ದೇಶ

ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ರಚನೆ

ಬೊಮ್ಮಾಯಿ ಅಧ್ಯಕ್ಷ : ಯಡಿಯೂರಪ್ಪ, ಕಟೀಲ್‌ ಸದಸ್ಯರು ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾಗಿರುವ ಚುನಾವಣಾ ಪ್ರಚಾರ ಸಮಿತಿಯನ್ನು ಬಿಜೆಪಿ ರಚಿಸಿದೆ. ಈ ಸಮಿತಿಯಲ್ಲಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೂ ಸ್ಥಾನವಿದ್ದು, ಸದಸ್ಯರಾಗಿ ಅವರ ಹೆಸರನ್ನು ಸೇರಿಸಲಾಗಿದೆ.ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವೆ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಸಚಿವ […]

ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ರಚನೆ Read More »

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಹೃದಯಾಘಾತದಿಂದ ನಿಧನ

ಸಂಸದ, ಶಾಸಕರಾಗಿ ಸೇವೆ ಸಲ್ಲಿಸಿದ್ದ ಜನನಾಯಕ ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವ ನಾರಾಯಣ ಅವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಕೂಡಲೇ ಅವರನ್ನು ಮೈಸೂರಿನ ಡಿಆರ್​ಎಂಎಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.ಶನಿವಾರ ಬೆಳಗ್ಗೆ 6.30ರ ವೇಳೆಗೆ ಧ್ರುವನಾರಾಯಣ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ, ಕೂಡಲೇ ಅವರು ಡ್ರೈವರ್‌ಗೆ ಕರೆ ಮಾಡಿದ್ದಾರೆ, ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಹೃದಯಾಘಾತದಿಂದ ನಿಧನ Read More »

ಭಾರತೀಯ ವಾಯುಪಡೆ ಯುದ್ಧ ಘಟಕದ ಮೊದಲ ಗ್ರೂಪ್ ಕ್ಯಾಪ್ಟನ್ ಆಗಿ ಶಾಲಿಜಾ ಧಾಮಿ

ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಮೊದಲ ಭಾರತೀಯ ಮಹಿಳಾ ಪೈಲಟ್ ದೆಹಲಿ: ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಆಗಿ ಪಶ್ಚಿಮ ವಲಯದಲ್ಲಿನ ಮುಂಚೂಣಿ ಯುದ್ಧ ಘಟಕದ ಕಮಾಂಡರ್‌ ಆಗಿ ನೇಮಕ ಮಾಡಲಾಗಿದೆ. ಆ ಮೂಲಕ ಐಎಎಫ್‌ನ ಯುದ್ಧ ಘಟಕವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಪಾತ್ರರಾಗಿದ್ದಾರೆ. 2003ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಐಎಎಫ್ ಸೇರ್ಪಡೆಯಾಗಿದ್ದರು. ಇವರು

ಭಾರತೀಯ ವಾಯುಪಡೆ ಯುದ್ಧ ಘಟಕದ ಮೊದಲ ಗ್ರೂಪ್ ಕ್ಯಾಪ್ಟನ್ ಆಗಿ ಶಾಲಿಜಾ ಧಾಮಿ Read More »

ಮಾಂಸಕ್ಕಾಗಿ ವಧಿಸಲು ತಂದವನನ್ನೇ ಕೊಂಬಿನಿಂದ ತಿವಿದು ಕೊಂದ ಕೋಣ

ಪೇಟೆಯಲ್ಲಿ ದಾಂಧಲೆ ಎಬ್ಬಿಸಿದ ಕೋಣನಿಂದ ಹಲವರಿಗೆ ಗಾಯ ಕಾಸರಗೋಡು : ವಧಿಸಲು ಒಯ್ಯುತ್ತಿದ್ದವನನ್ನು ಕೋಣ ಕೊಂಬಿನಿಂದ ತಿವಿದು ಕೊಂದಿರುವ ಘಟನೆಯೊಂದು ಕಾಸರಗೋಡು ಸಮೀಪದ ಮೊಗ್ರಾಲ್‌ ಪುತ್ತೂರು ಎಂಬಲ್ಲಿ ಸಂಭವಿಸಿದೆ. ಈ ಘಟನೆಯ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗಿದೆ.ಲಾರಿಯಿಂದ ಇಳಿಸುತ್ತಿರುವಾಗ ರೊಚ್ಚಿಗೆದ್ದ ಕೋಣ ಹಗ್ಗ ಕಡಿದುಕೊಂಡು ಯುವಕನನ್ನು ಒಂದಷ್ಟು ದೂರ ಎಳೆದುಕೊಂಡು ಹೋಗಿ ಕೊಂಬಿನಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಮೃತ ಯುವಕನನ್ನು ಮೂಲತಃ ಕರ್ನಾಟಕದ ಚಿತ್ರದುರ್ಗದ ಸಾದಿಕ್‌ (22) ಎಂದು ಗುರುತಿಸಲಾಗಿದೆ.

ಮಾಂಸಕ್ಕಾಗಿ ವಧಿಸಲು ತಂದವನನ್ನೇ ಕೊಂಬಿನಿಂದ ತಿವಿದು ಕೊಂದ ಕೋಣ Read More »

ಮರುಮದುವೆಯಾದ ಮುಸ್ಲಿಂ ದಂಪತಿ ವಿರುದ್ಧ ಫತ್ವಾ

ಕೇರಳದಲ್ಲೊಂದು ವಿಚಿತ್ರ ಪ್ರಕರಣ ತಿರುವನಂತಪುರಂ : ಕೇರಳದ ವಕೀಲರೊಬ್ಬರು ತನ್ನ ಪತ್ನಿಯನ್ನೇ ಮರು ವಿವಾಹವಾಗಿದ್ದಾರೆ. ಆದರೆ ಮುಸ್ಲಿಂ ಧರ್ಮ ಕ್ಕೆ ಸೇರಿದ ವಕೀಲರ ಈ ನಡೆ ಕಟ್ಟರ್‌ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ. ಅವರೀಗ ವಕೀಲನಿಗೆ ಫತ್ವಾ ಹೊರಡಿಸಿದ್ದಾರೆ.ವಿಶೇಷ ವಿವಾಹ ಕಾಯ್ದೆಯಡಿ ಸಿನೆಮಾ ನಟರೂ ಆಗಿರುವ ಸಿ. ಶುಕುರ್ ಎಂಬವರು ತನ್ನ ಪತ್ನಿಯನ್ನೇ ಮರುವಿವಾಹವಾಗಿದ್ದರು. ಈಗ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸರು ಅವರಿಗೆ ಭದ್ರತೆ ಒದಗಿಸಿದ್ದಾರೆ. ಶುಕುರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೆಲವು ಸಂಘಟನೆಗಳಿಂದ

ಮರುಮದುವೆಯಾದ ಮುಸ್ಲಿಂ ದಂಪತಿ ವಿರುದ್ಧ ಫತ್ವಾ Read More »

ತೀವ್ರ ಗತಿಯಲ್ಲಿ ಹರಡುತ್ತಿರುವ ಎಚ್‌3ಎನ್‌2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ

ಹಾಸನದ ವ್ಯಕ್ತಿ ಸಾವಿಗೀಡಾದ ಬಳಿಕ ಎಚ್ಚರಿಕೆ ಗಂಟೆ ಬೆಂಗಳೂರು : ರಾಜ್ಯದಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಎಚ್‌3ಎನ್‌2 ವೈರಸ್‌ಗೆ ಹಾಸನ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇದು ರಾಜ್ಯದಲ್ಲಿ ಎಚ್‌3ಎನ್‌2 ವೈರಸ್‌ನಿಂದ ಸಂಬವಿಸಿದ ಮೊದಲ ಸಾವು.ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಭರದಿಂದ ಸಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ತಪಾಸಣೆ ನಡೆಸಲು ಮುಂದಾಗಿದೆ. ಅನಾರೋಗ್ಯ ಪೀಡಿತ ಜನರು ಹಾಗೂ ವೃದ್ಧರನ್ನು ಕೂಡ ಪರೀಕ್ಷೆ ನಡೆಸಲಾಗಿದೆ ಎಂದು ಡಿಎಚ್‌ಓ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.ಎಚ್‌3ಎನ್‌2 ವೈರಸ್‌ ಸೋಂಕಿತರಲ್ಲಿ

ತೀವ್ರ ಗತಿಯಲ್ಲಿ ಹರಡುತ್ತಿರುವ ಎಚ್‌3ಎನ್‌2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ Read More »

ವಿಧಾನಸಭಾ ಚುನಾವಣೆ: ಮತ ಹಾಕುವಂತೆ ಸೀರೆಗಳ ಉಡುಗೊರೆ

ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಜನತೆ ಚಿಕ್ಕಮಗಳೂರು: ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಉಡುಗೊರೆಯಾಗಿ ನೀಡಿದ್ದ ಸೀರೆಗಳನ್ನು ಸುಟ್ಟು ಹಾಕಿರುವ ಘಟನೆ ಚಿಕ್ಕಮಗಳೂರಿನ ಭಕ್ತರಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮದಲ್ಲಿ ಮಾ.7 ಮಂಗಳವಾರ ನಡೆದಿದೆ. ಸೀರೆ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಈ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ತಮ್ಮ ಸಮಸ್ಯೆಗಳಿಗೆ ಕಿವಿಕೊಡದೆ ಕಣ್ಣು ಮುಚ್ಚಿ ಕುಳಿತು, ಚುನಾವಣೆ ಬಂದ ಕೂಡಲೇ ಉಡುಗೊರೆ ನೀಡಲು ಮುಂದಾದ ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸೀರೆಗಳಿಗೆ ಬೆಂಕಿ ಹಚ್ಚಿದ ಯುವಕ,

ವಿಧಾನಸಭಾ ಚುನಾವಣೆ: ಮತ ಹಾಕುವಂತೆ ಸೀರೆಗಳ ಉಡುಗೊರೆ Read More »

ಹಳೆಯ ಪಿಂಚಣಿ ಯೋಜನೆ: ಅಧ್ಯಯನ ನಡೆಸಲು ಶೀಘ್ರದಲ್ಲೇ ರಾಜಸ್ಥಾನಕ್ಕೆ ಸಮಿತಿ ರವಾನಿಸಲು ಸರ್ಕಾರ ಸಿದ್ಧತೆ!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸುವ ವಿಚಾರ ಸಂಬಂಧ ಅಧ್ಯಯನ ನಡೆಸಲು ರಾಜಸ್ಥಾನ ರಾಜ್ಯಕ್ಕೆ ಸಮಿತಿಯನ್ನು ರವಾನಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.ರಾಜ್ಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿಯೂ ಚುನಾವಣೆ ನಡೆಯಲಿದೆ. ಹೀಗಾಗಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತಿರುವ ಬಿಜೆಪಿ, ಯಾವುದೇ ರೀತಿಯಲ್ಲೂ ಎಡವದಂತೆ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ. ಒಂದು ವೇಳೆ ಒಪಿಎಸ್ ಬಗ್ಗೆ ಸರ್ಕಾರ ತದ್ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ಅದು ಕೇವಲ

ಹಳೆಯ ಪಿಂಚಣಿ ಯೋಜನೆ: ಅಧ್ಯಯನ ನಡೆಸಲು ಶೀಘ್ರದಲ್ಲೇ ರಾಜಸ್ಥಾನಕ್ಕೆ ಸಮಿತಿ ರವಾನಿಸಲು ಸರ್ಕಾರ ಸಿದ್ಧತೆ! Read More »

ಸತತ ಮೂರನೇ ಬಾರಿ ಚೀನದ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್‌ ಆಯ್ಕೆ

ಬೀಜಿಂಗ್‌ : ಹಲವು ಪ್ರತಿಕೂಲ ಪರಿಸ್ಥಿತಿಯಿರುವ ಹೊರತಾಗಿಯೂ ಕ್ಸಿ ಜಿನ್‌ಪಿಂಗ್‌ ಅವರೇ ಚೀನದ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಪುನರಾಯ್ಕೆಯಾಗಿದ್ದಾರೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ 14ನೇ ಸಭೆಯಲ್ಲಿ ಕ್ಸಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಏರಿದಾಗ ಕ್ಸಿ ಜಿನ್‌ಪಿಂಗ್ ಅವರು ವಿಶ್ವಾಸಘಾತುಕ, ಭ್ರಷ್ಟ ಅಥವಾ ನಿಷ್ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟ ಅಧಿಕಾರಿಗಳನ್ನು ತೆಗೆದುಹಾಕಲು ಬೃಹತ್ ಅಭಿಯಾನವನ್ನು ಕೈಗೊಂಡಿದ್ದರು. ಆ ಖಾಲಿ ಸ್ಥಾನಗಳಲ್ಲಿ ಮಿತ್ರರನ್ನು ತುಂಬುವ ಮೂಲಕ ಜಿನ್‌ಪಿಂಗ್ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡಿದ್ದರು.ಚೀನದಲ್ಲಿ

ಸತತ ಮೂರನೇ ಬಾರಿ ಚೀನದ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್‌ ಆಯ್ಕೆ Read More »

ಇಂಡೋನೇಷ್ಯಾದ ರಾಜಧಾನಿಯ ಸ್ಥಳಾಂತರ

ಜಕಾರ್ತ : ಇಂಡೋನೇಷ್ಯಾದ ರಾಜಧಾನಿಯನ್ನೇ ಸ್ಥಳಾಂತರ ಮಾಡಲಾಗುತ್ತಿದೆ. ಹಾಲಿ ರಾಜಧಾನಿ ಜಕಾರ್ತದಲ್ಲಿ ಜನದಟ್ಟಣೆ, ಮಾಲಿನ್ಯ ಹೆಚ್ಚಳವಾಗಿದ್ದು, ಭೂಕಂಪಗಳಿಗೆ ತುತ್ತಾಗಿ, ಕ್ಷಿಪ್ರಗತಿಯಾಗಿ ಜಾವಾ ಸಮುದ್ರಕ್ಕೆ ಮುಳುಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಲಾಗಿದೆ.ಈಗ ಸರ್ಕಾರ ಇಂಡೋನೇಷ್ಯಾದ ರಾಜಧಾನಿಯನ್ನು ಬೊರ್ನಿಯೊ ದ್ವೀಪಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹೊಸ ಮಹಾನಗರವು “ಸುಸ್ಥಿರ ಅರಣ್ಯ ನಗರ” ಎಂದು ಇಂಡೋನೇಷ್ಯಾದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಯೋಜನೆ ಪರಿಸರವಾದಿಗಳ ಮತ್ತು ಸ್ಥಳೀಯ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದೆ. ಒರಾಂಗುಟನ್‌ಗಳಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ

ಇಂಡೋನೇಷ್ಯಾದ ರಾಜಧಾನಿಯ ಸ್ಥಳಾಂತರ Read More »

error: Content is protected !!
Scroll to Top