ಶೈಕ್ಷಣಿಕ

ಪುತ್ತೂರು ತಾಲೂಕು ತುಳುವ ಮಹಾಸಭೆಗೆ ತುಳು ಲಿಪಿಯ ಹರಿಕಾರಿಣಿ : ಶ್ರೀಶಾವಾಸವಿ ತುಳುನಾಡ್ ಸಂಚಾಲಕಿಯಾಗಿ ಆಯ್ಕೆ

ಪುತ್ತೂರು : ತುಳುನಾಡಿನ ಭಾಷಾ, ಸಾಹಿತ್ಯ, ಲಿಪಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಬಹುಮುಖ ಪ್ರತಿಭೆ ಶ್ರೀಶಾವಾಸವಿ ತುಳುನಾಡ್ (ವಿದ್ಯಾಶ್ರೀ ಎಸ್) ಅವರನ್ನು ಪುತ್ತೂರು ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ. ಪವಿತ್ರ ಪಡುಮಲೆಯ ಪುಣ್ಯ ಭೂಮಿಯಲ್ಲಿ ಜನಿಸಿ, B.Sc. in Multimedia Technology ಪದವಿ ಪಡೆದಿರುವ ಶ್ರೀಶಾವಾಸವಿ, ತಮ್ಮ ತಾಯ್ನಾಡು ತುಳುನಾಡಿನ ಭಾಷೆ ಹಾಗೂ ಲಿಪಿಯ ವೈಭವವನ್ನು ಅರಿತು ಅದನ್ನು ಜನಮಾನಸದಲ್ಲಿ ಉಜ್ವಲಗೊಳಿಸಲು ನಿತ್ಯ ಶ್ರಮಿಸುತ್ತಿದ್ದಾರೆ. 2013ರಿಂದ ತುಳು ಲಿಪಿಯ ಅಭ್ಯಾಸ […]

ಪುತ್ತೂರು ತಾಲೂಕು ತುಳುವ ಮಹಾಸಭೆಗೆ ತುಳು ಲಿಪಿಯ ಹರಿಕಾರಿಣಿ : ಶ್ರೀಶಾವಾಸವಿ ತುಳುನಾಡ್ ಸಂಚಾಲಕಿಯಾಗಿ ಆಯ್ಕೆ Read More »

ಶಿವಾನಿ ಡಿ. ಗೌಡ ಅವರಿಗೆ ಬೀದರ್ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಪಿಎಚ್‍ ಡಿ ಪದವಿ

ಪುತ್ತೂರು: ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲಕೃಷಿ ವಿಭಾಗದ ವಿದ್ಯಾರ್ಥಿನಿ ಶಿವಾನಿ ಡಿ. ಗೌಡ ಅವರಿಗೆ ಬೀದರ್ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಪಿಎಚ್‍ ಡಿ ಪದವಿ ನೀಡಿದೆ. ಶಿವಾನಿ ಡಿ ಗೌಡ ಅವರು ಹಿರಿಯ ಪ್ರಾಧ್ಯಾಪಕ ಹಾಗೂ ಜಲಕೃಷಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ಗಣಪತಿ ನಾಯ್ಕ ಎಂ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ Effect of dietary watermelon (Citrullus lanatus) and _Bacillus amyloliquefaciens on growth performance, immune response, disease resistance,

ಶಿವಾನಿ ಡಿ. ಗೌಡ ಅವರಿಗೆ ಬೀದರ್ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಪಿಎಚ್‍ ಡಿ ಪದವಿ Read More »

ನೀಟ್‍ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ | ಲಕ್ನೋ ಕಿಂಗ್‍ ಜಾರ್ಜ್ ಮೆಡಿಕಲ್‍ ಯುನಿವರ್ಸಿಟಿಯಲ್ಲಿ ಸೀಟು ಗಿಟ್ಟಿಸಿಕೊಂಡ ಯುವ ವೈದ್ಯ ಡಾ.ಅವಿನ್‍

ಕಡಬ: ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಡಬದ ಯುವ ವೈದ್ಯರೋರ್ವರು ದೇಶದ ಪ್ರತಿಷ್ಠಿತ ಲಕ್ಕೋ ಕಿಂಗ್ ಜಾರ್ಜ್ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ಸರ್ಕಾರಿ ಕೋಟಾದಡಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದ ದೋಣಿಮನೆ ದುಷ್ಯಂತ ಗೌಡ ಮತ್ತು ಪ್ರೇಮ ದಂಪತಿ ಪುತ್ರ ಯುವ ವೈದ್ಯ ಡಾ. ಅವಿನ್ ದೋಣಿಮನೆ, ನೀಟ್ ಪರೀಕ್ಷೆ ಬರೆದು MCh ನ್ಯೂರೋ ಸರ್ಜರಿ (Brain & Spine Surgery) ವ್ಯಾಸಂಗಕ್ಕೆ ಉಚಿತ ಸೀಟ್ ಪಡೆದುಕೊಂಡಿದ್ದಾರೆ. ತೀರಾ ಬಡ ಕುಟುಂಬದಿಂದ

ನೀಟ್‍ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ | ಲಕ್ನೋ ಕಿಂಗ್‍ ಜಾರ್ಜ್ ಮೆಡಿಕಲ್‍ ಯುನಿವರ್ಸಿಟಿಯಲ್ಲಿ ಸೀಟು ಗಿಟ್ಟಿಸಿಕೊಂಡ ಯುವ ವೈದ್ಯ ಡಾ.ಅವಿನ್‍ Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಬಹುದು. ನುರಿತ ಉತ್ತಮ ಅಧ್ಯಾಪಕರಿಂದ ತರಗತಿ ನಡೆಸಲಾಗುವುದು. ಸಂಸ್ಥೆಯಲ್ಲಿ CA, PLACEMENT TRAINING, EDUCATION GUIDELINES, PUC TUITIONS, LEARNING ORATORY, SKILLS (SPEECH), SPOKEN ENGLISH & ANCHORING ಕೋಚಿಂಗ್‍ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ,

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭ Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್ ತರಗತಿಗೆ ದಾಖಲಾತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್‍ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಎಲ್‍ಕೆಜಿ ಯಿಂದ 10ನೇ ತರಗತಿ ತನಕ ಟ್ಯೂಷನ್‍ ತರಗತಿಯ ಎಲ್ಲಾ ಪಠ್ಯಗಳಿಗೆ ಟ್ಯೂಷನ್‍ ಲಭ್ಯವಿದ್ದು, ಪ್ರತಿಯೊಂದು ಮಕ್ಕಳ ಕುರಿತು ವೈಯಕ್ತಿಕ ಗಮನ, ಕೌಶಲ್ಯ ಹೆಚ್ಚಿಸುವುದು ಹಾಗೂ ಪರೀಕ್ಷೆಗೆ ತಯಾರಿ ನಡೆಸುವುದು ಸಂಸ್ಥೆಯ ಧ್ಯೇಯವಾಗಿದೆ. ವಿಶಾಲವಾದ ತರಗತಿ ಕೊಠಡಿ, ನುರಿತ ಶಿಕ್ಷಕರಿಂದ ಉತ್ತಮ ಬೋಧನೆ ವ್ಯವಸ್ಥೆಯನ್ನೊಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ, ಪ್ರಭು ಬಿಲ್ಡಿಂಗ್‍, ಕೆನರಾ ಬ್ಯಾಂಕ್‍ ಬಳಿ,

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್ ತರಗತಿಗೆ ದಾಖಲಾತಿ ಆರಂಭ Read More »

SSLC ವಿದ್ಯಾರ್ಥಿಗಳಿಗೆ ಪರೀಕ್ಷೆ – 3

ಪುತ್ತೂರು: SSLC ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅವಕಾಶವನ್ನು ತಪ್ಪಿಸಿಕೊಂಡ ಆಶಾವಾದಿ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇನ್ನೊಂದು ಅವಕಾಶವನ್ನು ನೀಡಿದೆ.  ಯಾವಾಗ ಪರೀಕ್ಷೆ? ಮಂಡಳಿಯ ಅಧ್ಯಕ್ಷರ ಪ್ರಕಟನೆಯನ್ವಯ ದಿನಾಂಕ 05.07.2025ರಿಂದ 12.07.2025ರವರೆಗೆ SSLC ಪರೀಕ್ಷೆ – 3 ನಡೆಯಲಿದೆ. ವೇಳಾಪಟ್ಟಿ ಎಲ್ಲಿ ಸಿಗುತ್ತದೆ? ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ www.kseab.karnataka.gov.in ಜಾಲತಾಣದಲ್ಲಿ ಪರೀಕ್ಷಾ ವೇಳಾಪಟ್ಟಿ ಲಭ್ಯವಿದೆ. ಶುಭಾಶಯಗಳು ಪರೀಕ್ಷೆ – 3ಕ್ಕೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ

SSLC ವಿದ್ಯಾರ್ಥಿಗಳಿಗೆ ಪರೀಕ್ಷೆ – 3 Read More »

ಈ ವರ್ಷವೂ ಶಾಲಾ ಮಕ್ಕಳಿಗೆ ಸಿಗಲಿದೆ ಮೊಟ್ಟೆ, ಬಾಳೆಹಣ್ಣು

ಶೈಕ್ಷಣಿಕ ವರ್ಷದ 244 ದಿನ ವಿತರಿಸಲು ಇಲಾಖೆ ಆದೇಶ ಬೆಂಗಳೂರು : ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 51.61 ಲಕ್ಷ ಮಕ್ಕಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 244 ದಿನ ಮೊಟ್ಟೆ/ಬಾಳೆಹಣ್ಣು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಾರದಲ್ಲಿ 2 ದಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಮತ್ತು ಉಳಿದ ನಾಲ್ಕು ದಿನ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ. ಪೂರ್ವ ಪ್ರಾಥಮಿಕ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳು

ಈ ವರ್ಷವೂ ಶಾಲಾ ಮಕ್ಕಳಿಗೆ ಸಿಗಲಿದೆ ಮೊಟ್ಟೆ, ಬಾಳೆಹಣ್ಣು Read More »

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್‌ನಲ್ಲಿ ಶಾಲಾ ಆರಂಭೋತ್ಸವ

ಆನೆಗುಂದಿ ಶ್ರೀ ಸರಸ್ವತಿ ಪೀಠ ಕುತ್ಯಾರು ಸೂರ್ಯಚೈತನ್ಯ ಸಂಸ್ಥೆಯಲ್ಲಿ ಶಾಲಾ ಆರಂಭೋತ್ಸವವು ನೂತನವಾಗಿ ದಾಖಲಾದ ವಿದ್ಯಾರ್ಥಿಗಳ, ಪೋಷಕರ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಜಾಥದೊಂದಿಗೆ ಆರಂಭವಾಯಿತು. ಆಡಳಿತ ಮಂಡಳಿ ಅಸ್ಸೆಟ್ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು ಮತ್ತು ಅಧ್ಯಕ್ಷರಾದ ಸೂರ್ಯಕುಮಾರ ಹಳೆಯಂಗಡಿ ಜಾಥಕ್ಕೆ ಚಾಲನೆ ನೀಡಿದರು. ಶಾಲಾ ಅವರಣದಲ್ಲಿ ವಿದ್ಯಾರ್ಥಿಗಳನ್ನು ಆರತಿ ಮಾಡಿ ಪುಷ್ಪವೃಷ್ಠಿಯೊಂದಿಗೆ ಶ್ರೀ ಸರಸ್ವತಿ ಪೀಠ ಮಾತೃ ಮಂಡಳಿ ಅಧ್ಯಕ್ಷ ಸಂಧ್ಯಾ ಲಕ್ಷ್ಮಣ ಆಚಾರ್ಯ, ಉಷಾ ಸುಬ್ರಮಣ್ಯ, ಆಶಾ ನಾಗರಾಜ್, ಪ್ರಶಾಂತಿ ರಾಘವೇಂದ್ರ ಆಚಾರ್ಯ

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್‌ನಲ್ಲಿ ಶಾಲಾ ಆರಂಭೋತ್ಸವ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಶಾಲಾ ಆರಂಭೋತ್ಸವ “ಆರಂಭ-2025’

ಪುತ್ತೂರು: ಬನ್ನೂರಿನ ಅಲಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 2925-26ನೆ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ‘ ಆರಂಭ 2025’ ಅತ್ಯಂತ ಅರ್ಥಪೂರ್ಣವಾಗಿ  ನಡೆಯಿತು. ನಗರಸಭಾ ಮುಖ್ಯಾಧಿಕಾರಿ ಮಧು ಎಸ್. ಮನೋಹರ್ ಉದ್ಘಾಟಿಸಿ ಮಾತನಾಡಿ, ಮಾಡುವ ಕೆಲಸ ಸಣ್ಣದಾದರೂ ನಿರಂತರ ಪ್ರಯತ್ನ ಫಲ ನೀಡುತ್ತದೆ. ಅಂತೆಯೇ ಸಣ್ಣದಾಗಿ ಆರಂಭವಾದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಖಂಡಿತವಾಗಿಯೂ ದೊಡ್ಡದಾಗಿ ಬೆಳೆದು ಕೀರ್ತಿ ಪಡೆಯುತ್ತದೆ ಎಂದರು. ಶಾಲಾ ಸಂಚಾಲಕ ಎವಿ ನಾರಾಯಣ ಅವರ ಗುರುಗಳಾದ, ವಿವೇಕಾನಂದ ಪಾಲಿಟೆಕ್ನಿಕ್

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಶಾಲಾ ಆರಂಭೋತ್ಸವ “ಆರಂಭ-2025’ Read More »

ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯ : ರವಿ ಕುಮಾರ್ ಎನ್. | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ‘ವಿವೇಕ ಅಭಿನಂದನಮ್’

ಪುತ್ತೂರು: ವಿದ್ಯಾರ್ಥಿಗಳು ಕೊಠಡಿಯೊಳಗೆ ಉಳಿದರೆ ಯಶಸ್ಸು ಸಾಧಿಸಲಾಗುವುದಿಲ್ಲ. ಶಿಕ್ಷಣದಲ್ಲಿ ಅನುತ್ತೀರ್ಣರಾದವರು, ಜೀವನದಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಗ್ರ ರೀತಿಯಲ್ಲಿ ಅಭಿವೃದ್ಧಿಯಾಗಬೇಕಾಗಿದೆ. ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ರವಿ ಕುಮಾರ್ ಎನ್. ಹೇಳಿದರು. ಅವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ವಿವೇಕ ಅಭಿನಂದನಮ್ ನಲ್ಲಿ ಮಾತನಾಡಿದರು. ಕಾರ್ಯಕ್ರಮವನ್ನು ವಿವೇಕಾನಂದ

ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯ : ರವಿ ಕುಮಾರ್ ಎನ್. | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ‘ವಿವೇಕ ಅಭಿನಂದನಮ್’ Read More »

error: Content is protected !!
Scroll to Top