ಧಾರ್ಮಿಕ

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಪರದೆ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆಯ ವೀಕ್ಷಣೆ

ಪುತ್ತೂರು: ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯ ಸಂಭ್ರಮವನ್ನು ಶ್ರೀ ಗುರುಗಳ ವಿಶೇಷ ಪೂಜೆಯೊಂದಿಗೆ ನೆರವೇರಿಸಲಾಯಿತು. ಶ್ರೀ ಗುರುರಾಘವೇಂದ್ರ ಮಠದ ಆವರಣದಲ್ಲಿ ಎಲ್‍ ಇಡಿ ಸ್ಕ್ರೀನ್ ಅಳವಡಿಸಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭಲದಲ್ಲಿ ಸುಮಾರು 500 ಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಬಳಿಕ ವಿಶೇಷ ಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಪರದೆ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆಯ ವೀಕ್ಷಣೆ Read More »

ಪುತ್ತಿಲ ಪರಿವಾರ ಕಚೇರಿಯಲ್ಲಿ ಶ್ರೀರಾಮ ದೇವರಿಗೆ ಪುಷ್ಪಾರ್ಚನೆ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಆಗುತ್ತಿದ್ದಂತೆ ಪುತ್ತಿಲ ಪರಿವಾರ ಕಚೇರಿಯಲ್ಲಿ ಪ್ರಭು ಶ್ರೀರಾಮದೇವರಿಗೆ ಪುಷ್ಪಾರ್ಚನೆ ನೆರವೇರಿಸಿ ಪ್ರಾರ್ಥನೆ ನೆರವೇರಿತು. ಹಿಂದೂಗಳು ಶತಶತಮಾನಗಳಿಂದ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ ಪ್ರಭು ಶ್ರೀರಾಮಮಂದಿರ ಶುಭಮುಹೂರ್ತದಲ್ಲಿ ಲೋಕಾರ್ಪಣೆಗೊಂಡು ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯೂ ನೆರವೇರಿತು. ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ, ಕಾರ್ಯದರ್ಶಿ  ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ ಪ್ರಮುಖರಾದ ರವಿ ರೈ ಕೆದಂಬಾಡಿ ಮಠ, ಭೀಮಯ್ಯ ಭಟ್ ಸಂಪ್ಯ, ಪ್ರವೀಣ್ ಭಂಡಾರಿ,  ರಾಜ್ ಶೆಟ್ಟಿ

ಪುತ್ತಿಲ ಪರಿವಾರ ಕಚೇರಿಯಲ್ಲಿ ಶ್ರೀರಾಮ ದೇವರಿಗೆ ಪುಷ್ಪಾರ್ಚನೆ Read More »

ಶ್ರೀರಾಮ ಪ್ರಾಣ ಪ್ರತಿಷ್ಠೆ | ಅನ್ಯಾಡಿ, ಕೆಡೆಂಜಿ ಯುವಕರಿಂದ ರಾಮಭಕ್ತರಿಗೆ ತಂಪು ಪಾನೀಯ ವಿತರಣೆ

ಸವಣೂರು: ಎಲ್ಲೆಡೆ ಇಂದು ಶ್ರೀರಾಮ ಪ್ರಾಣಪ್ರತಿಷ್ಠೆಯನ್ನು ಸಂಭ್ರಮದಿಂದ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು, ಅನ್ಯಾಡಿ ಮತ್ತು ಕೆಡೆಂಜಿ ಯುವಕರಿಂದ ಹತ್ತನೇಕಲ್ಲಿನಲ್ಲಿ ತಂಪು ಪಾನೀಯ ವಿತರಿಸಲಾಯಿತು. ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ರಾಮಭಕ್ತರಿಗೆ, ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು. ಹಲವಾರು ರಾಮಭಕ್ತರು, ಸಾರ್ವಜನಿಕರು ತಂಪು ಪಾನೀಯ ಸ್ವೀಕರಿಸಿದರು.

ಶ್ರೀರಾಮ ಪ್ರಾಣ ಪ್ರತಿಷ್ಠೆ | ಅನ್ಯಾಡಿ, ಕೆಡೆಂಜಿ ಯುವಕರಿಂದ ರಾಮಭಕ್ತರಿಗೆ ತಂಪು ಪಾನೀಯ ವಿತರಣೆ Read More »

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠಾ ವಿಧಿವಿಧಾನಗಳಿಗೆ ಚಾಲನೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನಗಳು ಆರಂಭವಾಗಿದ್ದು, ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಂದು ಮುಂಜಾನೆ ಪ್ರಾಣಪ್ರತಿಷ್ಠೆಗೆ  ವಿಧಿವಿಧಾನ ಆರಂಭವಾಗಿದ್ದು, 114 ಕಲಶಗಳಿಂದ ವಿವಿಧ ಔಷಧೀಯ ನೀರಿನಿಂದ ವಿಗ್ರಹ ಸ್ನಾನ ನಡೆಸಲಾಯಿತು. ಕಲಶ ನೀರಿನಿಂದ ಮೂರ್ತಿಗಳ ಪುಣ್ಯ ಸ್ನಾನದ ಬಳಿ ಪ್ರತಿಷ್ಠಾಪಿಸಲಿರುವ ದೇವತೆಗಳಿಗೆ ನಿತ್ಯ ಪೂಜೆ, ಹವನ, ಪಾರಾಯಣ ನಡೆದಿದೆ. ಪ್ರಾತಃಕಾಲ ಮಾಧ್ವಾಧೀನಗಳು, ಮಹಾಪೂಜೆ, ಉತ್ಸವ ಮೂರ್ತಿ ಪ್ರಸಾದ ಪರಿಕ್ರಮ, ತತ್ತ್ವನ್ಯಾಯ, ಮಹನ್ಯಾಸ, ಅದಿನ್ಯಾಸ, ಅಘೋರ ಹೋಮ, ವ್ಯಾಹೃತಿ ಹೋಮ, ಜಾಗರಣ, ಸಂಜೆಪೂಜೆ ಹಾಗೂ

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠಾ ವಿಧಿವಿಧಾನಗಳಿಗೆ ಚಾಲನೆ Read More »

ನಾಳೆ ಆಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ಜೀವನದಿ ನೇತ್ರಾವತಿ ನದಿ ಮಧ್ಯೆ ನಡೆಯಿತು ಶ್ರೀ ಸತ್ಯನಾರಾಯಣ ಪೂಜೆ

ಬಂಟ್ವಾಳ: ಜ.22 ರಂದು ಅಯೋಧ್ಯೆ ರಾಮಂದಿರದಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ಮುನ್ನಾ ದಿನ ಭಾನುವಾರ ಜೀವನದಿ ನೇತ್ರಾವತಿ ನದಿ ಮಧ್ಯೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಾಜಿ ಪುರಸಭೆ ಸದಸ್ಯ, ರಾಮಭಕ್ತ ಎ.ಗೊವಿಂದ ಪ್ರಭು ಎಂಬವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲೆಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿಯ ನೇತ್ರಾವತಿ ನದಿ ನದಿ ಮಧ್ಯೆ ಭಾನುವಾರ ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಪುರಸಭೆಯ ಹಿರಿಯ ಸದಸ್ಯ

ನಾಳೆ ಆಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ಜೀವನದಿ ನೇತ್ರಾವತಿ ನದಿ ಮಧ್ಯೆ ನಡೆಯಿತು ಶ್ರೀ ಸತ್ಯನಾರಾಯಣ ಪೂಜೆ Read More »

ಕರ್ವೆಲ್ ಶ್ರೀರಾಮ‌ ಭಜನಾ ಮಂದಿರದ 28 ನೇ ವಾರ್ಷಿಕೋತ್ಸವ, ಕುಣಿತ ಭಜನಾ ಸಂಭ್ರಮ

ಪುತ್ತೂರು: ದೇವರ ಪ್ರೀತಿಯನ್ನು ಗಳಿಸುವುದೇ ಭಜನೆಯ ಮೂಲ ಉದ್ದೇಶ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಕರ್ವೆಲು ಶ್ರೀರಾಮ‌ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗೂ ಕುಣಿತ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಜನೆ ಭಕ್ತರನ್ನು ಒಗ್ಗೂಡಿಸುತ್ತದೆ,.ಮಕ್ಕಳಲ್ಲಿ ಭಜನೆಯ ಅಭಿರುಚಿ ಮೂಡಿಸುವ ಕೆಲಸ ‌ಮಾಡಬೇಕು. ಭಜನೆಯ ಜೊತೆ ಸಂಸ್ಕ್ರತಿ, ಸಂಸ್ಕಾರವನ್ನು‌ ಕಲಿಸುವ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳು ಉತ್ತಮ ಪ್ರಜೆಗಳಾದರೆ ದೇಶ ವಿಶ್ವಗುರುವಾಗಲು ಸಾಧ್ಯವಾಗುತ್ತದೆ ಎಂದರು. ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷರಾದ ತೋಹಿಜಾಕ್ಷ ಶೆಟ್ಟಿ, ಧನ್ಯಕುಮಾರ್

ಕರ್ವೆಲ್ ಶ್ರೀರಾಮ‌ ಭಜನಾ ಮಂದಿರದ 28 ನೇ ವಾರ್ಷಿಕೋತ್ಸವ, ಕುಣಿತ ಭಜನಾ ಸಂಭ್ರಮ Read More »

ಜ. 22: ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ

ಪುತ್ತೂರು: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ, ಶ್ರೀರಾಮ ದೇವರ ಪ್ರತಿಮೆ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ. 22ರಂದು ಶ್ರೀ ರಾಮೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6ರಿಂದ ಶ್ರೀರಾಮ ಜ್ಯೋತಿ ಪ್ರಜ್ವಲನೆ, ಭಜನೆ, ಸತ್ಸಂಗ ರಾಮ ನಾಮದ ಮಹತ್ವ, ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರ, ಇನ್ನಿತರ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ಜರಗಲಿದೆ. ಮಧ್ಯಾಹ್ನ ದೇವರ ಪ್ರಸಾದ ರೂಪದ ಅನ್ನಸಂತರ್ಪಣೆ ಇದೆ. ಕಾರ್ಯಕ್ರಮದ ಯಶಸ್ಸಿಗೆ ಧನಸಹಾಯ, ವಸ್ತು ರೂಪದಲ್ಲಿ ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೆಗೊನೆ,

ಜ. 22: ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ Read More »

ಶ್ರೀರಾಮನ ಸೇವೆಗಾಗಿ ಶ್ರೀರಾಮ ಭಕ್ತರಿಂದ ವ್ಯಾಪಾರ ಸ್ಥಗಿತ | ಪುತ್ತೂರು ಸೆಂಟರ್ ವ್ಯಾಪರಸ್ಥರಿಂದ ಹೀಗೊಂದು ಬ್ಯಾನರ್ ಅಳವಡಿಕೆ

ಪುತ್ತೂರು: ಇಲ್ಲಿನ ಪುತ್ತೂರು ಸೆಂಟರ್ ವ್ಯಾಪರಸ್ಥರು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ದಿನದಂದು ವ್ಯಾಪಾರ ಸ್ಥಗಿತಗೊಳಿಸಿ, ಶ್ರೀರಾಮಚಂದ್ರನ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುತ್ತೇವೆ ಎನ್ನುವ ಬ್ಯಾನರ್ ಅಳವಡಿಸಿ ಗಮನ ಸೆಳೆದಿದ್ದಾರೆ. “||ಜೈ ಶ್ರೀರಾಮ್|| ಶ್ರೀರಾಮನ ಸೇವೆಗಾಗಿ ಸೋಮವಾಗಿ ತಾ. 22.01.2024ರಂದು ವ್ಯವಹಾರ ಸ್ಥಗಿತ. ಪುತ್ತೂರು ಸೆಂಟರ್ ವ್ಯಾಪಾರಸ್ಥರು. ಎಲ್ಲರಿಗೂ ಉತ್ತರೋತ್ತರ ಅಭಿವೃದ್ಧಿಯಾಗಲಿ” ಹೀಗೆಂದು ಬ್ಯಾನರಿನಲ್ಲಿ ಬರೆಯಲಾಗಿದೆ. ಸೋಮವಾರ ವ್ಯವಹಾರ ಸ್ಥಗಿತಗೊಳಿಸಿ, ಶ್ರೀರಾಮನ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ವ್ಯಾಪಾರಸ್ಥರು. ನಿತಿನ್ ಕುಮಾರ್ ಮಂಗಳ, ಸಂಕಪ್ಪ ಗೌಡ, ಕೃಷ್ಣರಾಜ್ ಹೆಗ್ಡೆ,

ಶ್ರೀರಾಮನ ಸೇವೆಗಾಗಿ ಶ್ರೀರಾಮ ಭಕ್ತರಿಂದ ವ್ಯಾಪಾರ ಸ್ಥಗಿತ | ಪುತ್ತೂರು ಸೆಂಟರ್ ವ್ಯಾಪರಸ್ಥರಿಂದ ಹೀಗೊಂದು ಬ್ಯಾನರ್ ಅಳವಡಿಕೆ Read More »

ಜ. 22: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಿಶೇಷ ಭಜನೆ

ಪುತ್ತೂರು: ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 22ರಂದು 108 ರಾಮ ಮಂತ್ರ ಜಪಿಸಿ ಭಜನಾ ಕಾರ್ಯಕ್ರಮ ನಡೆಯಲಿದೆ.ಜ. 22ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಈ ವಿಶೇಷ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಭಜನೆಯನ್ನು ನಡೆಸಿಕೊಡಲಿದೆ.ಬೆಳಿಗ್ಗೆ 10.30 ರಿಂದ 11.30 ರ ತನಕ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾಮಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯ ಪ್ರಕಟಣೆ

ಜ. 22: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಿಶೇಷ ಭಜನೆ Read More »

ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು: ನಗರದ ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಚಂಡಿಕಾಯಾಗ ಜ.24 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಷ್ಟಮಂಗಲ ಪ್ರಶ್ನೆಯಂತೆ 2016 ರಲ್ಲಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆದು ಸ್ಥಳೀಯರು ಸಹಿತ ಊರ, ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಪೂಜಾಧಿ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ವಿಶೇಷವೆಂದರೆ ಶ್ರೀ ದುರ್ಗಾ ಉಳ್ಳಾಳ್ತಿ ಯಕ್ಷಕಲಾ ಸಂಘದ

ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ Read More »

error: Content is protected !!
Scroll to Top