ಕ್ಯಾಂಪಸ್‌

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಜಯಂತಿ ಆಚರಣೆ

ಪುತ್ತೂರು: ಬನ್ನೂರು ಕೃಷ್ಣನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.2 ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಜಯಂತಿಯನ್ನು ಆಚರಿಸಲಾಯಿತು. ಪ್ರಾರಂಭದಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಸೇರಿ ಶಾಲಾ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಕುಕ್ಕೆ ಸುಬ್ರಹ್ಮಣ್ಯ ಸಬ್ ಡಿವಿಷನ್ ನ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್  ಕೆ.ಕೆ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಗಾಂಧೀಜಿಯವರ ಸರಳತೆ ಅಹಿಂಸಾ ತತ್ವ, ತ್ಯಾಗ […]

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಜಯಂತಿ ಆಚರಣೆ Read More »

ಅಕ್ಷಯ ಕಾಲೇಜಿನಲ್ಲಿ ಅಟೋ ಡೆಸ್ಕ್‍ -3ಡಿಎಸ್‍ ಮ್ಯಾಕ್ಸ್ & 3ಡಿ ರೆಂಡರಿಂಗ್ ಕಾರ್ಯಾಗಾರದ ಪ್ರಮಾಣ ಪತ್ರ ವಿತರಣೆ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಟಿರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್” ಇಂಟಿರಿಯರ್ ಡಿಸೈನ್ ಸಂಘಟನೆ ಹಾಗೂ “ಭಾರತ್ ಅಕಾಡಮಿ ಆಫ್ ಲಿಬರಲ್ ಎಜುಕೇಷನ್ ಜಂಟಿಯಾಗಿ ಆರಂಭಿಸಿದ ಅಟೋ ಡೆಸ್ಕ್‍ -3ಡಿಎಸ್‍ ಮ್ಯಾಕ್ಸ್ & 3ಡಿ ರೆಂಡರಿಂಗ್ ಎಂಬ ವಿಷಯದಲ್ಲಿ  ನಡೆದ ಕಾರ್ಯಾಗಾರದ ಭಾಗವಾಗಿ ನಡೆದ ಸಮಾರೋಪ ಸಮಾರಂಭ ಕಾಲೇಜಿನ  ಸಭಾಂಗಣದಲ್ಲಿ ನಡೆಯಿತು.  ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ಮಾತನಾಡಿ, ಕಾರ್ಯಾಗಾರಗಳು  ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದರ ಮೂಲಕ ವಿಷಯಗಳನ್ನು 

ಅಕ್ಷಯ ಕಾಲೇಜಿನಲ್ಲಿ ಅಟೋ ಡೆಸ್ಕ್‍ -3ಡಿಎಸ್‍ ಮ್ಯಾಕ್ಸ್ & 3ಡಿ ರೆಂಡರಿಂಗ್ ಕಾರ್ಯಾಗಾರದ ಪ್ರಮಾಣ ಪತ್ರ ವಿತರಣೆ Read More »

ಚಿತ್ತದ ಚಿತ್ತಾರಕ್ಕೆ ಬಣ್ಣಧಾರೆ | ಸೃಜಶೀಲ ಕಲಿಕೆಗೆ ವೇದಿಕೆಯಾಯಿತು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಪುತ್ತೂರು: ಪಿಎಂಶ್ರೀ ಶಾಲೆ ವೀರಮಂಗಲದಲ್ಲಿ ದೇಸಿ ಸೊಗಡಿನಲ್ಲಿ ಕಲಾತ್ಮಕ ಕಾರ್ಯಾಗಾರ ಪರೀಕ್ಷೆ ಮುಗಿದಾಕ್ಷಣ ಮಕ್ಕಳೆಲ್ಲರು ಹಗ್ಗ ಬಿಟ್ಟ ಕರುವಿನಂತೆ ಎಲ್ಲೆಂದರಲ್ಲಿ ಓಡುತ್ತಾ ಚೆಲುವಿನ ನಗೆ ಬೀರುತ್ತಾ , ಕಾಲ ಕಳೆಯುತ್ತಾರೆ. ಮೊಬೈಲ್‌ ,ಟಿ ವಿ ಎಂದು ಸಮಯ ವ್ಯರ್ಥ ಮಾಡುವ ಮಕ್ಕಳೂ ಇರುತ್ತಾರೆ. ಅವರ ಸುಂದರ ಯೋಚನೆಗಳಿಗೆ ಸೃಜನಶೀಲ ವೇದಿಕೆ ಸಿಕ್ಕಾಗ ಭಾವ  ಚಿತ್ರಕ್ಕೆ, ಹಾಡಿಗೆ, ಕುಣಿತಕ್ಕೆ ತಿರುಗಿ, ಮನಸ್ಸು ಹೊಸತನವನ್ನು ಒಪ್ಪಿಕೊಳ್ಳುತ್ತದೆ. ಅದು ಹವ್ಯಾಸಕ್ಕೆ ವೇದಿಕೆಯಾಗುತ್ತದೆ. ಕೆಟ್ಟ ಯೋಚನೆಗಳಿಗೆ ಬ್ರೇಕ್‌ ಹಾಕುತ್ತದೆ. ಇಂತಹ ಸೃಜನಶೀಲ ಕಲಿಕೆಗೆ

ಚಿತ್ತದ ಚಿತ್ತಾರಕ್ಕೆ ಬಣ್ಣಧಾರೆ | ಸೃಜಶೀಲ ಕಲಿಕೆಗೆ ವೇದಿಕೆಯಾಯಿತು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ Read More »

ವಿದ್ಯಾರಶ್ಮಿಯಲ್ಲಿ ಗಾಂಧೀ ಜಯಂತಿ ಆಚರಣೆ

ಸವಣೂರು: ವಿದ್ಯಾರಶ್ಮಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೆ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವರು ಮಾತನಾಡಿ, ಇತಿಹಾಸವನ್ನು ನಾವು ನೆನಪಿಡಬೇಕಿದೆ ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವನವನ್ನೇ ತ್ಯಾಗಮಾಡಿದ ಗಾಂಧೀಜಿಯವರನ್ನು ಇಂದು ದೂಷಿಸುವ ಕೆಲಸವೂ ಕೆಲವರಿಂದ ಆಗುತ್ತಿದೆ. ಇದು ಸರಿಯಲ್ಲ, ಬದಲಾಗಿ ನಾವು ಗಾಂಧೀಜಿ ಮತ್ತು ಇತರ ನಾಯಕರು ಮಾಡಿದ ಒಳ್ಳೆಯ ಕಾರ್ಯಗಳನ್ನು ನೆನಪಿಟ್ಟು ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ

ವಿದ್ಯಾರಶ್ಮಿಯಲ್ಲಿ ಗಾಂಧೀ ಜಯಂತಿ ಆಚರಣೆ Read More »

ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

ಬೆಳ್ತಂಗಡಿ: ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್  & ಬೈಟ್ ಐಟಿ ಕಂಪನಿಯ ಪ್ರಕಾಶ್ ರಾವ್ ಅವರು ನೀಡಿದ 1.65 ಲಕ್ಷ ರೂ. ವೆಚ್ಚದ ಸ್ಮಾರ್ಟ್ ಕ್ಲಾಸ್ ನ್ನು ರಾಮಕ್ಷೇತ್ರ ದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿಯ ಸರ್ಕಾರಿ ಶಾಲೆಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಸ್ಮಾರ್ಟ್ ಕ್ಲಾಸ್ ನ ಸದುಪಯೋಗವನ್ನು ಚೆನ್ನಾಗಿ ಪಡೆದು ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ

ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ Read More »

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ : ಡಾ. ಜೀವನ್ ರಾಮ್ ಸುಳ್ಯ | ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವ

ಪುತ್ತೂರು: ತರಗತಿಯ ಒಳಗಡೆ ಆಗುವ ಪಾಠ ಮಾತ್ರ ಶಿಕ್ಷಣವಲ್ಲ. ತಮ್ಮನ್ನು ತಾವು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ಕೂಡಾ ಒಂದು ಶಿಕ್ಷಣವೇ. ನಮ್ಮ ದೇಶದ ಶ್ರೀಮಂತಿಕೆ ಆರ್ಥಿಕ ಸ್ಥಿತಿಯಲ್ಲಿಲ್ಲ. ಬದಲಾಗಿ ಸರ್ವ ಕಲೆಗಳಲ್ಲಿ ಅಡಗಿದೆ. ಕಲಾವಿದರಾಗದೆ ಇದ್ದ ಪಕ್ಷದಲ್ಲಿ  ಸೌಂದರ್ಯ ಪ್ರಜ್ಞೆಯುಳ್ಳ  ಪ್ರೇಕ್ಷಕರಾದರೆ  ಅದುವೇ  ಸಾಂಸ್ಕೃತಿಕ ಲೋಕಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದು ರಾಷ್ಟ್ರೀಯ ರಂಗಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಡಾ. ಜೀವನ್ ರಾಮ್ ಸುಳ್ಯ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ : ಡಾ. ಜೀವನ್ ರಾಮ್ ಸುಳ್ಯ | ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವ Read More »

ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ. ಘಟಕಗಳಿಂದ ಸ್ವಚ್ಛತಾ ಚಟುವಟಿಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಎನ್.ಸಿ.ಸಿ. ಘಟಕಗಳಾದ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ ಘಟಕ ಮತ್ತು 5 ಕರ್ನಾಟಕ ನೌಕಾದಳ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಚ್ಛಹಿ ಸೇವಾ ಆಂದೋಲನದ ಅಂಗವಾಗಿ ಫಾದರ್ ಪತ್ರವೋ ವೃತ್ತದ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ಎನ್.ಸಿ.ಸಿ. ಘಟಕದ ಸದಸ್ಯರು ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧಗೊಳಿಸಿ, ಗಿಡ ಗಂಟಿಗಳು, ಪ್ಲಾಸ್ಟಿಕ್, ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಕಾಲೇಜಿನ ಭೂದಳ ಎನ್.ಸಿ.ಸಿ. ಅಧಿಕಾರಿ ಕ್ಯಾ.

ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ. ಘಟಕಗಳಿಂದ ಸ್ವಚ್ಛತಾ ಚಟುವಟಿಕೆ Read More »

ಪ್ರತಿಭಾ ಕಾರಂಜಿ : ನಮ್ಮ ಶಾಲೆ ಸಾಮೆತ್ತಡ್ಕ ದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ “ನಮ್ಮ ಶಾಲೆ ಸಾಮೆತ್ತಡ್ಕ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಶಝ್ಮ ಫಾತಿಮಾ ಕಿರಿಯರ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ದೇಶ ಭಕ್ತಿ ಗೀತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 2ನೇ ತರಗತಿಯ ಪರೀಕ್ಷಿತ್ ಎಸ್‍.ಎನ್‍. ಕಿರಿಯರ ವಿಭಾಗದ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು

ಪ್ರತಿಭಾ ಕಾರಂಜಿ : ನಮ್ಮ ಶಾಲೆ ಸಾಮೆತ್ತಡ್ಕ ದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ Read More »

ಬೆಳಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೆಳಂದೂರು:- ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ನೇತೃತ್ವದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ, ರಕ್ಷಕ ಶಿಕ್ಷಕ ಸಂಘದ ಸಭೆ ಮತ್ತು 2023-24 ನೇ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಯಿತು. ವಚನ ಜಯರಾಮ್ ಅರವಗುತ್ತು ದೀಪ ಪ್ರಜ್ವಲನದ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿಗಳು, ಪೋಷಕರು ಕಾಲೇಜಿನ ರಾಯಭಾರಿಗಳಾಗಿ ಕಾಲೇಜಿನ ಬೆಳವಣಿಗೆಗಳಿಗೆ ಸಹಕರಿಸಲು

ಬೆಳಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ Read More »

ಸಂತ ಫಿಲೋಮಿನಾ ಕಾಲೇಜಿನ ಎನ್‍ ಎಸ್‍ ಎಸ್‍ ಘಟಕದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಸಂತ ಫಿಲೋ ಮಿನಾ ಕಾಲೇಜಿ(ಸ್ವಾಯತ್ತ)ನ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯ ಕ್ರಮ ಆಯೋಜಿಸಲಾಯಿತು. ‘ಸ್ವಚ್ಛತಾ ಹಿ ಸೇವಾ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲೇಜು ಬಸ್ ನಿಲ್ದಾಣದಿಂದ ದರ್ಬೆ ವೃತ್ತದವರೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ., ಪುಷ್ಪಾ ಎನ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿಎನ್ ಎಸ್ ಎಸ್ ಕಾರ್ಯದರ್ಶಿ, ಘಟಕ ನಾಯಕ, ನಾಯಕಿಯರು ಮತ್ತು ಸ್ವಯಂಸೇವಕರು ಪಾಲ್ಗೊಂಡಿದ್ದರು.

ಸಂತ ಫಿಲೋಮಿನಾ ಕಾಲೇಜಿನ ಎನ್‍ ಎಸ್‍ ಎಸ್‍ ಘಟಕದಿಂದ ಸ್ವಚ್ಛತಾ ಕಾರ್ಯ Read More »

error: Content is protected !!
Scroll to Top