ಜೆ.ಇ.ಇ. ಎಡ್ವಾನ್ಸ್ಡ್ ರಾಷ್ಟ್ರೀಯ ಮಟ್ಟದ ಪರೀಕ್ಷೆ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವರ್ಷಿತ್ ಮತ್ತು ಅಮೋಘ್‌ರವರಿಗೆ ರ್‍ಯಾಂಕ್ | ಐ.ಐ.ಟಿ. ಸಂಸ್ಥೆಗಳ ಪ್ರವೇಶಕ್ಕೆ ಅರ್ಹತೆ
ಪುತ್ತೂರು: ಕೇಂದ್ರ ಸರಕಾರದ ಎನ್.ಟಿ.ಎ. ನಡೆಸುವ ರಾಷ್ಟ್ರೀಯ ಮಟ್ಟದ ಜೆ.ಇ.ಇ. ಎಡ್ವಾನ್ಸ್ಡ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವರ್ಷಿತ್ ಜೆ ಮತ್ತು ಅಮೋಘ್ ಎ.ಪಿ. ಉತ್ತಮ ರ್‍ಯಾಂಕುಗಳನ್ನು ಗಳಿಸಿ ರಾಷ್ಟ್ರಮಟ್ಟದ ಐ.ಐ.ಟಿ. ಸಂಸ್ಥೆಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ವರ್ಷಿತ್ ಜೆ 108 ಅಂಕಗಳನ್ನು ಗಳಿಸುವ ಮೂಲಕ ಸಾಮಾನ್ಯ ವರ್ಗದಲ್ಲಿ 1540 ರ್‍ಯಾಂಕ್, ಒ.ಬಿ.ಸಿ. ವಿಭಾಗದಲ್ಲಿ 3806 ರ್‍ಯಾಂಕ್ ಗಳಿಸಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಮೂಡ ಭಂಡಾರಿ ಬೆಟ್ಟುವಿನ ಜಯಂತ ಆರ್ ಮತ್ತು ಸೌಮ್ಯ ಜೆ ದಂಪತಿ […]










