ಡಿ.14, 19, 20 : ವಿದ್ಯಾರಶ್ಮಿ ವಿದ್ಯಾಲಯದಲ್ಲಿ “ಕ್ರೀಡಾ ರಶ್ಮಿ”, “ಸಮ್ಮಾನ ರಶ್ಮಿ” ಹಾಗೂ “ಸಂಭ್ರಮ ರಶ್ಮಿ”
ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾ ಸಂಭ್ರಮ;, ಬಹುಮಾನ ವಿತರಣೆ ‘ಸಮ್ಮಾನ ರಶ್ಮಿ’ ಹಾಗೂ ವಾರ್ಷಿಕೋತ್ಸವ ಸಮಾರಂಭ ‘ಸಂಭ್ರಮ ರಶ್ಮಿ’ ಡಿ.14, 19 ಹಾಗೂ 20 ರಂದು ನಡೆಯಲಿದೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸ್ತುತ ಸಂಸ್ಥೆಯಲ್ಲಿ ಎಲ್ ಕೆಜಿ, ಪಿಯುಸಿ, ಬಿಸಿಎ (ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ) ವ್ಯಾಸಂಗಗಳು ನಡೆಯುತ್ತಿದ್ದು, ಶಿಕ್ಷಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನವನ್ನು ಸಂಸ್ಥೆ ನಿರಂತರ ಪ್ರಯತ್ನ […]










