ಹೆತ್ತವರ ಆಶೀರ್ವಾದದೊಂದಿಗೆ ದಿನವನ್ನು ಆರಂಭಿಸಬೇಕು | ಅಂಬಿಕಾ ಸಿಬಿಎಸ್ಇ ವಿದ್ಯಾಲಯದ ಶೈಕ್ಷಣಿಕ ಪ್ರಾರಂಭೋತ್ಸವದಲ್ಲಿ : ರಾಜಶ್ರೀ ಎಸ್. ನಟ್ಟೋಜ
ಪುತ್ತೂರು: ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳನ್ನು ಹೊದಳು ಬೀರಿ, ಆರತಿ ಬೆಳಗಿ, ತಿಲಕವಿಟ್ಟು, ಹೂ ಮುಡಿಸಿ ಬಹು ಸಂಭ್ರಮದಿಂದ ಸಾಂಪ್ರದಾಯಿಕ ರೀತಿಯಲ್ಲಿ ಶಾಲೆಗೆ ಬರ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ, ಮಕ್ಕಳು ಹೆತ್ತವರ ಆಶೀರ್ವಾದ ಪಡೆದು ದಿನವನ್ನ ಆರಂಭಿಸಬೇಕು. ಗುರಿಯ ಕಡೆ ಲಕ್ಷ್ಯವಿಟ್ಟು ಹಂತ ಹಂತವಾಗಿ ಮುನ್ನಡೆದರೆ ಸಫಲತೆ ನಮ್ಮದಾಗುವುದು ಎಂದರು. ಪ್ರಾಂಶುಪಾಲೆ ಮಾಲತಿ ಡಿ, ಉಪ […]










