ಅಪಘಾತ

ಚಾಲಕನ ನಿಯಂತ್ರಣ ತಪ್ಪಿದ ಕಾರು | ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ,

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಏರಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ತುಂಬೆಯಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿ ನವಾಜ್ ಎಂಬವರು ಕಾರಿನಲ್ಲಿ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ತುಂಬೆಯಲ್ಲಿ ಈ ಘಟನೆ ನಡೆದಿದ್ದು ಕಾರು ಡಿವೈಡರ್ ಮೇಲೆ ಹತ್ತಿದ್ದಲ್ಲದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ. ಆದರೆ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ […]

ಚಾಲಕನ ನಿಯಂತ್ರಣ ತಪ್ಪಿದ ಕಾರು | ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ, Read More »

ಭಾರೀ ಗಾಳಿ ಮಳೆಗೆ ಮುರಿದು ಬಿದ್ದ ಬೃಹತ್ ಗಾತ್ರದ ಜಾಹೀರಾತು ಫಲಕ |ಜಖಂಗೊಂಡ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಪರಿಣಾಮ ಭಾರಿ ಗಾಳಿ-ಮಳೆಗೆ ಬೃಹದಾದ ಜಾಹಿರಾತು ಫಲಕ ಬಿದ್ದು ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂ ಆಗಿರುವ ಘಟನೆ ಮಂಗಳೂರು ಬಿಕರ್ನಕಟ್ಟೆಯಲ್ಲಿ ನಡೆದಿದೆ. ಕಮರ್ಷಿಯಲ್ ಬಿಲ್ಡಿಂಗ್ ಮೇಲೆ ಜಾಹಿರಾತು ಫಲಕ ಹಾಕಲಾಗಿತ್ತು. ಜೋರಾಗಿ ಬೀಸಿದ ಗಾಳಿಗೆ ಫಲಕ ಕಟ್ಟಡದ ಕೆಳಭಾಗಕ್ಕೆ ಬಿದ್ದಿದೆ. ಕಬ್ಬಿಣದ ಸರಳು ಹೊಂದಿರುವ ಫಲಕ ಕೆಳಗೆ ಹಾದು ಹೋದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಭಾರ ತಾಳಲಾಗದೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ವಿದ್ಯುತ್ ಕಂಬದ

ಭಾರೀ ಗಾಳಿ ಮಳೆಗೆ ಮುರಿದು ಬಿದ್ದ ಬೃಹತ್ ಗಾತ್ರದ ಜಾಹೀರಾತು ಫಲಕ |ಜಖಂಗೊಂಡ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು Read More »

ಗೋಳಿತ್ತಡಿಯಲ್ಲಿ ಬೃಹತ್ ಮರ ರಸ್ತೆಗೆ | ವಾಹನ ಸಂಚಾರದಲ್ಲಿ ತೊಡಕು

ರಾಮಕುಂಜ : ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಬಿದ್ದ ಪರಿಣಾಮ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಸೋಮವಾರ ಸಂಜೆ ನಡೆದಿದೆ. ಭಾರೀ ಮಳೆದ ಸುರಿದ ಪರಿಣಾಮ ಹೆದ್ದಾರಿ ಬದಿಯಲ್ಲಿದ್ದ ಬೃಹತ್ ಮರವೊಂದು ಮುರಿದು ಹೆದ್ದಾರಿಗೆ ಅಡ್ಡವಾಗಿ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗೋಳಿತ್ತಡಿಯಲ್ಲಿ ಬೃಹತ್ ಮರ ರಸ್ತೆಗೆ | ವಾಹನ ಸಂಚಾರದಲ್ಲಿ ತೊಡಕು Read More »

ದಾಸ್ತಾನು ಕೊಠಡಿಗೆ ಬೆಂಕಿ | ಅಪಾರ ನಷ್ಟ

ವಿಟ್ಲ: ಕನ್ಯಾನ ಗ್ರಾಮದಲ್ಲಿ ದಾಸ್ತಾನು ಕೊಠಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕನ್ಯಾನ ಗ್ರಾಮದ ಪೇಪರ್ ವಿತರಕ ಗಂಗಾಧರ ಎಂಬವರ ಮನೆಯ ದಾಸ್ತಾನು ಕೊಠಡಿಗೆ ತಡ ರಾತ್ರಿ ಬೆಂಕಿ ಬಿದ್ದಿದ್ದು, ಕೊಠಡಿಯಲ್ಲಿದ್ದ ಕಟ್ಟಿಗೆ, ತೆಂಗಿನಕಾಯಿ, ಹಲಗೆಗಳು ಸೇರಿದಂತೆ ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿದೆ. ಬೆಂಕಿನ ಕೆನ್ನಾಲಗೆಗೆ ಕೊಟ್ಟಿಗೆಯ ಛಾವಣಿ ಕುಸಿದುಬಿದ್ದಿದ್ದು, ಸಮೀಪದ ಮನೆಗಳಿದ್ದರೂ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ದಾಸ್ತಾನು ಕೊಠಡಿಗೆ ಬೆಂಕಿ | ಅಪಾರ ನಷ್ಟ Read More »

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ಚಾಲಕ ಅಪಾಯದಿಂದ ಪಾರು

ಬಂಟ್ವಾಳ: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದುಕೊಂಡು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ. ವಿಟ್ಲದ ಕೊಡಂಗಾಯಿಯಲ್ಲಿ ಈ ಅಪಘಾತ ನಡೆದಿದೆ. ವಿದ್ಯುತ್ ಕಂಬಕ್ಕೆ ಕಾರು ಗುದ್ದಿದ ರಭಸಕ್ಕೆ ಹೊಂಡದಿಂದಲೇ ವಿದ್ಯುತ್ ಕಂಬ ಮೇಲಕ್ಕೆದ್ದಿದೆ. ಕಾರಿನ ಮೇಲೆಯೇ ಕಂಬ ಮುರಿದು ಬಿದ್ದಿದ್ದು, ಕಾರಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ಚಾಲಕ ಅಪಾಯದಿಂದ ಪಾರು Read More »

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟುನಿಂತ ಟೊಮೆಟೋ ಲಾರಿ | ಫುಲ್ ಟ್ರಾಫಿಕ್ ಜಾಮ್

ಚಾರ್ಮಾಡಿ: ಚಾರ್ಮಾಡಿ ಘಾಟ್ ನಲ್ಲಿ ಟೊಮೊಟೊ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಭಾನುವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಪ್ರಾರಂಭವಾದ ಟ್ರಾಫಿಕ್ ಜಾಮ್ ಸುಮಾರು 10 ಕಿ.ಮೀ. ನಷ್ಟು ಉದ್ದಕ್ಕೆ ಉಂಟಾಗಿದ್ದು, ಸಾಲು ಸಾಲಾಗಿ ವಾಹನಗಳು ನಿಂತಿವೆ. ಚಿಕ್ಕಮಗಳೂರು ಹಾಗೂ ದ.ಕ.ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನ 6ನೇ ತಿರುವಿನಲ್ಲಿ ಟೊಮೆಟೋ ಲಾರಿ ಕೆಟ್ಟು ನಿಂತಿದ್ದು ವಾಹನ ಸವಾರರು ಮುಂದಕ್ಕೆ ಚಲಿಸಲು ಇನ್ನೂ ಪರದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟುನಿಂತ ಟೊಮೆಟೋ ಲಾರಿ | ಫುಲ್ ಟ್ರಾಫಿಕ್ ಜಾಮ್ Read More »

ನಾಯಿ ದಾಳಿಗೆ ಸಿಲುಕಿ ಜಿಂಕೆ ಮೃತ್ಯು

ಬೆಳ್ತಂಗಡಿ: ಬೀದಿ ನಾಯಿ ದಾಳಿಗೆ ಸಿಲುಕಿ ಜಿಂಕೆಯೊಂದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ ಹೊಸಮುಗೇರು ಎಂಬಲ್ಲಿ ನಡೆದಿದೆ. ಎರಡು ವರ್ಷ ಪ್ರಾಯದ ಗಂಡು ಜಿಂಕೆ ಮೇಯುತ್ತಾ ಕಡಿನಂಚಿಗೆ ಬಂದ ಸಂದರ್ಭ ನಾಯಿಯ ದಾಳಿಗೆ ಸಿಲುಕಿದೆ, ಗಂಭೀರ ಸ್ಥಿತಿಯಲ್ಲಿದ್ದ ಜಿಂಕೆಯನ್ನು ಕಂಡು ಸ್ಥಳೀಯರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಗಾಯಗೊಂಡ ಜಿಂಕೆಯನ್ನು ಸಮೀಪದ ಪಶು ಶಿಕಿತ್ಸಾಲಯಕ್ಕೆ ಕೊಂಡೊಯ್ಯಲಾದರೂ ಆದಾಗಲೇ ಜಿಂಕೆ ಸಾವನ್ನಪ್ಪಿದೆ. ಮೃತದೇಹವನ್ನು ಅರಣ್ಯ ಇಲಾಖಾ ಡಿಪೋ ಇರುವ ಮಣ್ಣಗುಂಡಿ

ನಾಯಿ ದಾಳಿಗೆ ಸಿಲುಕಿ ಜಿಂಕೆ ಮೃತ್ಯು Read More »

ಪುಳಿಕುಕ್ಕು ಸೇತುವೆ ಬಳಿ ಕಾಡೆಮ್ಮೆ ಮೃತದೇಹ ಪತ್ತೆ

ಕಡಬ : ಕಡಬದ ಕೋಡಿಂಬಾಳ ಸಮೀಪದ ಪುಳಿಕುಕ್ಕು ಸೇತುವೆಯ ಬಳಿ ಬೃಹತ್ ಕಾಡೆಮ್ಮೆ ಮೃತದೇಹ ಪತ್ತೆ ನದಿಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಡೆಮ್ಮೆ ಮೃತಪಟ್ಟಿರುವುದಕ್ಕೆ ಕಾರಣಗಳು ತಿಳಿದು ಬಂದಿಲ್ಲ.

ಪುಳಿಕುಕ್ಕು ಸೇತುವೆ ಬಳಿ ಕಾಡೆಮ್ಮೆ ಮೃತದೇಹ ಪತ್ತೆ Read More »

ಬೈಕ್-ಪಿಕಪ್ ಡಿಕ್ಕಿ | ಬೈಕ್ ಸವಾರ ಮೃತ್ಯು

ಪುತ್ತೂರು: ಬೈಕ್ ಹಾಗೂ ಪಿಕಅಪ್ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲರ್ಪೆಯಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿ  ನಾಗರಾಜ (53) ಮೃತಪಟ್ಟವರು. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬೈಕ್-ಪಿಕಪ್ ಡಿಕ್ಕಿ | ಬೈಕ್ ಸವಾರ ಮೃತ್ಯು Read More »

ಆಟೋ ರಿಕ್ಷಾ ಪಲ್ಟಿ : ಚಾಲಕ ಸ್ಥಳದಲ್ಲೇ ಮೃತ್ಯು

ವಿಟ್ಲ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮದ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲದ ಮಾಣಿಲ ತಿರುವೊಂದರಲ್ಲಿ ನಡೆದಿದೆ. ಸುಬ್ರಹ್ಮಣ್ಯ ಪಂಜ ನಿವಾಸಿ ಸುದರ್ಶನ್ (35) ಮೃತಪಟ್ಟ ಚಾಲಕ. ಸುದರ್ಶನ್ ಹಾಗೂ ಇನ್ನೋರ್ವ ನಿನ್ನೆ ರಾತ್ರಿ ಮಾಣಿಲ ಬಾವಲಿಮೂಲೆಗೆ ಬರುತ್ತಿದ್ದ ವೇಳೆ ಆಟೋ ರಿಕ್ಷಾ ಪಲ್ಟಿಯಾಗಿದೆ. ಪರಿಣಾಮ ಗಂಘೀರ ಗಾಯಗೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿ ಅಲ್ಪಸ್ವಲ್ಪ ಗಾಯಗಳಾಗಿವೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಟೋ ರಿಕ್ಷಾ ಪಲ್ಟಿ : ಚಾಲಕ ಸ್ಥಳದಲ್ಲೇ ಮೃತ್ಯು Read More »

error: Content is protected !!
Scroll to Top