ರಾಜಕೀಯ

6 ಬಾರಿ ಮತ ಎಣಿಕೆ : ಕೊನೆಗೂ ಜಯ ದಾಖಲಿಸಿದ ಬಿಜೆಪಿ

ಪುತ್ತೂರು: ಜಯನಗರ ಕ್ಷೇತ್ರದಲ್ಲಿಕೊನೆಗೂ ಬಿಜೆಪಿ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಜಯ ಗಳಿಸಿದ್ದಾರೆ. ತಡರಾತ್ರಿವರೆಗೂ ಮರುಮತ ಎಣಿಕೆ ಕಾರ್ಯ ನಡೆಯಿತು. ಮೊದಲಿಗೆ 10 ಮತಗಳಿಂದ ಕಾಂಗ್ರೆಸಿನ ಸೌಮ್ಯ ರೆಡ್ಡಿ ಅವರು ಮುನ್ನಡೆ ಸಾಧಿಸಿದ್ದು, ಇದನ್ನು ಕೆ.ಸಿ. ರಾಮಮೂರ್ತಿ ಪ್ರಶ್ನಿಸಿ ಮರು ಮತ ಎಣಿಕೆಗೆ ಮನವಿ ಮಾಡಿದರು. ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿ, ಇಬ್ಬರು ಅಭ್ಯರ್ಥಿಗಳನ್ನು ಕರೆಸಿ ಅವರ ಸಮ್ಮುಖದಲ್ಲೇ ಮರು ಮತ ಎಣಿಕೆ ನಡೆಸಿದರು. 5 ಬಾರಿಯ ಮತ ಎಣಿಕೆಯಲ್ಲೂ ಸೂಕ್ತ ಫಲಿತಾಂಶ ಪಡೆಯಲು ಸಾಧ‍್ಯವಾಗಲಿಲ್ಲ. 6ನೇ ಬಾರಿಯ ಮತ […]

6 ಬಾರಿ ಮತ ಎಣಿಕೆ : ಕೊನೆಗೂ ಜಯ ದಾಖಲಿಸಿದ ಬಿಜೆಪಿ Read More »

ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆ

ಬೆಂಗಳೂರು: ತೀವ್ರ ಆಘಾತಕಾರಿ ಸೋಲಿನ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಸೋಲಿನ ಹೊಣೆ ಹೊತ್ತ ಅವರು, ಅಧಿಕಾರ ಇಲ್ಲದೇ ಇದ್ದರೂ ಜನಸೇವೆ ಮಾಡುವುದಾಗಿ ತಿಳಿಸಿದರು. ಜನಸೇವೆಗೆ ತಲೆಬಾಗುವುದಾಗಿ ತಿಳಿಸಿದರು.

ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪುತ್ತೂರು ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈ ಅವರು ಶನಿವಾರ ಸಂಜೆ ಭೇಟಿ ನೀಡಿ,ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಾಸಕರಾಗಿ ಆಯ್ಕೆಯಾದ ಬಳಿಕ ಪುತ್ತೂರಿಗೆ ಆಗಮಿಸಿದ ಅಶೋಕ್ ಕುಮಾರ್ ರೈ ಅವರಿಗೆ ಕಬಕದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಅಲ್ಲಿಂದ ನೇರವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಅಲ್ಲಿಯೂ ಅಶೋಕ್ ಕುಮಾರ್ ರೈ ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದು, ಶುಭಕೋರಿದರು. ಬಳಿಕ ಚರ್ಚ್ ಹಾಗೂ ಮಸೀದಿಗೆ ಭೇಟಿ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಶಾಸಕ ಅಶೋಕ್ ಕುಮಾರ್ ರೈ Read More »

ಕಾಂಗ್ರೆಸ್​​ಗೆ ಭರ್ಜರಿ ಗೆಲುವು; ಭಾವುಕರಾದ ಡಿಕೆ ಶಿವಕುಮಾರ್ | ಕಾಂಗ್ರೆಸ್ 136, ಬಿಜೆಪಿಗೆ 64, ಜೆಡಿಎಸ್ 20 ಕ್ಷೇತ್ರ

ಬೆಂಗಳೂರು: ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಚಳ ಬಹುಮತ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾವುಕರಾದರು. ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಬಿಜೆಪಿ 64 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಜೆಡಿಎಸ್ 20 ಸ್ಥಾನಗಳಿಗೆ ಸೀಮಿತಗೊಂಡಿದೆ. ಉಳಿದಂತೆ 4 ಕ್ಷೇತ್ರಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸಿಗೆ ರಾಜ್ಯದಲ್ಲಿ 136 ಕ್ಷೇತ್ರಗಳಲ್ಲಿ

ಕಾಂಗ್ರೆಸ್​​ಗೆ ಭರ್ಜರಿ ಗೆಲುವು; ಭಾವುಕರಾದ ಡಿಕೆ ಶಿವಕುಮಾರ್ | ಕಾಂಗ್ರೆಸ್ 136, ಬಿಜೆಪಿಗೆ 64, ಜೆಡಿಎಸ್ 20 ಕ್ಷೇತ್ರ Read More »

ಪುತ್ತೂರು ಕೈ ಪಾಲು : ತ್ರಿಕೋನ ಸ್ಪರ್ಧೆಯಲ್ಲಿ ಅಶೋಕ್ ರೈ ಮೇಲು | ಸ್ಪರ್ಧೆ ಇದ್ದದ್ದೇ ಅಶೋಕ್ – ಅರುಣ್ ನಡುವೆ ಎನ್ನುವುದನ್ನು ಸಾಬೀತುಪಡಿಸಿದ ಫಲಿತಾಂಶ | ಸೋತರೂ ಮತದಾರರ ಮನಗೆದ್ದ ಪುತ್ತಿಲ | “ಛೆ! ಗೆಲ್ಲುತ್ತಾರೆಂದಿದ್ದರೆ ಪುತ್ತಿಲರಿಗೆ ಮತ ಹಾಕುತ್ತಿದ್ದೆವು”

ಪುತ್ತೂರು: ಬಿಜೆಪಿ ಭದ್ರಕೋಟೆಯನ್ನು ಮತ್ತೊಮ್ಮೆ ಕಾಂಗ್ರೆಸ್ ಭೇದಿಸಿದೆ. ಒಗ್ಗಟ್ಟಿನ ಮಂತ್ರಕ್ಕೆ ಕಾಂಗ್ರೆಸ್ ಗೆಲುವು ದಾಖಲಿಸಿದ್ದು, ಮತ್ತೊಮ್ಮೆ ಗದ್ದುಗೆಗೆ ಏರಲು ಸಿದ್ಧತೆ ನಡೆಸಿದೆ. ಭಾರೀ ಪೈಪೋಟಿ ನಡುವೆಯೂ ಅಶೋಕ್ ಕುಮಾರ್ ರೈ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಭದ್ರಕೋಟೆಯಾದರೂ, ಕಾಂಗ್ರೆಸ್ ಅಭ್ಯರ್ಥಿಗೆ ಭಾರೀ ಪೈಪೋಟಿ ನೀಡಿದ್ದು ಪಕ್ಷೇತರ ಅಭ್ಯರ್ಥಿ ಎನ್ನುವುದು ಈ ಬಾರಿಯ ವಿಶೇಷ. ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವಿನ ಪೈಪೋಟಿಯಿಂದಾಗಿ ಮತ ವಿಭಜನೆಯಾಗಿದ್ದು, ಕಾಂಗ್ರೆಸ್ ಇದರ ಲಾಭವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಪೂರ್ವದಲ್ಲಿ ತ್ರಿಕೋನ ಸ್ಪರ್ಧೆ

ಪುತ್ತೂರು ಕೈ ಪಾಲು : ತ್ರಿಕೋನ ಸ್ಪರ್ಧೆಯಲ್ಲಿ ಅಶೋಕ್ ರೈ ಮೇಲು | ಸ್ಪರ್ಧೆ ಇದ್ದದ್ದೇ ಅಶೋಕ್ – ಅರುಣ್ ನಡುವೆ ಎನ್ನುವುದನ್ನು ಸಾಬೀತುಪಡಿಸಿದ ಫಲಿತಾಂಶ | ಸೋತರೂ ಮತದಾರರ ಮನಗೆದ್ದ ಪುತ್ತಿಲ | “ಛೆ! ಗೆಲ್ಲುತ್ತಾರೆಂದಿದ್ದರೆ ಪುತ್ತಿಲರಿಗೆ ಮತ ಹಾಕುತ್ತಿದ್ದೆವು” Read More »

ಎಂಪಿ ಫಾರ್ ಪುತ್ತಿಲ ! | ಪುತ್ತಿಲ ಅಭಿಮಾನಿಗಳಿಂದ ಪೋಸ್ಟ್

ಪುತ್ತೂರು: ಸಣ್ಣ ಅಂತರದ ಸೋಲಿನ ಬಳಿಕ ಇದೀಗ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಳಿಬರತೊಡಗಿದೆ. ಅಭಿಮಾನಿಗಳು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಮುಂದಿನ ನಮ್ಮ ಎಂಪಿ ಅರುಣ್ ಕುಮಾರ್ ಪುತ್ತಿಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 62458 ಮತ ಪಡೆದಿದ್ದಾರೆ. ಓರ್ವ ಪಕ್ಷೇತರ ಅಭ್ಯರ್ಥಿಯಾಗಿ ಇಷ್ಟು ಮತಗಳನ್ನು ಪಡೆದುಕೊಂಡಿರುವ ಇದೇ ಮೊದಲು. 4149 ಮತಗಳ ಅಂತರದಿಂದ

ಎಂಪಿ ಫಾರ್ ಪುತ್ತಿಲ ! | ಪುತ್ತಿಲ ಅಭಿಮಾನಿಗಳಿಂದ ಪೋಸ್ಟ್ Read More »

ಅಶೋಕ್ ರೈ ಗೆಲುವು ಕಬಕ, ಕುಂಬ್ರದಲ್ಲಿ ಸಂಭ್ರಮಾಚರಣೆ

ಪುತ್ತೂರು: ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಬಕದಲ್ಲಿ ಹಾಗೂ ಕುಂಬ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚಿರಿಸಿದರು. ಕುಂಬ್ರದಲ್ಲಿ ಕಾರ್ಯಕರ್ತರು ಕುಂಬ್ರ ಕಟ್ಟೆಯ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಶೋಕ್ ರೈ ಗೆಲುವು ಕಬಕ, ಕುಂಬ್ರದಲ್ಲಿ ಸಂಭ್ರಮಾಚರಣೆ Read More »

ಕೈಗೆ ಗೆಲುವು ಕೊಟ್ಟ ರೈ ! | ಕೊನೆ ಸುತ್ತಿನಲ್ಲಿ 3351 ಮತಗಳ ಅಂತರದ ಮುನ್ನಡೆಯಲ್ಲಿ ಕಾಂಗ್ರೆಸ್

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವು ಪಡೆದುಕೊಂಡಿದ್ದಾರೆ. ಬಿಜೆಪಿಯ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಭಾರೀ ಸ್ಪರ್ಧೆಯ ನಡುವೆಯೇ ಅಶೋಕ್ ಕುಮಾರ್ ರೈ ಅವರು ಗೆಲುವು ದಾಖಲಿಸಿದ್ದಾರೆ. 64687 ಮತಗಳಿಂದ ಜಯ ಗಳಿಸಿದ್ದಾರೆ. 3351 ಮತಗಳ ಅಂತರದಿಂದ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅರುಣ್ ಕುಮಾರ್ ಪುತ್ತಿಲ ಅವರು 61336 ಮತ ಪಡೆದುಕೊಂಡಿದ್ದಾರೆ. ಆಶಾ ತಿಮ್ಮಪ್ಪ ಅವರು 36526 ಮತ ಪಡೆದಿದ್ದಾರೆ.

ಕೈಗೆ ಗೆಲುವು ಕೊಟ್ಟ ರೈ ! | ಕೊನೆ ಸುತ್ತಿನಲ್ಲಿ 3351 ಮತಗಳ ಅಂತರದ ಮುನ್ನಡೆಯಲ್ಲಿ ಕಾಂಗ್ರೆಸ್ Read More »

ರೋಚಕತೆ ಪಡೆದ ಪುತ್ತೂರು ರಾಜಕೀಯ ಆಖಾಡ | 2673 ಮತಗಳ ಮುನ್ನಡೆಯಲ್ಲಿ ಅಶೋಕ್ ರೈ

ಪುತ್ತೂರು: ಅಶೋಕ್ ರೈ ಗೆಲುವಿನ ಸನಿಹಕ್ಕೆ ಬರುವ ಲಕ್ಷಣಗಳು ಗೋಚರವಾಗುತ್ತಿವೆ. ಒಟ್ಟು 61797 ಮತಗಳನ್ನು ಬಾಚಿಕೊಂಡಿದ್ದು, 2673 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಎರಡನೇ ಸ್ಥಾನಕ್ಕೆ ಜಾರಿದ್ದು 59124 ಮತ ಪಡೆದುಕೊಂಡಿದ್ದಾರೆ. ಆಶಾ ತಿಮ್ಮಪ್ಪ ಅವರು 34871 ಮತ ಪಡೆದುಕೊಂಡಿದ್ದಾರೆ. ಒಟ್ಟು 161554 ಮತಗಳ ಎಣಿಕೆ ಕಾರ್ಯ ನಡೆದಿದೆ.

ರೋಚಕತೆ ಪಡೆದ ಪುತ್ತೂರು ರಾಜಕೀಯ ಆಖಾಡ | 2673 ಮತಗಳ ಮುನ್ನಡೆಯಲ್ಲಿ ಅಶೋಕ್ ರೈ Read More »

535 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ

ಪುತ್ತೂರು: ಅಶೋಕ್ ಕುಮಾರ್ ರೈ ಅವರು ಮತ್ತೆ ಮುನ್ನಡೆ ಕಾಯ್ದುಕೊಂಡಿದ್ದಾರೆ. 56272 ಮತ ಪಡೆದಿರುವ ಅಶೋಕ್ ಕುಮಾರ್ ರೈ ಅವರು 535 ಮತಗಳಷ್ಟು ಮುನ್ನಡೆಯಲ್ಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ 55737 ಮತ ಪಡೆದುಕೊಂಡಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ 33005 ಮತ ಪಡೆದಿದ್ದಾರೆ. 150432 ಮತಗಳಷ್ಟು ಎಣಿಕೆ ಕಾರ್ಯ ನಡೆದಿದೆ. ಸುಮಾರು 20 ಸಾವಿರದಷ್ಟು ಮತಗಳ ಎಣಿಕೆ ಕಾರ್ಯ ನಡೆಯಬೇಕಿದೆ.

535 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ Read More »

error: Content is protected !!
Scroll to Top