ಶೈಕ್ಷಣಿಕ

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ : ಉತ್ತೇಜನ – 2025 ಕಾರ್ಯಕ್ರಮ

ಉಡುಪಿ: 2024-25 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ‘ಉತ್ತೇಜನ ‘ ಜ್ಞಾನದ ಸಿರಿಗೆ ಸನ್ಮಾನ ಘೋಷ ವಾಕ್ಯದೊಂದಿಗೆ ಆಯೋಜನೆ ಮಾಡಲಾಗಿದೆ. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆ ಹೈಸ್ಕೂಲ್ ವಿಭಾಗದ 2024 – 25ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ‘ಉತ್ತೇಜನ’ ಜ್ಞಾನದ ಸಿರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದಾಗಿದೆ. ಇದೇ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಸಂಸ್ಥೆಯ […]

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ : ಉತ್ತೇಜನ – 2025 ಕಾರ್ಯಕ್ರಮ Read More »

ಪುಂಜಾಲಕಟ್ಟೆಯಲ್ಲಿ ದಿಶಾ ತರಬೇತಿ ಸಂಪನ್ನ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಪ್ರಥಮ ವರ್ಷದ ಪದವಿ ತರಗತಿಯ ವಿದ್ಯಾರ್ಥಿಗಳಿಗಾಗಿ ‘ದಿಶಾ’ ತರಬೇತಿ ಕಾರ್ಯಕ್ರಮ ಜುಲೈ 28ರಂದು ನಡೆಯಿತು. ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕ (Internal Quality Assurance Cell) ಮತ್ತು ವಿದ್ಯಾರ್ಥಿ ಕ್ಷೇಮಪಾಲನ ಕಚೇರಿ (Students’ Welfare Office) ಇವುಗಳ ಜಂಟಿ ಆಶ್ರಯದಲ್ಲಿ ‘ Small steps towards big dreams start today’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಏರ್ಪಾಡಾಗಿತ್ತು. ರಾಷ್ಟ್ರೀಯ ತರಬೇತುದಾರ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್

ಪುಂಜಾಲಕಟ್ಟೆಯಲ್ಲಿ ದಿಶಾ ತರಬೇತಿ ಸಂಪನ್ನ Read More »

ದ್ವಿಶತಕ ದಾಟಿದ ಫಲಾನುಭವಿಗಳ ಸಂಖ್ಯೆ – ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮತ್ತುಕೆವಿಜಿ ವೈದ್ಯಕೀಯ ಮಹಾವಿದ್ಯಾಲಯಗಳ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಒಟ್ಟು ಇನ್ನೂರಕ್ಕೂ ಮಿಕ್ಕಿದ ಸಂಖ್ಯೆಯ ಆರೋಗ್ಯಾಕಾಂಕ್ಷಿಗಳು ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಯಶಸ್ವೀ ಶಿಬಿರಇದೊಂದು ಅತ್ಯಂತ ಪ್ರಯೋಜನಕಾರಿ ಮತ್ತು ಸಕಾಲಿಕವಾದ ಶಿಬಿರವಾಗಿತ್ತು ಎಂದು ಫಲಾನುಭವಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಶಿಬಿರದಲ್ಲಿ ವಿತರಿಸಲಾದ ಆಹಾರದ ಗುಣಮಟ್ಟವು ಅತಿ ಉತ್ತಮವಾಗಿತ್ತು ಎಂದು ಕೆವಿಜಿ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿಕ್ರಿಯಿಸಿದ್ದಾರೆ. ಎಲ್ಲವೂ ಉಚಿತರಕ್ತದೊತ್ತಡ ಮತ್ತು

ದ್ವಿಶತಕ ದಾಟಿದ ಫಲಾನುಭವಿಗಳ ಸಂಖ್ಯೆ – ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ Read More »

ಗೋವಾದಲ್ಲಿ ನಡೆಯಲಿರುವ ಕನಕ ಉತ್ಸವದಲ್ಲಿ ಉಪನ್ಯಾಸ ನೀಡಲು ಕರ್ನಾಟಕದಿಂದ ಡಾ. ಅನುರಾಧ ಕುರುಂಜಿ

ಸುಳ್ಯ: ಆಗಸ್ಟ್ 25 ರಂದು ಗೋವಾದಲ್ಲಿ ನಡೆಯಲಿರುವ ಕನಕ ಉಪನ್ಯಾಸ ಉತ್ಸವದಲ್ಲಿ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕದಿಂದ ಡಾ. ಅನುರಾಧ ಕುರುಂಜಿ ಅವರು ಆಯ್ಕೆಯಾಗಿದ್ದಾರೆ. ಇವರು ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರಾಗಿದ್ದಾರೆ. ಇವರು 250 ಕ್ಕೂ ಅಧಿಕ ತರಬೇತಿ ಉಪನ್ಯಾಸಗಳನ್ನು ನೀಡಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿಯೂ ಪ್ರಬಂಧ ಮಂಡನೆ ಮಾಡಿದ್ದಾರೆ. ಇವರು ಪದ್ಮಯ ಗೌಡ ಕುರುಂಜಿ ಮತ್ತು ಸೀತಮ್ಮ ಕುರುಂಜಿ ದಂಪತಿಯ ಪುತ್ರಿ.

ಗೋವಾದಲ್ಲಿ ನಡೆಯಲಿರುವ ಕನಕ ಉತ್ಸವದಲ್ಲಿ ಉಪನ್ಯಾಸ ನೀಡಲು ಕರ್ನಾಟಕದಿಂದ ಡಾ. ಅನುರಾಧ ಕುರುಂಜಿ Read More »

ಮಂಗಳೂರಿನಲ್ಲಿ ಮೆರಿಟೈಮ್ ವಿವಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ನಗರದಲ್ಲಿ ಕೇಂದ್ರೀಯ ಮೆರಿಟೈಮ್ ‌ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಸಚಿವ ಸರ್ಬಾನಂದ್ ‌ಸೋನೋವಾಲ್ ಅವರಿಗೆ ಮನವಿ ಮಾಡಿದ್ದು, ಇದನ್ನು ಪರಿಶೀಲನೆ ನಡೆಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾಗಿ ತಿಳಿದು ಬಂದಿದೆ. ಮಂಗಳೂರು ವಿಶಾಲವಾದ ಕಡಲ ತೀರ ಹೊಂದಿದ್ದು, ಈ ಭಾಗದಲ್ಲಿ ಮೆರಿಟೈಮ್ ‌ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದರಿಂದ ಕಡಲ ಕ್ಷೇತ್ರದ ಬಗ್ಗೆ ಅಧ್ಯಯನ,‌ ಸಂಶೋಧನೆಗೆ ಹೆಚ್ಚು ಅವಕಾಶ ದೊರೆಯಲಿದೆ. ಈ ಭಾಗದಲ್ಲಿ ಪ್ರಮುಖ ಬಂದರುಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಭೌಗೋಳಿಕ ಅನುಕೂಲಗಳನ್ನು

ಮಂಗಳೂರಿನಲ್ಲಿ ಮೆರಿಟೈಮ್ ವಿವಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 25 ರಂದು ಶಾಲಾ ಕಾಲೇಜುಗಳಿಗೆ ರಜೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರುಣನಾರ್ಭಟ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಜುಲೈ 25 ರಂದು ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಭಾರೀ ಮಳೆಯ ಹಿನ್ನೆಲೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ‌ ಹಿನ್ನೆಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿರುವುದಾಗಿ ತಿಳಿಸಿದೆ.

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 25 ರಂದು ಶಾಲಾ ಕಾಲೇಜುಗಳಿಗೆ ರಜೆ Read More »

ಲಂಡನ್ ಯೂನಿವರ್ಸಿಟಿ ಮುಂಭಾಗ ತುಳು ಧ್ವಜ ಹಿಡಿದು ತನ್ನ ಶೈಕ್ಷಣಿಕ ಸಾಧನೆ ಸಂಭ್ರಮಿಸಿದ ಪುತ್ತೂರಿನ ಗಾಯಕ್

ಪುತ್ತೂರು: ಲಂಡನ್‌ ಯೂನಿವರ್ಸಿಟಿಯಲ್ಲಿ ಕನ್ಸ್ಟ್ರಕ್ಷನ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಗಾಯಕ್ ಜಿ. ಎನ್. ಅವರು ಯೂನಿವರ್ಸಿಟಿ ಮುಂಭಾಗದಲ್ಲಿ ತುಳುನಾಡಿನ ಧ್ವಜವನ್ನು ಪ್ರದರ್ಶಿಸುವ ಮೂಲಕ ನಾಡಿಗೆ ಹಿರಿಮೆ ತಂದು ಕೊಟ್ಟಿದ್ದಾರೆ. ಗಾಯಕ್ ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಥೆಗಳಲ್ಲಿ ಹೈಸ್ಕೂಲ್, ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿರುತ್ತಾರೆ. ಗಾಯಕ್ ಅವರು ಹಾರಾಡಿಯ ಗಣೇಶ್ ನಂದಿಲ ಮತ್ತು ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಅವರ ಪುತ್ರ. ಇವರ ತಮ್ಮ

ಲಂಡನ್ ಯೂನಿವರ್ಸಿಟಿ ಮುಂಭಾಗ ತುಳು ಧ್ವಜ ಹಿಡಿದು ತನ್ನ ಶೈಕ್ಷಣಿಕ ಸಾಧನೆ ಸಂಭ್ರಮಿಸಿದ ಪುತ್ತೂರಿನ ಗಾಯಕ್ Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET  /JEE ಫೌಂಡೇಶನ್‍ ತರಬೇತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಬೇತಿ ಆರಂಭಗೊಂಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಬಹುದು. ನುರಿತ, ಅನುಭವಿ ಅಧ್ಯಾಪಕರಿಂದ ತರಬೇತಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ, ಪ್ರಭು ಬಿಲ್ಡಿಂಗ್‍, ಕೆನರಾ ಬ್ಯಾಂಕ್‍ ಬಳಿ, ಅರುಣಾ ಥಿಯೇಟರ್ ಎದುರು, ಮುಖ್ಯ ರಸ್ತೆ ಪುತ್ತೂರು.  8904877721, 7204977721 ಹಾಗೂ 08251-200721 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET  /JEE ಫೌಂಡೇಶನ್‍ ತರಬೇತಿ ಆರಂಭ Read More »

ಭಾರಿ ಮಳೆ : ಮಂಗಳೂರು, ಬಂಟ್ವಾಳ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ

ಬಂಟ್ವಾಳ : ಭಾರಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜು.19ರಂದು ಎಲ್ಲ ಅಂಗನವಾಡಿ, ಸರ್ಕಾರ, ಅನುದಾನಿತ, ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆವರೆಗೆ ರಜೆ ನೀಡಿ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಪದವಿಪೂರ್ವ ತರಗತಿಗಳಿಗೂ ರಜೆ ನೀಡಲಾಗಿದೆ.

ಭಾರಿ ಮಳೆ : ಮಂಗಳೂರು, ಬಂಟ್ವಾಳ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ Read More »

ಇನ್ನುಮುಂದೆ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ

ಡ್ರಗ್ಸ್‌, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಧಾರ ಬೆಂಗಳೂರು: ಕಾಲೇಜುಗಳಲ್ಲಿ ಡ್ರಗ್ಸ್‌, ರ‍್ಯಾಗಿಂಗ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಕ್ಯಾಂಪಸ್‌ಗಳಲ್ಲಿ ಸಿಸಿಟಿವಿ ಅಳವಡಿಸಲು ಸರ್ಕಾರ ಆದೇಶ ಮಾಡಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕಾಲೇಜು, ವಿವಿ ಕ್ಯಾಂಪಸ್‌ಗಳಲ್ಲಿ ರ‍್ಯಾಗಿಂಗ್,

ಇನ್ನುಮುಂದೆ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ Read More »

error: Content is protected !!
Scroll to Top