ಲೇಖನ

ಆರೋಗ್ಯ ಧಾರಾ- ಭೂಮ್ಯಾಮಲಕಿ ಗಿಡದ ಔಷಧೀಯ ಗುಣಗಳು

ಯಕೃತ್ತಿನ ಆರೋಗ್ಯಕ್ಕೆ ಶ್ರೇಷ್ಠ ಎನಿಸಿರುವ ಭೂಮ್ಯಾಮಲಕಿಯ ಬಗ್ಗೆ ತಿಳಿದುಕೊಳ್ಳೋಣ. ಸಂಸ್ಕೃತದಲ್ಲಿ ಇದಕ್ಕೆ ಭೂಮ್ಯಾಮಲಕಿ, ಭೂಧಾತ್ರಿ, ಬಹುಪತ್ರ, ಬಹುಫಲ ಎಂದು ಹೆಸರು. ಭಾರತದಲ್ಲಿ ಎಲ್ಲೆಡೆ ಸಿಗುವ ವಿಶೇಷವಾಗಿ ಉಷ್ಣಪ್ರದೇಶದಲ್ಲಿ ವರ್ಷ ಋತುವಿನಲ್ಲಿ ಬೆಳೆಯುವ ಪೊದೆ ಇದು. ಭೂಮ್ಯಾಮಲಕಿಯ ಗುಣಗಳು ರುಚಿಯಲ್ಲಿ ಸಿಹಿ, ಕಹಿ ಹಾಗೂ ಕಷಾಯ ರಸವಿರುವುದು. ಲಘು ಗುಣ(ಬೇಗ ಜೀರ್ಣವಾಗುವಂತದ್ದು) ರೂಕ್ಷ (ಶುಷ್ಕತೆಯನ್ನು ತರುವಂತದ್ದು)ಶೀತ ವೀರ್ಯ ಹೊಂದಿದೆ. ಕಫ ಹಾಗೂ ಪಿತ್ತವನ್ನು ಶಮನಗೊಳಿಸುತ್ತದೆ. ಉಪಯೋಗಗಳು ಬಾಹ್ಯ ಪ್ರಯೋಗಗಳು• ತ್ವಚೆಯ ರೋಗಗಳಲ್ಲಿ, ಇನ್ಫೆಕ್ಷನ್‌ಗಳಲ್ಲಿ ಎಲೆಯ ಕಲ್ಕವನ್ನು ತಯಾರಿಸಿ ಹಚ್ಚಲಾಗುವುದು. […]

ಆರೋಗ್ಯ ಧಾರಾ- ಭೂಮ್ಯಾಮಲಕಿ ಗಿಡದ ಔಷಧೀಯ ಗುಣಗಳು Read More »

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ

ಭಾರತದ ಗೆಳೆಯ ಈ ಮಹಾನ್ ಜ್ಞಾನಿ ಮಹಾ ವಿಜ್ಞಾನಿಯಾದ ಆಲ್ಬರ್ಟ್ ಐನಸ್ಟೀನ್ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ.ಆತನ ಮಹಾನ್ ಸಂಶೋಧನೆಗಳು, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ, ಜಗತ್ತನ್ನು ಪ್ರೀತಿಸಿದ ರೀತಿ… ಇವುಗಳನ್ನು ಗಮನಿಸುತ್ತ ಹೋದಾಗ ನಮಗೆ ಆತನು ದೊಡ್ಡ ಅಚ್ಚರಿಯ ಮೂಟೆಯಾಗಿ ಗೋಚರಿಸುತ್ತಾರೆ. ಆತನ ಒಂದೊಂದು ಸಂಶೋಧನೆ ಕೂಡ ವಿಶ್ವಮಾನ್ಯತೆಯನ್ನು ಪಡೆದವು. ಒಂದೇ ವರ್ಷದಲ್ಲಿ ನಾಲ್ಕು ಮಹಾ ಸಂಶೋಧನೆಗಳು ಜರ್ಮನ್ ಮೂಲದ ಈ ಯುವ ವಿಜ್ಞಾನಿ ಒಂದೇ ವರ್ಷದಲ್ಲಿ (1905) ವಿಜ್ಞಾನದ ಜಗತ್ತನ್ನು ನಡುಗಿಸುವ ನಾಲ್ಕು ಮಹತ್ವದ

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ Read More »

ಮಧುರವಾಣಿಯ ಸೃಷ್ಟಿಕರ್ತ ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು

ಭಾರತಕ್ಕೆ ಒಲಿದ ಜಾಗತಿಕ ಮಟ್ಟದ ಅಕಾಡೆಮಿ ಪ್ರಶಸ್ತಿ ನೀವು ಈ ವಿಕ್ಟರಿಯನ್ನು ಹೇಗೆ ಬೇಕಾದರೂ ಕರೆಯಬಹುದು. ಇದನ್ನು ಭಾರತೀಯ ಸಿನೆಮಾದ ವಿಜಯ ಅನ್ನುವವರೂ ಇದ್ದಾರೆ. ದಕ್ಷಿಣ ಭಾರತದ ವಿಜಯ, ತೆಲುಗು ಸಿನೆಮಾರಂಗದ ವಿಜಯ, ಕೀರವಾಣಿ ಗೆಲುವು, ರಾಜಮೌಳಿ ಗೆಲುವು…ನೀವು ಹೇಗೆ ಬೇಕಾದರೂ ಕರೆಯಬಹುದು. ಆದರೆ ಅಮೆರಿಕದ ಲಾಸ್ ಏಂಜಲೀಸ್ ನಗರದ ವೈಭವೋಪೇತವಾದ ಸಭಾಂಗಣದಲ್ಲಿ ನಾಟು ನಾಟು…ಹಾಡು ಸಮುದ್ರದ ಅಲೆಗಳನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಇದು ಅಂತಿಮವಾಗಿ ಭಾರತೀಯ ಸಿನಿಮಾ ರಂಗದ ಗೆಲುವು ಎಂಬ ಷರಾ ಬರೆದು ಭಾರತೀಯರು

ಮಧುರವಾಣಿಯ ಸೃಷ್ಟಿಕರ್ತ ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು Read More »

ಕಗ್ಗದ ಸಂದೇಶ-ಬಹುವಿದ್ಯೆ, ಬಹುತರ್ಕ, ಬಹುನೇಮ ಬೇಕಿಲ್ಲ ಹಗುರ ಬದುಕಿಗೆ…

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ|ವಹಿಸೆ ಜೀವನಭರವನದು ಹಗುರೆನಿಪವೊಲ್||ಸಹನೆ ಸಮರಸಭಾವವಂತಃ‌ ಪರೀಕ್ಷೆಗಳು|ವಿಹಿತವಾತ್ಮದ ಹಿತಕೆ– ಮಂಕುತಿಮ್ಮ|| ಅಂತರಂಗದ ವೀಕ್ಷಣೆ ಎನ್ನುವುದು ಮಹತ್ವದ ಗುಣ. ಕಾಡಿನ ರಾಜನಾದ ಸಿಂಹ ಸ್ವಲ್ಪ ದೂರ ಸಾಗಿದ ನಂತರ ಒಮ್ಮೆ ನಿಂತು ಸಾಗಿ ಬಂದ ದಾರಿಯನ್ನು ಅವಲೋಕನ ಮಾಡುತ್ತದೆ. ಮಾನವನು ಕೂಡ ತಾನು ಸಾಗಿ ಬಂದ ಬದುಕಿನ ದಾರಿಯನ್ನು ಅವಲೋಕನ ಮಾಡಬೇಕು. ಈ ರೀತಿಯ ಅತ್ಮಾವಲೋಕನ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ನೆರೆವಾಗುತ್ತದೆ. ಜೀವನದ ಸೊಗಸು ಬರಿ ಶಾಸ್ತ್ರಿತನದಿಂದಲ್ಲ|ಈ ಜೀವ ಬೇಡುವುದು ಮೋದ, ಆಮೋದ||ಕೊಂಚ ಬಿಗಿ, ತುಸು

ಕಗ್ಗದ ಸಂದೇಶ-ಬಹುವಿದ್ಯೆ, ಬಹುತರ್ಕ, ಬಹುನೇಮ ಬೇಕಿಲ್ಲ ಹಗುರ ಬದುಕಿಗೆ… Read More »

ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು?

ಸುಪ್ತ ಮನಸಿನ ಒಳಗೆ ನೆಟ್ಟು ಹೋದ ಭಯ ತೆಗೆಯುವುದು ಸುಲಭ ಅಲ್ಲ 1999ರ ಹೊತ್ತಿಗೆ ಆಸ್ಟ್ರೇಲಿಯ ಕ್ರಿಕೆಟ್ ಟೀಮ್‌ನಲ್ಲಿ ಬ್ರೆಟ್‌ಲೀ ಎಂಬ ಅತ್ಯಂತ ವೇಗದ ಬೌಲರ್ ಇದ್ದರು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದರೆ ಬ್ಯಾಟ್ಸ್‌ಮ್ಯಾನ್‌ಗಳ ಎದೆ ಕೂಡ ನಡುಗುತ್ತಿತ್ತು. ಅದೇ ಹೊತ್ತಿಗೆ ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಜೀವನದ ಶಿಖರದಲ್ಲಿ ಇದ್ದರು. ಬ್ರೆಟ್‌ಲೀ ವಿರುದ್ಧ ಅವರು ನಿರ್ಭೀತಿಯಿಂದ ಆಡುತ್ತಿದ್ದರು. ಸಚಿನ್ ಕೊಟ್ಟ ಉತ್ತರವು ಅತ್ಯಂತ ಮಾರ್ಮಿಕ ಆಗಿತ್ತು ಆಗ ಯಾರೋ ಸಚಿನ್ ಅವರನ್ನು

ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು? Read More »

22 ವರ್ಷಗಳಿಂದ ಝೇಂಕರಿಸುತ್ತಿರುವ ಒಂದು ಹಾಡು- ಶ್ರೇಯಾ ಘೋಷಾಲ್

ಮೊದಲ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದ ಗಾಯಕಿ ಝೀ ಟಿವಿ 23 ವರ್ಷದ ಹಿಂದೆ ನಡೆಸಿದ ರಾಷ್ಟ್ರಮಟ್ಟದ ರಿಯಾಲಿಟಿ ಶೋ ‘ಸಾರೆಗಮ’ ಗೆದ್ದಾಗ ಆಕೆಗೆ ಇನ್ನೂ 16 ವರ್ಷ ವಯಸ್ಸು. ಆಕೆಯ ಧ್ವನಿಯಲ್ಲಿ ಇದ್ದ ಮುಗ್ಧತೆ ಮತ್ತು ವೈವಿಧ್ಯತೆ ಇಡೀ ರಾಷ್ಟ್ರದ ಗಮನವನ್ನು ಸೆಳೆದಾಗಿತ್ತು. ಆ ಶೋ ನೋಡುತ್ತಿದ್ದ ನಿರ್ಮಾಪಕ ಸಂಜಯ ಲೀಲಾ ಬನ್ಸಾಲಿ ಅವರ ತಾಯಿ ಮುಂದಿನ ಸಿನೆಮಾದಲ್ಲಿ ಆಕೆಯಿಂದ ಹಾಡಿಸಲೇಬೇಕು ಎಂದು ತಮ್ಮ ಮಗನಿಗೆ ಹೇಳಿದ್ದರು. ತಾಯಿಯ ಮಾತಿಗೆ ಗೌರವ ಕೊಟ್ಟ ಬನ್ಸಾಲಿ ತನ್ನ ಮುಂದಿನ

22 ವರ್ಷಗಳಿಂದ ಝೇಂಕರಿಸುತ್ತಿರುವ ಒಂದು ಹಾಡು- ಶ್ರೇಯಾ ಘೋಷಾಲ್ Read More »

ಸಭಾಕಂಪನವನ್ನು ಗೆಲ್ಲಲು ಸಾಧ್ಯ

ಒಳಗಿನ ಒತ್ತಡ ನಿರ್ವಹಣೆಗೆ ಇಲ್ಲಿವೆ ಒಳ್ಳೆಯ ಟಿಪ್ಸ್ ಈ ಸಭಾಕಂಪನ (ಸ್ಟೇಜ್ ಫಿಯರ್‌) ಎನ್ನುವುದು ನೂರಾರು ಒಳ್ಳೆಯ ಭಾಷಣದ ಪ್ರತಿಭೆಗಳನ್ನು ಕೊಂದುಹಾಕಿದೆ. ಈ ಕಂಪನವನ್ನು ಗೆಲ್ಲಲು ಸಾಧ್ಯ ಇದೆಯೇ?ಭಾಷಣ ಎನ್ನುವುದು ಒಂದು ಶ್ರೇಷ್ಟವಾದ ಕಲೆ. ಶ್ರೇಷ್ಠವಾದ ಭಾಷಣಕಾರ ಒಂದು ಇಡೀ ಸಮೂಹವನ್ನು ಪ್ರಭಾವಿಸಬಲ್ಲ. ಸಾವಿರಾರು ಮಂದಿಗೆ ಏಕಕಾಲದಲ್ಲಿ ಪ್ರೇರಣೆ ಕೊಡಬಲ್ಲ. ಮಾಹಿತಿಗಳ ರವಾನೆಗೆ ಭಾಷಣ ಅತ್ಯುತ್ತಮ ಮಾಧ್ಯಮ ಆಗಿದೆ. ಭಾಷಣದ ಮೂಲಕ ಮನರಂಜನೆ ಕೊಡುವ ಒಳ್ಳೆಯ ಭಾಷಣಕಾರರ ಸಂಖ್ಯೆ ಕೂಡ ತುಂಬಾ ದೊಡ್ಡದಿದೆ. ಒಬ್ಬ ಪ್ರಬುದ್ಧ ಭಾಷಣಕಾರ

ಸಭಾಕಂಪನವನ್ನು ಗೆಲ್ಲಲು ಸಾಧ್ಯ Read More »

ತಬಲಾಕೊಬ್ಬರೆ ಉಸ್ತಾದ್‌ – ಜಾಕೀರ್‌ ಹುಸೇನ್‌

ಇಂದು ತಬಲಾ ಸಾಮ್ರಾಟನ ಹುಟ್ಟಿದ ಹಬ್ಬ ತಬಲಾ ಸಾಮ್ರಾಟ್ ಉಸ್ತಾದ್ ಜಾಕೀರ್ ಹುಸೇನರಿಗೆ ಇಂದು 72 ತುಂಬಿತು. ತನ್ನ 12ನೇ ವಯಸ್ಸಿಗೇ ತಬಲಾ ಸೋಲೋ ಕಛೇರಿ ನಡೆಸಿದ ಕೀರ್ತಿ ಅವರದ್ದು. ಅಂದಿನಿಂದಲೂ ತಬಲಾ ಅವರನ್ನು ಬಿಟ್ಟು ಹೋದದ್ದೇ ಇಲ್ಲ. ಈ ಪ್ರೀತಿಗೂ ಇಂದು ಆರುವತ್ತು ತುಂಬಿತು. ಉಸ್ತಾದ್ ಅಲ್ಲಾರಖಾ ಅವರ ಮಗ ಅಂದರೆ ಸಾಮಾನ್ಯ ಸಂಗತಿ ಅಲ್ಲ ಭಾರತದಲ್ಲಿ ತಬಲಾಗೆ ಅನ್ವರ್ಥ ನಾಮ ಆಗಿ ಇದ್ದವರು ಉಸ್ತಾದ ಅಲ್ಲಾರಖಾ. ಸಾವಿರಾರು ಶಿಷ್ಯರನ್ನು ತಯಾರು ಮಾಡಿದವರು ಅವರು. ಭಾರತದಲ್ಲಿ

ತಬಲಾಕೊಬ್ಬರೆ ಉಸ್ತಾದ್‌ – ಜಾಕೀರ್‌ ಹುಸೇನ್‌ Read More »

ಇಡೀ ದೇಶ ಮಾತನಾಡುವ ಒಂದು ರಾಷ್ಟ್ರಭಾಷೆ ನಮಗೆ ಬೇಕು – ಆ ಅರ್ಹತೆ ಇರುವುದು ಕೇವಲ ಮೂರು ಭಾಷೆಗಳಿಗೆ

ರಷ್ಯಾದಲ್ಲಿ ಪ್ರತಿಯೊಬ್ಬರೂ ರಷ್ಯನ್ ಭಾಷೆ ಮಾತಾಡುತ್ತಾರೆ. ಜಪಾನ್‌ನಲ್ಲಿ ಪ್ರತಿಯೊಬ್ಬರಿಗೂ ಜಪಾನಿ ಭಾಷೆ ಗೊತ್ತಿದೆ. ಚೀನಾದಲ್ಲಿ ಪ್ರತಿಯೊಬ್ಬರಿಗೂ ಚೀನಿ ಭಾಷೆಯ ಪರಿಚಯ ಇದೆ. ಸ್ಪೇನ್‌ನಲ್ಲಿ ಪ್ರತಿಯೊಬ್ಬರೂ ಸ್ಪಾನಿಷ್ ಭಾಷೆಯನ್ನು ಪ್ರೀತಿಯಿಂದ ಕಲಿತು ಮಾತಾಡುತ್ತಾರೆ.ಭಾರತದಲ್ಲಿ ರಾಷ್ಟ್ರಭಾಷೆ ಯಾವುದು ಎಂದು ಕೇಳಿದರೆ ಹೆಚ್ಚಿನವರು ಹಿಂದಿ ಎಂದು ಹೇಳುತ್ತಾರೆ. ಆದರೆ ಅದು ಖಂಡಿತ ಸತ್ಯ ಅಲ್ಲ. ನಮ್ಮ ಸಂವಿಧಾನದಲ್ಲಿ ಅದರ ಉಲ್ಲೇಖ ಇಲ್ಲ. ರಾಷ್ಟ್ರ ಭಾಷೆಯಾಗಿ ಒಂದು ಭಾಷೆಯನ್ನು ಬೆಳೆಸಬೇಕು ಎಂಬ ಆಸೆ ಅಂಬೇಡ್ಕರ್ ಅವರಿಗೆ ಇದ್ದಿದ್ದರೂ ಅದನ್ನು ಅವರು ನಮ್ಮ ಸಂವಿಧಾನದಲ್ಲಿ

ಇಡೀ ದೇಶ ಮಾತನಾಡುವ ಒಂದು ರಾಷ್ಟ್ರಭಾಷೆ ನಮಗೆ ಬೇಕು – ಆ ಅರ್ಹತೆ ಇರುವುದು ಕೇವಲ ಮೂರು ಭಾಷೆಗಳಿಗೆ Read More »

ಬಹುಮುಖಿ ಸ್ತ್ರೀ – ನೂರು ಮುಖಗಳು, ನೂರಾರು ಆಯಾಮಗಳು

ವಿಶ್ವ ಮಹಿಳಾ ದಿನದಂದು ಆಕೆಯನ್ನು ನೆನೆಯೋಣ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ. ಇದು ಆಕೆಯ ದಿನ. ಆಕೆಗೋಸ್ಕರ ಮುಡಿಪಾದ ದಿನ. ಆಕೆಯ ಅಜ್ಞಾತವಾದ ತ್ಯಾಗವನ್ನು ನೆನೆಯುವ ದಿನ. ಅಜ್ಜಿಯಾಗಿ, ತಾಯಿಯಾಗಿ, ಮಗಳಾಗಿ, ಮೊಮ್ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸೊಸೆಯಾಗಿ, ಅತ್ತೆಯಾಗಿ, ಅತ್ತಿಗೆಯಾಗಿ,ನಾದಿನಿಯಾಗಿ, ಓರಗಿತ್ತಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ, ಪ್ರಿಯತಮೆಯಾಗಿ, ಶಿಕ್ಷಕಿಯಾಗಿ…ಹೀಗೆ ನೂರು ರೂಪಗಳಲ್ಲಿ ನಮ್ಮ ಬದುಕನ್ನು ಪ್ರಭಾವಿಸಿದ, ನೂರಾರು ಆಯಾಮಗಳಲ್ಲಿ ನಮ್ಮ ಬದುಕಿನಲ್ಲಿ ತಂಗಾಳಿ ಬೀಸಲು ಕಾರಣಳಾದ, ಬದುಕಿನ ಇಂಚಿಂಚು ಹ್ಯಾಪಿನೆಸನ್ನು ಸಂಭ್ರಮಿಸಿದ ಪ್ರತಿಯೊಬ್ಬ ಸಹೃದಯಿ ಮಹಿಳೆಗೂ ಇಂದು

ಬಹುಮುಖಿ ಸ್ತ್ರೀ – ನೂರು ಮುಖಗಳು, ನೂರಾರು ಆಯಾಮಗಳು Read More »

error: Content is protected !!
Scroll to Top