ಲೇಖನ

ಆ ಮಿನುಗುತಾರೆ ಬಿಟ್ಟುಹೋದ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ

ತನ್ನ ಸಿನೆಮಾಗಳ ಹಾಗೆ ಬದುಕನ್ನು ದುರಂತ ಮಾಡಿಕೊಂಡ ನಟಿ ರವಿ ಬೆಳಗೆರೆ ಬರೆದ ‘ಕಲ್ಪನಾ ವಿಲಾಸ’ ಪುಸ್ತಕವನ್ನು ಕಣ್ಣೀರು ತುಂಬಿಸಿಕೊಂಡು ಓದಿದ್ದೇನೆ. ವಿ. ಶ್ರೀಧರ ಎಂಬ ಲೇಖಕರು ಬರೆದಿರುವ 1114 ಪುಟ ಇರುವ ‘ರಜತ ರಂಗದ ಧ್ರುವತಾರೆ ‘ ಪುಸ್ತಕ ಓದಿ ಮುಗಿಸಿದ್ದೇನೆ. ಅವೆರಡೂ ಪುಸ್ತಕಗಳು ಮಿನುಗುತಾರೆ ಕಲ್ಪನಾ ಅವರ ಬದುಕು ಮತ್ತು ಸಿನೆಮಾಗಳಿಗೆ ಸಂಬಂಧಿಸಿದ್ದು. ಕಲ್ಪನಾ ಬದುಕು ಒಂದು ದುರಂತ ಸಿನೆಮಾದ ಕಥೆಯಂತೆ ಭಾಸವಾಗುತ್ತದೆ. ಮಿನುಗುತಾರೆ ಎಂಬ ಬಿರುದು ಅವರ ಮಟ್ಟಿಗೆ ಅನ್ವರ್ಥ. ಮಂಗಳೂರಿನ ಕಲ್ಪನಾ […]

ಆ ಮಿನುಗುತಾರೆ ಬಿಟ್ಟುಹೋದ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ Read More »

ಕಗ್ಗದ ಸಂದೇಶ- ಆಸಕ್ತಿ ಮತ್ತು ವಿರಕ್ತಿ ಸಮನ್ವಯತೆಯಿಂದ ಜೀವನ ಸಾರ್ಥಕ…

ಹೊರಗೆ ಲೊಕಾಸಕ್ತಿಯೊಳಗೆ ಸಕಲ ವಿರಕ್ತಿ|ಹೊರಗೆ ಕಾರ್ಯಧ್ಯಾನವೊಳಗುದಾಸೀನ||ಹೊರಗೆ ಸಂಸ್ಕೃತಿ ಭಾರವೊಳಗದರ ತಾತ್ಸಾರ|ವರಯೋಗಮಾರ್ಗವಿದು ಮಂಕುತಿಮ್ಮ|| ಹೊರಗೆ ನೋಡುವಾಗ ಲೌಕಿಕವಾದ ಕಾರ್ಯಗಳಲ್ಲಿ ಆಸಕ್ತಿ, ಆದರೆ ಒಳಗೆ ಎಲ್ಲದರಲ್ಲೂ ಅನಾಸಕ್ತಿ. ಹೊರಗೆ ಸದಾಕಾಲ ಕಾರ್ಯಮಗ್ನತೆ ಆದರೆ ಒಳಗೆ ಯಾವದರಲ್ಲೂ‌ ಆಸಕ್ತಿಯಿಲ್ಲದಂತಹ ಉದಾಸೀನತೆ. ಹೊರಗೆ ಸಂಸ್ಕೃತಿಯ ಬಗಗೆ ಪ್ರೀತಿ ಆದರೆ ಒಳಗೆ ಅದರ ಬಗೆಗೆ ತಾತ್ಸಾರ ಭಾವನೆ. ಈ ರೀತಿಯಲ್ಲಿ‌ ನಡತೆಯನ್ನು ರೂಪಿಸಿಕೊಳ್ಳುವುದೇ ಶ್ರೇಷ್ಠವಾದ ಯೋಗದ ಮಾರ್ಗವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.ಲೌಕಿಕ ಜೀವನದಲ್ಲಿ ಸಂಪೂರ್ಣವಾಗಿ ಮುಳುಗದೆ ಶಾಶ್ವತವಾದ ಅಲೌಕಿಕ ಸುಖವನ್ನು‌ ಪಡೆಯಬೇಕಾದರೆ

ಕಗ್ಗದ ಸಂದೇಶ- ಆಸಕ್ತಿ ಮತ್ತು ವಿರಕ್ತಿ ಸಮನ್ವಯತೆಯಿಂದ ಜೀವನ ಸಾರ್ಥಕ… Read More »

ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್

ಜಗತ್ತಿಗೆ ನಗುವುದನ್ನು ಕಲಿಸಿದವನ ಬದುಕು ದುರಂತ ಆಗಿತ್ತು ಜಗತ್ತಿನ ಮಹೋನ್ನತ ಕಾಮಿಡಿ ಸ್ಟಾರ್, ನಿರ್ಮಾಪಕ, ಎಡಿಟರ್, ನಿರ್ದೇಶಕ, ಲೇಖಕ, ಸಂಗೀತ ನಿರ್ದೇಶಕ…ಇನ್ನೂ ಏನೇನೋ ಅವತಾರಗಳು! ಚಾರ್ಲಿ ಚಾಪ್ಲಿನ್ ಬದುಕಿದ ರೀತಿಯೇ ಹಾಗೆ.A day without LAUGHTER is a day WASTED ಎಂದವ ಚಾಪ್ಲಿನ್ ಆತನ TRAMP ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರ ಆ ವಿಚಿತ್ರವಾದ ಬುಟ್ಟಿಯಾಕಾರದ ಟೋಪಿ, ಬೂಟ್ ಪಾಲಿಶ್ ಮೀಸೆ, ಉದ್ದವಾದ ನಡೆ ಕೋಲು ಈ ಮೂರು ಸೇರಿದರೆ ಚಾಪ್ಲಿನ್ ಚಿತ್ರ ಕಣ್ಮುಂದೆ ಬಂದಾಯಿತು.

ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್ Read More »

‘ಅಜೇಯʼಕ್ಕೆ ಐವತ್ತು ತುಂಬಿತು

ಭಾರತದ ಮಹಾ ಕ್ರಾಂತಿಕಾರಿಗಳ ಪರಿಚಯ ಮಾಡಿದ ಅದ್ಭುತ ಕೃತಿ ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ 600 ಪುಟಗಳ ಆ ಪುಸ್ತಕ ನನ್ನ ಕೈ ಸೇರಿತ್ತು. ನನ್ನ ತೀವ್ರ ಓದಿನ ಹುಚ್ಚಿನ ದಿನಗಳು ಅವು. ಬಾಬು ಕೃಷ್ಣಮೂರ್ತಿ ಎಂಬ ಮಹಾನ್ ಲೇಖಕ ಈ ಪುಸ್ತಕವನ್ನು ಎಷ್ಟೊಂದು ಅದ್ಭುತವಾಗಿ ಬರೆದಿದ್ದರು ಎಂದರೆ ಅದನ್ನು ಓದಿದ ನಂತರ ನನ್ನ ಬದುಕಿನ ರೀತಿಯೇ ಬದಲಾಯ್ತು. ರಾಷ್ಟ್ರಪ್ರೇಮ ನನ್ನ ರಕ್ತದ ಒಳಗೆ ಇಂಜೆಕ್ಟ್ ಮಾಡಿದ ಪುಸ್ತಕ ಅದು. ಇದು ಚಂದ್ರಶೇಖರ್ ಆಜಾದ್ ಕತೆ 1974ರಲ್ಲಿ

‘ಅಜೇಯʼಕ್ಕೆ ಐವತ್ತು ತುಂಬಿತು Read More »

ಜನರೇಶನ್ ಗ್ಯಾಪ್ ಗೆಲ್ಲೋದು ಹೇಗೆ?

ನಮ್ಮ ಕಾಲದಲ್ಲಿ ಹಾಗಿರಲಿಲ್ಲ ಸರ್ ಎನ್ನುವ ಅಮ್ಮ-ನನಗೆ ವೈಚಾರಿಕ ಸ್ವಾತಂತ್ರ್ಯ ಬೇಕು ಎನ್ನುವ ಮಗಳು ಓರ್ವ ತಾಯಿ ಮತ್ತು ಹದಿಹರೆಯದ ಮಗಳು ನನ್ನ ಮುಂದೆ ಸಲಹೆ ಪಡೆಯಲು ಎಂದು ಬಂದಿದ್ದರು. ತಾಯಿ ಮತ್ತು ಮಗಳ ನಡುವೆ ಬಹಳ ದೊಡ್ಡ ಜನರೇಶನ್ ಗ್ಯಾಪ್ ಇದ್ದ ಹಾಗೆ ನನಗೆ ಮೇಲ್ನೋಟಕ್ಕೆ ಅನ್ನಿಸಿತ್ತು.ಮಗಳು ತಲೆ ಎತ್ತದೆ ಮೊಬೈಲ್ ಮೇಲೆ ಕುಟ್ಟುತ್ತಾ ನನ್ನ ಮುಂದೆ ಕೂತಿದ್ದಳು. ತಾಯಿ ಒಮ್ಮೆ ಮಗಳ ಕಡೆಗೆ, ಮತ್ತೊಮ್ಮೆ ನನ್ನ ಕಡೆಗೆ ದೃಷ್ಟಿಯನ್ನು ಬದಲಾಯಿಸುತ್ತಾ ಸಂದಿಗ್ಧದಲ್ಲಿ ಇದ್ದ ಹಾಗೆ

ಜನರೇಶನ್ ಗ್ಯಾಪ್ ಗೆಲ್ಲೋದು ಹೇಗೆ? Read More »

ಆರೋಗ್ಯಧಾರಾ – ಅಡುಗೆಗೆ ಬಳಸುವ ವಿವಿಧ ಎಲೆಗಳ ಆರೋಗ್ಯದ ಗುಟ್ಟು

ಕರಾವಳಿ ಪ್ರದೇಶದ ಸಂಸ್ಕೃತಿ, ಕಲೆಗಳನ್ನು ನೋಡುವುದೇ ಒಂದು ಚಂದ. ಕರಾವಳಿ ಪ್ರದೇಶ ವಿಶಿಷ್ಟ ಖಾದ್ಯಗಳಿಗೂ ಪ್ರಸಿದ್ಧವಾಗಿದೆ. ಅಡುಗೆಗೆ ತರಕಾರಿ ಹಣ್ಣುಗಳನ್ನು ಮಾತ್ರ ಬಳಸದೆ ವಿವಿಧ ರೀತಿಯ ಎಲೆಗಳನ್ನು ಹೂಗಳನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ವಿಶೇಷ. ಇದು ಬೇರೆ ಯಾವ ಪ್ರದೇಶದಲ್ಲೂ ನೋಡಲು ಸವಿಯಲು ಸಿಗುವುದು ಅಪರೂಪ.ಎಲೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಅದ್ಭುತ. ಎಲೆಯಲ್ಲಿ ಮಾಡುವ ಊಟ ಆಹಾ ಎಂಥ ಪರಿಮಳ ಎಂಥ ರುಚಿ. ಕೆಲವು ಎಲೆಗಳನ್ನು ತಿನ್ನಲು ಸಾಧ್ಯವಾಗದ ಕಾರಣ ಆ ಎಲೆಯನ್ನು ಬಳಸಿ ಆಹಾರ

ಆರೋಗ್ಯಧಾರಾ – ಅಡುಗೆಗೆ ಬಳಸುವ ವಿವಿಧ ಎಲೆಗಳ ಆರೋಗ್ಯದ ಗುಟ್ಟು Read More »

ಬಾಬಾ ಅಂಬೇಡ್ಕರ್ ಅವರ ವಿಶ್ವವಿಖ್ಯಾತ ಉದ್ಧರಣೆಗಳು

ಸಂವಿಧಾನ ಶಿಲ್ಪಿಯ ಜಯಂತಿ ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ, ಹೋರಾಟಗಳ ಬಗ್ಗೆ ಎಷ್ಟು ಬರೆದರೂ ಅದು ಮುಗಿಯುವುದೇ ಇಲ್ಲ. ಜಗತ್ತಿನ ಎಲ್ಲ ಸಂವಿಧಾನಗಳನ್ನೂ ಆಳವಾಗಿ ಅಧ್ಯಯನ ಮಾಡಿ ಅವರು ಭಾರತಕ್ಕೆ ನೀಡಿದ ಶಕ್ತಿಶಾಲಿ ಸಂವಿಧಾನ ಅತ್ಯಂತ ದೊಡ್ಡದು, ಅತ್ಯಂತ ವಿಸ್ತಾರವಾದದು, ಅತ್ಯಂತ ಶ್ರೀಮಂತವಾದದ್ದು, ಅತ್ಯಂತ ಘನವಾದದ್ದು ಮತ್ತು ಅತ್ಯಂತ ತೂಕದ್ದು. ಅದಕ್ಕಾಗಿ ಭಾರತ ಬಾಬಾ ಸಾಹೇಬರನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.ಅಂತಹ ಅಂಬೇಡ್ಕರರ ಬದುಕು ಮತ್ತು ಬರವಣಿಗೆಗಳ ನಡುವೆ ಯಾವುದೇ

ಬಾಬಾ ಅಂಬೇಡ್ಕರ್ ಅವರ ವಿಶ್ವವಿಖ್ಯಾತ ಉದ್ಧರಣೆಗಳು Read More »

ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ, ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದ ಕಲ್ಪನಾ ಚಾವ್ಲಾ

1962ರ ಮಾರ್ಚ್ 17ರಂದು ಹರ್ಯಾಣಾದ ಕರ್ನಾಲದಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೊತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆ ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜತೆ ಹೇಳುತ್ತಾ ಬೆಳೆದವರು ಆಕೆ. ಬಾಲ್ಯದಿಂದಲೂ ಆಕೆಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ. ಮೂರನೇ ವಯಸ್ಸಿಗೇ ಅಪ್ಪನಿಗೆ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ. ಅಪ್ಪನೂ ಆಕೆಯ ಪ್ರತಿಯೊಂದು ಕನಸಿನ ಈಡೇರಿಕೆಗೆ

ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ, ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದ ಕಲ್ಪನಾ ಚಾವ್ಲಾ Read More »

ಡಾಕ್ಟರ್ ಕೊಟ್ನೀಸ್ ಕೀ ಅಮರ್ ಕಹಾನಿ

ಈ ಭಾರತದ ವೈದ್ಯರು ಚೀನದ ಹೃದಯವನ್ನು ಗೆದ್ದದ್ದು ಹೇಗೆ? ಭಾರತ ಮತ್ತು ಚೀನ ಸಂಬಂಧ ಇವತ್ತಿಗೂ ಮಧುರವಾಗಿ ಇಲ್ಲ. ಆ ಕಮ್ಯುನಿಸ್ಟ್ ಸರಕಾರ ಭಾರತದ ವಿರುದ್ಧ ಸಂಚು ಹೂಡಿದ್ದೆ ಹೆಚ್ಚು. ಅಂತಹ ರಾಷ್ಟ್ರ ಭಾರತದ ಒಬ್ಬ ವೈದ್ಯರಿಗೆ ಸ್ಮಾರಕ ನಿರ್ಮಾಣ ಮಾಡಿ ರಾಷ್ಟ್ರೀಯ ಗೌರವ ಕೊಟ್ಟಿತು ಎಂದರೆ ನಮಗೆ ನಿಮಗೆ ನಂಬುವುದು ಭಾರಿ ಕಷ್ಟ ಆಗಬಹುದು!ಚೀನಾದಲ್ಲಿ ಪ್ರತಿಯೊಬ್ಬ ವೈದ್ಯ ತನ್ನ ಪದವಿಯನ್ನು ಪಡೆಯುವ ಮೊದಲು ಆ ಸ್ಮಾರಕಕ್ಕೆ ವಂದಿಸಿ ಬರುತ್ತಾರೆ ಅಂದರೆ ನಮಗೆ ಇನ್ನೂ ಆಶ್ಚರ್ಯ ಆಗಬಹುದು.

ಡಾಕ್ಟರ್ ಕೊಟ್ನೀಸ್ ಕೀ ಅಮರ್ ಕಹಾನಿ Read More »

ರಾಮ ಮಾತ್ರವಲ್ಲ ರಾವಣನಂತಾಗುವುದು ಕೂಡ ಕಷ್ಟ

ರಾಮನ ಪಾತ್ರ ವಿಶ್ವದ ಅದ್ಭುತ ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರ ಕೂಡ. ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ.ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ. ಅದರಲ್ಲಿಯೂ ಮೊದಲನೆಯದ್ದು ಭಾರಿ ಕಷ್ಟ. ವಾಲ್ಮೀಕಿ ಕೆತ್ತಿದ್ದು ಅದ್ಭುತ ವ್ಯಕ್ತಿತ್ವ ರಾಮ ಶ್ರೀ ರಾಮನ

ರಾಮ ಮಾತ್ರವಲ್ಲ ರಾವಣನಂತಾಗುವುದು ಕೂಡ ಕಷ್ಟ Read More »

error: Content is protected !!
Scroll to Top