ಲೇಖನ

ಬದಲಾಗುವ ಪ್ರಕೃತಿ ; ಬದಲಾಗಬೇಕಾದ ನಾವು

ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ ಎಂಬಲ್ಲಿಗೆ ನಾವೂ ಬದಲಾಗಬೇಕು ಅನ್ನುವುದು ಆಶಯ ಪ್ರಕೃತಿ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಯಾವುದೂ ಹಿಂದಿನಂತೆ ಇರುವುದಿಲ್ಲ. ಬದಲಾವಣೆಯೇ ಜಗದ ನಿಯಮ ಎಂದು ಮತ್ತೆ ಮತ್ತೆ ಸಾಬೀತು ಆಗುತ್ತಾ ಹೋಗಿದೆ.ಇವತ್ತು ಬೇಟೆಯಾಡುವ ಪ್ರಾಣಿ ನಾಳೆ ತಾನೇ ಬೇಟೆ ಆಗುತ್ತದೆ. ಇವತ್ತು ಅಧಿಕಾರ ಚಲಾಯಿಸುವ ಪ್ರಭುತ್ವ ನಾಳೆ ಬೀದಿಗೆ ಬಂದಿರುತ್ತದೆ. ಇವತ್ತು ಅಹಂಕಾರದಿಂದ ಮೇಲೆ ಏರಿದವನು ನಾಳೆ ಇಳಿಯುತ್ತಾನೆ ಅನ್ನುವುದೂ ಜಗತ್ತಿನ ನಿಯಮವೇ ಆಗಿದೆ. ಅಹಂಕಾರ ಎಲ್ಲಿಯೂ ಗೆದ್ದಿರುವ ಉದಾಹರಣೆ ಇಲ್ಲ. ತಲೆಗೆ ಹಾಕಿದ […]

ಬದಲಾಗುವ ಪ್ರಕೃತಿ ; ಬದಲಾಗಬೇಕಾದ ನಾವು Read More »

ಮೀಸಲಾತಿ ಎಂಬ ಜೇನುಗೂಡಿಗೆ ಕಲ್ಲು ಹೊಡೆದ ಬಳಿಕ…

ರಾಜಕೀಯ ಲಾಭಕ್ಕೆ ಅಸ್ತ್ರ ; ಸಂವಿಧಾನ ಆಶಯ ಬುಡಮೇಲು ಮೀಸಲಾತಿ ಸಂವಿಧಾನಿಕವಾಗಿ ಜಾರಿಯಾಗಿರುವ ಒಂದು ವ್ಯವಸ್ಥೆ. ಇದು ಕೆಳವರ್ಗದ ಜನರನ್ನು ಸಮಾಜದ ಎಲ್ಲ ರಂಗದಲ್ಲೂ ಪಾಲ್ಗೊಳ್ಳುವಂತೆ ಮಾಡಿ ತಾರತಮ್ಯ ಹೋಗಲಾಡಿಸುವ ಉದ್ದೇಶ ಹೊಂದಿದೆ. ಇದು ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಗಿದೆ. ಆದರೆ ಇತ್ತೀಚೆಗೆ ಸರ್ಕಾರ ಈ ಮೀಸಲಾತಿ ಎಂಬ ಜೇನುಗೂಡನ್ನು ಕೆದಕಲು ಹೋಗಿ ಇರಲಾರದೆ ಇರುವೆ ಬಿಟ್ಟುಕೊಂಡಂತೆ ಆಗಿದೆ. ಇಂದು ಸಮಾಜದ ಹಲವಾರು ಪಂಗಡಗಳು ಮೀಸಲಾತಿ ವಿರುದ್ಧ ಧ್ವನಿ ಎತ್ತಲು ಶುರುಮಾಡಿವೆ.“ಮೀಸಲಾತಿ ಕುರಿತು ವೈಜ್ಞಾನಿಕವಾದ ಸ್ಪಷ್ಟ ನೀತಿ ರೂಪಿಸದ

ಮೀಸಲಾತಿ ಎಂಬ ಜೇನುಗೂಡಿಗೆ ಕಲ್ಲು ಹೊಡೆದ ಬಳಿಕ… Read More »

ಸಂತೂರ್ ಸಾಮ್ರಾಟ ಶಿವಕುಮಾರ್ ಶರ್ಮಾ

ಮಾಧುರ್ಯಕ್ಕೆ ಇನ್ನೊಂದು ಹೆಸರೇ ಅವರು ಅವರು ಬದುಕಿದ್ದಿದ್ದರೆ ಇಂದು (ಜನವರಿ 13) 84 ವರ್ಷ ತುಂಬುತ್ತಿತ್ತು. ನೂರು ತಂತಿಗಳ ಅಪೂರ್ವ ವಾದ್ಯವಾದ ಸಂತೂರಿಗೆ ಜಾಗತಿಕ ಮಾನ್ಯತೆಯನ್ನು ತಂದುಕೊಟ್ಟ ಮೇರು ಕಲಾವಿದ ಅವರು. ಅವರ ಶಾಸ್ತ್ರೀಯ ಸಂಗೀತದ ಪ್ರಸ್ತುತಿಯನ್ನು ಕೇಳುತ್ತಾ ಹೋದಂತೆ ನಾನಂತೂ ಮೂಕವಿಸ್ಮಿತನಾಗಿದ್ದೇನೆ. ಅವರು ತಬಲಾ ವಾದನವನ್ನು ಕೂಡ ಶಾಸ್ತ್ರೀಯವಾಗಿ ಕಲಿತಿದ್ದಾರೆ.ಅವರು ಜಮ್ಮು ಕಾಶ್ಮೀರದ ಒಂದು ಸಣ್ಣ ಸಾಂಸ್ಕೃತಿಕ ಗ್ರಾಮದಿಂದ ಬಂದವರು. ಅವರ ತಂದೆ ಪಂಡಿತ್ ಉಮಾದತ್ತ ಶರ್ಮಾ. ಅವರು ಕೀರ್ತಿ ಪಡೆದ ಸಂಗೀತ ವಿದ್ವಾಂಸರು. ಡೋಗ್ರಿ

ಸಂತೂರ್ ಸಾಮ್ರಾಟ ಶಿವಕುಮಾರ್ ಶರ್ಮಾ Read More »

ತಂದೆ, ತಾಯಿ, ಗುರು- ನರೇಂದ್ರನನ್ನು ವಿವೇಕಾನಂದ ಮಾಡಿದ ಮೂರು ಮುತ್ತುಗಳು | ಇಂದು ವಿವೇಕ ಜಯಂತಿ- ರಾಷ್ಟ್ರೀಯ ಯುವ ದಿನ

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಸೂರ್ಯ ಆಚಾರ್ ವಿಟ್ಲ ಅವರು ರಚಿಸಿದ ಚುಕ್ಕಿಚಿತ್ರ. ಇಂದು (ಜನವರಿ 12) ವಿವೇಕ ಜಯಂತಿ. ಭಾರತದ ಕೇಸರಿಯ ಕೀರ್ತಿ ಪತಾಕೆಯನ್ನು ನವದಿಗಂತದಲ್ಲಿ ವಿಸ್ತರಿಸಿದ ಸ್ವಾಮಿ ವಿವೇಕಾನಂದರ ಹುಟ್ಟಿದ ಹಬ್ಬ.ಅದರ ಪ್ರಯುಕ್ತ ಜನವರಿ 12 ರಾಷ್ಟ್ರೀಯ ಯುವ ದಿನ. ದೇಶದ ಮಹಾನ್ ಶಕ್ತಿಯಾಗಿರುವ ಯುವ ಜನತೆ ಹಾಗೂ ಯುವ ಸಮುದಾಯಕ್ಕೆ ಭಾರಿ ಘನತೆಯನ್ನು ತಂದುಕೊಟ್ಟ ದಿನವಿದು.ವಿವೇಕಾನಂದರ ಮೇಲೆ ದಟ್ಟವಾದ ಪ್ರಭಾವ ಬೀರಿದ ಮೂರು ವಿಶೇಷ ಚೇತನಗಳ ಪರಿಚಯ ಮಾಡುವ ಉದ್ದೇಶದಿಂದ ಈ ಸಂಕ್ಷಿಪ್ತವಾದ

ತಂದೆ, ತಾಯಿ, ಗುರು- ನರೇಂದ್ರನನ್ನು ವಿವೇಕಾನಂದ ಮಾಡಿದ ಮೂರು ಮುತ್ತುಗಳು | ಇಂದು ವಿವೇಕ ಜಯಂತಿ- ರಾಷ್ಟ್ರೀಯ ಯುವ ದಿನ Read More »

ಆಲ್ಫ್ರೆಡ್ ನೊಬೆಲ್, ತಪ್ಪಿತಸ್ಥ ಮನೋಭಾವ ಮತ್ತು ನೊಬೆಲ್ ಪ್ರಶಸ್ತಿ

ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ಹುಟ್ಟಿಕೊಂಡ ರೋಚಕ ಕಥೆ 1888ರ ಡಿಸೆಂಬರ್ ತಿಂಗಳ ಒಂದು ಮುಂಜಾನೆ.ಸ್ವೀಡನ್ ದೇಶದ ಸ್ಟಾಕಹೋಂ ನಗರದ ಹೃದಯ ಭಾಗದಲ್ಲಿರುವ ಒಂದು ದೊಡ್ಡ ಅರಮನೆಯಂತಹ ಮನೆಯ ಪಡಸಾಲೆಯಲ್ಲಿ ಒಬ್ಬ ವಿಜ್ಞಾನಿ ಕುಳಿತು ಅಂದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ. ಅದರಲ್ಲಿ ಇದ್ದ ಒಂದು ಹೆಡ್‌ಲೈನ್ ನ್ಯೂಸ್ ಥಟ್ಟನೆ ಅವನ ಗಮನವನ್ನು ಸೆಳೆಯಿತು.ಅದರಲ್ಲಿ ಇದ್ದ ಶೀರ್ಷಿಕೆ – ಮರಣದ ವ್ಯಾಪಾರಿ ಇನ್ನಿಲ್ಲ! ಆತ ಕುತೂಹಲದಿಂದ ಮುಂದೆ ಓದುತ್ತಾ ಹೋದಂತೆ ಬೆಚ್ಚಿ ಬಿದ್ದ.ಆ ಪತ್ರಿಕೆ ಅದೇ ವಿಜ್ಞಾನಿ ಸತ್ತು

ಆಲ್ಫ್ರೆಡ್ ನೊಬೆಲ್, ತಪ್ಪಿತಸ್ಥ ಮನೋಭಾವ ಮತ್ತು ನೊಬೆಲ್ ಪ್ರಶಸ್ತಿ Read More »

ತ್ರಿವಳಿ ತಾಲೂಕು ಬೆಸೆಯುವ ಬಲೆರಾವು ಸೇತುವೆ ಸಹಿತ ಕಿಂಡಿಅಣೆಕಟ್ಟು | ಮೈಕೊಡವಿ ಮೇಲೆದ್ದ ಮೂಲೆಗುಂಪಾಗಿದ್ದ ಶಾಂತಿಗೋಡು ಗ್ರಾಮದ ಬಲೆರಾವು

ಪುತ್ತೂರು: ತೀರಾ ಕುಗ್ರಾಮವಾಗಿದ್ದ ಬಲೆರಾವು, ಆಧುನಿಕ ಜಗತ್ತಿಗೆ ತೆರೆದುಕೊಳ್ಳತೊಡಗಿದೆ. ಮುಂದೊಂದು ದಿನ ಇದು ತಾಲೂಕಿನ ಪ್ರಮುಖ ಪ್ರದೇಶವಾಗಿ ಬೆಳೆದರೂ ಅಚ್ಚರಿಪಡಬೇಕಾಗಿಲ್ಲ. ಇದಕ್ಕೆಲ್ಲಾ ಕಾರಣ, ಒಂದು ರಸ್ತೆ ಹಾಗೂ ಒಂದು ಸೇತುವೆ ಸಹಿತ ಕಿಂಡಿಅಣೆಕಟ್ಟು. ಹೌದು! ಹೆಸರಿಗೆ ತಕ್ಕಂತೆ ಬಲೆರಾವು – ಬಲ್ಲೆಗಳೇ ತುಂಬಿದ್ದ ಊರು. ತುಳುವಿನಲ್ಲಿ ಹೇಳಬೇಕೆಂದರೆ – “ರಾವು ಕುಟ್ಟುದು ಬಲ್ಲೆ ಜಿಂಜಿನ ಊರು”. ಇದೊಂದು ಸಾಲು ಸಾಕು, ಬಲೆರಾವು ಪ್ರದೇಶದ ಚಿತ್ರಣ ನಿಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಲು. ಸರಿಯಾದ ರಸ್ತೆಯೇ ಇರದಂತಹ ಸಣ್ಣ ಪ್ರದೇಶವಿದು. ಆದ್ದರಿಂದ

ತ್ರಿವಳಿ ತಾಲೂಕು ಬೆಸೆಯುವ ಬಲೆರಾವು ಸೇತುವೆ ಸಹಿತ ಕಿಂಡಿಅಣೆಕಟ್ಟು | ಮೈಕೊಡವಿ ಮೇಲೆದ್ದ ಮೂಲೆಗುಂಪಾಗಿದ್ದ ಶಾಂತಿಗೋಡು ಗ್ರಾಮದ ಬಲೆರಾವು Read More »

ಹಿಂದಿ ಸಿನೆಮಾದ ಮೆಲೊಡಿ ಹಾಡುಗಳ ಸಾಮ್ರಾಟ ಒ.ಪಿ. ನಯ್ಯರ್

ಸ್ವಾಭಿಮಾನದ ಪರಾಕಾಷ್ಠೆ ಅವರ ಬದುಕು ಹಿಂದಿ ಸಿನೆಮಾದಲ್ಲಿ 1950-70ರ ದಶಕದಲ್ಲಿ ಅತ್ಯಂತ ಮಾಧುರ್ಯಪೂರ್ಣ ಹಾಡುಗಳನ್ನು ಪರಿಚಯಿಸಿದ ಕೀರ್ತಿ ಒ. ಪಿ.ನಯ್ಯರ್ ಅವರಿಗೆ ಸಲ್ಲುತ್ತದೆ.ನಯಾದೌರ್, ಸಿ ಐ. ಡಿ., ಹೌರಾ ಬ್ರಿಜ್, ಫಾಗುನ್, ಏಕ್ ಮುಸಾಫಿರ್ ಏಕ್ ಹಸೀನಾ, ಕಾಶ್ಮೀರ್ ಕೀ ಕಲಿ, ಮೇರೆ ಸನಮ್, ಸಾವನ್ ಕೀ ಘಟ, ಯೇ ರಾತ್ ಫಿರ್ ನಾ ಆಯೇಗಿ, ಪ್ರಾಣ್ ಜಾಯೆ ಪರ್ ವಚನ ನಾ ಜಾಯೇ ಮೊದಲಾದ ಆಲ್ ಟೈಮ್ ಮೆಲೊಡಿ ಸಿನೆಮಾಗಳಿಗೆ ಸಂಗೀತ ಕೊಟ್ಟು ಮಾಧುರ್ಯದ ಪರಾಕಾಷ್ಠೆಯನ್ನು

ಹಿಂದಿ ಸಿನೆಮಾದ ಮೆಲೊಡಿ ಹಾಡುಗಳ ಸಾಮ್ರಾಟ ಒ.ಪಿ. ನಯ್ಯರ್ Read More »

ಕಗ್ಗದ ಸಂದೇಶ – ನೋವು ಸಂಕಷ್ಟಗಳಲ್ಲಿ ಸುಖ ಕಾಣುವ ಬದುಕು…

ಅಸಮದಲಿ ಸಮತೆಯನು ವಿಷಮದಲಿಮೆತ್ರಿಯನು|ಅಸಮಂಜಸದಿ ಸಮನ್ವಯ ಸೂತ್ರನಯವ||ವೆಸನಮಯ ಸಂಸಾರದಲಿ ನಿನೋದವ ಕಾಣ್ಬರಸಿಕತೆಯೇ ಯೋಗವೆಲೊ- ಮಂಕುತಿಮ್ಮ||ಅಸಮಾನತೆ ಎನ್ನುವುದು ಈ ಸೃಷ್ಟಿಯ ಸಹಜ ಗುಣ. ಇದರಲ್ಲಿ ಸಮಾನತೆಯನ್ನು ಕಾಣುವುದು, ವಿಷಮ ಅಂದರೆ ಗಂಭೀರವಾದ ಪರಿಸ್ಥಿತಿಯಲ್ಲಿಯೂ ಸ್ನೇಹ ಅಂದರೆ ಹೊಂದಾಣಿಕೆಯ ಭಾವವನ್ನು ಹೊಂದುವುದು, ಅಸಮಂಜಸ ಅಂದರೆ ಹೊಂದಾಣಿಕೆ ಇಲ್ಲದ ಕಡೆ ಸಮನ್ವಯದ ಸೂತ್ರವನ್ನು ಅನ್ವಯಿಸುವುದು, ನೋವು ಸಂಕಷ್ಟಗಳೇ ತುಂಬಿರುವ ಬದುಕಿನಲ್ಲಿ ಸಂತೋಷವನ್ನು ಕಾಣುವಂತಹ ರಸಿಕತೆಯೇ ಜೀವನದ ನಿಜವಾದ ಯೋಗವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.ವಿವಿಧತೆ ಎನ್ನುವುದು ಸೃಷ್ಟಿಯ ಸಹಜ ಗುಣ. ವೈವಿಧ್ಯಮಯವಾದ

ಕಗ್ಗದ ಸಂದೇಶ – ನೋವು ಸಂಕಷ್ಟಗಳಲ್ಲಿ ಸುಖ ಕಾಣುವ ಬದುಕು… Read More »

ದೊಡ್ಡವರ ಸಣ್ಣತನಗಳು

ಸೆಲೆಬ್ರಿಟಿ ಸ್ಥಾನ ಪಡೆದ ನಂತರ ನಮ್ಮ ವರ್ತನೆ ಹೇಗಿರಬೇಕು? ಈ ವ್ಯಕ್ತಿಯ ಹೆಸರು ಶಂಕರ ಮಿಶ್ರಾ. ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ವೇಲ್ಸ್ ಫಾರ್ಗೋ ಇದರ ಉಪಾಧ್ಯಕ್ಷ ಈತ. ತುಂಬಾ ಓದಿದವನು. ಬಹಳ ದೊಡ್ಡ ಸಂಬಳ ಇತ್ತು. ಸಾಮಾಜಿಕ ಸ್ಥಾನಮಾನ, ಗೌರವ, ಆಸ್ತಿ, ಅಂತಸ್ತು ಎಲ್ಲವೂ ಇತ್ತು.ಅಂತಹವನು ಮೊನ್ನೆ ಮೊನ್ನೆ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದ ಏರರ ಇಂಡಿಯಾ ವಿಮಾನದಲ್ಲಿ 70 ವರ್ಷದ ಮುದುಕಿಯ ಮೈ ಮೇಲೆ ಮೂತ್ರ ಮಾಡಿದ್ದಾನೆ. ಪರಿಣಾಮವಾಗಿ ಅರೆಸ್ಟ್ ಆಗಿ ಸೆರೆಮನೆ ಸೇರಿದ್ದಾನೆ. ಉದ್ಯೋಗ

ದೊಡ್ಡವರ ಸಣ್ಣತನಗಳು Read More »

ನಿಮ್ಮ ಮಗುವನ್ನು ಸೂಪರ್ ಹೀರೊ ಮಾಡಲು ಹೊರಡಬೇಡಿ!

ಮಾರುಕಟ್ಟೆಯ ಸರಕು ಆಗುತ್ತಿರುವ ಮಕ್ಕಳ ಪ್ರತಿಭೆ ಇತ್ತೀಚೆಗೆ ಹಲವು ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂದರ್ಭ ನಾನು ಗಮನಿಸಿದ ಸಂಗತಿಗಳು ಇವು…ಸಣ್ಣ ಮಕ್ಕಳಿಗೆ ಭಾಷಣಗಳು ಬೇಡ, ಅವರಿಗೆ ಬಹುಮಾನಗಳು ಕೂಡ ಬೇಡ. ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರೂ ಒಂದೇ. ಅವರಿಗೆ ಬೇಕಾದದ್ದು ಗಮ್ಮತ್ತು, ಗೆಳೆತನ, ಖುಷಿ ಮತ್ತು ಸ್ವಾತಂತ್ರ್ಯ ಮಾತ್ರ. ಅವರನ್ನು ಹಿಡಿದು ಕೂರಿಸಿ ಬಲವಂತದ ಮಾಘಸ್ನಾನ ಎಂಬಂತೆ ಈ ಬಹುಮಾನ ಹೀಗೆ ತೆಗೆದುಕೊ, ಹೀಗೆ ನಮಸ್ಕಾರ ಮಾಡು, ಹೀಗೆ ಫೋಟೊಗೆ ಫೋಸ್ ಕೊಟ್ಟು ಹಲ್ಲು

ನಿಮ್ಮ ಮಗುವನ್ನು ಸೂಪರ್ ಹೀರೊ ಮಾಡಲು ಹೊರಡಬೇಡಿ! Read More »

error: Content is protected !!
Scroll to Top