ಕ್ಯಾಂಪಸ್‌

ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಕೇಶವ ಸಂಕಲ್ಪ ಆಡಿಟೋರಿಯಂನಲ್ಲಿ ಆಚರಿಸಲಾಯಿತು. ಒಂದು ಆರೋಗ್ಯ, ಒಂದು ಭೂಮಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲೇಜು ಆಡಳಿತ್ತ ಮಂಡಳಿ ಸಂಚಾಲಕ ಗೋವಿಂದ ಪ್ರಕಾಶ್‍ ಸಾಯ ಹಾಗೂ ಪ್ರಾಂಶುಪಾಲ ಡಾ.ಗುರುರಾಜ ಎಮ್.ಪಿ. ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ನೆದರ್ ಲ್ಯಾಂಡ್‍ ನ ಭಾರತಿೇಯ ರಾಯಭಾರಿ, ಖ್ಯಾತ ಯೋಗಗುರು ಯೋಗಾಚಾರ್ಯ ವಿಜಯ ಗಣೇಶ್‍ ಮಾತನಾಡಿ, ಯೋಗ ಅಭ್ಯಾಸ ನಮ್ಮ ಉತ್ತಮ ಮನಸ್ಸು […]

ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ

ಪುತ್ತೂರು: ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಪಡೆಯಲು ಪ್ರಾಚೀನ ಮಾರ್ಗವಾಗಿದೆ. ’ಯೋಗ’ ಎಂಬ ಪದದ ಅರ್ಥ ಒಗ್ಗೂಡಿಸುವುದು. ಮನುಷ್ಯನು ತನ್ನ ಮನಸ್ಸು, ದೇಹ ಮತ್ತು ಆತ್ಮವನ್ನು ಒಟ್ಟಿಗೆ ತರಲು ಪ್ರಯತ್ನಿಸುವ ಪ್ರಕ್ರಿಯೆಯಾಗಿದೆ. ಹೀಗಾಗಿ ನಿರ್ಣಾಯಕ ಶಾಂತಿಯನ್ನು ಪಡೆಯುತ್ತದೆ ಎಂದು ಪುತ್ತೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕಿ ಶರಾವತೀ ರವಿನಾರಾಯಣ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯಲ್ಲಿ ಅವರು ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು. ವೇದಿಕೆಯಲ್ಲಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ಎನ್‌.ಸಿ.ಸಿ. ಆರ್ಮಿ ಮತ್ತು ನೇವಿ ಘಟಕಗಳು, ಎನ್‌.ಎಸ್‌.ಎಸ್‌. ಘಟಕಗಳು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್‌.ಸಿ.ಸಿ. ಘಟಕಗಳು ಮತ್ತು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್‌.ಸಿ.ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯವಾಕ್ಯದೊಂದಿಗೆಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಸಭಾಭವನದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಆಚರಿಸಲಾಯಿತು. ಮಾಯ್‌ ದೆ ದೇವುಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅ.ವಂ. ಲಾರೆನ್ಸ್ ಮಸ್ಕರೇನ್ಹಸ್ ಉದ್ಘಾಟಿಸಿ ಮಾತನಾಡಿ,

ಸಂತ ಫಿಲೋಮಿನಾ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಕುದ್ಮಾರು ಹಿ.ಪ್ರಾ.ಶಾಲೆಯಲ್ಲಿ ವಿದಾಯ ಕೂಟ, ಸನ್ಮಾನ ಮತ್ತು ಧ್ವಜ ಕಟ್ಟೆಯ ಲೋಕಾರ್ಪಣೆ

ಕುದ್ಮಾರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುದ್ಮಾರು ಇಲ್ಲಿನ ಮುಖ್ಯ ಶಿಕ್ಷಕ ಕುಶಾಲಪ್ಪ ಬರೆಮೇಲು ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ಮತ್ತು ವಿದಾಯ ಕೂಟವನ್ನು ಜೂ.21 ಶನಿವಾರ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾಮ ಪಂಚಾಯತ್’ನ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಇವರು ವಹಿಸಿದ್ದರು. ಉದ್ಘಾಟಕರಾಗಿ ಕುಶಾಲಪ್ಪ ಬಿ. ಇವರ ಗುರುಗಳಾದ ರಾಮಚಂದ್ರ ಗೌಡ ಪೆರಿಂಜೆ ಇವರು ಆಗಮಿಸಿದ್ದರು. ಅಭಿನಂದನೆ ಸಲ್ಲಿಕೆಗಾಗಿ ಉದ್ದನೆಯ ಸಾಲು, ಹಾರ-ಶಾಲುಗಳ ರಾಶಿಗಳು ಅಭಿನಂದನಾ ಭಾಷಣಗೈದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್, ಪುತ್ತೂರು ಇದರ ಆಡಳಿತಾಧಿಕಾರಿ

ಕುದ್ಮಾರು ಹಿ.ಪ್ರಾ.ಶಾಲೆಯಲ್ಲಿ ವಿದಾಯ ಕೂಟ, ಸನ್ಮಾನ ಮತ್ತು ಧ್ವಜ ಕಟ್ಟೆಯ ಲೋಕಾರ್ಪಣೆ Read More »

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನವ್ಯ, ಸದಸ್ಯರಾದ ಸುರೇಶ್ ಗಂಡಿ, ವಿನುತ ಅರ್ಚನಾ, ಚಂದ್ರಾವತಿ ಹರೀಶ್, ರಝಾಕ್, ಸಲೀಂ, ಫಾರೂಕ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕರಾದ ಹರಿಣಾಕ್ಷಿ ಎಂ., ಶೋಭಾ, ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ, ಸವಿತಾ, ಸಂಚನಾ, ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ Read More »

ನಿವೃತ್ತ ಮುಖ್ಯ ಗುರು ಕುಶಾಲಪ್ಪ ಬರೆಮೇಲು ಅವರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ

ಪುತ್ತೂರು: ಕುದ್ಮಾರು ಸ. ಹಿ. ಪ್ರಾ. ಶಾಲಾ ಮುಖ್ಯಗುರುಗಳಾಗಿದ್ದು ವಯೋನಿವೃತ್ತಿ ಹೊಂದಿದ ಬರೆಮೇಲು ಕುಶಾಲಪ್ಪರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮತ್ತು ನಿರ್ದೇಶಕ ನಾಗೇಶ್ ಕೆಡೆಂಜಿಯವರು ಶಾಲು ಅರ್ಪಿಸಿ ಹೂ ಗುಚ್ಛ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕುಶಾಲಪ್ಪರ ಪತ್ನಿ, ಬೊಬ್ಬೇಕೇರಿ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಡಿ. ವೇದಿಕೆಯಲ್ಲಿದ್ದರು. ರಾಕೇಶ್ ರೈ ಕೆಡೆಂಜಿಯವರು ಶಾಲು ಹೊದಿಸಿ ಸನ್ಮಾನಿಸಿದರು.  ಕುದ್ಮಾರು ಶಾಲಾ ಮುಖ್ಯೋಪಾಧ್ಯಾಯಿನಿ

ನಿವೃತ್ತ ಮುಖ್ಯ ಗುರು ಕುಶಾಲಪ್ಪ ಬರೆಮೇಲು ಅವರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ Read More »

ಜೂ.21 : ಕುದ್ಮಾರು ಉನ್ನತೀಕರಿಸಿದ ಶಾಲೆಯಿಂದ ನಿವೃತ್ತಿಗೊಂಡಿರುವ ಮುಖ್ಯ ಶಿಕ್ಷಕ ಕುಶಾಲಪ್ಪ ಬಿ. ಅವರಿಗೆ ವಿದಾಯ ಸಮಾರಂಭ | ನೂತನ ಧ್ವಜ ಕಟ್ಟೆಯ ಹಸ್ತಾಂತರ

ಕಡಬ: ಕುದ್ಮಾರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಂಡಿರುವ ಕುಶಾಲಪ್ಪ ಬಿ. ಅವರಿಗೆ ಸನ್ಮಾನ ಹಾಗೂ ವಿದಾಯ ಸಮಾರಂಭ ಜೂ.21 ಶನಿವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕುಶಾಲಪ್ಪ ಬಿ. ಅವರು ಕೊಡುಗೆಯಾಗಿ ನೀಡಿರುವ ನೂತನ ಧ್ವಜ ಕಟ್ಟೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್‍ ಕುಮಾರ್ ಕೆಡೆಂಜಿ, ಎಸ್‍ ಡಿಎಂಸಿ ಅಧ್ಯಕ್ಷ ದೇವರಾಜ್‍ ನೂಜಿ ಹಾಗೂ

ಜೂ.21 : ಕುದ್ಮಾರು ಉನ್ನತೀಕರಿಸಿದ ಶಾಲೆಯಿಂದ ನಿವೃತ್ತಿಗೊಂಡಿರುವ ಮುಖ್ಯ ಶಿಕ್ಷಕ ಕುಶಾಲಪ್ಪ ಬಿ. ಅವರಿಗೆ ವಿದಾಯ ಸಮಾರಂಭ | ನೂತನ ಧ್ವಜ ಕಟ್ಟೆಯ ಹಸ್ತಾಂತರ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಬುನಾದಿ ಶಿಕ್ಷಣ’ ಪಠ್ಯ ವಿಷಯದ ತರಬೇತು ಕಾರ್ಯಾಗಾರ

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಎರಡು ದಿನಗಳ ಚಟುವಟಿಕಾಧಾರಿತ ಶಿಶು ಶಿಕ್ಷಣ ಹಾಗೂ ಬುನಾದಿ ಶಿಕ್ಷಣದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಸಂಪನ್ನಗೊಂಡಿತು. ವಿದ್ಯಾಭಾರತಿ ಕರ್ನಾಟಕದೊಂದಿಗೆ ಸಂಲಗ್ನಗೊಂಡ 44 ವಿದ್ಯಾಮಂದಿರಗಳ ಸಹ ಶಿಕ್ಷಕರಿಗೆ ಕಾರ್ಯಾಗರದ ಪ್ರಥಮ ದಿನದ ಉದ್ಘಾಟನೆ ನೆರವೇರಿಸಿದ ವಿವೇಕಾನಂದ ವಿದ್ಯಾವರ್ಧಕ  ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್‌ ಮಾತನಾಡಿ, ವ್ಯಕ್ತಿ ಜೀವನದ ಪ್ರಮುಖ ಘಟ್ಟದ ಅನುಭವ ಜನ್ಯ ಕಲಿಕೆ ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಈ ದಿಶೆಯಿಂದ ನಿರಂತರ ತರಬೇತು

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಬುನಾದಿ ಶಿಕ್ಷಣ’ ಪಠ್ಯ ವಿಷಯದ ತರಬೇತು ಕಾರ್ಯಾಗಾರ Read More »

ರಾಜ್ಯದ ಸರಕಾರಿ, ಅನುದಾನಿತ ಶಾಲೆಗಳಲ್ಲಿ ತಿಂಗಳ ಒಂದು ಶನಿವಾರ ಬ್ಯಾಗ್‍ ರಹಿತ ‘ಸಂಭ್ರಮ ಶನಿವಾರ’ ಆಚರಣೆ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್‍ ರಹಿತ ‘ಸಂಭ್ರಮ ಶನಿವಾರ’ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮಕ್ಕಳನ್ನು ಚಟುವಟಿಕೆಗಳಲ್ಲಿ ಬಹುಮುಖ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆ ಬೆಳೆಸಲು, ವಿವಿಧ ಥೀಮ್ ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ 10 ಸ್ವಯಂವಿವರಣಾತ್ಮಕ ಮಾಡ್ಯೂಲ್ ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ ನೀಡಿದೆ.2025-26 ನೇ ಸಾಲಿನಲ್ಲಿ ಪ್ರತಿ ತಿಂಗಳು 3 ನೇ ಶನಿವಾರ ಶಾಲಾ

ರಾಜ್ಯದ ಸರಕಾರಿ, ಅನುದಾನಿತ ಶಾಲೆಗಳಲ್ಲಿ ತಿಂಗಳ ಒಂದು ಶನಿವಾರ ಬ್ಯಾಗ್‍ ರಹಿತ ‘ಸಂಭ್ರಮ ಶನಿವಾರ’ ಆಚರಣೆ Read More »

ವೀರಮಂಗಲ ಪಿಎಂಶ್ರೀ ಶಾಲೆಗೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ |  ಸುಂದರ ಭಾರತ ಪುಸ್ತಕ ಟ್ರಸ್ಟ್  ನೀಡುತ್ತಿರುವ ನೋಟ್ ಬುಕ್ ವಿತರಣೆ

ಸುಳ್ಯ : ತಾ.ಪಂ ಸಭಾಭವನದಲ್ಲಿ ನಡೆದ  ಸುಂದರ ಭಾರತ ಟ್ರಸ್ಟ್ ಕೊಡಮಾಡಿದ ನೋಟ್ ಪುಸ್ತಕವನ್ನು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ವೀರಮಂಗಲ ಪಿಎಂಶ್ರೀ ಶಾಲೆಗೆ ವಿತರಿಸಿ ಶುಭ ಹಾರೈಸಿದರು. ಸುಳ್ಯ  ಕ್ಷೇತ್ರದ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರಳ್ಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸುಳ್ಯ ನಗರಸಭಾಧ್ಯಕ್ಷರಾದ ಶಶಿಕಲಾ ಸುಂದರ ಭಾರತ ಟ್ರಸ್ಟ್ ಮುಖ್ಯಸ್ಥ ಪ್ರತಾಪ್ ಪರಾಶರ ಉಪಸ್ಥಿತರಿದ್ದರು.

ವೀರಮಂಗಲ ಪಿಎಂಶ್ರೀ ಶಾಲೆಗೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ |  ಸುಂದರ ಭಾರತ ಪುಸ್ತಕ ಟ್ರಸ್ಟ್  ನೀಡುತ್ತಿರುವ ನೋಟ್ ಬುಕ್ ವಿತರಣೆ Read More »

error: Content is protected !!
Scroll to Top