ಲೇಖನ

ಒಳ್ಳೆಯ ತಾಯಿ ಒಳ್ಳೆಯ ಅತ್ತೆ ಕೂಡ ಆಗಬಹುದು

ಒಳ್ಳೆಯ ಮಗಳು ಒಳ್ಳೆಯ ಸೊಸೆ ಕೂಡ ಆಗಬಹುದು ಅಲ್ವಾ? ಮಾನವೀಯ ಸಂಬಂಧಗಳಲ್ಲಿ ನನಗೆ ಅತಿ ಹೆಚ್ಚು ಸಂಕೀರ್ಣ ಅನ್ನಿಸುವುದು ಅತ್ತೆ ಮತ್ತು ಸೊಸೆಯರ ಸಂಬಂಧ. ಮೊನ್ನೆ ಮೊನ್ನೆಯವರೆಗೂ ಒಳ್ಳೆಯ ತಾಯಿ ಆಗಿದ್ದಾಕೆ ಮಗ ಮದುವೆಯಾಗಿ ಸೊಸೆಯನ್ನು ಮನೆ ತುಂಬಿಸಿಕೊಂಡ ನಂತರ ಒಳ್ಳೆಯ ಅತ್ತೆ ಆಗಬಹುದು ಅಲ್ವಾ? ಯಾವುದೋ ಮನೆಯಲ್ಲಿ ಒಳ್ಳೆಯ ಮಗಳು ಆಗಿದ್ದ ಹುಡುಗಿಯು ಗಂಡನ ಮನೆಗೆ ಬಂದಾಗ ಒಳ್ಳೆಯ ಸೊಸೆ ಕೂಡ ಆಗಲು ಏನು ತೊಂದರೆ? ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧಗಳು ತುಂಬಾ ಸುಧಾರಣೆ ಆಗಿವೆ. […]

ಒಳ್ಳೆಯ ತಾಯಿ ಒಳ್ಳೆಯ ಅತ್ತೆ ಕೂಡ ಆಗಬಹುದು Read More »

ಎಂ ಅಂದರೆ ಮ್ಯೂಸಿಕ್, ಮೆಲೋಡಿ ಮತ್ತು ಮಂಗೇಷ್ಕರ್…

ಈ ಕುಟುಂಬ ಹಾಡಿದ್ದು ಒಂದು ಲಕ್ಷಕ್ಕೂ ಅಧಿಕ ಅಮರ ಹಾಡುಗಳನ್ನು ಗೋವಾದಲ್ಲಿ ಇರುವ ಪ್ರಸಿದ್ಧವಾದ ಮಂಗೇಶಿ ದೇವಸ್ಥಾನಕ್ಕೆ ಕುಳಾವಿಗಳಾದ ಒಂದು ಶ್ರದ್ಧಾವಂತ ಕುಟುಂಬ ಮುಂದೆ ಮಂಗೇಷ್ಕರ್ ಎಂಬ ಉಪನಾಮವನ್ನು ಪಡೆಯಿತು. ಈ ಕುಟುಂಬ ಭಾರತೀಯ ಸಂಗೀತಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಭಾರಿ ದೊಡ್ಡ ಪುಸ್ತಕವನ್ನೇ ಬರೆಯಬೇಕು ಎಂದು ಆಸೆ ಇದೆ. ಅದನ್ನು ಸಂಕ್ಷಿಪ್ತ ಮಾಡಿ ಇಲ್ಲಿ ದಾಖಲಿಸುತ್ತಿದ್ದೇನೆ. ಅಪ್ಪ ದೀನಾನಾಥ್ ಮಂಗೇಷ್ಕರ್ ಸಂಗೀತ ಗುರು ಆಗಿದ್ದರು. ಮರಾಠಿ ನಾಟಕದ ಮಂಡಳಿಯಲ್ಲಿ ಹಾರ್ಮೋನಿಯಂ ಮೇಷ್ಟ್ರು ಆಗಿದ್ದರು. ಹಲವು ಕಡೆಗಳಲ್ಲಿ

ಎಂ ಅಂದರೆ ಮ್ಯೂಸಿಕ್, ಮೆಲೋಡಿ ಮತ್ತು ಮಂಗೇಷ್ಕರ್… Read More »

ಬೊಮನ್ ಇರಾನಿ ಬದುಕು ಆತ ನಟಿಸಿದ ಸಿನಿಮಾಗಳಿಗಿಂತ ಹೆಚ್ಚು ರೋಚಕ

ನಡುಹರೆಯ ದಾಟಿ ಬಾಲಿವುಡ್‌ ಪ್ರವೇಶಿಸಿದ ಈತ ಈಗ ಬಹುಬೇಡಿಕೆಯ ನಟ ಬೊಮನ್ ಇರಾನಿ ಯಾರಿಗೆ ಗೊತ್ತಿಲ್ಲ ಹೇಳಿ? 3 ಈಡಿಯಟ್ಸ್ ಸಿನೆಮಾದಲ್ಲಿ ಅವರು ಮಾಡಿದ ಎಡಬಿಡಂಗಿ ಪ್ರೊಫೆಸರ್‌ ವೈರಸ್ (ವೀರೂ ಸಹಸ್ರಬುದ್ಧೆ) ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಂತಹ ಸವಾಲಿನ ಪಾತ್ರಗಳನ್ನು ಆಪೋಶನ ಮಾಡಿಕೊಂಡ ಹಾಗೆ ಅಭಿನಯಿಸುವ ಈ ಮಹಾನಟನ ಆರಂಭದ ಬದುಕು ಎಷ್ಟೊಂದು ಹೋರಾಟದಿಂದ ಕೂಡಿತ್ತು ಗೊತ್ತಾ? ಓದುತ್ತಾ ಹೋಗಿ… ಮುಂಬಯಿಯ ಒಂದು ಪಾರ್ಸಿ ಕುಟುಂಬದಲ್ಲಿ (1959) ಹುಟ್ಟಿದ್ದ ಇರಾನಿ ಹುಟ್ಟಿನಲ್ಲಿಯೇ ದುರದೃಷ್ಟವನ್ನು ಹೊದ್ದುಕೊಂಡು ಬಂದಿದ್ದರು

ಬೊಮನ್ ಇರಾನಿ ಬದುಕು ಆತ ನಟಿಸಿದ ಸಿನಿಮಾಗಳಿಗಿಂತ ಹೆಚ್ಚು ರೋಚಕ Read More »

ಅಬ್ಬಾ ಶಹಬ್ಬಾಸ್… ಅವನಿ ಲೇಖರ!

ಮಗಳಿದ್ದರೆ ಅವಳ ಹಾಗೆಯೇ ಇರಬೇಕು ಎಂದು ಇಂದು ನೂರಾರು ಅಪ್ಪಂದಿರು ಕನಸು ಕಾಣುತ್ತಿದ್ದಾರೆ ತನ್ನ ದೈಹಿಕ ಅಸಾಮರ್ಥ್ಯದ ನಡುವೆ ಕೂಡ ಆಕೆ ಸತತ ಎರಡು ಪಾರಾ ಒಲಿಂಪಿಕ್ಸನಲ್ಲಿ ಅವಳಿ ಚಿನ್ನ ಗೆದ್ದಿದ್ದಾರೆ. 2021ರವರೆಗೂ ಈ ಸ್ಮಾರ್ಟ್ ಹುಡುಗಿಯು ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ಇಂದು ಪ್ರತಿಯೊಬ್ಬ ತಂದೆ ಕೂಡ ಮಗಳಿದ್ದರೆ ಅವಳ ಹಾಗೆ ಇರಬೇಕು ಎಂದು ಆಸೆ ಪಡಲು ಆರಂಭ ಮಾಡಿದ್ದಾರೆ. ಅವಳ ಮುಗ್ಧ ನಗು ಒಂದೇ ಸಾಕು ನಮ್ಮ ಮನವನ್ನು ಸೂರೆ ಮಾಡಲು. ಶಾಭಾಷ್‌ ಅವನಿ…ನಿಮ್ಮ

ಅಬ್ಬಾ ಶಹಬ್ಬಾಸ್… ಅವನಿ ಲೇಖರ! Read More »

ಭಕ್ತಿ, ನಂಬಿಕೆಯ ಪರಾಕಾಷ್ಠೆ ಲಾಲಭಾಗ್ ಚಾ ರಾಜಾ

ಇದು ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಗಣೇಶ ಮಂಡಳ, ಸಾಟಿಯಿಲ್ಲದ ವೈಭವ ದೇಶವಿಡೀ ಗಣೇಶೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಇಡೀ ದೇಶದಲ್ಲಿ ಗಣೇಶೋತ್ಸವದ ಸಂಭ್ರಮ, ಸಡಗರ ಒಂದು ತೂಕವಾದರೆ ಮುಂಬಯಿಯ ಗಣೇಶೋತ್ಸವದ್ದು ಇನ್ನೊಂದು ತೂಕ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಪರಂಪರೆ ಪ್ರಾರಂಭವಾದ್ದು ಕೂಡ ಮಹಾರಾಷ್ಟ್ರದಲ್ಲೇ. ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಹೆಚ್ಚಿಸಲು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಲೋಕಮಾನ್ಯ ತಿಲಕರು ಆರಿಸಿಕೊಂಡ ದಾರಿ ಎಂದರೆ ಸಾರ್ವಜನಿಕ ಗಣೇಶ ಉತ್ಸವಗಳು. 1893ರಲ್ಲಿ ಪುಣೆ ಮಹಾನಗರದಲ್ಲಿ ಆರಂಭವಾದ ಈ ಸಾರ್ವಜನಿಕ ಮಹೋತ್ಸವಗಳು ಮುಂದೆ ಇಡೀ

ಭಕ್ತಿ, ನಂಬಿಕೆಯ ಪರಾಕಾಷ್ಠೆ ಲಾಲಭಾಗ್ ಚಾ ರಾಜಾ Read More »

ಸಾಧನೆಗೆ ಯಾವ ವೈಕಲ್ಯವೂ ಅಡ್ಡಿ ಆಗಲಿಲ್ಲ – ಮರಿಯಪ್ಪನ್ ತಂಗವೇಲು

ಸತತ 3 ಪಾರಾ ಒಲಿಂಪಿಕ್ಸ್ ಕೂಟಗಳಲ್ಲಿ ಪದಕ ಗೆದ್ದ ಏಕೈಕ ಕ್ರೀಡಾಪಟು 2024ರ ಪ್ಯಾರಿಸ್ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆದಿದೆ. ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಭಾರತದ ಪದಕ ಟ್ಯಾಲಿಯು 27ಕ್ಕೆ ತಲುಪಿದೆ. ಅದರಲ್ಲಿ 6 ಚಿನ್ನ, 9 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಸೇರಿವೆ. 12 ಕ್ರೀಡಾ ವಿಭಾಗಗಳಲ್ಲಿ ಕೇವಲ 84 ಪಾರಾ ಅಥ್ಲಿಟ್‌ಗಳು ಭಾಗವಹಿಸಿ ಇಷ್ಟೊಂದು ಪದಕಗಳನ್ನು ಗೆದ್ದದ್ದು ನಿಜಕ್ಕೂ ಅದ್ಭುತ

ಸಾಧನೆಗೆ ಯಾವ ವೈಕಲ್ಯವೂ ಅಡ್ಡಿ ಆಗಲಿಲ್ಲ – ಮರಿಯಪ್ಪನ್ ತಂಗವೇಲು Read More »

ಭಾವೈಕ್ಯ, ಭಕ್ತಿಭಾವಕ್ಕೆ ಜೀವಕಳೆ ತುಂಬುವ ಗಣೇಶೋತ್ಸವ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ಹಬ್ಬಗಳು ನಮ್ಮ ದೇಶದ ಸಂಸ್ಕೃತಿಯ ಅಸ್ಮಿತೆ. ಹಬ್ಬ ಎಂದರೆ ಪರ್ವ. ಪರ್ವ ಎಂದರೆ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ ವಹಿಸುವಂಥದ್ದು ಎಂದರ್ಥ. ತುಳುವಿನಲ್ಲಿ ಪರ್ಬ ಎನ್ನುತ್ತೇವೆ. ನಾವು ಆಚರಿಸುವ ಹಬ್ಬಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಲ್ಲ, ಅಲ್ಲಿ ಜೀವನ ಮೌಲ್ಯವಿರುತ್ತದೆ. ಅವು ವೈವಿಧ್ಯತೆ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿಯೂ ಇರುತ್ತವೆ. ನಮ್ಮ ಕಲೆ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಜೀವನ,

ಭಾವೈಕ್ಯ, ಭಕ್ತಿಭಾವಕ್ಕೆ ಜೀವಕಳೆ ತುಂಬುವ ಗಣೇಶೋತ್ಸವ Read More »

ಅಜೀಂ ಪ್ರೇಂಜಿ ಸಂದರ್ಶನದಲ್ಲಿ ರಿಜೆಕ್ಟ್ ಆದ ಇಂಜಿನಿಯರ್ ಉದ್ಯಮ ಸಾಮ್ರಾಜ್ಯ ಕಟ್ಟಿದರು

ನಾರಾಯಣ ಮೂರ್ತಿ ಇನ್ಫೋಸಿಸ್ ಕಂಪನಿ ಕಟ್ಟಿದ ರೋಚಕ ಕಥೆ ಇನ್ಫೋಸಿಸ್ ನಾರಾಯಣ ಮೂರ್ತಿ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ‘ಐಟಿ ಸಾಮ್ರಾಜ್ಯದ ಪಿತಾಮಹ’ ಎಂದು ಕರೆಸಿಕೊಂಡ ಅವರು ತನ್ನ ಕನಸಿನ ಐಟಿ ಕಂಪನಿಯಾದ ಇನ್ಫೋಸಿಸ್‌ನ್ನು ಇಷ್ಟೊಂದು ಎತ್ತರಕ್ಕೆ ತೆಗೆದುಕೊಂಡು ಹೋದದ್ದು ಹೇಗೆ? ಇಲ್ಲಿದೆ ರೋಚಕ ಕಥೆ. ಮಧ್ಯಮವರ್ಗದ ಕುಟುಂಬದ ಯುವಕ ಶಿಡ್ಲಘಟ್ಟದ ಮಧ್ಯಮ ವರ್ಗದ ಒಂದು ಸಂಪ್ರದಾಯಸ್ಥ ಕುಟುಂಬದಿಂದ ಬಂದ ನಾರಾಯಣಮೂರ್ತಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದವರು. ಮೈಸೂರಿನ NIE ಇಂಜಿನಿಯರಿಂಗ್ ಕಾಲೇಜಿನಲ್ಲಿ BE

ಅಜೀಂ ಪ್ರೇಂಜಿ ಸಂದರ್ಶನದಲ್ಲಿ ರಿಜೆಕ್ಟ್ ಆದ ಇಂಜಿನಿಯರ್ ಉದ್ಯಮ ಸಾಮ್ರಾಜ್ಯ ಕಟ್ಟಿದರು Read More »

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ ಭಾರತೀಯರಾದ ನಾವು ಗುರುಗಳನ್ನು ದೇವರೆಂದು ಪೂಜಿಸುತ್ತೇವೆ. ಅದಕ್ಕೆ ಚಿಕ್ಕದಿನಿಂದಲೇ ಈ ಶ್ಲೋಕಗಳನ್ನು ಹೇಳುತ್ತಾ ಬೆಳೆದಿದ್ದೇವೆ. ಭಾರತ ದೇಶದ ಆದರ್ಶ ಶಿಕ್ಷಕರಾದ ಡಾ ಸರ್ವಪಲ್ಲಿ ರಾಧಾಕೃಷನ್‌ ರವರನ್ನು ನೆನೆಯುವ ದಿನವಾದ ಶಿಕ್ಷಕರ ದಿನಾಚರಣೆಯು ಸೆಪ್ಟೆಂಬರ್ 5 ರಂದು ಪ್ರತಿ ವರ್ಷ ನಡೆಯುತ್ತದೆ.ಭಾರತ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ಕಲ್ಪಿಸುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ Read More »

ಮಹಾಗುರು ಪದವಿಯಿಂದ ತರಗತಿ ಕೋಣೆಯ ಮೇಷ್ಟ್ರವರೆಗೆ!

ಗುರುತ್ವವನ್ನು ಕಳೆದುಕೊಳ್ಳುತ್ತಿದ್ದಾರೆಯೇ ಶಿಕ್ಷಕರು? ನಾಡಿನ ಎಲ್ಲ ಮಹಾಗುರುಗಳಿಗೆ ಅವರದ್ದೇ ದಿನದ ಶುಭಾಶಯಗಳು. ಗುರು ಎಂದರೆ ಭಾರ ಎಂದರ್ಥ. ಭೂಮಿಗೆ ಗುರುತ್ವ ಇರುವುದರಿಂದ ಭೂಮಿಯ ಮೇಲಿನ ಎಲ್ಲ ವಸ್ತುಗಳಿಗೆ ತೂಕ ಬಂದಿರುವುದು. ಹಾಗೆಯೇ ಸೌರವ್ಯೂಹದ ದೊಡ್ಡ ಗ್ರಹವೂ ಗುರುವೇ. ಹಾಗೆ ಗುರು ಅಂದರೆ ದೊಡ್ಡವನು ಎಂದು ಕೂಡ ಅರ್ಥ ಇದೆ. ಅಹಂ ಭೋ ಅಭಿವಾದಯೆ… ಭಾರತದಲ್ಲಿ ಬ್ರಿಟಿಷ್ ಶಿಕ್ಷಣ ಪದ್ಧತಿ ಜಾರಿ ಆಗುವುದಕ್ಕಿಂತ ಮೊದಲು ಇದ್ದದ್ದೇ ಗುರುಕುಲ ಶಿಕ್ಷಣ ಪದ್ಧತಿ. ಅದರ ಮಹತ್ವದ ಬಗ್ಗೆ ಹಲವು ಲೇಖನಗಳನ್ನು ನಾನು

ಮಹಾಗುರು ಪದವಿಯಿಂದ ತರಗತಿ ಕೋಣೆಯ ಮೇಷ್ಟ್ರವರೆಗೆ! Read More »

error: Content is protected !!
Scroll to Top