ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಶಾಮಿಯಾನ ಅಳವಡಿಕೆ ಸಹಿತ 144 ಸೆಕ್ಷನ್  | ಇತಿಹಾಸದಲ್ಲೇ ಪ್ರಥಮ ಬಾರಿ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ್ದು, ಇದು ಇತಿಹಾಸದಲ್ಲೇ ಪ್ರಥಮ ಬಾರಿಯಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹೊದಿಸುವಂತೆ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದರು. ಅದರಂತೆ ಠಾಣೆಯ ಸುತ್ತ ಸೈಡ್ ವಾಲ್ ಗಳನ್ನು ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ. ಸದ್ಯ ಆಯುಕ್ತರು ಕೂಡ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ ಎನ್ನಲಾಗಿದೆ. ಠಾಣೆ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಜೂ.13 […]

ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಶಾಮಿಯಾನ ಅಳವಡಿಕೆ ಸಹಿತ 144 ಸೆಕ್ಷನ್  | ಇತಿಹಾಸದಲ್ಲೇ ಪ್ರಥಮ ಬಾರಿ Read More »

ಗೋಹತ್ಯೆ ಖಂಡಿಸಿ ವಿಹಿಂಪ, ಬಜರಂಗದಳ ವತಿಯಿಂದ ಪೊಲೀಸ್ ಠಾಣೆ, ಗೋ ಆಸ್ಪತ್ರೆ ಅಧಿಕಾರಿಗಳಿಗೆ ಮನವಿ

ಬೆಳ್ತಂಗಡಿ: ಬಕ್ರೀದ್ ಹಬ್ಬದ ಸಮಯದಲ್ಲಿ ಗೋ ಹತ್ಯೆಯನ್ನು ಖಂಡಿಸಿ ಬೆಳ್ತಂಗಡಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಬೆಳ್ತಂಗಡಿ ಪ್ರಖಂಡ ವತಿಯಿಂದ ಪೊಲೀಸ್ ಠಾಣೆ ಮತ್ತು ಗೋ ಆಸ್ಪತ್ರೆಯ ಅಧಿಕಾರಿಗಳಿಗೆ ಇಂದು ಮನವಿ ಮಾಡಲಾಯಿತು. ಬಕ್ರೀದ್ ಹಬ್ಬದ ಸಮಯದಲ್ಲಿ ಗೋಹತ್ಯೆ ನಿಷೇಧದ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಉಪಧ್ಯಾಕ್ಷ ಗುರು ಬಂಟ್ವಾಳ, ಅಖಾಡ ಪ್ರಮುಖ್ ಗಣೇಶ್ ಕಳೆಂಜ, ವಿಶ್ವಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡದ

ಗೋಹತ್ಯೆ ಖಂಡಿಸಿ ವಿಹಿಂಪ, ಬಜರಂಗದಳ ವತಿಯಿಂದ ಪೊಲೀಸ್ ಠಾಣೆ, ಗೋ ಆಸ್ಪತ್ರೆ ಅಧಿಕಾರಿಗಳಿಗೆ ಮನವಿ Read More »

ಜೂ.16 : ಬೆಂಗಳೂರಿನಲ್ಲಿ “ಸಪ್ತಪದಿ-2024” ಭಾವೀ ವಧುವರರ ಮುಖಾಮುಖಿ ಭೇಟಿ ಕಾರ್ಯಕ್ರಮ

ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ವತಿಯಿಂದ ಮಹಿಳಾ ಘಟಕ ಮತ್ತು ಯುವ ಘಟಕದ ಸಹಯೋಗದೊಂದಿಗೆ “ಸಪ್ತಪದಿ-2024” ಭಾವೀ ವಧುವರರ ಮುಖಾಮುಖಿ ಭೇಟಿ ಕಾರ್ಯಕ್ರಮ ಜೂ.16 ಭಾನುವಾರ ಬೆಳಗ್ಗೆ 9.30 ಕ್ಕೆ ಬೆಂಗಳೂರು ಚೌಡೇಶ್ವರಿ ನಗರದ ‘ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ” ದಲ್ಲಿ ನಡೆಯಲಿದೆ. ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ಭಾವೀ ವಧುವರರು ಅಥವಾ ಅವರ ಪೋಷಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯೆಕ್ಷೆ ಶಶಿಪ್ರಭಾ

ಜೂ.16 : ಬೆಂಗಳೂರಿನಲ್ಲಿ “ಸಪ್ತಪದಿ-2024” ಭಾವೀ ವಧುವರರ ಮುಖಾಮುಖಿ ಭೇಟಿ ಕಾರ್ಯಕ್ರಮ Read More »

ಜಿಲ್ಲಾಧಿಕಾರಿ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್‍ ಚೌಟ | ಸಮಸ್ಯೆಗಳ ಕುರಿತು ಚರ್ಚೆ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರನ್ನು ಇಂದು ಭೇಟಿ ಮಾಡಿದರು. ಭೇಟಿ ಮಾಡಿದ ಅವರು, ಸುಳ್ಯ ಕ್ಷೇತ್ರದ ಹಲವೆಡೆ ಬಿ ಎಸ್‍ ಎನ್‍ ಎಲ್‍ ನೆಟ್ ವರ್ಕ್ ಸಮಸ್ಯೆಗಳಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜತೆಗೆ ಉಚ್ಚಿಲ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಬಳಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಿದರು.

ಜಿಲ್ಲಾಧಿಕಾರಿ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್‍ ಚೌಟ | ಸಮಸ್ಯೆಗಳ ಕುರಿತು ಚರ್ಚೆ Read More »

ಬ್ರೈನ್ ಸ್ಟ್ರೋಕ್ ತುತ್ತಾಗಿರುವ ಜನಾರ್ದನ ಅವರ ಚಿಕಿತ್ಸೆಗೆ ಬೇಕಾಗಿದೆ ನೆರವಿನ ಹಸ್ತ

ಪುತ್ತೂರು : ನಗರದ ನೆಲ್ಲಿಕಟ್ಟೆ ನಿವಾಸಿ ಜನಾರ್ದನ ಗೌಡ ಅವರು ಬೈನ್ ಸ್ಟ್ರೋಕ್ ಗೆ ತುತ್ತಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಗೆ ದಾನಿಗಳ ನೆರವಿನ ಹಸ್ತ ಚಾಚಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಜನಾರ್ದನ ಅವರು ಕಳೆದ ಕೆಲವು ದಿನಗಳಿಂದ ಬ್ರೈನ್ ಸ್ಟ್ರೋಕ್ ತುತ್ತಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಸಾಲಮಾಡಿ ಲಕ್ಷಾಂತರ ರೂಪಾಯಿ

ಬ್ರೈನ್ ಸ್ಟ್ರೋಕ್ ತುತ್ತಾಗಿರುವ ಜನಾರ್ದನ ಅವರ ಚಿಕಿತ್ಸೆಗೆ ಬೇಕಾಗಿದೆ ನೆರವಿನ ಹಸ್ತ Read More »

ವಿವೇಕಾನಂದ ಕಾಲೇಜಿನಲ್ಲಿ ವಿವರ್ಥನ – 2024 ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣಾ ಕಾರ್ಯಕ್ರಮ

ಪುತ್ತೂರು: ಯಶಸ್ಸನ್ನು ತಲುಪುವ ಛಲ ಇರುವವನು ಎಂದೂ ಅನುಕೂಲಗಳನ್ನು ಬಯಸುವುದಿಲ್ಲ, ಅನಾನುಕೂಲಗಳನ್ನು ಅವಕಾಶಗಳನ್ನಾಗಿ ಬದಲಿಸಿ ಮುನ್ನಡೆಯುವುದು ಯಶಸ್ವಿ ವ್ಯಕ್ತಿಗಳ ಲಕ್ಷಣ ಎಂದು ಉದ್ಯಮಿ, ಹುಬ್ಬಳ್ಳಿ ಅನನ್ಯ ಫೀಡ್ಸ್ ನ ಸ್ಥಾಪಕ ದಿವಾನ್ ಗೋವಿಂದ ಭಟ್ ಅಭಿಪ್ರಾಯಪಟ್ಟರು. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ವಿವರ್ಥನ-2024 ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಡುವ ಕೆಲಸದ ಬಗ್ಗೆ ಶ್ರದ್ಧೆ, ಛಲ ಮತ್ತು ವಿಧೇಯತೆ ಇದ್ದರೆ ಯಶಸ್ಸು ನಿಮ್ಮ ಸಮೀಪಕ್ಕೆ

ವಿವೇಕಾನಂದ ಕಾಲೇಜಿನಲ್ಲಿ ವಿವರ್ಥನ – 2024 ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣಾ ಕಾರ್ಯಕ್ರಮ Read More »

ಚಾರ್ಮಾಡಿ ಘಾಟಿಯಲ್ಲಿ ಆನೆ ಪ್ರತ್ಯಕ್ಷ | ಟ್ರಾಫಿಕ್ ಜಾಮ್

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 7 ಹಾಗೂ 8ನೇ ತಿರುವಿನಲ್ಲಿ ಆನೆಯೊಂದು ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ ಘಟನೆ ಇಂದು ಮುಂಜಾನೆ ನಡೆದಿದೆ. ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ನಿಂತಿದ್ದ ಒಂಟಿ ಸಲಗ ಆನೆಯನ್ನು ಕಂಡು ತಕ್ಷಣ ಬಸ್ ನಿಲ್ಲಿಸಿದ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್. ಕಳೆದ ಎರಡು ತಿಂಗಳಿನಿಂದ ಈ ಸಲಗ ಚಾರ್ಮಾಡಿಯಲ್ಲಿ ಸುತ್ತಾಡುತ್ತಿದ್ದು, ಕಾಡಾನೆಯನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಆನೆ ಪ್ರತ್ಯಕ್ಷ | ಟ್ರಾಫಿಕ್ ಜಾಮ್ Read More »

ವೃದ್ದೆಗೆ ಕಡಿದು ಸಾವಿಗೆ ಕಾರಣವಾದ ನಾಗರ ಹಾವು ಮತ್ತೆ ಪ್ರತ್ಯಕ್ಷ

ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠದ ವೃದ್ದೆಗೆ ನಾಗರ ಹಾವು ಕಡಿದು ಮೃತರಾದ 10 ದಿನದ ಬಳಿಕ ಮತ್ತೆ ಅದೇ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾದ ಘಟನೆ ಹರಿಹರದಲ್ಲಿ ನಡೆದಿದೆ. ಜೂ.3 ರಂದು ಮಿತ್ತಮಜಲಿನ ದೇವಮ್ಮ(67) ರವರು ತಮ್ಮ ಮನೆಯಲ್ಲಿ ಕೋಳಿ ಕಾಪುವಿಗೆ ಕೈ ಹಾಕಿದ್ದ ವೇಳೆ ನಾಗರ ಹಾವು ಕಡಿತಕ್ಕೆ ತುತ್ತಾಗಿ ಆಸ್ಪತ್ರೆ ತಲುಪುವಷ್ಟರಲ್ಲಿ ದಾರಿ ಮದ್ಯೆ ಕೊನೆಯುಸಿರೆಳೆದಿದ್ದರು. ಬುಧವಾರ ಅದೇ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದೆ. ಇದೇ ಹಾವು ಕಚ್ಚಿ ದೇವಮ್ಮ ಅವರು ನಿಧಾನರಾಗಿರುವುದಾಗಿ

ವೃದ್ದೆಗೆ ಕಡಿದು ಸಾವಿಗೆ ಕಾರಣವಾದ ನಾಗರ ಹಾವು ಮತ್ತೆ ಪ್ರತ್ಯಕ್ಷ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು. ವಿಚಾರ ಸಂಕಿರಣವನ್ನು ದೀಪ ಬೆಳಿಗಿಸಿ ಉದ್ಘಾಟಿಸಿದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ. ದ್ವಾರಕನಾಥ್ ಬಾಬು ಮಾತನಾಡಿ, ಅಪರಾಧಿಕ ನ್ಯಾಯ ವ್ಯವಸ್ಥೆಯ ಅಪರಾಧಿಕ ವಿಚಾರಣೆಯಲ್ಲಿ ಸಂತ್ರಸ್ತರು ಅಥವಾ ನೊಂದವರು ಪ್ರಧಾನ ಸಾಕ್ಷಿಗಳಾಗಿರುತ್ತಾರೆ. ಯಾವುದೇ ರೀತಿಯ ಪಕ್ಷಪಾತವಿಲ್ಲದೇ ನ್ಯಾಯ ಪ್ರಕ್ರಿಯೆ ನಡೆಸುವಲ್ಲಿ ಈ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ Read More »

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಕರ್ನಾಟಕ ಬ್ಯಾಂಕ್‍ ವತಿಯಿಂದ ಶಾಲಾ ಬಸ್ ಕೊಡುಗೆ

ಪುತ್ತೂರು: ಮಂಗಳೂರಿನ ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿ ವತಿಯಿಂದ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಗೆ ಭಾರತ್ ಬೆಂಜ್ ಕಂಪೆನಿಯ ಶಾಲಾ ಬಸ್ಸನ್ನು ಕೊಡುಗೆಯಾಗಿ ನೀಡಿದ್ದಾರೆ. ಬ್ಯಾಂಕ್‍ ನ ಮುಖ್ಯ ವ್ಯವಸ್ಥಾಪಕ ರಾಜ ಬಿ.ಎಸ್‍. ವಿದ್ಯಾಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಅವರಿಗೆ ಬಸ್‍ ಕೀಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ನಿರ್ಮಲ ಕುಮಾರ್,. ಸಾಂಡ್ರಾ..ಎಂ.ಲೊರೇನಾ, ನಿರಂಜನ್ ಕುಮಾರ್, ಶ್ರೀಹರಿ.ಪಿ,  ಉಪ ವ್ಯವಸ್ಥಾಪಕರಾದ ವನಂತ ಆರ್. ಹೇರಳೆ, ಸಹಾಯಕ ವ್ಯವಸ್ಥಾಪಕರಾದ ಮಾಧವ ನಾವಡ, ಶ್ರೀಶ, ವಿದ್ಯಾಸಂಸ್ಥೆಯ ಸಂಚಾಲಕ

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಕರ್ನಾಟಕ ಬ್ಯಾಂಕ್‍ ವತಿಯಿಂದ ಶಾಲಾ ಬಸ್ ಕೊಡುಗೆ Read More »

error: Content is protected !!
Scroll to Top