ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಕಾರ್ಯಕ್ರಮ

ಪುತ್ತೂರು: ಸಿಬ್ಬಂದಿಗಳು ಸಂಸ್ಥೆಯ ಅಭಿವೃದ್ಧಿ ಹಾಗೂ ಅಭ್ಯುದಯವನ್ನೇ ಗುರಿಯಾಗಿಸಿ ಒಮ್ಮತದಿಂದ ಕರ್ತವ್ಯ ನಿಭಾಯಿಸಿದಲ್ಲಿ ಯಶಸ್ಸು ನಿಶ್ಚಿತ. ಪ್ರತಿಯೋರ್ವ ವ್ಯಕ್ತಿಯೂ ಬದಲಾವಣೆಗೆ ಧನಾತ್ಮಕವಾಗಿ ಸ್ಪಂದಿಸಿದಲ್ಲಿ ಪವಾಡಗಳನ್ನು ಸೃಷ್ಠಿಮಾಡಬಹುದು. ನಮ್ಮಲ್ಲಿ ಆತ್ಮವಿಶ್ವಾಸವಿದ್ದಲ್ಲಿ ನಾವು ಒಳ್ಳೆಯ ವಿಷಯಗಳೆಡೆಗೆ ಮಾತ್ರವೇ ಚಿಂತನೆ ನಡೆಸುವಂತಾಗುತ್ತದೆ. ನಮ್ಮನ್ನು ನಾವು ಪ್ರಶಂಸಿಸಲು ಕಲಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಮ್ಮನ್ನು ನಾವು ಕೆಳಕ್ಕೆ ತಳ್ಳಬಾರದು. ಧನಾತ್ಮಕವಾಗಿ ಚಿಂತಿಸಿ, ತಂಡವಾಗಿ ಕಾರ್ಯಪ್ರವೃತ್ತರಾದಲ್ಲಿ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಸ್ಟಾಫ್‌ ಡೆವಲಪ್‌ಮೆಂಟ್‌ […]

ಸಂತ ಫಿಲೋಮಿನಾ ಕಾಲೇಜಿನಲ್ಲಿ ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಕಾರ್ಯಕ್ರಮ Read More »

ಪುತ್ತೂರು ಕಂದಾಯ ನೋಡೆಲ್ ಅಧಿಕಾರಿಯಾಗಿ ಎಚ್. ಕೆ. ಕೃಷ್ಣಮೂರ್ತಿ ನೇಮಕ

ಪುತ್ತೂರು: ಪುತ್ತೂರಿಗೆ ಹೆಚ್ಚುವರಿ ಕಂದಾಯ ವಿಭಾಗದ ನೋಡೆಲ್ ಅಧಿಕಾರಿಯಾಗಿ ನಗರಾಭಿವೃದ್ದಿ ಇಲಾಖೆಯ ಅಪರ ಕಾರ್ಯದರ್ಶಿ ಎಚ್. ಕೆ. ಕೃಷ್ಣಮೂರ್ತಿಯವರನ್ನು ಸರಕಾರ ನೇಮಕ ಮಾಡಿದೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಕಂದಾಯ ಇಲಾಖಾ ವಿಭಾಗದ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಈ ನೇಮಕಾತಿ ನಡೆದಿದೆ. ನಗರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ ಕನ್ವರ್ಶನ್ ಸಮಸ್ಯೆ ಸೇರಿದಂತೆ ಕಂದಾಯ ವಿಭಾಗಕ್ಕೆ ಸೇರಿದ ಅನೇಕ ಎಡರುತೊಡರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಯನ್ನು ನೇಮಕ ಮಾಡುವಂತೆ ಶಾಸಕರಾದ ಅಶೋಕ್ ರೈ ಯವರು ಕಂದಾಯ ಸಚಿವರಿಗೆ

ಪುತ್ತೂರು ಕಂದಾಯ ನೋಡೆಲ್ ಅಧಿಕಾರಿಯಾಗಿ ಎಚ್. ಕೆ. ಕೃಷ್ಣಮೂರ್ತಿ ನೇಮಕ Read More »

ಪುತ್ತೂರು -ಕುಂಬ್ರ- ಕೌಡಿಚ್ಚಾರ್ ಸಿಟಿ ಬಸ್‌ಗೆ ಚಾಲನೆ | ಪುತ್ತೂರು ಕ್ಷೇತ್ರ ಪ್ರತೀ ರಂಗದಲ್ಲೂ ಅಭಿವೃದ್ದಿ ಹೊಂದುತ್ತಿದೆ: ಕಾವು ಹೇಮನಾಥ ಶೆಟ್ಟಿ

ಪುತ್ತೂರು:  ಅಶೋಕ್ ರೈಯವರು ಶಾಸಕರಾಗಿ ಆಯ್ಕೆಯಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದ್ದು ಪ್ರತೀ ರಂಗದಲ್ಲೂ ಇದನ್ನು ಕಾಣಲು ಸಾಧ್ಯವಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು. ಅವರು ಪುತ್ತೂರು- ಕೌಡಿಚ್ಚಾರ್ ಸಿಟಿ ಬಸ್ ವ್ಯವಸ್ಥೆಗೆ ಕೌಡಿಚ್ಚಾರ್‌ನಲ್ಲಿ ಚಾಲನೆ ನೀಡಿ ಮಾತನಾಡಿದರು. ಕೌಡಿಚ್ಚಾರ್‌ಗೆ ಸಿಟಿ ಬಸ್ ವ್ಯವಸ್ಥೆ ಆಗಬೇಕು, ಇಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಸಕರಿಗೆ ತಿಳಿಸಿ ಸಿಟಿ ಬಸ್ ವ್ಯವಸ್ಥೆ ಮಾಡುವ

ಪುತ್ತೂರು -ಕುಂಬ್ರ- ಕೌಡಿಚ್ಚಾರ್ ಸಿಟಿ ಬಸ್‌ಗೆ ಚಾಲನೆ | ಪುತ್ತೂರು ಕ್ಷೇತ್ರ ಪ್ರತೀ ರಂಗದಲ್ಲೂ ಅಭಿವೃದ್ದಿ ಹೊಂದುತ್ತಿದೆ: ಕಾವು ಹೇಮನಾಥ ಶೆಟ್ಟಿ Read More »

ನರೇಂದ್ರ ಪ.ಪೂ ಕಾಲೇಜಿನಲ್ಲಿ ನಿತ್ಯಜೀವನದಲ್ಲಿ ಪರಿಸರ ಬಗ್ಗೆ ವಿಶೇಷ ಉಪನ್ಯಾಸ

ಪುತ್ತೂರು: ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛ ವಾಗಿರಿಸಿಕೊಳ್ಳುವುದು ನಮ್ಮ ಹೊಣೆ. ಪರಿಸರ ಮಾಲಿನ್ಯ ಮಿತಿಮೀರಿದರೆ ಮಾನವನಿಗೆ ಈ ಪರಿಸರದಲ್ಲಿ ಜೀವಿಸುವುದೇ ಅಸಾಧ್ಯವಾಗುತ್ತದೆ. ಆದುದರಿಂದ  ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜವಾಬ್ದಾರಿ ನಮ್ಮದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ, ಪರಿಸರದ ರಾಜ್ಯ ಸಂಯೋಜಕ ಜಯರಾಮ್ ಬೊಳ್ಳಾಜೆ ಹೇಳಿದರು. ನರೇಂದ್ರ ಪ.ಪೂ. ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ ನಿತ್ಯಜೀವನದಲ್ಲಿ

ನರೇಂದ್ರ ಪ.ಪೂ ಕಾಲೇಜಿನಲ್ಲಿ ನಿತ್ಯಜೀವನದಲ್ಲಿ ಪರಿಸರ ಬಗ್ಗೆ ವಿಶೇಷ ಉಪನ್ಯಾಸ Read More »

ಮಣ್ಣು ಕುಸಿತ : ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ

ಉಬರಡ್ಕ: ಉಬರಡ್ಕ ಗ್ರಾಮ ಪಂಚಾಯತ್ ಕೋಡಿಯಡ್ಕ ಕಾಲನಿ ಸಮೀಪ ಮಣ್ಣಿನ ಕುಸಿತ ಉಂಟಾಗಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಇದೆ. ಇದರಿಂದಾಗಿ 4-5 ಮನೆಗಳಿಗೆ ಅಪಾಯದ ಸ್ಥಿತಿ ಉಂಟಾಗಿದೆ. ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದ್ದು, ಪಂಚಾಯತ್ ವತಿಯಿಂದ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಹಾಗೆಯೇ ಇನ್ನಷ್ಟು ಕಡೆ ಪ್ಲಾಸ್ಟಿಕ್ ಹೊದಿಕೆ ಹಾಕಬೇಕಾದ ಅಗತ್ಯತೆ ಇದೆ ಎಂದು ಗ್ರಾ.ಪಂ.ಸದಸ್ಯ ಹರೀಶ್ ರೈ ಉಬರಡ್ಕ ಹೇಳಿದ್ದಾರೆ.

ಮಣ್ಣು ಕುಸಿತ : ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ Read More »

ಭಾರೀ ಮಳೆಗೆ ಧರೆ ಕುಸಿತ | ಸಿಂಗಾಣಿಯಲ್ಲಿ ಅಪಾಯದಂಚಿನಲ್ಲಿರುವ ಹಲವು ಮನೆಗಳು

ಪುತ್ತೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಿಂಗಾಣಿಯಲ್ಲಿ ಅಪಾಯದಂಚಿನಲ್ಲಿರುವ ಹಲವಾರು ಮನೆಗಳು ಧರೆ ಕುಸಿತ ಭೀತಿಯಿಂದ ದಿನಕಳೆಯುವಂತಾಗಿದೆ. ಅಪಾಯದಂಚಿನಲ್ಲಿ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ಕೆಲವು ವರ್ಷಗಳ ಹಿಂದೆ ಈ ಭಾಗದಲ್ಲಿ ಕುಸಿತ ಉಂಟಾದ ಪರಿಣಾಮ ಹಲವು ಮನೆಯವರನ್ನು ಅಲ್ಲಿಂದ ಬೇರೆಡೆಗೆ ಕಳುಹಿಸಲಾಗಿತ್ತು. ಬಳಿಕ ಕುಸಿತ ನಿಲುಗಡೆಯಾಗಿತ್ತು. ಇದೀಗ ಈ ಮಳೆಗಾಲದಲ್ಲಿ ಮತ್ತೆ ಕುಸಿತದ ಭೀತಿ

ಭಾರೀ ಮಳೆಗೆ ಧರೆ ಕುಸಿತ | ಸಿಂಗಾಣಿಯಲ್ಲಿ ಅಪಾಯದಂಚಿನಲ್ಲಿರುವ ಹಲವು ಮನೆಗಳು Read More »

ಧರೆ ಕುಸಿದು ಮನೆಗೆ ಹಾನಿ : ಅರುಣ್ ಕುಮಾರ್ ಪುತ್ತಿಲ ಭೇಟಿ

ಪುತ್ತೂರು : ಬನ್ನೂರು ಜೈನರ ಗುರಿಯಲ್ಲಿ ಧರೆ ಕುಸಿದು ಮನೆ ಹಾನಿಗೊಂಡು ಘಟನಾ ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಗರಸಭಾ ಸದಸ್ಯೆ ಗೌರಿ ಬನ್ನೂರು, ಪ್ರೇಮಾಲತಾ ನಂದಿಲ ಈ ವೇಳೆ  ಜೊತೆಗಿದ್ದರು.

ಧರೆ ಕುಸಿದು ಮನೆಗೆ ಹಾನಿ : ಅರುಣ್ ಕುಮಾರ್ ಪುತ್ತಿಲ ಭೇಟಿ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ 5ನೇ ವರ್ಷಕ್ಕೆ ಪಾದಾರ್ಪಣೆ

ಆಲಂಕಾರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ 4ನೇ ವರ್ಷ ಪೂರೈಸಿ 5ನೇ ವರ್ಷಕ್ಕೆ ಗುರುವಾರ ಪಾದಾರ್ಪಣೆ ಮಾಡಿತು. ಈ ಸಂದರ್ಭದಲ್ಲಿ ಬೆಳಿಗ್ಗೆ ಶಾಖೆಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ಜರಗಿತು. ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಗೌಡ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೆ., ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಸುಪ್ರೀತಾ ರವಿಚಂದ್ರ, ಸಲಹಾ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ 5ನೇ ವರ್ಷಕ್ಕೆ ಪಾದಾರ್ಪಣೆ Read More »

ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ | ವ್ಯವಹಾರಿಕವಾಗಿ ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕವಾಗಿ ಸಮಾಜಕ್ಕೆ ಒಕ್ಕಲಿಗರ ಕೊಡುಗೆ ಬಹಳಷ್ಟಿದೆ : ತಹಶೀಲ್ದಾರ್ ಪುರಂದರ ಹೆಗ್ಡೆ | ಕೆಂಪೇಗೌಡರ ದೂರದೃಷ್ಟಿತ್ವದಿಂದ ಬೆಂಗಳೂರು ನಗರ ಸುಂದರವಾಗಿ ಬೆಳೆದಿದೆ : ಭಾಸ್ಕರ ಕೋಡಿಂಬಾಳ | ಕೆಂಪೇಗೌಡರ ಆಡಳಿತ ಸದಾ ಕಾಲಕ್ಕೆ ಮಾದರಿಯಾಗಲಿದೆ : ಸೀತಾರಾಮ ಕೇವಳ

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು. ಸಮಾಜಕ್ಕೆ ಒಕ್ಕಲಿಗರ ಕೊಡುಗೆ ಬಹಳಷ್ಟಿದೆ : ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಜ್ಯೋತಿ ಪ್ರಜ್ವಲನೆ ಮಾಡಿ ಚಾಲನೆ ನೀಡಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮ ಮೈಲಿಗಲ್ಲಾಗಿದೆ. ಎಲ್ಲರೊಳು ಒಂದಾದಾಗ ಎಲ್ಲವನ್ನು ಸಾಧಿಸಲು ಸಾಧ್ಯ. ರಾಜ್ಯದ ಇತಿಹಾಸದಲ್ಲಿ ಬೆಂಗಳೂರನ್ನು ಕೇಂದ್ರವಾಗಿ

ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ | ವ್ಯವಹಾರಿಕವಾಗಿ ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕವಾಗಿ ಸಮಾಜಕ್ಕೆ ಒಕ್ಕಲಿಗರ ಕೊಡುಗೆ ಬಹಳಷ್ಟಿದೆ : ತಹಶೀಲ್ದಾರ್ ಪುರಂದರ ಹೆಗ್ಡೆ | ಕೆಂಪೇಗೌಡರ ದೂರದೃಷ್ಟಿತ್ವದಿಂದ ಬೆಂಗಳೂರು ನಗರ ಸುಂದರವಾಗಿ ಬೆಳೆದಿದೆ : ಭಾಸ್ಕರ ಕೋಡಿಂಬಾಳ | ಕೆಂಪೇಗೌಡರ ಆಡಳಿತ ಸದಾ ಕಾಲಕ್ಕೆ ಮಾದರಿಯಾಗಲಿದೆ : ಸೀತಾರಾಮ ಕೇವಳ Read More »

ಭಾರೀ ಮಳೆ | ಚೆಲ್ಯಡ್ಕ ಸೇತುವೆ ಮುಳುಗಡೆ

ಪುತ್ತೂರು: ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಮುಳುಗು ಸೇತುವೆ ಎಂದು ಕರೆಯಲ್ಪಡುವ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿದೆ. ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಸೇತುವೆ ಪುತ್ತೂರು-ಪಾಣಾಜೆ ರಸ್ತೆಯ ದೇವಸ್ಯದಿಂದ ಚೆಲ್ಯಡ್ಕ ಮೂಲಕ ಸಂಪರ್ಕ ಕಲ್ಪಿಸುತ್ತದೆ. ಇದೀಗ ಮುಳುಗಡೆಯಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಭಾರೀ ಮಳೆ | ಚೆಲ್ಯಡ್ಕ ಸೇತುವೆ ಮುಳುಗಡೆ Read More »

error: Content is protected !!
Scroll to Top