78ನೇ ಸ್ವಾತಂತ್ರ್ಯೋತ್ಸವ | ಬಿಜೆಪಿ ನಗರ ಮಂಡಲದ ವತಿಯಿಂದ ರಾಷ್ಟ್ರಧ್ವಜ, ನರೇಂದ್ರ ಮೋದಿ ಭಾವಚಿತ್ರ ವಿತರಣೆ

ಭಾರತೀಯ ಜನತಾ ಪಾರ್ಟಿ ಪುತ್ತೂರು ನಗರ ಮಂಡಲ ವತಿಯಿಂದ 78 ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯ ವಿವಿಧ ಫಲಾನುಭವಿಗಳ ಮನೆಗೆ ತೆರಳಿ ರಾಷ್ಟ್ರಧ್ವಜವನ್ನು ಹಾಗೂ ನರೇಂದ್ರ ಮೋದೀಜಿಯವರ ಭಾವಚಿತ್ರವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕ ಸಂಜೀವ ಮಠಂದೂರು,  ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಿಯೋಜಿತ ಅಧ್ಯಕ್ಷ ಶಿವಕುಮಾರ್ ಪಿ.ಬಿ.,ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ನಿಯೋಜಿತ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು ಭಾಗವಹಿಸಿದ್ದರು. ನಗರಸಭಾ ಸದಸ್ಯರಾದ […]

78ನೇ ಸ್ವಾತಂತ್ರ್ಯೋತ್ಸವ | ಬಿಜೆಪಿ ನಗರ ಮಂಡಲದ ವತಿಯಿಂದ ರಾಷ್ಟ್ರಧ್ವಜ, ನರೇಂದ್ರ ಮೋದಿ ಭಾವಚಿತ್ರ ವಿತರಣೆ Read More »

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ 78ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ನೆಹರೂನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಧ್ವಜಾರೋಹಣ ನೆರವೇರಿಸಿ, ವಿದೇಶಿಯರ ಗುಲಾಮಕ್ಕೆ ಒಳಗಾಗಿದ್ದ ಭಾರತೀಯರಿಗೆ ಸ್ವಾತಂತ್ರ್ಯ ದೊರತು ಇಂದಿಗೆ 78 ವರ್ಷಗಳಾಯಿತು. ಹಲವಾರು ದೇಶ ಭಕ್ತರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಮಹಿಳೆಯರು ತಮ್ಮ ದೇಶಕ್ಕಾಗಿ ಹೋರಾಟ ಮಾಡಿದ ಇತಿಹಾಸ ಇದ್ದರೆ ಅದು ಭಾರತದಲ್ಲಿ ಮಾತ್ರ, ಎಂದರು. ವಿವೇಕಾನಂದ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಪ್ರಿನ್ಸಿಪಾಲರು, ಬೋಧಕ-

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ 78ನೇ ಸ್ವಾತಂತ್ರ್ಯೋತ್ಸವ Read More »

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ 78ನೇ ಸ್ವಾತಂತ್ರ್ಯೋತ್ಸವ

ಪುತ್ತೂರು : ಭಾರತದ ಇತಿಹಾಸವನ್ನು ತಿರುಚಿದ್ದು ಇನ್ಯಾರೋ ಅಲ್ಲ, ಭಾರತೀಯರೇ ಅನ್ನುವುದು ದುರಂತ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಿಜ ಇತಿಹಾಸವನ್ನು ದಾಖಲಿಸುವವರನ್ನು ಮೂಲೆಗುಂಪು ಮಾಡಿ ಮಿಥ್ಯ ಇತಿಹಾಸವನ್ನೇ ಸತ್ಯವೆಂದು ನಂಬಿಸಲಾಯಿತು. ಇದರ ಪರಿಣಾಮ ದೇಶಕ್ಕಾಗಿ ಹೋರಾಡಿದ ನೈಜ ರಾಷ್ಟ್ರಭಕ್ತರ ಪರಿಚಯ ಈಗಿನ ತಲೆಮಾರಿಗೆ ಇಲ್ಲದಾಗಿದೆ ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು. ಅವರು ನಗರದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ 78ನೇ ಸ್ವಾತಂತ್ರ್ಯ ದಿನಾಚರಣೆರಣೆಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಸಾಮಾಜಿಕ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ 78ನೇ ಸ್ವಾತಂತ್ರ್ಯೋತ್ಸವ Read More »

ಸುಪ್ರೀಂ ಕೋರ್ಟ್ ವಕೀಲರಾಗಿ ಶೇಖರ್ ದೇವಸ ಆಯ್ಕೆ

ಪುತ್ತೂರು : ಬೆಳ್ತಂಗಡಿ ತಾಲೂಕಿನ ಸವಣಾಲ್ ಗ್ರಾಮದ ದೇವಸ ಮನೆಯ ಶೇಖರ್ ದೇವಸ ಸುಪ್ರೀಂ ಕೋರ್ಟ್ ವಕೀಲರಾಗಿ ನೇಮಕಗೊಂಡಿದ್ದಾರೆ. ಹಿರಿಯ ವಕೀಲರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದಿದೆ.  ಒಕ್ಕಲಿಗ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಹಲವಾರು ಮಂದಿ ಸಾಧಕರಿದ್ದಾರೆ. ಅನೇಕ ಸಾಧನೆಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದೀಗ ಈ ಸಾಲಿಗೆ ಶೇಖರ್ ದೇವಸ ಕೂಡ ಸೇರಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರಾಗಿ ಶೇಖರ್ ದೇವಸ ಆಯ್ಕೆ Read More »

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಎದುರು 78ನೇ ಸ್ವಾತಂತ್ರ್ಯೋತ್ಸವ

ಮಂಗಳೂರು : ವೀರ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಎದುರು 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು ಧ್ವಜಾರೋಹಣವನ್ನು ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗಿಶ್ ಶೆಟ್ಟಿ ಆಗಮಿಸಿದ್ದರು. ಅಲ್ಲದೆ ಡಿ.ಬಿ. ಬಾಲಕೃಷ್ಣ, ಪೂರ್ಣಿಮಾ ಕೆ.ಎಂ, ಸುಂದರ್ ಗೌಡ, ಕೇಶವ ಗೌಡ, ಗರುದೇವ ಯು.ಬಿ, ಡಾ. ಸಚಿನ್ ನಡ್ಕ, ಕುಸುಮಾಧರ, ಸಾರಿಕಾ ಸುರೇಶ್, ನವೀನ್ ಚಿಲ್ಪಾರ್, ರಾಮಚಂದ್ರ ಕೆ,

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಎದುರು 78ನೇ ಸ್ವಾತಂತ್ರ್ಯೋತ್ಸವ Read More »

ಸವಣೂರು : ಭಾರತ ಸಂಕಲ್ಪ ದಿನ, ಬೃಹತ್ ಪಂಜಿನ ಮೆರವಣಿಗೆ

ಸವಣೂರು : ದೇಶದ ಏಕತೆಗೆ ಧಕ್ಕೆಯುಂಟಾದಾಗ ಹೋರಾಟವನ್ನು ಮಾಡಿಯೇ ಸಿದ್ದ.ನಮ್ಮ ಶ್ರೀಮಂತ ಪರಂಪರೆ ಕಾಬೂಲ್ ವರೆಗೆ ವಿಸ್ತರಿಸಿತು.ವಿಜಯನಗರ ಸಾಮ್ರಾಜ್ಯದಲ್ಲಿ ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ಸಿಕ್ಕಿದ ಪರಿಣಾಮವಾಗಿ ಸಂಪದ್ಭರಿತವಾಗಿತ್ತು. ಎಂದು ಸವಣೂರು ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಹೇಳಿದರು.  ಅವರು ಸವಣೂರು ಯುವ ಸಭಾಭವನದಲ್ಲಿ ಸವಣೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಆ.14ರಂದು ರಾತ್ರಿ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ, ಬೃಹತ್ ಪಂಜಿನ ಮೆರವಣಿಗೆಯ

ಸವಣೂರು : ಭಾರತ ಸಂಕಲ್ಪ ದಿನ, ಬೃಹತ್ ಪಂಜಿನ ಮೆರವಣಿಗೆ Read More »

ಬೆಳಂದೂರು ಗ್ರಾಮ ಪಂಚಾಯತ್‍ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಮರಕ್ಕಡ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಪಿಡಿಓ ನಾರಾಯಣ, ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೆಳಂದೂರು ಗ್ರಾಮ ಪಂಚಾಯತ್‍ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ Read More »

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 78 ನೇ  ಸ್ವಾತಂತ್ರ್ಯೋತ್ಸವ

ಸುಳ್ಯ : ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ ಆಚರಣೆ ನಡೆಯಿತು. ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿದರು. ಅವರು ಸ್ವಾತ್ರಂತ್ರ್ಯದ ಮಹತ್ವ ಮತ್ತುಪ್ರಜಾಪ್ರಭುತ್ವದಿಂದಾಗಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಮುಂದುವರಿದು ಈಗ ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ದ.ಕ. ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್ ರವರು ಉಪಸ್ಥಿತರಿದ್ದರು .ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಭಾರತಿ ಸ್ವಾಗತಿಸಿ, ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲರಾದ

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 78 ನೇ  ಸ್ವಾತಂತ್ರ್ಯೋತ್ಸವ Read More »

ಕೆಂಪುಕೋಟೆಯ ಮೇಲೆ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ |  ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ದಿಲ್ಲಿಯ ಕೆಂಪುಕೋಟೆಯ ಮೇಲೆ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಸಂಖ್ಯಾತ ಸ್ವಾತಂತ್ರ್ಯ ಪ್ರೇಮಿಗಳ ಬಲಿದಾನಕ್ಕೊಂದು ದೊಡ್ಡ ಪ್ರಣಾಮ. ವಿಕಸಿತ ಭಾರತ 2047 ಕೇವಲ ಪದಗಳಲ್ಲ. 140 ಕೋಟಿ ಜನರ ಸಂಕಲ್ಪ ಎಂದು ಹೇಳಿದರು. ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ತಮ್ಮ ಕುಟುಂಬ, ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಹೊರ ರಾಷ್ಟ್ರವೂ ನಷ್ಟ ಅನುಭವಿಸಿದೆ. ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ

ಕೆಂಪುಕೋಟೆಯ ಮೇಲೆ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ |  ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ Read More »

ಎಣ್ಮೂರು ಸ.ಹಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ  ಸಂಭ್ರಮ

ನಿಂತಿಕಲ್ಲು : ಎಣ್ಮೂರು ಸರಕಾರಿ  ಹಿರಿಯ ಪ್ರಾಥಮಿಕ   ಶಾಲೆಯಲ್ಲಿ 78 ನೇ ವರ್ಷದ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶರೀಪ್ ಅವರು ಧ್ವಜಾರೋಹಣಗೈದರು. ಪಂಚಾಯಿತ್  ಅಧ್ಯಕ್ಷ ಮಾಯಿಲಪ್ಪ ಗೌಡ ಹಾಗೂ ಶಾಲಾ ಪೋಷಕರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಮೆರವಣಿಗೆ, ಸಭಾ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ  ಶಿಕ್ಷಕಿ ಭುವನೇಶ್ವರಿ  ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

ಎಣ್ಮೂರು ಸ.ಹಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ  ಸಂಭ್ರಮ Read More »

error: Content is protected !!
Scroll to Top