ಮುಳುಗು ಸೇತುವೆ ಪ್ರಸಿದ್ಧಿ ಪಡೆದ ಚೆಲ್ಯಡ್ಕ ಸೇತುವೆ ಮುಳುಗಡೆ
ಪುತ್ತೂರು : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಟ್ಟಂಪಾಡಿ ಗ್ರಾಪಂ ವ್ಯಾಪ್ತಿಯ ಈ ಚೆಲ್ಯಡ್ಕ ಸೇತುವೆ ಪ್ರತಿ ಮಳೆಗಾದಲ್ಲಿ ನಾಲ್ಕೈದು ಬಾರಿ ಮುಳುಗಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮುಳುಗು ಸೇತುವೆ ಎಂದು ಪ್ರಸಿದ್ಧಿಯಾಗಿದೆ. ಈ ಸೇತುವೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಇದಕ್ಕೊಂದು ಕಾಯಕಲ್ಪ ಒದಗಿಸುವಂತೆ ಸ್ಥಳೀಯರು ಹಲವಾರು ಬಾರಿ ಜನಪ್ರನಿಧಿಗಳು, ಸಂಬಂಧ ಪಟ್ಟವರಿಗೆ ಮನವಿ ನೀಡಿದ್ದಾರೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮುಳುಗು ಸೇತುವೆ ಪ್ರಸಿದ್ಧಿ ಪಡೆದ ಚೆಲ್ಯಡ್ಕ ಸೇತುವೆ ಮುಳುಗಡೆ Read More »









