ಜಗತ್ತು ಕಂಡ ಶ್ರೇಷ್ಟ ತತ್ವಶಾಸ್ತ್ರಜ್ಞ ಡಾ.ರಾಧಾಕೃಷ್ಣನ್ ರವರು-ಡಾ.ತುಕಾರಾಂ ಪೂಜಾರಿ | ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ | ಸಾಧಕ ಶಿಕ್ಷಕರಿಗೆ ಗುರು ಪುರಸ್ಕಾರ, ಗೌರವ ಸಮ್ಮಾನ
ಪುತ್ತೂರು: ಓರ್ವ ರಾಯಭಾರಿಯಾಗಿ, ಅಧ್ಯಾಪಕನಾಗಿ, ರಾಜನೀತಿ ನಿಪುಣನಾಗಿ, ಎಲ್ಲರಿಗೂ ಅಚ್ಚುಮೆಚ್ಚಿನವರಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರು ಗುರುತಿಸಿಕೊಂಡಿದ್ದರು. ವಿದ್ಯಾರ್ಥಿಗಳ ಹೃದಯವನ್ನು ತಟ್ಟುವಲ್ಲಿ ಅವರು ನಿಸ್ಸೀಮರಾಗಿದ್ದರು ಮಾತ್ರವಲ್ಲ ಜಗತ್ತು ಕಂಡ ಅತೀ ಶ್ರೇಷ್ಟ ತತ್ವಶಾಸ್ತ್ರಜ್ಞರವರಲ್ಲಿ ಡಾ.ರಾಧಾಕೃಷ್ಣನ್‌ರವರೂ ಕೂಡ ಓರ್ವರಾಗಿದ್ದರು ಎಂದು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಂ ಪೂಜಾರಿರವರು ಹೇಳಿದರು. ಸಂಪ್ಯದ ಅಕ್ಷಯ ಎಜ್ಯಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಾಧಕ ಶಿಕ್ಷಕರಿಗೆ ಗುರು ಪುರಸ್ಕಾರ […]










