ಕ್ಯಾಂಪಸ್‌

ಕುಂಜಾಡಿ ಸೇತುವೆ ಕೂಡುರಸ್ತೆ ಕಾಮಗಾರಿ : ವಾಹನ ಸಂಚಾರಕ್ಕೆ ನಿರ್ಬಂಧ

ಕಡಬ: ತಾಲೂಕಿನ ಸುಳ್ಯ – ಪೈಚಾರು – ಬೆಳ್ಳಾರೆ – ಸವಣೂರು – ಕುದ್ಮಾರು – ಅಲಂಕಾರು – ಸುರುಳಿ – ಮಾದೇರಿ – ಪಟ್ರಮೆ – ಧಮ೯ಸ್ಥಳ – ಮುಂಡಾಜೆ- ನೆಲ್ಯಾಡಿ ರಸ್ತೆಯ ಕುಂಜಾಡಿ ಎಂಬಲ್ಲಿ ಸೇತುವೆಯ ಕೂಡು ರಸ್ತೆ ನಿಮಾ೯ಣ ಕಾಮಗಾರಿ ನಡೆಯುವುದರಿಂದ ಮೇ23 ರಿಂದ 27 ರ ವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಸಾವ೯ಜನಿಕರು ಕೆಳಗೆ ತಿಳಿಸಿದ ಪರ್ಯಾಯ ರಸ್ತೆಗಳ ಬಳಕೆ ಮಾಡುವಂತೆ ಲೋಕೋಪಯೋಗಿ ಇಲಾಖೆ ವಿನಂತಿಸಿದೆ. […]

ಕುಂಜಾಡಿ ಸೇತುವೆ ಕೂಡುರಸ್ತೆ ಕಾಮಗಾರಿ : ವಾಹನ ಸಂಚಾರಕ್ಕೆ ನಿರ್ಬಂಧ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ಸಂಘ , ಟ್ರೈನಿಂಗ್‌ ಆ್ಯಂಡ್‌ ಪ್ಲೇಸ್‌ಮೆಂಟ್‌ ಸೆಲ್‌ ಹಾಗೂ ಸೀನಿಯರ್‌ ಚೇಂಬರ್‌ ಇಂಟರ್‌ನ್ಯಾಶನಲ್ ಪುತ್ತೂರು ರೀಜನ್‌ಗಳ ಸಯೋಗದಲ್ಲಿ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ “ಅನ್‌ಲಾಕಿಂಗ್‌ ದ ಪಾಥ್‌ : ನ್ಯಾವಿಗೇಟಿಂಗ್‌ ಕರಿಯರ್‌ ಇನ್‌ ಬ್ಯಾಂಕಿಂಗ್‌ ಸೆಕ್ಟರ್‌” ಎಂಬ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊರವರು ಬ್ಯಾಂಕಿಂಗ್‌ ಒಂದು ಬಹಳಷ್ಟು ಉದ್ಯೋಗಾವಕಾಶಗಳಿರುವ ಕ್ಷೇತ್ರ. ಬ್ಯಾಂಕಿಂಗ್ ಕ್ಷೇತ್ರವು ಜಾಗತಿಕ ಆರ್ಥಿಕ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ Read More »

155 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ನಗರದ ಅತೀ ಪ್ರಾಚೀನ ನೆಲ್ಲಿಕಟ್ಟೆ ಶಾಲೆಗೆ ಬೇಕಿದೆ ಮೂಲಭೂತ ಸೌಕರ್ಯ| ಪ್ರಮುಖ ಬೇಡಿಕೆಗಳಲ್ಲಿ ಒಂದಾದ ನೂತನ ಕಟ್ಟಡದ ಅವಶ್ಯಕತೆ ಹೊಂದಿರುವ ಶಾಲೆ

ಪುತ್ತೂರು:  ನಗರದಲ್ಲಿ 155 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯೊಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಎಲ್ಲಾ ವಿಧದಲ್ಲೂ ಅಭಿವೃದ್ಧಿಯಾಗಬೇಕಿದೆ. ನಗರದ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರಿನ ಪ್ರಾಚೀನ ಶಾಲೆಗಳ ಪೈಕಿ ಮೊದಲ ಶಾಲೆಯಾಗಿದೆ. ಸುಮಾರು 3.5 ಎಕ್ರೆ ಜಾಗದ ಒಂದು ಬದಿಯಲ್ಲಿ ಈ ಶಾಲೆಯಿದ್ದು, ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದೇ ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ವಿದ್ಯಾರ್ಜನೆಗೆ ಹೆಸರುವಾಸಿಯಾಗಿತ್ತು. ಅದೆಷ್ಟೋ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆ

155 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ನಗರದ ಅತೀ ಪ್ರಾಚೀನ ನೆಲ್ಲಿಕಟ್ಟೆ ಶಾಲೆಗೆ ಬೇಕಿದೆ ಮೂಲಭೂತ ಸೌಕರ್ಯ| ಪ್ರಮುಖ ಬೇಡಿಕೆಗಳಲ್ಲಿ ಒಂದಾದ ನೂತನ ಕಟ್ಟಡದ ಅವಶ್ಯಕತೆ ಹೊಂದಿರುವ ಶಾಲೆ Read More »

ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವ

ಪುತ್ತೂರು : ಶಿಕ್ಷಣ ಶಿಲ್ಪಿ ಮೊ| ಪತ್ರಾವೋರವರ ದೂರದರ್ಶಿತ್ವದಿಂದ ಪುತ್ತೂರಿನಲ್ಲಿ ಅಂದು ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಪರಿಣಮಿಸಿವೆ ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ರಂಗದಲ್ಲೂ ಫಿಲೋಮಿನಾದ ವಿದ್ಯಾರ್ಥಿಗಳು ಪ್ರಜ್ವಲಿಸಿರುತ್ತಾರೆ. ಇದೇ ಸಂಪ್ರದಾಯ ಮುಂದಿನ ದಿನಗಳಲ್ಲೂ ಮುಂದುವರಿಯಲಿ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಜಿ ಎಲ್ ಸಮೂಹ ಸಂಸ್ಥೆಗಳ ಚೇರ್ ಮ್ಯಾನ್ ಜಿ ಬಲರಾಮ ಆಚಾರ್ಯ ಹೇಳಿದರು. ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಜರುಗಿದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವದಲ್ಲಿ

ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವ Read More »

ಒಂದೇ ಪ್ರಯತ್ನದಲ್ಲಿ ಯುವಕನ ಸಾಧನೆಗೆ ಸಾಕ್ಷಿಯಾದ ಪ್ರಗತಿ ಸ್ಟಡಿ ಸೆಂಟರ್

ಪುತ್ತೂರು: ಕಾಸರಗೋಡಿನ ದೀಕ್ಷಿತ್ ಎಂ.ವಿ. ಬಿಬಿಎಯಲ್ಲಿ ಒಂದು, ಮೂರು ಹಾಗೂ ಐದನೇ ಸೆಮಿಸ್ಟರ್ನ 10 ವಿಷಯಗಳಲ್ಲಿ ಒಂದೇ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಳ್ಳುವ ಮೂಲಕ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಕಲಿತ ಸಾಧನೆಗೆ ಸಾಕ್ಷಿಯಾಗಿದ್ದಾನೆ. ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ವಿಠಲರಾವ್ ಮತ್ತು ಸುನಂದ ವಿರವು ದಂಪತಿ ಪುತ್ರ  ದೀಕ್ಷಿತ್ ಎಂ. ವಿ. 2019-22 ನೇ ಸಾಲಿನಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಬಿ.ಎ ವ್ಯಾಸಂಗವನ್ನು ಮಾಡಿದ್ದು, ಪ್ರಥಮ ಸೆಮಿಸ್ಟರ್ನಲ್ಲಿ 1 ವಿಷಯ, ಮೂರನೇ ಸೆಮಿಸ್ಟರ್ನಲ್ಲಿ 5

ಒಂದೇ ಪ್ರಯತ್ನದಲ್ಲಿ ಯುವಕನ ಸಾಧನೆಗೆ ಸಾಕ್ಷಿಯಾದ ಪ್ರಗತಿ ಸ್ಟಡಿ ಸೆಂಟರ್ Read More »

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅಧಿಕಾರಿಗಳು 24*7 ನಂತೆ ಕೆಲಸ ಮಾಡಬೇಕು | ಪ್ರಾಕೃತಿಕ ವಿಕೋಪ ಕುರಿತು ಅಧಿಕಾರಿಗಳ ಸಭೆಯಲ್ಲಿ ಜುಬಿನ್ ಮೊಹಪಾತ್ರ

ಉಪ್ಪಿನಂಗಡಿ: ಎರಡು ನದಿಗಳ ಸಂಗಮ ತಾಣವಾಗಿರುವ ಉಪ್ಪಿನಂಗಡಿಯಲ್ಲಿ ಮಳೆಗಾಲದಲ್ಲಿ ಪ್ರವಾಹದ ಭೀತಿಯೂ ಇದ್ದು, ಮುಂಬರುವ ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳ ತಂಡ ಸನ್ನದ್ಧರಾಗಬೇಕು. ಪ್ರಾಕೃತಿಕ ವಿಕೋಪಗಳು ಹೇಳಿ ಬರುವಂತದ್ದಲ್ಲ. ಅನಿರೀಕ್ಷಿತವಾಗಿ ಬಂದೊದಗುತ್ತವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು 24*7 ನಂತೆ ಕೆಲಸ ಮಾಡುವ ಮೂಲಕ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಿ ಬರಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ತಿಳಿಸಿದರು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಸಭಾಂಗಣದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪದ ಬಗ್ಗೆ ಅಧಿಕಾರಿಗಳೊಂದಿಗೆ

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅಧಿಕಾರಿಗಳು 24*7 ನಂತೆ ಕೆಲಸ ಮಾಡಬೇಕು | ಪ್ರಾಕೃತಿಕ ವಿಕೋಪ ಕುರಿತು ಅಧಿಕಾರಿಗಳ ಸಭೆಯಲ್ಲಿ ಜುಬಿನ್ ಮೊಹಪಾತ್ರ Read More »

ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ಹಾಗೂ ಪುತ್ತೂರು ರೋಟ್ರಾಕ್ಟ್ ಕ್ಲಬ್  ಜಂಟಿ ಆಶ್ರಯದಲ್ಲಿ ಕೆನರಾ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ ಮಾತನಾಡಿ, ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯ ಎಂದರು. ವಿದ್ಯಾರಶ್ಮಿ ರೋಟ್ರಾಕ್ಟ್ ಕ್ಲಬ್ ಅಧ್ಯಕ್ಷ ಶಮೀರ್ ಅಧ್ಯಕ್ಷತೆ ವಹಿಸಿದ್ದರು.

ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ Read More »

ಅಕ್ಷಯ ಕಾಲೇಜಿನಲ್ಲಿ BCA with Artificial Intelligence & Cyber security ಕುರಿತು ಎರಡು ದಿನದ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ  BCA with Artificial Intelligence & Cyber security ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇನ್ನೊವೇಶನ್ಸ್ & ಸ್ಕಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಅರ್ಟಿಫಿಷಿಯಲ್ ಇಂಟೆಲಿಜೆನ್ಸಿ ವಿದ್ಯಾರ್ಥಿಗಳಿಗೆ ’ಪೈತಾನ್ ‘ ಕುರಿತಾಗಿ ಡಾಟಾ ಅನಾಲಿಸ್ಟ್, ಸಂಶೋದಕ ಸ್ಯಾಮ್ ಸುಂದರ್ ಸಿಂಗ್ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ 60 ವಿದ್ಯಾರ್ಥಿಗಳು, ಹಾಗೂ  ಬಿ.ಸಿ.ಎ ವಿಭಾಗದ ಮುಖ್ಯಸ್ಥರು ಉಪನ್ಯಾಸಕರು ಪಾಲ್ಗೊಂಡಿದ್ದರು.

ಅಕ್ಷಯ ಕಾಲೇಜಿನಲ್ಲಿ BCA with Artificial Intelligence & Cyber security ಕುರಿತು ಎರಡು ದಿನದ ಕಾರ್ಯಾಗಾರ Read More »

ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಗಳಾಗಿರಬೇಕು. ದೇಶವನ್ನು ಮುಂದುವರಿಸುವ ಜವಾಬ್ದಾರಿ ವಿದ್ಯಾರ್ಥಿಗಳದ್ದು. ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ನೈತಿಕತೆ ಇರಬೇಕು. ಯಶಸ್ಸು ಒಂದು ದಿನದಲ್ಲಿ ಬರುವಂತಹದ್ದಲ್ಲ. ಹಂತ ಹಂತವಾಗಿ ತಾಳ್ಮೆಯಿಂದ ಮುನ್ನಡೆದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ಅತಿ ವಂ. ಆ್ಯಂಟನಿ ಮೈಕೆಲ್ ಶೆರಾ ಅಧ್ಯಕ್ಷತೆ

ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ Read More »

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ‘ವಿವೇಕ ಚೇತನ-2024’

ಪುತ್ತೂರು: ಇಂದು ಇಡೀ ವಿಶ್ವದಲ್ಲಿಯೇ  ಭಾರತ ಅದ್ಭುತ ಸ್ಥಾನಕ್ಕೆ ಏರುತಿದೆ. ಹೀಗಿರುವಾಗ ಮಾಧ್ಯಮಗಳಿಗೆ ದೇಶದಲ್ಲಿ ಕಂಡುಬರುವ ಎಲ್ಲಾ ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಇದೆ. ಪತ್ರಕರ್ತರು ಯಾರ ಪರವಾಗಿಯೂ ನಿಲ್ಲದೆ, ಸತ್ಯದ ಪರ, ರಾಷ್ಟ್ರದ ಪರ ನಿಲ್ಲಬೇಕು. ಸಮಾಜದಲ್ಲಿ ಕಂಡುಬರುವ ಒಳ್ಳೆತನವನ್ನು ಗಮನಿಸಿ ಅವುಗಳನ್ನು ಗುರುತಿಸುವ ಜವಾಬ್ದಾರಿ ಪತ್ರಕರ್ತರಿಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ‘ವಿವೇಕ ಚೇತನ-2024’ Read More »

error: Content is protected !!
Scroll to Top