ಕ್ಯಾಂಪಸ್‌

ಸಂತ ಫಿಲೋಮಿನಾ ಕಾಲೇಜಿನಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಆರ್ಮಿ ಮತ್ತು ನೇವಿ ಘಟಕಗಳು, ಎನ್‌ಎಸ್‌ಎಸ್‌ ಘಟಕಗಳು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್‌ ಸಿಸಿ ಘಟಕಗಳು ಮತ್ತು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್‌ ಸಿ ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಆಶಯದೊಂದಿಗೆ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಸಂತ ಫಿಲೋಮಿನಾ ಪದವಿ ಕಾಲೇಜಿನ ಎನ್‌ಸಿಸಿ ಆರ್ಮಿ ವಿಂಗ್ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ […]

ಸಂತ ಫಿಲೋಮಿನಾ ಕಾಲೇಜಿನಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆ Read More »

ವಿದ್ಯಾರಶ್ಮಿ ವಿದ್ಯಾಲಯದಲ್ಲಿ‌ ವಿಶ್ವಯೋಗ ದಿನಾಚರಣೆ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ದಿನಾಚರಣೆಯ ಕಾರ್ಯಕ್ರಮವನ್ನು 10ನೇ ತರಗತಿಯ ಕುಮಾರಿ ರಶ್ಮಿತಾ ಮತ್ತು ಜೀವಿತಾ ನಿರ್ವಹಿಸಿದರು. ಸುಮಾರು 300 ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊ೦ಡರು ಹಾಗೂ ಈ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ಪ್ರಾಂಶುಪಾಲರುಗಳು ಹಾಗೂ ಸಂಸ್ಥೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ವಿದ್ಯಾರಶ್ಮಿ ವಿದ್ಯಾಲಯದಲ್ಲಿ‌ ವಿಶ್ವಯೋಗ ದಿನಾಚರಣೆ Read More »

ಯೋಗ ಮನುಷ್ಯನ ದಿನನಿತ್ಯದ ಭಾಗವಾಗಲಿ | ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಭಗಿನಿ ವೆನಿಶಾ ಬಿ.ಎಸ್.

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ವೈದ್ಯ ಪದ್ಧತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದೆ. ಯೋಗದಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಸಾಧ್ಯವಿದ್ದು, ಯೋಗ ಇದ್ದರೆ ರೋಗವಿಲ್ಲ, ಯೋಗ ದಿನ ನಿತ್ಯದ ಭಾಗವಾಗಲಿ ಎಂದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್, ಕೋಸ್ಟಲ್ ಹೋಮ್ ಮಾಲಕ ಸಂದೇಶ್ ರೈ,

ಯೋಗ ಮನುಷ್ಯನ ದಿನನಿತ್ಯದ ಭಾಗವಾಗಲಿ | ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಭಗಿನಿ ವೆನಿಶಾ ಬಿ.ಎಸ್. Read More »

ರಾಜ್ಯಮಟ್ಟದ 10 ಕಿ.ಮೀ. ಕ್ರಾಸ್ ಕಂಟ್ರಿ | ವಿವೇಕಾನಂದ ಕಾಲೇಜ್ ಆಫ್‍ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿನಿಯರ ತಂಡ ಚಾಂಪಿಯನ್ ಶಿಪ್

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿನಿಯರ ತಂಡ 2024-25 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ 10 ಕಿಮೀ ಕ್ರಾಸ್-ಕಂಟ್ರಿ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಸತತ ಮೂರನೇ ಬಾರಿಗೆ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ. ಶ್ರವಣಬೆಳಗೊಳದ ಬಾಹುಬಲಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಈ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ತೃತೀಯ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾ.ಸಿ.ಎಸ್ ತೃತೀಯ ಸ್ಥಾನ, ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಜೀಕ್ಷಿತಾ.ಕೆ 4ನೇ

ರಾಜ್ಯಮಟ್ಟದ 10 ಕಿ.ಮೀ. ಕ್ರಾಸ್ ಕಂಟ್ರಿ | ವಿವೇಕಾನಂದ ಕಾಲೇಜ್ ಆಫ್‍ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿನಿಯರ ತಂಡ ಚಾಂಪಿಯನ್ ಶಿಪ್ Read More »

ನರೇಂದ್ರ ಕಾಲೇಜಿನಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆ

ಪುತ್ತೂರು: ಶಿವಾಜಿ ಇಂದು ಸ್ವಶಕ್ತಿಯಿಂದ ಹಿಂದೂ ಸಾಮ್ರಾಜ್ಯಕ್ಕೆ, ಅಭೀಷಕ್ತನಾದ ದಿನವಾಗಿದ್ದು, ಶ್ರೇಷ್ಟ ಶುದ್ಧ ತ್ರಯೋದಶಿಯನ್ನು ರಾಷ್ಟ್ರಕ್ಕೆ ಪರ್ವದಿನವಾಗಿ, ಹಿಂದೂ ಸಾಮ್ರಾಜ್ಯ ದಿನೋತ್ಸವವಾಗಿ, ರಾಷ್ಟ್ರಜಾಗರಣ ಮಹೋತ್ಸವವಾಗಿ ಆಚರಿಸಲಾಗುತ್ತದೆ ಎಂದು ವಿದ್ಯಾಭಾರತಿ ಜಿಲ್ಲಾ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ದೇಲಂಪಾಡಿ ಹೇಳಿದರು. ಅವರು ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆಯ ಕಾರ್‍ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ ಮಾತನಾಡಿ, ಶಿವಾಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಮರ್ಥರಾಗಬೇಕು ಎಂದು ಹೇಳಿದರು. ಕಾಲೇಜಿನ ಉಪನ್ಯಾಸಕರು,

ನರೇಂದ್ರ ಕಾಲೇಜಿನಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆ Read More »

ಅಂಬಿಕಾ ಪ.ಪೂ.ವಿದ್ಯಾಲಯದಲ್ಲಿ ಯೋಗ ತರಬೇತಿ ಉದ್ಘಾಟನೆ

ಪುತ್ತೂರು: ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ಯೋಗ ತರಬೇತಿಯನ್ನು ಆರಂಭಗೊಳಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಮನಸ್ಸು ಮತ್ತು ದೇಹದ ಸಂಯೋಗವೇ ಯೋಗ. ಇದರ ಭಾಗವಾದ ಸುದರ್ಶನ ಕ್ರಿಯಾ ಯೋಗವನ್ನು ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡುವಂತೆ ತರಬೇತಿ ನೀಡಲಾಗುತ್ತದೆ. ಇದರ ಅಭ್ಯಾಸದಿಂದ ಒಬ್ಬ  ವ್ಯಕ್ತಿಯು ಸನಾತನ ಧರ್ಮದ ನಿಜವಾದ ಅನುಯಾಯಿಯಾಗುತ್ತಾನೆ ಎಂದು ಹೇಳಿದ ಅವರು, ನಕರಾತ್ಮಕ ಭಾವನೆಗಳಾದ ಸಿಟ್ಟು ಗೊಂದಲಗಳು ಮನುಷ್ಯನ ಉಸಿರಾಟದ ವೇಗವನ್ನು ಹೆಚ್ಚಿಸುತ್ತವೆ.

ಅಂಬಿಕಾ ಪ.ಪೂ.ವಿದ್ಯಾಲಯದಲ್ಲಿ ಯೋಗ ತರಬೇತಿ ಉದ್ಘಾಟನೆ Read More »

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕರ ಪ್ರಮಾಣವಚನ

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣವಿದ್ದರೆ ಅದು ಅವರ ಮುಂದಿನ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಹಾಗಾಗಿ ಉತ್ತಮ ನಾಯಕತ್ವದ ಲಕ್ಷಣ ಮಕ್ಕಳಲ್ಲಿ ಮೂಡಿ ಬರಬೇಕು. ಸಂವಿಧಾನದ ಮೌಲ್ಯ ಉಳಿದುಕೊಳ್ಳಬೇಕಾದರೆ ಸರಿಯಾದ ವಿರೋಧ ಪಕ್ಷದ ಅಗತ್ಯವಿದೆ. ಅಂತಹ ಕಲ್ಪನೆ ಎಳೆಯ ವಯಸ್ಸಿನಿಂದಲೇ ಮೂಡಿಬರಬೇಕು ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಆಯೋಜಿಸಲಾದ ಶಾಲಾ ಸಂಸತ್ತಿನ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕರ ಪ್ರಮಾಣವಚನ Read More »

ವಿದ್ಯಾರಶ್ಮಿ ಶಾಲಾ ವಿಭಾಗದ ಪ್ರಾಂಶುಪಾಲೆಯಾಗಿ  ಶಶಿಕಲಾ ಆಳ್ವ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ಎಲ್.ಕೆ.ಜಿ.ಯಿಂದ ಹತ್ತನೇ ತರಗತಿವರೆಗಿನ ವಿಭಾಗಕ್ಕೆ ನೂತನ ಪ್ರಾಂಶುಪಾಲೆಯಾಗಿ ಶ್ರೀಮತಿ ಶಶಿಕಲಾ ಆಳ್ವ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಬಿ. ಎ., ಬಿ. ಎಡ್. ಪದವಿಗಳೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷಾ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಇವರು ಉತ್ತಮ ಚದುರಂಗ ಆಟಗಾರ್ತಿಯೂ ಆಗಿದ್ದಾರೆ. ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಅವರು ನೂತನ ಪ್ರಾಂಶುಪಾಲೆಯವರಿಗೆ ಅಧಿಕಾರ ವಹಿಸಿಕೊಡುವ ಸಂದರ್ಭದಲ್ಲಿ ಹಿರಿಯ ಟ್ರಸ್ಟಿ ಎನ್ . ಸುಂದರ ರೈ, ಟ್ರಸ್ಟಿ ಶ್ರೀಮತಿ ರಶ್ಮಿ ಅಶ್ವಿನ್,

ವಿದ್ಯಾರಶ್ಮಿ ಶಾಲಾ ವಿಭಾಗದ ಪ್ರಾಂಶುಪಾಲೆಯಾಗಿ  ಶಶಿಕಲಾ ಆಳ್ವ Read More »

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ವಿಧಿವಿಧಾನಗಳು ಮತ್ತು ಪ್ರಬಂಧ ರಚನೆ ಕಾರ್ಯಗಾರ

ಪುತ್ತೂರು: ಸಂಶೋಧನ ವರದಿ ತಯಾರಿಸುವುದರಲ್ಲಿ ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಸಹಜ. ಇದನ್ನು ಮಾರ್ಗದರ್ಶಕರೊಂದಿಗೆ ಸಮಾಲೋಚನೆ ಮಾಡಿ ಪರಿಹರಿಸಿಕೊಳ್ಳಬೇಕು. ತಳಮಟ್ಟದ ಅಧ್ಯಯನ, ವಿಷಯಗಳ ಆಸಕ್ತಿ ನಮ್ಮ ಅಧ್ಯಯನಗಳನ್ನು ಬಲಗೊಳಿಸುತ್ತದೆ ಎಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ನಿರ್ದೇಶಕ ಡಾ. ರಾಬಿನ್ ಮನೋಹರ್ ಶಿಂದೆ ತಿಳಿಸಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ನಡೆದ ಸಂಶೋಧನೆಯ ವಿಧಿ ವಿಧಾನಗಳು ಮತ್ತು

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ವಿಧಿವಿಧಾನಗಳು ಮತ್ತು ಪ್ರಬಂಧ ರಚನೆ ಕಾರ್ಯಗಾರ Read More »

ಅಂಬಿಕಾ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ  ‘ಉದ್ಘೋಷ-2024’

ಪುತ್ತೂರು: ಇಂದು ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವುದಕ್ಕೆ ಮತ್ತು ಕನ್ನಡದಲ್ಲೇ ಸಂದರ್ಶನ ಎದುರಿಸುವುದಕ್ಕೆ ಅವಕಾಶವಿದೆ. ನಮ್ಮ ಭಾಗದ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆಡಳಿತ ವ್ಯವಸ್ಥೆಗೆ ನಮ್ಮನ್ನು ನಾವು ಒಡಮೂಡಿಸಿಕೊಂಡು ಉತ್ಕೃಷ್ಟ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಗಳಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ  ‘ಉದ್ಘೋಷ=2024’ ೨ನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳಿಂದ ದೂರ ಸರಿಯದೆ ರಾಷ್ಟ್ರಭಕ್ತರಾಗಿ

ಅಂಬಿಕಾ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ  ‘ಉದ್ಘೋಷ-2024’ Read More »

error: Content is protected !!
Scroll to Top