ಶೈಕ್ಷಣಿಕ

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ

ಕಳೆದ ವರ್ಷದಂತೆಯೇ ಪ್ರಶ್ನೆ ಪತ್ರಿಕೆ ಇರಲಿದೆ ಎಂದು ಸ್ಪಷ್ಟನೆ ಬೆಂಗಳೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಕಳೆದ ವರ್ಷದ ಮಾದರಿಯಲ್ಲೇ ಪ್ರಶ್ನೆಪತ್ರಿಕೆ ಇರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಶ್ನೆ ಪತ್ರಿಕೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುರುವ ಸುದ್ದಿ ಸುಳ್ಳು. 2024-25ನೇ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಮಂಡಳಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಕರ್ನಾಟಕ […]

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರ

  ಸುಬ್ರಹ್ಮಣ್ಯ :  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶ, ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ನ. 27ರಂದು ನಾಯಕತ್ವ ತರಬೇತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ ವಹಿಸಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯ ಇಂಗ್ಲೀಷ್  ಉಪನ್ಯಾಸಕ ಶೀನಾ ನಾಡೋಳಿ ಅವರು ವಿವಿಧ ಚಟುವಟಿಕೆಯ ಮೂಲಕ ನಾಯಕತ್ವದ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ  ವಿದ್ಯಾರ್ಥಿ  ಪರಿಷತ್ತಿನ ಸಂಯೋಜಕ ಡಾ. ಪ್ರಸಾದ ಎನ್ ಸಹ ಸಂಯೋಜಕರಾದ ಶಿವಪ್ರಸಾದ ಎಸ್,ಅಶ್ವಿನಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರ Read More »

ಸಂಸ್ಥೆಯ  ಇತಿಹಾಸವನ್ನು ತಿಳಿದಾಗ ಮಾತ್ರ ಪ್ರಗತಿ ಸಾಧ್ಯ : ಸಂಜೀವ ಮಠoದೂರು

ಉಪ್ಪಿನಂಗಡಿ : ಉಪ್ಪಿನಂಗಡಿ ಬೋರ್ಡ್ ಹೈಸ್ಕೂಲ್ 1957ರಲ್ಲಿ ಸ್ಥಾಪನೆಯಾಗಿದ್ದು ಇಂದು ಪದವಿ ಪೂರ್ವ ವಿಭಾಗವನ್ನು ಹೊಂದಿ  ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಶೈಕ್ಷಣಿಕ ಸಾಧನೆ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚಿದ ಪ್ರತಿಭೆಗಳನ್ನು ಈ ಸಂಸ್ಥೆ ನೀಡಿದೆ. ಶಾಲೆಯ ಸ್ಥಾಪನೆಗೆ ಅಂದು ಭೂದಾನ ಮಾಡಿದ ಬೆನಗಲ್ ಸಹೋದರರು, ನೇತೃತ್ವ ವಹಿಸಿದ ವೇಣುಗೋಪಾಲ್ ನಾಯಕ್, ವಿದ್ಯಾಭಿಮಾನಿಗಳ ಕೊಡುಗೆ ಮತ್ತು  ಅಧ್ಯಾಪಕ ವೃಂದದ  ಶ್ರಮವನ್ನು ಸದಾ ಸ್ಮರಿಸುವ ಅವಶ್ಯಕತೆ ಇದೆಯೆಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ 

ಸಂಸ್ಥೆಯ  ಇತಿಹಾಸವನ್ನು ತಿಳಿದಾಗ ಮಾತ್ರ ಪ್ರಗತಿ ಸಾಧ್ಯ : ಸಂಜೀವ ಮಠoದೂರು Read More »

ರಾಷ್ಟ್ರಮಟ್ಟದ ಗಣಿತ ಮೇಳ – ಅಂಬಿಕಾ ವಿದ್ಯಾಲಯದ ಸಾನ್ವಿ ಜಿ. ಪ್ರಥಮ

ಪುತ್ತೂರು :  ರಾಷ್ಟ್ರಮಟ್ಟದ  ಗಣಿತ ಮೇಳ ಬಾಲ ವರ್ಗ ಗಣಿತ ಮಾದರಿ ಪ್ರದರ್ಶನದ ರಾಷ್ಟ್ರಮಟ್ಟ ಸ್ಪರ್ಧೆಯಲ್ಲಿ ಬಪ್ಪಳಿಗೆಯ  ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಜಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಒರಿಸ್ಸಾದ – ಅಂಗುಲ್ ಸರಸ್ವತಿ ಶಿಶುಮಂದಿರದಲ್ಲಿ ರಾಷ್ಟ್ರಮಟ್ಟದ  ಗಣಿತ ಮೇಳ ಬಾಲ ವರ್ಗ ಗಣಿತ ಮಾದರಿ ಪ್ರದರ್ಶನದ ರಾಷ್ಟ್ರಮಟ್ಟ ಸ್ಪರ್ಧೆ ನಡೆಯಿತು. ಸಾನ್ವಿ ಬಂಟ್ವಾಳ ತಾಲೂಕಿನ ಗಿರೀಶ್ ಗೌಡ ಎಚ್ , ಸುಮಿತ್ರ ದಂಪತಿ

ರಾಷ್ಟ್ರಮಟ್ಟದ ಗಣಿತ ಮೇಳ – ಅಂಬಿಕಾ ವಿದ್ಯಾಲಯದ ಸಾನ್ವಿ ಜಿ. ಪ್ರಥಮ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಕಲಾವಿಸ್ಮಯ-2024’ಕ್ಕೆ ಚಾಲನೆ

ಕಾನೂನು ಶಿಕ್ಷಣ ಎಂಬುದು ಎಲ್ಲದರ ಮೂಲ: ಕೃಷ್ಣವೇಣಿ ಪ್ರಸಾದ್ ಮುಳಿಯ ಪುತ್ತೂರು:  ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಕಲಾವಿಸ್ಮಯ-2024’ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಮುಳಿಯ ಜುವೇಲರ್ಸ್ ನ ನಿರ್ದೇಶಕಿ ಹಾಗೂ ‘ಪಾಂಚಜನ್ಯ’ ರೇಡಿಯೋದ ಅಧ್ಯಕ್ಷರಾದ ಕೃಷ್ಣವೇಣಿ ಪ್ರಸಾದ್ ಮುಳಿಯ ಮಾತನಾಡಿ, ಕಾನೂನು ಶಿಕ್ಷಣ ತಾಯಿಯಿದ್ದಂತೆ. ಕಾನೂನು ಶಿಕ್ಷಣ ಎಂಬುದು ಎಲ್ಲದರ ಮೂಲವಾಗಿದೆ. ಕಾನೂನು ಸರಿಯಾಗಿದ್ದರೇ ಮಾತ್ರ ದೇಶದ ಭವಿಷ್ಯ ಉತ್ತಮ ರೀತಿಯಲ್ಲಿ ರೂಪುಗೊಳ್ಳಲು ಸಾಧ್ಯವಿದೆ.

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಕಲಾವಿಸ್ಮಯ-2024’ಕ್ಕೆ ಚಾಲನೆ Read More »

ಸಂತ ಫಿಲೋಮಿನಾ  ಕಾಲೇಜಿನ ದ್ವಿತೀಯ  ಬಿ.ಬಿ.ಎ. ವಿದ್ಯಾರ್ಥಿನಿ ಸ್ವಾತಿ ಡಿ. ಗೌಡ   ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ.

ಪುತ್ತೂರು: ಸಂತ  ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ.ಬಿ.ಎ. ವಿದ್ಯಾರ್ಥಿನಿ ಸ್ವಾತಿ ಡಿ ಗೌಡ ಕಂಪನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ ಸಿ.ಯಸ್.ಇ.ಇ.ಟಿ. ಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಸ್ತುತ ವರ್ಷದಲ್ಲಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಸಿಎಸ್ಐ ನೊಂದಿಗಿನ ಸಹಯೋಗದಿಂದ  ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿ ಅವರನ್ನು ಕಂಪನಿ ಸೆಕ್ರೆಟರಿ ಕೋರ್ಸ್‌ಗೆ ಅಥವಾ ತತ್ಸಮಾನ ಕೋರ್ಸ್‌ಗಳಿಗೆ ಸೇರುವಂತೆ ಅಣಿಗೊಳಿಸಲಾಗುತ್ತದೆ. ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾದ ಏಕೈಕ ಅಧ್ಯಯನ ಕೇಂದ್ರವಾಗಿದೆ.  ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ವಿದ್ಯಾರ್ಥಿಗಳಿಗೆ 

ಸಂತ ಫಿಲೋಮಿನಾ  ಕಾಲೇಜಿನ ದ್ವಿತೀಯ  ಬಿ.ಬಿ.ಎ. ವಿದ್ಯಾರ್ಥಿನಿ ಸ್ವಾತಿ ಡಿ. ಗೌಡ   ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ. Read More »

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮಹಿಳೆಯರ ಕಬಡ್ಡಿ ತಂಡವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. ಬೆಂಗಳೂರಿನ ರಾಜರಾಜೇಶ್ವರಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ರಾಜ್ಯಾದ್ಯಂತ ಎಂಟು ವಿಭಾಗದ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ನೀಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ನಾಯಕಿ, ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ Read More »

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎನ್ನೆಂಸಿಯ ಗಾನ ಬಿ. ಡಿ. ತೃತೀಯ

ಮಂಗಳೂರು :ಅಂತರ್‍ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ  ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ತೃತೀಯ ಬಿ ಎ ವಿದ್ಯಾರ್ಥಿನಿ ಗಾನ ಬಿ. ಡಿ. ತೃತೀಯ ಸ್ಥಾನ ಪಡೆದಿದ್ದಾರೆ. ಮಂಗಳೂರು ಎಸ್ ಸಿ ಎಸ್ ಪದವಿ ಕಾಲೇಜಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ  ಅಂತರ್ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆ ನಡೆದಿತ್ತು. ಗಾನ ಬಿ. ಡಿ. ಬಲ್ಕಾಡಿಯ ಧನಂಜಯ ಮತ್ತು ಜಲಜಾಕ್ಷಿ ದಂಪತಿ ಪುತ್ರಿ.

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎನ್ನೆಂಸಿಯ ಗಾನ ಬಿ. ಡಿ. ತೃತೀಯ Read More »

ಅಂಬಿಕಾದಲ್ಲಿ ದ.ಕ. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ |ದೇಸೀಯ ಕಲೆಗಳ ಅರಿವು ವಿದ್ಯಾರ್ಥಿಗಳಿಗಿರಬೇಕು : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಶಿಕ್ಷಣ ಕೇವಲ ಪಠ್ಯ ಸಂಗತಿಗಳನ್ನು ತಿಳಿಸಿದರೆ ಸಾಲದು. ಭಾರತೀಯತೆ, ದೇಸೀಯ ಕಲೆಗಳನ್ನೂ ಮಕ್ಕಳಿಗೆ ಅರ್ಥ ಮಾಡಿಸಿಕೊಡಬೇಕು. ಆ ನೆಲೆಯಲ್ಲಿ ಯೋಚಿಸುವಾಗ ನಾನಾ ಬಗೆಯ ಸ್ಪರ್ಧೆಗಳ ಅನಿವಾರ್ಯತೆ ಇದೆ. ಮನರಂಜನೆಯ ಮೂಲಕ ನಮ್ಮತನವೆಂಬುದು ವಿದ್ಯಾರ್ಥಿಗಳಲ್ಲಿ ಹಂಚಿಕೆಯಾಗುವುದಕ್ಕೆ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ದ.ಕ. ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸಹಯೋಗದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ

ಅಂಬಿಕಾದಲ್ಲಿ ದ.ಕ. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ |ದೇಸೀಯ ಕಲೆಗಳ ಅರಿವು ವಿದ್ಯಾರ್ಥಿಗಳಿಗಿರಬೇಕು : ಸುಬ್ರಹ್ಮಣ್ಯ ನಟ್ಟೋಜ Read More »

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ “INFOTSAV 2K24”

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ “INFOTSAV 2K24” ವಿವಿಧ ಸ್ಪರ್ಧೆಗಳು ನಡೆಯಿತು. ಈ ಸ್ಪರ್ದೆಯಲ್ಲಿ  ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರಶ್ಮಿ  ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು.  MIT ಮೂಡಬಿದ್ರೆಯ ಎಂಸಿಎ ವಿಭಾಗದ ಅಸಿಸ್ಟೆಂಟ್  ಪ್ರೊಸೆಸರ್  ರಾಜೇಶ್ ರಾಜು ಅತಿಥಿಯಾಗಿ ಮಾತನಾಡಿ, ಈ ರೀತಿಯ ಫೆಸ್ಟ್ ನಲ್ಲಿ

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ “INFOTSAV 2K24” Read More »

error: Content is protected !!
Scroll to Top