕುಮಾರ್ ಗೌಡ, ಮಕ್ಕಳನ್ನು ತಾಳ್ಮೆಯಿಂದ ಬೆಳೆಸಿ. ಆಗ ಮಕ್ಕಳು ಬೆಳೆಯುತ್ತಾರೆ ಎಂದ ಅವರು, ವಿದ್ಯಾಸಂಸ್ಥೆಯ ಸುತ್ತಲಿನ ಕಾಡನ್ನು ಇದೇ ರೀತಿ ಉಳಿಸುಕೊಳ್ಳಿ ಎಂದು‌ ಕಿವಿಮಾತು ಹೇಳಿದರು.ಶಿಕ್ಷಣ ತಜ್ಞ ಎನಿಸಿಕೊಳ್ಳಲು ಕಾಳಜಿ ಇರಬೇಕು. ಆ ಕಾಳಜಿ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳ ತರಗತಿ ಪ್ರವೇಶೋತ್ಸವ Read More »

ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ

ಕಾಣಿಯೂರು: ನಾಣಿಲ ಸ. ಹಿ. ಪ್ರಾ. ಶಾಲೆಯಲ್ಲಿ ಶಾಲಾರಂಬೋತ್ಸದ ಅಂಗವಾಗಿ ಶಾಲಾ ಮಕ್ಕಳನ್ನು ಮೆರವಣಿಗೆಯೊಂದಿಗೆ ಕರೆ ತಂದು ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರತಿ ಬೆಳಗಿ ಪುಷ್ಪಗುಚ್ಚ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ದಲಾರಿ, ಉಪಾಧ್ಯಕ್ಷೆ ಕುಸುಮಾವತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಪದ್ಮಯ್ಯ

ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ Read More »

ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ,ಶಾಸಕರಿಗೆ ಅಭಿನಂದನೆ

ಸವಣೂರು : ಸವಣೂರು ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು. ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ, ಸದಸ್ಯರಾದ ಚಂದ್ರಾವತಿ ಸುಣ್ಣಾಜೆ,ತೀರ್ಥರಾಮ ಕೆಡೆಂಜಿ,ಗಿರಿಶಂಕರ ಸುಲಾಯ,ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ  ದಿನೇಶ್ ಮೆದು,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹನೀಫ್,ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ,ಶಾಲಾ ಮುಖ್ಯಗುರು ಬಾಲಕೃಷ್ಣ ಕೆ.ಮೊದಲಾದವರಿದ್ದರು.

ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ,ಶಾಸಕರಿಗೆ ಅಭಿನಂದನೆ Read More »

ಎಸ್ಸೆಸೆಲ್ಸಿ ಪೂರಕ ಪರೀಕ್ಷೆ ಅರ್ಜಿ, ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಪಡೆಯಲು ದಿನಾಂಕ ವಿಸ್ತರಣೆ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನೋಂದಣಿ ಮಾಡಿಕೊಳ್ಳಲು ಮತ್ತು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಅವಧಿಯನ್ನು ಮೇ 18 ರವರೆಗೆ ವಿಸ್ತರಿಸಿದೆ. ಈ ಹಿಂದೆ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 14, 2023 ಕೊನೆಯ ದಿನಾಂಕವಾಗಿತ್ತು. ಹಾಗೂ ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಮೇ 15, 2023 ಕೊನೆಯ ದಿನವಾಗಿದ್ದು, ಈಗ ಈ ದಿನಾಂಕವನ್ನು ಮೇ 18

ಎಸ್ಸೆಸೆಲ್ಸಿ ಪೂರಕ ಪರೀಕ್ಷೆ ಅರ್ಜಿ, ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಪಡೆಯಲು ದಿನಾಂಕ ವಿಸ್ತರಣೆ Read More »

ದ್ವಿತೀಯ ಪಿಯುಸಿಯಲ್ಲಿ 584 ಅಂಕ ಪಡೆದ ಸಂಜನಾಗೆ ಕ್ಯಾಂಪ್ಕೋ ವತಿಯಿಂದ ಸನ್ಮಾನ

ಪುತ್ತೂರು: 2022-23ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 584 ಅಂಕ ಪಡೆದ ಸಂಜನಾ ಕೆ ಅವರನ್ನು ಪುತ್ತೂರು ಕ್ಯಾಂಪ್ಕೋ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು. ಕ್ಯಾಂಪ್ಕೋ ಎಂಡಿ ಕೃಷ್ಣಕುಮಾರ್ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿಯಲ್ಲಿ 584 ಅಂಕ ಪಡೆದ ಸಂಜನಾಗೆ ಕ್ಯಾಂಪ್ಕೋ ವತಿಯಿಂದ ಸನ್ಮಾನ Read More »

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು

ಕೊಲಂಬಸ್ : ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಯೋರ್ವ ದುಷ್ಕರ್ಮಿಗಳ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ಏ. 21 ರಂದು ಅಮೆರಿಕದಲ್ಲಿ ಸಂಭವಿಸಿದೆ.ಮೃತನನ್ನು ಸಾಯಿಶ್ ವೀರಾ(24) ಎಂದು ಗುರುತಿಸಲಾಗಿದೆ. ಇವರು ಕೊಲಂಬಸ್ ನ ಇಂಧನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಯುಎಸ್ ರಾಜ್ಯ ಓಹಿಯೋದ ಪೊಲೀಸರು ತಿಳಿಸಿದ್ದಾರೆ. ಸಾಯಿಶ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದು ಕೇವಲ 10 ದಿನಗಳ ಅಂತರದಲ್ಲಿ ಪದವಿಯೊಂದಿಗೆ H1B ವೀಸಾದ ಅಡಿಯಲ್ಲಿ ಆಯ್ಕೆಯಾಗಿದ್ದರು. ಇಂಧನ

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು Read More »

ಅನನ್ಯಾ, ಕೌಶಿಕ್, ತಬಸ್ಸುಮ್ ಉತ್ತಮ ಸಾಧನೆ ಮೂಲಕ ಮೊದಲನೆ ಸ್ಥಾನ

ಬೆಂಗಳೂರು : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಅನನ್ಯಾ, ಕಲಾ ವಿಭಾಗದಲ್ಲಿ ತಬಸ್ಸುಮ್, ವಿಜ್ಞಾನ ವಿಭಾಗದದಲ್ಲಿ ಕೌಶಿಕ್ ಉತ್ತಮ ಸಾಧನೆ ಮೂಲಕ ಟಾಪರ್ಸ್‌ಗಳಾಗಿ ಮಿಂಚಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಪಡೆದುಕೊಂಡಿದ್ದು, ಬೆಂಗಳೂರಿನ ಜಯನಗರದ ಎನ್ಎಂಕೆಆರ್‌ವಿ ಕಾಲೇಜು ಕಲಾ ವಿಭಾಗದ ವಿದ್ಯಾರ್ಥಿನಿ ತಬಸ್ಸುಮ್ 600ಕ್ಕೆ 593 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಂತೆಯೇ ಕೋಲಾರದ ಗಂಗೋತ್ರಿ ಕಾಲೇಜು ವಿದ್ಯಾರ್ಥಿ ಕೌಶಿಕ್ ವಿಜ್ಞಾನ ವಿಭಾಗದಲ್ಲಿ 600ಕ್ಕೆ 596

ಅನನ್ಯಾ, ಕೌಶಿಕ್, ತಬಸ್ಸುಮ್ ಉತ್ತಮ ಸಾಧನೆ ಮೂಲಕ ಮೊದಲನೆ ಸ್ಥಾನ Read More »

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ(95%) ಜಿಲ್ಲೆ ಪ್ರಥಮ ಮತ್ತು ಉಡುಪಿ (95%) ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕೊಡಗು(91%) ತೃತೀಯ ಸ್ಥಾನ ಲಭಿಸಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಪತ್ರಿಕಾಗೋಷ್ಠಿಯಿಂದ ಹೊರಗುಳಿಯಲಿದ್ದಾರೆ. ಫಲಿತಾಂಶಗಳನ್ನು ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಇಇಬಿ ಅಧ್ಯಕ್ಷರಾದ ರಾಮಚಂದ್ರನ್ ಆರ್ ಮಾಧ್ಯಮಗಳನ್ನುದ್ದೇಶಿಸಿ ಫಲಿತಾಂಶ ಪ್ರಕಟಿಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಒದಗಿಸಿದ ಅಂಕಿಅಂಶಗಳ ಪ್ರಕಾರ,

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ Read More »

error: Content is protected !!
Scroll to Top