ಲೇಖನ

ಮಾ ದುರ್ಗಾ ದುರ್ಗತಿ ಪರಿಹಾರಿಣಿ

ನವರಾತ್ರಿ – ಒಂದು ಹಬ್ಬ, ನೂರಾರು ಆಯಾಮ ಒಂದು ಹಬ್ಬದ ಹಿಂದೆ ನೂರಾರು ಪುರಾಣದ ಕಥೆಗಳು, ನೂರಾರು ಇತಿಹಾಸದ ಘಟನೆಗಳು ಬೆಸೆದುಕೊಂಡ ಒಂದು ಹಬ್ಬ ಇದ್ದರೆ ಅದು ನವರಾತ್ರಿ. ನವರಾತ್ರಿ ಕೇವಲ ಒಂದು ಹಬ್ಬ ಅಲ್ಲ, ಅದೊಂದು ಅದ್ಭುತವಾದ ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಸಮಾರಾಧನೆ, ಸ್ತ್ರೀ ಶಕ್ತಿಯ ಆರಾಧನೆ, ಒಂದು ಕೌಟುಂಬಿಕ ನಿವೇದನೆ ಮತ್ತು ನಮ್ಮೊಳಗಿನ ಶಕ್ತಿಯ ಆವಾಹನೆ. ಇಷ್ಟೆಲ್ಲವನ್ನೂ ಒಳಗೊಂಡ ಈ ಹಬ್ಬವು ಕರ್ನಾಟಕದ ನಾಡಹಬ್ಬ ಆದದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ದುರ್ಗಾಷ್ಟಮಿ – ದುರ್ಗತಿ […]

ಮಾ ದುರ್ಗಾ ದುರ್ಗತಿ ಪರಿಹಾರಿಣಿ Read More »

ನವರಾತ್ರಿ – ನವಧಾತ್ರಿ – ನವ ನವೊನ್ಮೇಷಶಾಲಿನಿ

ನವರಾತ್ರಿ ಎಂದರೆ ನಮ್ಮೊಳಗಿನ ಶಕ್ತಿಯ ಆವಾಹನೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಭಾರತದಲ್ಲಿ ಇಡೀ ವರ್ಷವೂ ಹಬ್ಬಗಳೇ ಹಬ್ಬಗಳು. ನಾವು ಆಚರಿಸುವಷ್ಟು ಹಬ್ಬಗಳನ್ನು ಜಗತ್ತಿನ ಬೇರೆ ಯಾವ ರಾಷ್ಟ್ರ ಕಲ್ಪನೆ ಮಾಡಲೂ ಸಾಧ್ಯ ಇಲ್ಲ. ಹಬ್ಬಗಳು ನಮ್ಮ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ನಂಬಿಕೆಗಳ ಒಟ್ಟು ಮೊತ್ತವೇ ಆಗಿವೆ. ನವರಾತ್ರಿ – ಜಗತ್ತಿನ ಅತಿ ದೀರ್ಘ ಅವಧಿಯ ಹಬ್ಬ ಈ ಹಬ್ಬಕ್ಕೆ ನವರಾತ್ರಿ ಎಂಬ ಹೆಸರಿದ್ದರೂ ಇದು ಹತ್ತು ದಿನಗಳ ಹಬ್ಬ. ಆದ್ದರಿಂದ ಇದನ್ನು ದಸರಾ (ದಶಹರಾ ಅಂದರೆ ಹತ್ತು

ನವರಾತ್ರಿ – ನವಧಾತ್ರಿ – ನವ ನವೊನ್ಮೇಷಶಾಲಿನಿ Read More »

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ

ಜೈಲಿನ ಅನ್ನದಲ್ಲಿ ಹುದುಗಿದ್ದ ಮಾಂಸದಲ್ಲಿದ್ದ ಎಲುಬಿನ ತುಂಡುಗಳೆ ಅವರ ಲೇಖನಿಯಾಗಿತ್ತು ಅಕಿನ್ ವಾಂಡೆ ಒಲುವಿಲೇ ಸೊಯೀಂಕ ಯಾರು ಎಂದು ಗೂಗಲ್ ಸರ್ಚ್ ಮಾಡಿ. ನಿಮಗೆ ಥಟ್ಟನೆ ದೊರೆಯುವ ಉತ್ತರ ನೊಬೆಲ್ ಬಹುಮಾನ ಪಡೆದ ಮೊಟ್ಟಮೊದಲನೇ ಕಪ್ಪು ವರ್ಣದ ಸಾಹಿತಿ ಎಂದು. ಆತನ ಬದುಕು ಆತನ ಬರವಣಿಗೆಯಷ್ಟೇಪ್ರಖರವಾಗಿದೆ ಮತ್ತು ಹೋರಾಟಗಳಿಂದ ಕೂಡಿದೆ. ಆತ ನೈಜೀರಿಯ ಸೆರೆಮನೆಯಲ್ಲಿ ಉಸಿರುಗಟ್ಟುತ್ತಿದ್ದ ಕಪ್ಪು ಚರ್ಮದವರು ಹೋರಾಟ ಮಾಡುವುದು, ಹೋರಾಟಕ್ಕೆ ಪ್ರಚೋದನೆ ಕೊಡುವುದು ಇದನ್ನು ಯಾವುದೇ ಸರ್ವಾಧಿಕಾರಿ ಆಫ್ರಿಕನ್ ಸರಕಾರ ಸಹಿಸಿಕೊಂಡ ಉದಾಹರಣೆ ಇದೆಯಾ?

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ Read More »

ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ್ದ ಗುಂಡಪ್ಪ ವಿಶ್ವನಾಥ್

ಅವರ ಆ ನಿರ್ಧಾರದಿಂದ ಕ್ರಿಕೆಟ್ ಗೆದ್ದಿತ್ತು, ಆದರೆ ಭಾರತ ಸೋತಿತ್ತು ಫೆಬ್ರುವರಿ 19, 1980. ಮುಂಬಯಿಯ ವಿಶಾಲವಾದ ವಾಂಖೇಡೆ ಸ್ಟೇಡಿಯಂ. ಹಲವಾರು ಐತಿಹಾಸಿಕ ಕ್ರಿಕೆಟ್ ದಾಖಲೆಗಳಿಗೆ ಸಾಕ್ಷಿಯಾದ ಹುಲ್ಲುಹಾಸಿನ ಸ್ಟೇಡಿಯಂ ಅದು. ಅದು ಬಿಸಿಸಿಐ ಸುವರ್ಣ ಮಹೋತ್ಸವದ ನೆನಪಿನ ಟೆಸ್ಟ್ ಆಗಿತ್ತು ಅಂದು ಅಲ್ಲಿ ಆತಿಥೇಯ ಭಾರತ ಮತ್ತು ಇಂಗ್ಲೆಂಡ್‌ಗಳ ನಡುವೆ ಒಂದು ಐತಿಹಾಸಿಕವಾದ ಕ್ರಿಕೆಟ್ ಟೆಸ್ಟ್ ಪಂದ್ಯ ಏರ್ಪಟ್ಟಿತ್ತು. ಅದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸುವರ್ಣ ಮಹೋತ್ಸವ ವರ್ಷದ ನೆಪದಲ್ಲಿ ಆಡಲಾದ ವಿಶೇಷವಾದ

ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ್ದ ಗುಂಡಪ್ಪ ವಿಶ್ವನಾಥ್ Read More »

ಕನ್ನಡ ಚಿತ್ರರಂಗ ಮರೆಯಬಾರದ ಹೆಸರು ವಿಜಯ ಭಾಸ್ಕರ್

2024 ಆ ಸಂಗೀತ ನಿರ್ದೇಶಕನ ಜನ್ಮ ಶತಮಾನದ ವರ್ಷ ಅವರು ಬದುಕಿದ್ದರೆ ಈ ವರ್ಷ ಅವರಿಗೆ ನೂರು ತುಂಬುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಮಾಧುರ್ಯಪೂರ್ಣ ಹಾಡುಗಳನ್ನು ಕೊಟ್ಟ ಕೀರ್ತಿ ಅವರದ್ದು. ಹಾಡುಗಳ ಮೂಲಕ ಅವರು ಇಂದಿಗೂ ನಮ್ಮ ನಡುವೆ ಜೀವಂತರಾಗಿದ್ದಾರೆ ಎನ್ನಬಹುದು. ಗಟ್ಟಿಯಾದ ಶಾಸ್ತ್ರೀಯ ಚೌಕಟ್ಟು 1924ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವರು. ಆದರೆ ಬಾಲ್ಯದಿಂದಲೂ ಅವರ ಆಸಕ್ತಿ ಸಂಗೀತದ ಕಡೆಗೆ ಇತ್ತು. ಗೋವಿಂದ್ ಭಾವೆ ಎಂಬ ಗುರುವಿನಿಂದ ಅವರು ಹಿಂದೂಸ್ತಾನಿ ಸಂಗೀತದ ಶಿಕ್ಷಣ

ಕನ್ನಡ ಚಿತ್ರರಂಗ ಮರೆಯಬಾರದ ಹೆಸರು ವಿಜಯ ಭಾಸ್ಕರ್ Read More »

ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ

ಮಾರ್ಕೆಟ್‌ಗೆ ದಾಂಗುಡಿ ಇಡ್ತಾ ಇವೆ ಮೆಟಾ-ರೆಬಾನ್ ಕನ್ನಡಕಗಳು ಇವತ್ತು ಯಾವುದಾದರೂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಆಗ್ತಾ ಇದೆ ಎಂದರೆ ಅದು ಐಟಿ ಕ್ಷೇತ್ರದಲ್ಲಿ. ಅದರಲ್ಲಿಯೂ ಯಾವಾಗ ಕೃತಕ ಬುದ್ಧಿಮತ್ತೆಯು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಜೊತೆಗೆ ಸೇರಿತೋ ಆಗ ಇನ್ನೂ ವೇಗವಾಗಿ ತಾಂತ್ರಿಕತೆ ಬೆಳೆಯುತ್ತ ಇದೆ. 2030ಕ್ಕೆ ತಲುಪುವಾಗ ಮನುಷ್ಯನ ಬುದ್ಧಿಮತ್ತೆಗೆ ಸಮನಾದ ಸಾಮರ್ಥ್ಯ ಇರುವ ಸಾಫ್ಟ್‌ವೇರ್ ಕಂಡುಹಿಡಿಯುತ್ತೇವೆ ಎಂದು ಐಟಿ ಕಂಪನಿಗಳು ಸವಾಲು ಸ್ವೀಕರಿಸಿವೆ ಮತ್ತು ಈಗಲೇ ಸಂಶೋಧನೆ ಆರಂಭವಾಗಿವೆ. ಇದು ಎಲ್ಲಿಯವರೆಗೆ ತಲುಪಬಹುದು ಎನ್ನುವುದು ನಮ್ಮ ಊಹೆಗೆ

ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ Read More »

ಮಹಾತ್ಮರೆಲ್ಲ ಬದುಕಿರುವಾಗಲೇ ಮತ್ತೊಮ್ಮೆ ಹುಟ್ಟಿ ಬಂದಿದ್ದರು!

ಬದುಕಿನಲ್ಲಿ ಬಂದ ಆ ಟರ್ನಿಂಗ್ ಪಾಯಿಂಟ್‌ ಅವರ ಯಶಸ್ಸಿನ ಲಾಂಚಿಂಗ್ ಪ್ಯಾಡ್ ರಾಷ್ಟ್ರಪಿತ ಮಹಾತ್ಮ ಗಾಂಧಿ ಅಕ್ಟೋಬರ್ 2, 1869ರಂದು ಹುಟ್ಟಿರಬಹುದು. ಅದು ಅವರ ಜೀವಶಾಸ್ತ್ರೀಯವಾದ ಹುಟ್ಟು. ಆದರೆ ನಿಜವಾಗಿ ಗಾಂಧೀಜಿ ಹುಟ್ಟಿದ್ದು 1893ರ ಜೂನ್ 7ರಂದು! ನಿಮಗೆ ಆಶ್ಚರ್ಯ ಆಯ್ತಾ? ಹೀಗೆ ಸ್ವಲ್ಪ ಯೋಚಿಸಿ. ನಿಜವಾದ ಗಾಂಧಿ ಹುಟ್ಟಿದ್ದು ಅದೇ ದಿನ. ಅಂದು ದಕ್ಷಿಣ ಆಫ್ರಿಕದ ಪ್ರಿಟೋರಿಯಾ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ಪಡೆದು ಪ್ರಥಮ ದರ್ಜೆ ಟ್ರೈನ್ ಬೋಗಿಯಲ್ಲಿ ಕುಳಿತಿದ್ದ ಗಾಂಧಿಯನ್ನು ಒಬ್ಬ ರೈಲ್ವೆ ಟಿಕೆಟ್

ಮಹಾತ್ಮರೆಲ್ಲ ಬದುಕಿರುವಾಗಲೇ ಮತ್ತೊಮ್ಮೆ ಹುಟ್ಟಿ ಬಂದಿದ್ದರು! Read More »

ಆ ಶ್ರಾದ್ಧದ ಪಿಂಡ ಒಡೆಯಲು ಒಂದು ಕಾಗೆಯೂ ಬರಲಿಲ್ಲ

ಮಕ್ಕಳು ತೀರಿಹೋದ ಅಪ್ಪನ ಫೋಟೊದ ಮುಂದೆ ಕಣ್ಣೀರು ಸುರಿಸಿದಾಗ ನಡೆಯಿತೊಂದು ಪವಾಡ ಇದು ನಿಜವಾಗಿಯೂ ನಡೆದ ಘಟನೆ. ಅದನ್ನು ನಡೆದ ಹಾಗೆ ಬರೆಯುತ್ತೇನೆ. ಒಂದೂರಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಇದ್ದರು. ಅವರು ತುಂಬಾ ಪ್ರಾಯ ಆದ ನಂತರ ಒಂದು ಹೋಟೆಲು ಉದ್ಯಮ ಆರಂಭಿಸಿದ್ದರು. ವ್ಯಾಪಾರ ಚೆನ್ನಾಗಿಯೇ ಇತ್ತು. ಮುಂದೆ ಆ ವೃದ್ಧರು ಶುಗರ್ ಕಾಯಿಲೆಯಿಂದ ಬಳಲಿದರು ಆದರೆ ಮುಂದೆ ಒಮ್ಮೆ ಅವರು ನಿಶ್ಯಕ್ತಿಯಾಗಿ ತಲೆ ತಿರುಗಿ ಬಿದ್ದರು. ಪರೀಕ್ಷೆ ಮಾಡಲು ಆಸ್ಪತ್ರೆಗೆ ಹೋದಾಗ ವೈದ್ಯರು ರಕ್ತ ಪರೀಕ್ಷೆ

ಆ ಶ್ರಾದ್ಧದ ಪಿಂಡ ಒಡೆಯಲು ಒಂದು ಕಾಗೆಯೂ ಬರಲಿಲ್ಲ Read More »

ಬಧಾಯಿ ಹೋ ಮಿಥುನ್ ದಾ

ಬಂಗಾಳಿ ಮತ್ತು ಹಿಂದಿ ಸಿನಿಮಾಗಳ ಸೂಪರ್ ಸ್ಟಾರ್‌ಗೆ ಒಲಿದ ಫಾಲ್ಕೆ ಪ್ರಶಸ್ತಿ ಈ ಸೋಮವಾರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದ್ದು 74 ವರ್ಷದ ಶ್ರೇಷ್ಠ ನಟ ಮಿಥುನ್ ಚಕ್ರವರ್ತಿ ಅವರಿಗೆ (2022ರ) ಪ್ರಶಸ್ತಿ ಒಲಿದಿದೆ. ತನ್ನ ಪ್ರೊಫೈಲಿನಲ್ಲಿ ನೂರಾರು ಅತ್ಯುತ್ತಮ ಹಿಂದಿ ಮತ್ತು ಬೆಂಗಾಳಿ ಸಿನಿಮಾಗಳು, ಗಿನ್ನೆಸ್ ದಾಖಲೆ ಮಾಡಿದ ಟಿವಿ ರಿಯಾಲಿಟಿ ಶೋಗಳು, ಸಿನಿಮಾ ನಿರ್ಮಾಣ, ನಿರ್ದೇಶನ ಇವೆಲ್ಲವನ್ನೂ ಹೊಂದಿರುವ ಮಿಥುನ್ ಚಕ್ರವರ್ತಿ ತಾನೊಬ್ಬ ಶ್ರೇಷ್ಠ ಕಲಾವಿದ ಎನ್ನುವುದನ್ನು ಹೆಜ್ಜೆ ಹೆಜ್ಜೆಗೆ

ಬಧಾಯಿ ಹೋ ಮಿಥುನ್ ದಾ Read More »

ಕಿರಣ್ ಬೇಡಿ – ವರ್ಷ 75 ಆದರೂ ಇಂದಿಗೂ ಯೂತ್ ಐಕಾನ್

ಏಷ್ಯಾದ ಅತಿ ದೊಡ್ಡ ಸೆರೆಮನೆಯ ಚಹರೆಯನ್ನೇ ಬದಲಾಯಿಸಿದ ಐಪಿಎಸ್‌ ಅಧಿಕಾರಿ ಕಿರಣ್ ಬೇಡಿ ಐಪಿಎಸ್ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಗಿ ಅವರು ವಿವಿಧ ಪೊಲೀಸ್ ಅಧಿಕಾರಿಯ ಹುದ್ದೆಗಳನ್ನು 35 ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ ರೀತಿಗೆ ಇಡೀ ಭಾರತ ಎದ್ದು ನಿಂತು ಸೆಲ್ಯೂಟ್ ಹೊಡೆದಿತ್ತು. ಯಾವ ಹುದ್ದೆಯನ್ನು ಕೊಟ್ಟರೂ ಅದನ್ನು ಶೇ.200 ಬದ್ಧತೆಯ ಜೊತೆಗೆ ಅವರು ಕೆಲಸ ಮಾಡಿ ಎಲ್ಲ ಕಡೆಯಲ್ಲಿಯೂ ಗೆದ್ದಿರುವುದು ನಮಗೆ ಗೊತ್ತಿದೆ. ಭಾರತದ ವಿವಿಧ ಭಾಷೆಗಳಲ್ಲಿ

ಕಿರಣ್ ಬೇಡಿ – ವರ್ಷ 75 ಆದರೂ ಇಂದಿಗೂ ಯೂತ್ ಐಕಾನ್ Read More »

error: Content is protected !!
Scroll to Top