ಕ್ಯಾಂಪಸ್‌

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ : ನರಸಿಂಹ ಪ್ರಭು | ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸುವ ಹಂಬಲ ಪ್ರತಿಯೊಬ್ಬನಲ್ಲೂ ಮೂಡಬೇಕು. ಆಲೋಚನೆಗಳು ನಿರ್ದಿಷ್ಟ ಪರಿಧಿಗೆ ಸೀಮಿತವಾಗದೆ ವಿವಿಧ ಆಯಾಮಗಳಲ್ಲಿ ಚಿಂತಿಸುವಂತಾಗಬೇಕು. ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರನಾಗಬೇಕು ಎಂದು ಕುಂಬ್ಳೆ ಸಮೂಹ ಸಂಸ್ಥೆಗಳ ನಿರ್ದೇಶಕ ಕುಂಬ್ಳೆ ನರಸಿಂಹ ಪ್ರಭು ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ’ಉದ್ಯಮಶೀಲತೆ- ಕಲ್ಪನೆಯಿಂದ ವಾಸ್ತವಕ್ಕೆ ಪರಿವರ್ತನೆ’ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾರಾಯಣಮೂರ್ತಿ, ಅಜಿಂ ಪ್ರೇಮ್‌ಜಿ ಇನ್ಫೋಸಿಸ್, ವಿಪ್ರೋ ಕಂಪನಿಗಳನ್ನು ಕಟ್ಟುವ […]

ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ : ನರಸಿಂಹ ಪ್ರಭು | ಉಪನ್ಯಾಸ ಕಾರ್ಯಕ್ರಮ Read More »

ಅಕ್ಷಯ ಕಾಲೇಜಿನಲ್ಲಿ “ಸೈಬರ್ ಸೆಕ್ಯುರಿಟಿ” ಕಾರ್ಯಾಗಾರ

ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ. ಸಿ.ಎ. ವಿಭಾಗ ಮತ್ತುಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ನಿಯೋಇನ್ನೋವೇಶನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಸೈಬರ್‌ ಸೆಕ್ಯುರಿಟಿ ಎಂಬ ವಿಷಯಗಳಲ್ಲಿ ಕಾರ್ಯಾಗಾರ ನಡೆಯಿತು. ಇನ್ನೋವೇಶನ್ ಸಂಸ್ಥೆಯ ವಸುಮತಿ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ, ಸೈಬರ್ ಸೆಕ್ಯುರಿಟಿ ಎನ್ನುವುದು ಡಿಜಿಟಲ್ ದಾಳಿಯಿಂದ ಸಿಸ್ಟಮ್‌ಗಳು, ನೆಟ್‌ವರ್ಕ್‌ಗಳು ಮತ್ತು ಪ್ರೋಗ್ರಾಂಗಳನ್ನು ರಕ್ಷಿಸಲು ಪರಿಣಾಮಕಾರಿಯಾಗಿದ್ದು,  ಸೈಬರ್‌ ಸುರಕ್ಷತಾ ಕ್ರಮಗಳನ್ನು ಕಾರ್ಯಗತಗೊಳಿಸುವುದಾಗಿದೆ. ಪ್ರಬಲವಾದ ಪಾಸ್‌ ವರ್ಡ್‌ ಗಳನ್ನು

ಅಕ್ಷಯ ಕಾಲೇಜಿನಲ್ಲಿ “ಸೈಬರ್ ಸೆಕ್ಯುರಿಟಿ” ಕಾರ್ಯಾಗಾರ Read More »

ವಿದ್ಯಾಭಾರತಿ ಸಂಯೋಜಿ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ವಾಲಿಬಾಲ್‍ಪಂದ್ಯಾಟ ಸಮಾರೋಪ | ತರುಣ ವಿಭಾಗದಲ್ಲಿ ಹುಡುಗ-ಹುಡುಗಿಯರ ಎರಡೂ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಚಾಂಪಿಯನ್

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್, ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್‍ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ ಪಿಯುಸಿ ತರುಣ ವರ್ಗದ ಹುಡುಗರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಕೈಂರಂಗಳ ಶಾರದಾ ಗಣಪತಿ ವಿದ್ಯಾಸಂಸ್ಥೆ ಹಾಗೂ ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಮಡಂತ್ಯಾರು ಪದವಿಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ತರುಣ ವರ್ಗದ

ವಿದ್ಯಾಭಾರತಿ ಸಂಯೋಜಿ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ವಾಲಿಬಾಲ್‍ಪಂದ್ಯಾಟ ಸಮಾರೋಪ | ತರುಣ ವಿಭಾಗದಲ್ಲಿ ಹುಡುಗ-ಹುಡುಗಿಯರ ಎರಡೂ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಚಾಂಪಿಯನ್ Read More »

ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲಾ (RMS) ಪ್ರವೇಶ ಪರೀಕ್ಷೆಯ ಪೂರ್ವ ಸಿದ್ದತಾ ತರಗತಿ ಪ್ರಾರಂಭ | ಆನ್ಲೈನ್ ಮೂಲಕ ತರಬೇತಿ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿ ರಾಷ್ಟ್ರೀಯ ಮಿಲಿಟರಿ ಶಾಲೆಯ ಪ್ರವೇಶ ಪರೀಕ್ಷೆ(RMS)ಗೆ ಪೂರ್ವಭಾವಿಯಾಗಿ ತರಬೇತಿ ಪ್ರಾರಂಭಿಸಲಿದ್ದು, ಈಗಾಗಲೆ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿಯುಕ್ತ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಷ್ಟ್ರೀಯ ಮಿಲಿಟರಿ ಶಾಲೆ (RMS) ಪರೀಕ್ಷೆಯ ತರಬೇತಿ ತರಗತಿಗಳು ವಾರದಲ್ಲಿ 5 ದಿನ ರಾತ್ರಿ ಗಂಟೆ 8.00ರಿಂದ

ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲಾ (RMS) ಪ್ರವೇಶ ಪರೀಕ್ಷೆಯ ಪೂರ್ವ ಸಿದ್ದತಾ ತರಗತಿ ಪ್ರಾರಂಭ | ಆನ್ಲೈನ್ ಮೂಲಕ ತರಬೇತಿ Read More »

ಶೈಕ್ಷಣಿಕ ಸಾಧನೆಗೆ ಕ್ರೀಡೆ ಪೂರಕವಾದದ್ದು : ಪಾರ್ಥ ವಾರಣಾಸಿ | ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಪುತ್ತೂರು: ಕ್ರೀಡೆ ಕೇವಲ ಸ್ಪರ್ಧೆಗಷ್ಟೇ ಸೀಮಿತವಲ್ಲ. ದೈಹಿಕ, ಮಾನಸಿಕ ಆರೋಗ್ಯ, ಮೆದುಳಿನ ಚುರುಕುತನಕ್ಕೆ  ಅತ್ಯಂತ ಉಪಕಾರಿ. ಅದರಲ್ಲೂ ಶೈಕ್ಷಣಿಕ ಸಾಧನೆಗೆ ಅತಿ ಅವಶ್ಯಕ. ಆದ್ದರಿಂದ ದಿನಕ್ಕೆ 30  ರಿಂದ 90 ನಿಮಿಷಗಳ ವರೆಗೆ ಆಟೋಟ, ನೃತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಈಜು ತರಬೇತುದಾರ ಪಾರ್ಥ ವಾರಣಾಸಿ ಹೇಳಿದರು. ಅವರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶೈಕ್ಷಣಿಕ ಸಾಧನೆಗೆ ಕ್ರೀಡೆ ಪೂರಕವಾದದ್ದು : ಪಾರ್ಥ ವಾರಣಾಸಿ | ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ Read More »

ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕೆ.ಎಂ.ಎಫ್. ಭೇಟಿ

ಪುತ್ತೂರು: ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ಮಂಗಳೂರಿನ ಕೆ.ಎಂ.ಎಫ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆ.ಎಂ.ಎಫ್ ಉದ್ಯೋಗಿ ಭಾವನಾ ಅವರು ಹಾಲು ಸಂಗ್ರಹಣೆ, ಪ್ಯಾಕೇಜಿಂಗ್, ವಿತರಣೆಯ  ಬಗೆಗೆ ಮಾಹಿತಿ ನೀಡಿದರಲ್ಲದೆ ಕೆ.ಎಂ.ಎಫ್ ವತಿಯಿಂದ ತಯಾರಿಸಲಾಗುವ ಹಾಲಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯ ಬಗೆಗೆ ತಿಳಿಸಿಕೊಟ್ಟರು. ಕೆ.ಎಂ.ಎಫ್ ಉದ್ಯೋಗಿ ಆದರ್ಶ ಸಹಕರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ

ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕೆ.ಎಂ.ಎಫ್. ಭೇಟಿ Read More »

ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಸುವರ್ಣಾವಕಾಶ | ಅ.20 ರಂದು ವಿದ್ಯಾಮಾತಾ ಅಕಾಡೆಮಿ ಆಯೋಜಿಸಿದೆ VAO ನೇಮಕಾತಿ ಪರೀಕ್ಷೆಯ ತರಬೇತಿ ಕಾರ್ಯಾಗಾರ

ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಗ್ರಾಮ ಆಡಳಿತಾಧಿಕಾರಿ ಹುದ್ದೆಯ ನೇಮಕಾತಿ ಪರೀಕ್ಷೆಯನ್ನು ಎದುರಿಸಲಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅ.20 ರಂದು ಬೆಳಿಗ್ಗೆ ಸಮಯ 9.30 ರಿಂದ ಸಂಜೆ 4.00 ರ ವರೆಗೆ  VAO ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ಸಿದ್ದತಾ ತರಬೇತಿಯನ್ನು ಆಯೋಜಿಸಿದೆ. ವಿದ್ಯಾಮಾತಾ ಅಕಾಡೆಮಿಯ ಈ ತರಬೇತಿ ಕಾರ್ಯಗಾರಕ್ಕೆ ಹಾಜರಾಗಬಯಸುವ ಅಭ್ಯರ್ಥಿಗಳು ಕೂಡಲೇ ಈ ಕೆಳಗಡೆ ನೀಡಲಾಗಿರುವ ವಿಳಾಸ/ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಕಡ್ಡಾಯ ಕನ್ನಡ

ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಸುವರ್ಣಾವಕಾಶ | ಅ.20 ರಂದು ವಿದ್ಯಾಮಾತಾ ಅಕಾಡೆಮಿ ಆಯೋಜಿಸಿದೆ VAO ನೇಮಕಾತಿ ಪರೀಕ್ಷೆಯ ತರಬೇತಿ ಕಾರ್ಯಾಗಾರ Read More »

ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳ | ನರಿಮೊಗರು ಸಾಂದೀಪನಿ ಸಂಸ್ಥೆಯ ವಿದ್ಯಾರ್ಥಿಗಳಾದ ವಾಹಿನ್ ರೈ, ಅಜಿತೇಶ್‍ ಜಿ.ಎನ್. ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ಅಖಿಲ ಭಾರತೀಯ ವಿದ್ಯಾಭಾರತಿ ಕರ್ನಾಟಕ ಹಾಗೂ ಸಾಂದೀಪನಿ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸಾಂದೀಪನಿ ವಿದ್ಯಾಲಯದ ವಿದ್ಯಾರ್ಥಿ 9ನೇ ತರಗತಿಯ ವಾಹಿನ್ ರೈ ಗಣಿತ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರು ರಾಕೇಶ್ ರೈ ಕಡೆಂಜಿ ಮತ್ತು ದೀಪಿ ಆರ್ ರೈ ಪುತ್ರ. 9ನೇ ತರಗತಿಯ ಅಜಿತೇಶ್ ಜಿ. ಎನ್. ಕೈ ಮಾಡೆಲಿಂಗ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರು ಜತ್ತಪ್ಪ

ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳ | ನರಿಮೊಗರು ಸಾಂದೀಪನಿ ಸಂಸ್ಥೆಯ ವಿದ್ಯಾರ್ಥಿಗಳಾದ ವಾಹಿನ್ ರೈ, ಅಜಿತೇಶ್‍ ಜಿ.ಎನ್. ರಾಜ್ಯಮಟ್ಟಕ್ಕೆ ಆಯ್ಕೆ Read More »

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು ಬೇಡಿಕೆ ಇರುವಂಥದ್ದು. ಪಾಶ್ಚಿಮಾತ್ಯ ಸಂಪ್ರದಾಯಕ್ಕೆ ಹೋಲಿಸಿದರೆ ಭಾರತೀಯ ಮನಃಶಾಸ್ತ್ರದಲ್ಲಿ ಬಹಳ ವ್ಯತ್ಯಾಸವಿದೆ. ಮನುಷ್ಯ ಯೋಗ ಮತ್ತು ಧ್ಯಾನವನ್ನು ಅಭ್ಯಾಸಿಸುವ ಮೂಲಕ ದೈವತ್ವವನ್ನು ಸಾಧಿಸುತ್ತಾನೆ. ಮನಸ್ಸನ್ನು ಲಗಾಮಿಲ್ಲದ ಕುದುರೆ ಎಂದು ಕೃಷ್ಣ ಭಗವದ್ ಗೀತೆಯಲ್ಲಿ ಹೇಳಿದ್ದಾನೆ. ಮನಸ್ಸನ್ನು ನಿಯಂತ್ರಣಗೊಳಿಸಲು ಯೋಗ ಹಾಗೂ ಧ್ಯಾನಅತ್ಯಗತ್ಯ. ಮನುಷ್ಯನ ಮೆದುಳಿನ ಸ್ಥಿತಿಗತಿಯು ಆತ ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಉಪನ್ಯಾಸಕ ಡಾ.ಸುಧೀರ್ ಕೆ.ವಿ ಹೇಳಿದರು. ಇವರು ವಿವೇಕಾನಂದ

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನೆ Read More »

ಅ.16 ರಿಂದ 19 : ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರಮಟ್ಟದ ವಾಲಿಬಾಲ್‍ ಪಂದ್ಯಾಟ | 6 ಕ್ರೀಡಾಂಗಣದಲ್ಲಿ ನಡೆಯಲಿದೆ ಪಂದ್ಯಾಟ, 2 ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಕಾರದೊಂದಿಗೆ ವಿದ್ಯಾಭಾರತಿ ಶಿಕ್ಷಣ ಸಂಸ್ಥಾನಂಗೆ ಸಂಯೋಜನೆಗೊಂಡಿರುವ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ ಅ.16 ರಿಂದ 19 ರ ವರೆಗೆ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್‍ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೂರು ವಿಭಾಗಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, 6 ರಿಂದ 8 ನೇ ತರಗತಿ ಬಾಲವರ್ಗ, 9

ಅ.16 ರಿಂದ 19 : ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರಮಟ್ಟದ ವಾಲಿಬಾಲ್‍ ಪಂದ್ಯಾಟ | 6 ಕ್ರೀಡಾಂಗಣದಲ್ಲಿ ನಡೆಯಲಿದೆ ಪಂದ್ಯಾಟ, 2 ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ Read More »

error: Content is protected !!
Scroll to Top