ಸಿಡಿಲು ಬಡಿದು ಮನೆಗೆ ಹಾನಿ!
ಪುತ್ತೂರು: ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಸಾಲ್ಮರ ಸಮೀಪ ಮಂಗಳವಾರ ಸಂಭವಿಸಿದೆ. ಸಾಲ್ಮರ ಜಿಡೆಕಲ್ಲು ನಿವಾಸಿ ಜೆ.ಕೆ ಅಶ್ರಫ್ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಅಪಾರ ಹಾನಿ ಸಂಭವಿಸಿದೆ. ಪಕ್ಕದ ತೆಂಗಿನಮರಕ್ಕೂ ಹಾನಿಯುಂಟಾಗಿದೆ. ಮಂಗಳವಾರ ಸಂಜೆ ಸುರಿದ ಮಳೆಯೊಂದಿಗೆ ಸಿಡಿಲಿನ ಆರ್ಭಟವೂ ಇತ್ತು. ಇದರಿಂದ ಹಲವೆಡೆ ಹಾನಿ ಸಂಭವಿಸಿದೆ.
ಸಿಡಿಲು ಬಡಿದು ಮನೆಗೆ ಹಾನಿ! Read More »