ಊರುಗಳನ್ನು ಬೆಸೆದ, ಅಭಿವೃದ್ಧಿಗೆ ಹಾದಿಯಾಗುವ ಪಂಜಿಗ ಕಿಂಡಿಅಣೆಕಟ್ಟಿನ ಸೇತುವೆ | ಶಾಸಕರ ಕನಸಿನ ಯೋಜನೆಗೆ ಜೀವ, ಊರಿಗೇ ಮರುಜೀವ
– ವಿನೋದ್ ಕೆ. ಕರ್ಪುತ್ತಮೂಲೆ ಪುತ್ತೂರು: ಹಲವು ಕನಸುಗಳನ್ನು ಹೊದ್ದು ಮಲಗಿದ್ದ ಪುಟ್ಟ ಊರು ಪಂಜಿಗ. ನರಿಮೊಗರು ಗ್ರಾ.ಪಂ.ನ ತೆಕ್ಕೆಯಲ್ಲಿರುವ ಪಂಜಿಗದಲ್ಲಿ ಕಿಂಡಿಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪಂಜಿಗ ಜನರ ಕನಸು ಮತ್ತೆ ಗರಿಗೆದರತೊಡಗಿವೆ. ಆನಡ್ಕ – ಶಾಂತಿಗೋಡು ನಡುವಿನ ಪಂಜಿಗ ಮೊದಲು ಹೀಗಿತ್ತು – ರಸ್ತೆ ಸಂಪರ್ಕವೇ ಇಲ್ಲ. ಪಕ್ಕದಲ್ಲಿ ಹರಿಯುವ ಹೊಳೆಗೆ ಹರುಕಲು – ಮುರುಕಲು ಪುಟ್ಟ ಕಾಲು ಸಂಕ. ಪಟ್ಟಣ ತಲುಪಬೇಕಾದರೆ ಹತ್ತಾರು ಕಿ.ಮೀ. ದೂರ ಸಾಗಬೇಕು. ರಿಕ್ಷಾ ಹಿಡಿಯಬೇಕಾದರೆ […]