ಲೇಖನ

ಮಗನಿಗಾಗಿ ಭತ್ತದ ಗದ್ದೆಯನ್ನೇ ಕ್ರಿಕೆಟ್ ಪಿಚ್ ಮಾಡಿಕೊಟ್ಟಿದ್ದರು ತಂದೆ!

ಸಾಮಾನ್ಯ ರೈತನ ಮಗನ ಅಸಾಮಾನ್ಯ ಸಾಧನೆ ನಿನ್ನೆಯ ಕ್ರಿಕೆಟ್ ಪಂದ್ಯವನ್ನು ನೋಡಿದ ಭಾರತೀಯರಿಗೆ ಈ ಆಟಗಾರನು ಕೊಟ್ಟ ರೋಮಾಂಚನ ಬಹುಕಾಲ ನೆನಪಿನಲ್ಲಿ ಉಳಿಯುವುದು ಖಂಡಿತ. ಶುಭಮನ್ ಗಿಲ್ ಮುಂದಿನ ಹತ್ತಾರು ವರ್ಷ ಭಾರತೀಯ ಕ್ರಿಕೆಟನ್ನು ಆಳುವ ಸಾಧ್ಯತೆ ಕ್ರಿಕೆಟ್ ಪ್ರಿಯರಿಗೆ ನಿನ್ನೆ ಕಂಡಿದೆ. ಈಗಾಗಲೇ ಆತನನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೋಹ್ಲಿ ಜತೆಗೆ ಹೋಲಿಕೆ ಮಾಡಲು ಆರಂಭ ಆಗಿದೆ. ಗಿಲ್ ಆ ಹೋಲಿಕೆಗೆ ಖಂಡಿತವಾಗಿ ವರ್ಥ್ ಆಗಿದ್ದಾರೆ. ಮೂರೂ ಫಾರ್ಮ್ಯಾಟ್‌ಗಳಲ್ಲಿ ಗಿಲ್ ಚಾಂಪಿಯನ್ ಆಟಗಾರ ಈಗ […]

ಮಗನಿಗಾಗಿ ಭತ್ತದ ಗದ್ದೆಯನ್ನೇ ಕ್ರಿಕೆಟ್ ಪಿಚ್ ಮಾಡಿಕೊಟ್ಟಿದ್ದರು ತಂದೆ! Read More »

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ

ಪಿ. ಬಿ. ಶ್ರೀನಿವಾಸ್ ಬದುಕಿದ್ದೇ ಹಾಗೆ! ಪ್ರತಿವಾದಿ ಭಯಂಕರ ಶ್ರೀನಿವಾಸ್ ಎಂದರೆ ಯಾರಿಗಾದರೂ ಅವರ್ಯಾರು ಎಂದು ಗೊತ್ತಾಗದೆ ಹೋಗಬಹುದು. ಆದರೆ ಪಿ.ಬಿ. ಶ್ರೀನಿವಾಸ್ ಅಂದರೆ ಥಟ್ಟನೆ ಮಾಧುರ್ಯದ ಅಲೆಯೊಂದು ನಮ್ಮನ್ನು ಆವರಿಸಿಬಿಡುತ್ತದೆ. ಅವರು ಹಾಡಿದ ಹಾಡುಗಳು ಎಷ್ಟು ಶ್ರೀಮಂತವೋ ಅವರು ಬದುಕಿದ ರೀತಿಯು ಇನ್ನೂ ಹೆಚ್ಚು ಶ್ರೀಮಂತ ಆಗಿತ್ತು. ಇಂದವರ ಬದುಕಿನ ಕೆಲವು ನಿದರ್ಶನಗಳನ್ನು ತಮ್ಮ ಮುಂದೆ ಇಡಲು ಹೆಮ್ಮೆಪಡುತ್ತೇನೆ. ಹುಟ್ಟಿದ್ದು ಆಂಧ್ರದಲ್ಲಿ, ಅಧಿಕ ಹಾಡು ಹಾಡಿದ್ದು ಕನ್ನಡದಲ್ಲಿ ಪಿಬಿ ಹುಟ್ಟಿದ್ದು ಆಂಧ್ರದಲ್ಲಿ. ಮಾತೃಭಾಷೆ ತೆಲುಗು. ಆದರೆ

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ Read More »

ಕಗ್ಗದ ಸಂದೇಶ – ಹುಟ್ಟು-ಸಾವಿನಿಂದ ವ್ಯವಸ್ಥೆಗೆ ನವತೆ…

ಜವನ ನಿಂದಿಪುದೇಕೆ ಸರ್ವಘಾತಕನೆಂದು?|ಭುವಿಗೆ ವೃದ್ಧ ಸಮೃದ್ಧಿಯವನು ಸುಮ್ಮನಿರಲ್ ||ನಿಲೆ|ನವನವತೆಯವನಿಂ ಜಗಕೆ-ಮಂಕುತಿಮ್ಮ||‌‌ಸರ್ವರನ್ನು ನಾಶ ಮಾಡುವವನು ಎಂದು ಯಮನನ್ನು ನಿಂದಿಸುವುದೇಕೆ? ಅವನು ಸುಮ್ಮನೇ ಇರುತ್ತಿದ್ದರೆ ಈ ಭೂಮಿ ಮುದುಕರಿಂದಲೇ ತುಂಬಿಕೊಂಡಿರುತ್ತಿತ್ತು. ಇಲ್ಲಿ ಇದ್ದವರೆಲ್ಲ ತಮ್ಮ ಸ್ಥಳವನ್ನು ಬಿಟ್ಟುಕೊಡದೆ ಗಟ್ಟಿಯಾಗಿ ನಿಂತರೆ ಹೊಸದಾಗಿ ಬರುವವರಿಗೆ ಸ್ಥಳವಾದರೂ ಎಲ್ಲಿದೆ? ಈ ಭೂಮಿಯಲ್ಲಿ ಹೊಸತನ ಬರಲು ಕಾರಣ ಅವನು ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹುಟ್ಟುಸಾವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಯಮನು ತನ್ನ ಕರ್ತವ್ಯವನ್ನು ನಿರ್ವಹಿಸಿದರೂ ಎಲ್ಲರೂ ಅವನನ್ನು ನಿಂದಿಸುತ್ತಾರೆ. ಯಾಕೆಂದರೆ ಅವನು ಕೊಲ್ಲುವವನು

ಕಗ್ಗದ ಸಂದೇಶ – ಹುಟ್ಟು-ಸಾವಿನಿಂದ ವ್ಯವಸ್ಥೆಗೆ ನವತೆ… Read More »

ನೇಪಥ್ಯಕ್ಕೆ ಸರಿದ ಟೆನ್ನಿಸ್ ಲೋಕದ ಕೋಲ್ಮಿಂಚು ಸಾನಿಯಾ ಮಿರ್ಜಾ

ACE against ODDS ಅವರ ಆತ್ಮಚರಿತ್ರೆಯ ಪುಸ್ತಕ ಕ್ರಿಕೆಟ್ ಆಟ ನಮ್ಮ ಜೀವನ ಧರ್ಮ ಎಂದೇ ಬಿಂಬಿತವಾದ, ಕ್ರಿಕೆಟ್ ಆಟಗಾರರೇ ನಮ್ಮ ದೇವರು ಎಂದೇ ಕರೆಯಲ್ಪಡುವ ಭಾರತದಲ್ಲಿ ಟೆನ್ನಿಸಿಗೆ, ಅದರಲ್ಲಿಯೂ ಮಹಿಳಾ ಟೆನ್ನಿಸಿಗೆ ಒಂದು ಸ್ಥಾನ ಇದೆ ಎಂದು ತೋರಿಸಿಕೊಟ್ಟವರು ಸಾನಿಯಾ ಮಿರ್ಜಾ. ಇದೀಗ 36 ವರ್ಷ ಪೂರ್ತಿಯಾದ ಸಾನಿಯಾ ಈ ಸಂದರ್ಭದಲ್ಲಿ ಟೆನ್ನಿಸ್ ಜಗತ್ತಿಗೆ ಕಳೆದ ವರ್ಷ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಈ ಸಹಜ ಮುಗ್ಧ ಸೌಂದರ್ಯದ ‘ಮೂಗುತಿ ಸುಂದರಿ’ ಈಗ ಟೆನ್ನಿಸ್ ಕೋರ್ಟಿನಲ್ಲಿ ಆಡುತ್ತಿಲ್ಲ.

ನೇಪಥ್ಯಕ್ಕೆ ಸರಿದ ಟೆನ್ನಿಸ್ ಲೋಕದ ಕೋಲ್ಮಿಂಚು ಸಾನಿಯಾ ಮಿರ್ಜಾ Read More »

ನಮ್ಮ ಹೆಮ್ಮೆಯ ಗಣತಂತ್ರ, ಸ್ವತಂತ್ರ ಭಾರತ

ಜಗತ್ತಿನ ಅತ್ಯಂತ ವಿಸ್ತಾರವಾದ ಸಂವಿಧಾನ ಅಂಗೀಕಾರವಾದ ದಿನವಿದು ತಮಗೆಲ್ಲ ಭಾರತದ ಗಣರಾಜ್ಯ ಉತ್ಸವದ ಹಾರ್ದಿಕವಾದ ಶುಭಾಶಯಗಳು. ಜನವರಿ 26 ಭಾರತಕ್ಕೆ, ಭಾರತೀಯರಿಗೆ ಅತ್ಯಂತ ಪವಿತ್ರ ದಿನ. ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯದ ಹಬ್ಬಕ್ಕಿಂತ ಇದು ಹೆಚ್ಚು ಮುಖ್ಯವಾದುದು.ಆಗಸ್ಟ್ 15,1947ರಂದು ಬ್ರಿಟಿಷರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ನೀಡಿದಾಗ ನಮಗೆ ಪೂರ್ಣ ಪ್ರಮಾಣದ ಸ್ವರಾಜ್ಯವು ಸಿಕ್ಕಿರಲಿಲ್ಲ. ಆ ದಿನದಲ್ಲಿ ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ದೊರೆತಿತ್ತು. 1947-1950ರ ಅವಧಿಯಲ್ಲಿ ಭಾರತವನ್ನು ‘ರಿಪಬ್ಲಿಕ್ ದೇಶ’ ಎಂದು ಕರೆಯದೆ ‘ಡೊಮಿನಿಯನ್ ರಿಪಬ್ಲಿಕ್’ ಹೆಸರಿನಿಂದ ಕರೆಯುತ್ತಿದ್ದರು.

ನಮ್ಮ ಹೆಮ್ಮೆಯ ಗಣತಂತ್ರ, ಸ್ವತಂತ್ರ ಭಾರತ Read More »

ಧಗಧಗಿಸಿದ ಕ್ರಾಂತಿಯ ಕಿಡಿ ಬೋಸ್‌

ಇಂದವರ ಹುಟ್ಟುಹಬ್ಬ-ರಾಷ್ಟ್ರೀಯ ಪರಾಕ್ರಮ ದಿನ ನೇತಾಜಿ ಸುಭಾಶ್‌ಚಂದ್ರ ಬೋಸರ ಇನ್ನೊಂದು ಜನ್ಮ ಜಯಂತಿಗೆ ಇಡೀ ದೇಶ ಸಜ್ಜುಗೊಂಡಿದೆ. ಕಳೆದ ಎರಡು ವರ್ಷಗಳಿಂದ ನೇತಾಜಿ ಅವರ ಜನ್ಮ ದಿನವನ್ನು (ಜನವರಿ 23) ‘ಪರಾಕ್ರಮ ದಿನ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿತ್ತು.ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು. ನೇತಾಜಿ ಸುಭಾಸರನ್ನು ಇಂದಿನ ತಲೆಮಾರಿನ ಜನರು ನಿರಂತರವಾಗಿ ನೆನಪಿಸಿಕೊಳ್ಳಬೇಕು.2004ರಲ್ಲಿ ಶಾಮ್ ಬೆನೆಗಲ್ ನಿರ್ದೇಶನ ಮಾಡಿದ ಶ್ರೇಷ್ಠ ಸಿನೆಮಾ ‘ನೇತಾಜಿ ಸುಭಾಶ್‌ಚಂದ್ರ ಬೋಸ್ – ದ ಫಾರ್ಗೊಟನ್ ಹೀರೊ’ ನೋಡಿ ನಾನು

ಧಗಧಗಿಸಿದ ಕ್ರಾಂತಿಯ ಕಿಡಿ ಬೋಸ್‌ Read More »

ಕಗ್ಗದ ಸಂದೇಶ- ನಡೆ ನುಡಿ ಎಂದೆಂದೂ ಸತ್ಯವಾಗಿರಲಿ…

ಸತ್ಯವಂತನನರಸಲೆನುತ ಪೇಟೆಗಳೊಳಗೆ|ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು||ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಾಸಿಸಿದನು|ತಾತ್ವಿಕ ಡಯೋಜೆನಿಸ್ – ಮಂಕುತಿಮ್ಮ|| ಸುಮಾರು ಎರಡೂವರೆ ಸಾವಿರ ವರ್ಷುಗಳ ಹಿಂದೆ ಗ್ರೀಕ್ ದೇಶದಲ್ಲಿ ಜನಸಿದ ಡಯೋಜನಿಸ್ ಎಂಬ ತತ್ತ್ವಜ್ಞಾನಿ ಸತ್ಯವಂತರು ಯಾರಾದರೂ ಇದ್ದಾರೆಯೆ ಎಂದು ನೋಡಲು ಪೇಟೆಯಲ್ಲಿ ನಡುಹಗಲಿನಲ್ಲಿಯೇ ದೀಪವನ್ನು ಹಿಡಿದುಕೊಂಡು ನಡೆದು ನೋಡಿ ಕೊನೆಗೆ ಯಾರೂ ಸಿಗದಿದ್ದಾಗ ಈ ಜಗತ್ತು ಕೆಟ್ಟು ಹೋಗಿದೆ ಎಂದು ಮನೆಯಲ್ಲಿಯೆ ಒಂದು ತೊಟ್ಟಿಯನ್ನು ನಿರ್ಮಿಸಿಕೊಂಡು ವಾಸಿಸಿದನು ಎಂದು ಮಾನ್ಯ ಡಿವಿಜಿಯವರು ಜಗತ್ತಿನ ವಾಸ್ತವ ಸಂಗತಿಯನ್ನು ವಿಡಂಬನಾತ್ಮಕವಾಗಿ ಈ ಮುಕ್ತಕದಲ್ಲಿ

ಕಗ್ಗದ ಸಂದೇಶ- ನಡೆ ನುಡಿ ಎಂದೆಂದೂ ಸತ್ಯವಾಗಿರಲಿ… Read More »

ಭಾರತೀಯ ಬ್ರಾಂಡ್ ಆಯ್ಕೆ ಮಾಡಿ, ದುಡ್ಡನ್ನು ಭಾರತದಲ್ಲಿಯೇ ಉಳಿಸಿ

ಪೆಪ್ಸಿ, ಕೋಕ್ ಬೇಡ ಎಳನೀರು, ಮಜ್ಜಿಗೆ ಕುಡಿಯಿರಿ! ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರು ಆರಂಭ ಮಾಡಿದ ಬಹಳ ದೊಡ್ಡ ಅಭಿಯಾನ ಅಂದರೆ ಸ್ವದೇಶಿ ಅಭಿಯಾನ. ಭಾರತದ್ದೇ ಉತ್ಪನ್ನಗಳನ್ನು ಭಾರತದಲ್ಲಿ ಬಳಕೆ ಮಾಡಿದರೆ ಭಾರತದ ದುಡ್ಡನ್ನು ಭಾರತದಲ್ಲಿ ಉಳಿಸಬಹುದು ಎನ್ನುವುದು ಅವರ ದೊಡ್ಡ ಆಶಯವಾಗಿತ್ತು.ಅದಕ್ಕೆ ಪೂರಕವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಟ್ಟೆಗಳನ್ನು ಅವರು ಬೀದಿಗೆ ತಂದು ಕಾರ್ಯಕರ್ತರ ಜತೆಯಲ್ಲಿ ಸುಡುವ ಕೆಲಸ ಮಾಡಿದರು. ಅದಕ್ಕೆ ಪರ್ಯಾಯವಾಗಿ ಭಾರತದ್ದೇ ಆದ ಖಾದಿಯನ್ನು ಅವರು ಜನಪ್ರಿಯ ಮಾಡಿದರು. ತಾವೇ ತಕಲಿಯಿಂದ

ಭಾರತೀಯ ಬ್ರಾಂಡ್ ಆಯ್ಕೆ ಮಾಡಿ, ದುಡ್ಡನ್ನು ಭಾರತದಲ್ಲಿಯೇ ಉಳಿಸಿ Read More »

ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ

ಪರೀಕ್ಷೆ ಒಂದು ಸಮಸ್ಯೆ ಅಲ್ಲ, ಅದೊಂದು ಅವಕಾಶ ನನಗೆ ಒಂದು ಬಹು ದೊಡ್ಡ ಕನಸಿದೆ. ಮಕ್ಕಳು ಪರೀಕ್ಷೆಗೆ ಹೋಗುವಾಗ ಜಾತ್ರೆಗೆ, ಸಾಂತ್‌ಮಾರಿಗೆ, ಉತ್ಸವಕ್ಕೆ ಹೋಗುವಷ್ಟೆ ಖುಷಿಯಿಂದ ಹೋಗಬೇಕು ಎಂದು. ಆದರೆ ಇಂದು ಹಾಗಾಗುತ್ತಿಲ್ಲ. ಪರೀಕ್ಷೆ ಒಂದು ಯುದ್ಧ ಎಂದು ನಾವೆಲ್ಲರೂ ಅವರ ತಲೆಗೆ ತುರುಕುತ್ತಿದ್ದೇವೆ. ಪರಿಣಾಮವಾಗಿ ಪರೀಕ್ಷೆ ಮುಗಿಯುವತನಕ ಮನೆಗಳಲ್ಲಿ ಅಘೋಷಿತವಾದ ಕರ್ಫ್ಯೂ ಘೋಷಣೆ ಆಗಿರುತ್ತದೆ. ಈ ಹೊತ್ತಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೂ ಕಣ್ಣು ಕೆಂಪು ಮಾಡಿ ಸ್ವಾಗತ ಮಾಡುವ ಪರಿಸ್ಥಿತಿ ಇಂದು ಇದೆ. ಮಕ್ಕಳ

ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ Read More »

ಕಥಕ್ ನೃತ್ಯದ ಮಹಾಗುರು ಪಂಡಿತ್ ಬಿರ್ಜು ಮಹಾರಾಜ್

ಆ ನೃತ್ಯ ಪ್ರಕಾರಕ್ಕೆ ತಾರಾ ಮೌಲ್ಯ ತಂದುಕೊಟ್ಟವರು ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜರು ಕಳೆದ ವರ್ಷ ನಮ್ಮನ್ನು ಅಗಲಿದಾಗ ಅವರ ವಯಸ್ಸು 83 ಆಗಿತ್ತು. ಆ ವಯಸ್ಸಿನಲ್ಲಿಯೂ ಅವರು ನೃತ್ಯ ಪ್ರದರ್ಶನ ಮತ್ತು ನೃತ್ಯ ಸಂಯೋಜನೆ ಮಾಡುತ್ತಾ ಬ್ಯುಸಿ ಆಗಿದ್ದರು. ಓಡಿಸ್ಸಿ ನೃತ್ಯಕ್ಕೆ ಕೇಳು ಚರಣ ಮಹಾಪಾತ್ರ ಹೇಗೋ, ಕಥಕ್ ನೃತ್ಯಕ್ಕೆ ಪಂಡಿತ್ ಬಿರ್ಜು ಮಹಾರಾಜರು ಹಾಗೆ ಅನ್ನುವುದು ಜನಜನಿತ. ಅವರಿಬ್ಬರೂ ಭಾರತೀಯ ಸಂಸ್ಕೃತಿಯ ನಿಜಪಥ ದರ್ಶಕರು ಅನ್ನುವುದರಲ್ಲಿ ಅನುಮಾನವಿಲ್ಲ. ನಾಲ್ಕನೇ ವಯಸ್ಸಿಗೇ ಸ್ಟೇಜ್ ಶೋ ಕೊಟ್ಟ

ಕಥಕ್ ನೃತ್ಯದ ಮಹಾಗುರು ಪಂಡಿತ್ ಬಿರ್ಜು ಮಹಾರಾಜ್ Read More »

error: Content is protected !!
Scroll to Top